ದೇಶದ ಮೊಟ್ಟ ಮೊದಲ 'ಮೈಕ್ರೋ ಪ್ರೊಸೆಸರ್' ತಯಾರಿಸಿದ ವಿದ್ಯಾರ್ಥಿಗಳು!..ಹೇಗಿದೆ ಗೊತ್ತಾ?

|

ತಂತ್ರಜ್ಞಾನ ಕ್ಷೇತ್ರದಲ್ಲಿ ಸೇವೆ ಮಾಡಲು ಮಾತ್ರವಲ್ಲ. ಬದಲಾಗಿ ನಾವೂ ಕೂಡ ಹೊಸ ಹೊಸ ತಂತ್ರಜ್ಞಾನಗಳನ್ನು ಸ್ವಂತವಾಗಿ ಅಭಿವೃದ್ದಿಪಡಿಸುತ್ತೇವೆ ಎಂಬುದನ್ನು ಐಐಟಿ-ಮದ್ರಾಸ್‌(ಐಐಟಿ-ಎಂ)ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಐಐಟಿ-ಮದ್ರಾಸ್‌ ವಿದ್ಯಾರ್ಥಿಗಳು ಮೊತ್ತ ಮೊದಲ ಸ್ವದೇಶಿ ನಿರ್ಮಿತ ಮೈಕ್ರೋಪ್ರೊಸೆಸರ್ ಒಂದನ್ನು ತಯಾರಿಸಿ ವಿಶ್ವದ ಗಮನಸೆಳೆದಿದ್ದಾರೆ.

ಹೌದು, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಈಗ ಬಹಳಷ್ಟು ವೇಗವಾಗಿ ಬೆಳವಣಿಗೆ ಕಾಣುತ್ತಿದೆ, ಭಾರತ ಬದಲಾಗುತ್ತಿದೆ ಎಂಬ ವಿಶ್ವ ತಂತ್ರಜ್ಞರ ಮಾತನ್ನು ಇತ್ತೀಚಿನ ಹಲವು ಸಂಶೋಧನೆಗಳು ನಿಜ ಮಾಡಿವೆ. ಇವುಗಳ ಸಾಲಿಗೆ ದೇಶದ ಮೊತ್ತ ಮೊದಲ ಸ್ವದೇಶಿ ನಿರ್ಮಿತ ಮೈಕ್ರೋಪ್ರೊಸೆಸರ್ ಸೇರಿಕೊಂಡಿದ್ದು, ಕಂಪ್ಯೂಟರ್ ಜಗತ್ತು ಒಮ್ಮೆ ಭಾರತದ ವಿಧ್ಯಾರ್ಥಿಗಳತ್ತ ಕಣ್ಣು ಹಾಕಿದೆ.

ದೇಶದ ಮೊಟ್ಟ ಮೊದಲ 'ಮೈಕ್ರೋ ಪ್ರೊಸೆಸರ್' ತಯಾರಿಸಿದ ವಿದ್ಯಾರ್ಥಿಗಳು!

ದೇಶದಲ್ಲೇ ನಿರ್ಮಿತ ಮೊತ್ತ ಮೊದಲ ಮೈಕ್ರೋಪ್ರೊಸೆಸರ್‌ಗೆ 'ಶಕ್ತಿ' ಎಂದು ನಾಮಕರಣ ಮಾಡಿರುವ ವಿದ್ಯಾರ್ಥಿಗಳಿಗೆ ಚಂಡೀಘಡದಲ್ಲಿರುವ ಇಸ್ರೋದ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಸಾಥ್ ನೀಡಿದೆ. ಹಾಗಾದರೆ, ದೇಶದಲ್ಲೇ ನಿರ್ಮಿತವಾದ ಮೊತ್ತ ಮೊದಲ ಸ್ವದೇಶಿ ಮೈಕ್ರೋಪ್ರೊಸೆಸರ್ ಹೇಗಿದೆ? ಅದರ ತಂತ್ರಜ್ಞಾನ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ದೇಶದ ಮೊದಲ ಮೈಕ್ರೋ ಪ್ರೊಸೆಸರ್

