iFFalcon ಸಂಸ್ಥೆಯಿಂದ ಎರಡು ವಿಭಿನ್ನ ಮಾದರಿಯ ಸ್ಮಾರ್ಟ್‌ಟಿವಿ ಬಿಡುಗಡೆ!

|

ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕ ಟಿಸಿಎಲ್ ಕಂಪೆನಿಯ ಸಬ್‌ಬ್ರಾಂಡ್‌ ಐಎಫ್‌ಫಾಲ್ಕಾನ್ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿದೆ. ಅಲ್ಲದೆ ತನ್ನ ಆಂಡ್ರಾಯ್ಡ್ ಟಿವಿ ಆಧಾರಿತ ಸ್ಮಾರ್ಟ್ ಟಿವಿ ಶ್ರೇಣಿಯನ್ನು ಭಾರತದಲ್ಲಿ ವಿಸ್ತರಿಸಿದೆ. ಇನ್ನು ಹೊಸ ಸ್ಮಾರ್ಟ್‌ಟಿವಿಗಳು far-field voice recognition technology ಮತ್ತು ಗೂಗಲ್ ಅಸಿಸ್ಟೆಂಟ್ ಏಕೀಕರಣವನ್ನು ಬಳಸಿಕೊಂಡು ಹ್ಯಾಂಡ್ಸ್-ಫ್ರೀ ವಾಯ್ಸ್‌ ಕಂಟ್ರೋಲ್‌ ಸಿಸ್ಟಂನೊಂದಿಗೆ ಲಭ್ಯವಾಗುತ್ತಿವೆ. ಸದ್ಯ ಐಎಫ್‌ಫಾಲ್ಕಾನ್ ಕಂಪನಿ ಮೈಕ್ರೋ ಡಿಮ್ಮಿಂಗ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗೆ ಎಂಟ್ರಿ ಅವಕಾಶ ಹೊಂದಿರುವ ಐಫಾಲ್ಕಾನ್ ಎಚ್ 71 4K QLED ಟಿವಿಯನ್ನು ಪರಿಚಯಿಸಿದೆ.

iFFalcon

ಹೌದು, ಐಎಫ್‌ಫಾಲ್ಕಾನ್ ಸಂಸ್ಥೆಯು ತನ್ನ ಹೊಸ iFFalcon H71 4K QLED TV, K71 4K UHD TV ಗಳನ್ನ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ iFFalcon H71 4K QLED TV, 55- ಮತ್ತು 65 ಇಂಚಿನ ಡಿಸ್‌ಪ್ಲೇ ಗಾತ್ರದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಹಾಗೇಯೇ K71 4K UHD TV 43, 55 ಮತ್ತು 65 ಇಂಚಿನ ಡಿಸ್‌ಪ್ಲೇ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು iFFalcon H71 4K QLED TV ಸ್ಮಾರ್ಟ್‌ಟಿವಿ ಕ್ವಾಂಟಮ್‌ ಡಾಟ್‌ ಟೆಕ್ನಾಲಜಿಯನ್ನ ಹೊಂದಿದ್ದು, ಡಾಲ್ಬಿ ವಿಷನ್‌ ಗುಣಮಟ್ಟವನ್ನ ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

iFFalcon H71 4K QLED TV

iFFalcon H71 4K QLED TV

iFFalcon H71 4K QLED TV ಮೆಟಲ್‌ ಬಾಡಿ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಇದು ಬೆಜೆಲ್‌ ಲೆಸ್‌, ಫುಲ್‌ ಸ್ಕ್ರೀನ್‌ ಅನುಭವ ನೀಡುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿ ಕ್ವಾಂಟಮ್ ಡಾಟ್ ಟೆಕ್ನಾಲಜಿಯನ್ನ ಹೊಂದಿದ್ದು, ಡಾಲ್ಬಿ ವಿಷನ್ ಗುಣಮಟ್ಟವನ್ನು ಬೆಂಬಲಿಸುತ್ತದೆ. ಅಲ್ಲದೆ, ಆನ್-ಸ್ಕ್ರೀನ್ ಸಬ್ಜೆಕ್ಟ್‌ಗೆ ಡೈನಾಮಿಕ್ ಟೋನ್-ಮ್ಯಾಪಿಂಗ್ ಅನ್ನು ಸೇರಿಸಲು ಇದು HDR10+ ಟೆಕ್ನಾಲಜಿಯನ್ನ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯು IPQ ಎಂಜಿನ್‌ನೊಂದಿಗೆ ಬರುತ್ತದೆ, ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ವೀಕ್ಷಣೆಯ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