ದೇಶದ ಮೊದಲ ಮೈಕ್ರೋ ಪ್ರೊಸೆಸರ್

ಐಟಿ-ಮದ್ರಾಸ್‌(ಐಐಟಿ-ಎಂ)ನ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿರುವ ದೇಶದ ಮೊದಲ ಮೈಕ್ರೋಪ್ರೊಸೆಸರ್ ಆಗಿ ಇದೀಗ 'ಶಕ್ತಿ' ಪ್ರೊಸೆಸರ್ ರೂಪುಗೊಂಡಿದೆ. ಐಐಟಿಎಮ್ ಪ್ರಕಾರ, ಶಕ್ತಿ ಮೈಕ್ರೊಪ್ರೊಸೆಸರ್ ಅನ್ನು ಕಡಿಮೆ-ಸಾಮರ್ಥ್ಯದ ವೈರ್ಲೆಸ್ ಸಿಸ್ಟಮ್ಸ್ ಮತ್ತು ನೆಟ್ವರ್ಕಿಂಗ್ ವ್ಯವಸ್ಥೆಗಳಲ್ಲಿ ಬಳಸಬಹುದಾಗಿದ್ದು, ಸ್ವದೇಶಿಯವಾಗಿ ಪೂರ್ಣ ಹಂತದಲ್ಲಿ ಅಭಿವೃದ್ದಿಯಾಗಿದೆ.

ಡಿಜಿಟಲ್ ಇಂಡಿಯಾ ಶಕ್ತಿ!

ಡಿಜಿಟಲ್ ಇಂಡಿಯಾ ಶಕ್ತಿ!

ಡಿಜಿಟಲ್ ಇಂಡಿಯಾ ಆಗಮನದಿಂದ, ದೇಶದಲ್ಲೇ ಪ್ರೊಸೆಸರ್ ತಯಾರಿಸುವ ಅಗತ್ಯತೆ ಈಗ ಯಶಸ್ವಿಯಾಗಿದೆ. ಜುಲೈನಲ್ಲಿ 300 ಚಿಪ್‌ಗಳನ್ನು ಇಂಟೆಲ್‌, ಒರೆಗನ್‌, ಯುಎಸ್‌ ಹಾಗೂ ಲಿನ್ಯುಕ್ಸ್ ಆಪರೇಟಿಂಗ್‌ ಸಿಸ್ಟಮ್‌ನ ಸಹಾಯದೊಂದಿಗೆ ತಯಾರಿಸಲಾಗಿತ್ತು. ಇದೀಗ ಸಂಪೂರ್ಣ ಸ್ವದೇಶಿ ನಿರ್ಮಿತ ಚಿಪ್‌ ವಿಶ್ವ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಗಮನಸೆಳೆದಿದೆ.

ತಯಾರಾಗಿದ್ದು ಹೇಗೆ?

ತಯಾರಾಗಿದ್ದು ಹೇಗೆ?

'ಶಕ್ತಿ ಮೈಕ್ರೊ ಪ್ರೊಸೆಸರ್ ಅನ್ನು ಚಂಡೀಘಡದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸೆಮಿ-ಕಂಡಕ್ಟರ್ ಲ್ಯಾಬೊರೇಟರಿ (SCL) ನಲ್ಲಿ ತಯಾರಿಸಲಾಗಿದೆ. ಇದು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಯಾಗಿ ವಿನ್ಯಾಸಗೊಳಿಸಲ್ಪಟ್ಟ ಮೊದಲ 'RISC V ಮೈಕ್ರೋಪ್ರೊಸೆಸರ್ ಎಂದು ಮದ್ರಾಸ್‌ನಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ ಹೇಳಿದೆ.

ತಂತ್ರಜ್ಞಾನ ಸಂಪೂರ್ಣ ಬದಲಾಗಿದೆ!

ತಂತ್ರಜ್ಞಾನ ಸಂಪೂರ್ಣ ಬದಲಾಗಿದೆ!

ಚಿಪ್‌ಗಳ ತಂತ್ರಜ್ಞಾನ ಸಂಪೂರ್ಣ ಬದಲಾಯಿಸಲಾಗಿದೆ. ಸ್ವದೇಶಿ ಚಿಪ್‌ 180ಎನ್‌ಎಂ ಇದ್ದರೆ ಯುಎಸ್‌ನ ಒಂದು ವಿಧವಾದ ಚಿಪ್‌ 20ಎನ್‌ಎಂ ಇದೆ. ವಿದ್ಯುತ್‌ ಸಂಪರ್ಕದ ಜತೆಗೆ ಇರುವ ವಸ್ತುಗಳಿಗೆ ಇವುಗಳನ್ನು ಬಳಕೆ ಮಾಡಬಹುದು ಎಂದು ಐಐಟಿ-ಎಂನ ಆರ್‌ಐಎಸ್‌ಇ ಲ್ಯಾಬೋರೇಟರಿಯ ಮುಖ್ಯ ಸಂಶೋಧಕ ಪ್ರೊ. ಕಾಮಕೋಟಿ ವೀಳಿನಾಥನ್‌ ಹೇಳಿದ್ದಾರೆ.

ಪ್ರೊಸೆಸರ್ ಅಳವಡಿಸಲು ತಯಾರಿ!

ಪ್ರೊಸೆಸರ್ ಅಳವಡಿಸಲು ತಯಾರಿ!

ದೇಶದಲ್ಲೇ ತಯಾರಾದ ಮೊದಲ ಸ್ವದೇಶಿ ಮೈಕ್ರೋಪ್ರೊಸೆಸರ್ ಅನ್ನು ಶೀಘ್ರದಲ್ಲೇ ಮೊಬೈಲ್‌, ಸರ್ವಿಲೆನ್ಸ್‌ ಕ್ಯಾಮರಾ, ಸ್ಮಾರ್ಟ್‌ ಮೀಟರ್‌ ಸೇರಿದಂತೆ ಇನ್ನಿತರ ವಸ್ತುಗಳಿಗೆ ಅಳವಡಿಸಲು ಅಣಿಗೊಳಿಸಲಾಗುತ್ತಿದೆ. ಹೊಸ ಉತ್ಪನ್ನಕ್ಕೆ ಶಕ್ತಿ ಎಂದು ನಾಮಕರಣ ಮಾಡಿರುವ ವಿದ್ಯಾರ್ಥಿಗಳಿಗೆ ಛಂಡೀಗಡದ ಇಸ್ರೋದ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಇದಕ್ಕೂಸಹ ಜೊತೆಯಾಗಿದೆ.

ಪರಾಶಕ್ತಿ ಕೂಡ ತಯಾರಾಗುತ್ತಿದೆ!

ಪರಾಶಕ್ತಿ ಕೂಡ ತಯಾರಾಗುತ್ತಿದೆ!

ಇದೇ ತಂಡ ಪರಾಶಕ್ತಿ ಎಂಬ ಹೆಸರಿನ ಅತ್ಯಾಧುನಿಕ ಮೈಕ್ರೋಪ್ರೊಸೆಸರ್‌ನ ತಯಾರಿಯಲ್ಲಿದ್ದು, ಸೂಪರ್‌ ಕಂಪ್ಯೂಟರ್‌ಗಳಿಗೆ ಬಳಸಲಾಗುತ್ತದೆ. ವರ್ಷಾಂತ್ಯದ ವೇಳೆಗೆ ಸೂಪರ್‌ ಸ್ಕೇಲರ್‌ ಪ್ರೊಸೆಸರ್ ಸಿದ್ಧವಾಗಲಿದೆ. ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳಿಗೂ ಇವುಗಳಲ್ಲಿ ಕೆಲವನ್ನು ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ ಎಂದು ಐಐಟಿ ಮದ್ರಾಸ್ ಸಂಶೋಧಕರು ತಿಳಿಸಿದ್ದಾರೆ

ಸ್ವದೇಶಿ ಪ್ರೊಸೆಸರ್ ಏಕೆ ಬೇಕಿತ್ತು?

ಸ್ವದೇಶಿ ಪ್ರೊಸೆಸರ್ ಏಕೆ ಬೇಕಿತ್ತು?

ಮೈಕ್ರೋಚಿಪ್‌ಗಳ ಆಮದು ಅವಲಂಬನೆಯನ್ನು ಕಡಿಮೆ ಮಾಡುವ ಹಾಗೂ ಸೈಬರ್ ಸೆಕ್ಯುರಿಟಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ದೇಶದಲ್ಲೇ ತಯಾರಾದ ಮೊದಲ ಸ್ವದೇಶಿ ಮೈಕ್ರೊ ಪ್ರೊಸೆಸರ್ ಸಹಕಾರಿಯಾಗಲಿದೆ. ಅಲ್ಲದೆ ರಕ್ಷಣಾ ವಲಯದಲ್ಲೂ ಸಾಕಷ್ಟು ಅವಕಾಶಗಳಿವೆ. ಸಂವಹನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಇವುಗಳ ಪಾತ್ರ ಹೆಚ್ಚು ಎಂದು ಹೇಳಲಾಗಿದೆ.

Best Mobiles in India

English summary
Shakti microprocessor can be used in low-power wireless systems and networking systems besides reducing reliance on imported microprocessors. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X