iFFalcon K71 4K UHD TV

iFFalcon K71 4K UHD TV

iFFalcon K71 4K UHD TV 4K ಆಪ್‌ ಸ್ಕೇಲಿಂಗ್‌ ಕಡಿಮೆ-ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಇದರಲ್ಲಿ ಡೈನಾಮಿಕ್ ಕಲರ್ Enhancement ಫೀಚರ್ಸ್‌ ಅನ್ನು ನೀಡಲಾಗಿದೆ. ಇದು ಡಿಸ್‌ಪ್ಲೇಯಲ್ಲಿ ಹೆಚ್ಚಿನ ಹರವನ್ನು ಪರಿವರ್ತಿಸುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಗೂಗಲ್ ಹೋಮ್-ಬೆಂಬಲಿಸುವ ಸ್ಮಾರ್ಟ್ ಡಿವೈಸ್‌ಗಳಾದ ಹೇರ್‌ ಕಂಡಿಷನರ್‌, ರೂಮ್‌ ಲೈಟ್ಸ್‌, ಫ್ಯಾನ್ಸ್‌ ಕನೆಕ್ಟ್‌ ಮಾಡಲು ಮತ್ತು ಅವುಗಳನ್ನು ನೇರವಾಗಿ ಟಿವಿ ಮೂಲಕ ನಿಯಂತ್ರಿಸಲು ನಿಮಗೆ ಅವಕಾಶ ಮಾಡಿಕೊಡಲಿದೆ. ಇದಕ್ಕಾಗಿ ಟಿಸಿಎಲ್ ಅಭಿವೃದ್ಧಿಪಡಿಸಿದ ಎಐ ಎಕ್ಸ್ ಐಒಟಿ ಫೀಚರ್ಸ್‌ ಅನ್ನು ಇದರಲ್ಲಿ ಅಳವಡಿಲಸಾಗಿದೆ. ಇನ್ನು ಹೆಚ್ಚುವರಿಯಾಗಿ, 5.1 ಸರೌಂಡ್ ಸೌಂಡ್ ಅನುಭವ ನೀಡುವ ಡಾಲ್ಬಿ ಆಡಿಯೋವನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು 55 ಇಂಚಿನ iFFalcon H71 4K QLED TV ಬೆಲೆ 45,999 ಆಗಿದ್ದರೆ, 65 ಇಂಚಿನ ಮಾದರಿ 65,999 ರೂ. ಬೆಲೆಯನ್ನ ಹೊಂದಿದೆ. ಇನ್ನು 43 ಇಂಚಿನ iFFalcon K71 4K UHD TV ಯ ಬೆಲೆ ರೂ. 25,999, ಆಗಿದ್ದು, ಇದರ 55 ಇಂಚಿನ ಆಯ್ಕೆಯ ಟಿವಿಯ ಬೆಲೆ ರೂ. 35,999 ಆಗಿದೆ. ಅಲ್ಲದೆ ಇದರ ಟಾಪ್ ಎಂಡ್, 65 ಇಂಚಿನ ಮಾದರಿ 54,999 ರೂ. ಬೆಲೆಯನ್ನ ಹೊಂದಿದೆ. ಇನ್ನು ಈ ಎರಡು ಹೊಸ ಸ್ಮಾರ್ಟ್‌ಟಿವಿಗಳು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಲು ಲಭ್ಯವಿದೆ.

Best Mobiles in India

English summary
iFFalcon H71 4K QLED TV price in India starts at Rs. 45,999 for the 55-inch variant while iFFalcon K71 4K UHD TV carries a starting price tag of Rs. 25,999.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X