'ಆಧಾರ್ ಆಪ್' ಸೃಷ್ಟಿಸಿ ಜೈಲಿಗೆ ಬಿದ್ದ ಭೂಪ!!..42 ಲಕ್ಷ ವೇತನವಿದ್ದರೂ ಅತ ಮಾಡಿದ್ದು?
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅಭಿನವ್ ಶ್ರೀವಾಸ್ತವ ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಿ ಆಧಾರ್ ಆಪ್ ಮೂಲಕ ಅಕ್ರಮ ಸಂಪಾದನೆಗೆ ಇಳಿದಿದ್ದ.
ಮೊಬೈಲ್ ಆಪ್ ಒಂದನ್ನು ಅಭಿವೃದ್ಧಿಪಡಿಸಿ, ಆಧಾರ್ ಮಾಹಿತಿ ಸಾರ್ವಜನಿಕರಿಗೆ ಸಿಗುವಂತೆ ಮಾಡಿದ್ದ ಅಭಿನವ್ ಶ್ರೀವಾಸ್ತವ ಎಂಬುವನನ್ನು ಸಿಸಿಬಿ ಹಾಗೂ ಸೈಬರ್ ಕ್ರೈಂ ಪೋಲೀಸರು ಬಂಧಿಸಿದ್ದಾರೆ.! ಬಂಧಿತ ಓಲಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.!!
ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅಭಿನವ್ ಶ್ರೀವಾಸ್ತವ ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಿ ಆಧಾರ್ ಆಪ್ ಮೂಲಕ ಅಕ್ರಮ ಸಂಪಾದನೆಗೆ ಇಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ. ವಾರ್ಷಿಕ ₹ 42 ಲಕ್ಷ ವೇತನವಿದ್ದರೂ ಸಹ ಈತ ಕೇಂದ್ರ ಸರ್ಕಾರದ 'ಆಧಾರ್' ಯೋಜನೆಗೇ ಕೈ ಇಟ್ಟು ಕಾರಾಗೃಹದ ಅತಿಥಿಯಾಗಿದ್ದಾನೆ.!!
ಹಾಗಾದರೆ, ಯಾರು ಈ ಅಭಿನವ್ ಶ್ರೀವಾಸ್ತವ? ಮಾಡಿದ ಕೆಲಸ ಎಂತದ್ದು? ಆಧಾರ್ ಮಾಹಿತಿ ಇವನಿಗೆ ಸಿಕ್ಕಿದ್ದೇಗೆ? ಅತಿ ಬುದ್ದಿವಂತಿಕೆಯೂ ಸಹ ಮುಳುವಾಗಿದ್ದು ಹೇಗೆ ಎಂಬ ಎಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಯಶವಂತಪುರದಲ್ಲಿ ನೆಲೆಸಿದ್ದ ಅಭಿನವ್ ಶ್ರೀವಾಸ್ತವ!!
ಉತ್ತರಪ್ರದೇಶದ ಕಾನ್ಪುರ ನಗರದಿಂದ ಅಭಿನವ್ ಶ್ರೀವಾಸ್ತವ 7 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಯಶವಂತಪುರದಲ್ಲಿ ನೆಲೆಸಿದ್ದಾನೆ. ಇನ್ನು ಕೋರಮಂಗಲದಲ್ಲಿರುವ ಓಲಾ ಕಂಪೆನಿ ಮುಖ್ಯ ಕಚೇರಿಯಲ್ಲಿ ಫ್ಟ್‌ವೇರ್ ಎಂಜಿನಿಯರ್ ಉದ್ಯೋಗಿಯಾಗಿದ್ದಾನೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.!!

ಯಾವುದು ಆದು ಆಧಾರ್ ಸೋರಿಕೆ ಆಪ್?
ಅಭಿನವ್ ಶ್ರೀವಾಸ್ತವ ‘Adhaar e-KYC verification' ಎಂಬ ಮೊಬೈಲ್ ಆಪ್ ಅಭಿವೃದ್ಧಿಪಡಿಸಿ, ‘ಆಧಾರ್'ಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕರಿಗೆ ಸಿಗುವಂತೆ ಮಾಡಿದ್ದಾನೆ. ನಂತರ ಇದು ಕಾನೂನು ಬಾಹಿರ ಎಂದು ತಿಳಿದು ಸ್ಥಗಿತಗೊಳಿಸಿದ್ದರೂ 50 ಸಾವಿರ ಗ್ರಾಹಕರು ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.!!


ಆಧಾರ್ ಮಾಹಿತಿ ಸೋರಿಕೆಯಾಗಿದ್ದು ಹೇಗೆ?
ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಧಾರ್ ಮಾಹಿತಿ ಕದಿಯಲು ಸಾಧ್ಯವಿಲ್ಲ ಎಂಬುದನ್ನು ತಿಳಿದಿದ್ದ ಆರೋಪಿ ಅಭಿನವ್ ಶ್ರೀವಾಸ್ತವ, ಅತಿ ಬುದ್ದಿವಂತಿಕೆ ಉಪಯೋಗಿಸಿ ಸರ್ಕಾರದ ಮತ್ತೊಂದು ಯೋಜನೆಯಾದ ‘ಇ-ಹಾಸ್ಪಿಟಲ್' ಬಳಸಿಕೊಂಡಿದ್ದರು. . ಇದರಿಂದ ಇ-ಹಾಸ್ಪಿಟಲ್‌ಗೆ ಸಿಗುತ್ತಿದ್ದ ಸಾರ್ವಜನಿಕರ ಆಧಾರ್ ಕಾರ್ಡ್ ಮಾಹಿತಿ ಆಪ್‌ನಲ್ಲಿಯೂ ದೊರೆಯುತ್ತಿತ್ತು.!!

ಲಕ್ಷ ಲಕ್ಷ ಆದಾಯ!!
ಅಭಿನವ್ ಶ್ರೀವಾಸ್ತವ ಅಭಿವೃದ್ಧಿಪಡಿಸಿದ್ದ ಆಪ್ ಡೌನ್‌ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ, ಅದರಲ್ಲಿ ಜಾಹೀರಾತು ಪ್ರಕಟಿಸಲು ಹಲವು ಕಂಪೆನಿಗಳು ಮುಂದೆ ಬಂದಿದ್ದವು. ಒಂದು ಜಾಹೀರಾತಿಗೆ 40 ಸಾವಿರ ಹಣ ಮಾಡುತ್ತಿದ್ದ ಅಭಿನವ್, ಆ ಮೂಲಕವೂ ಪ್ರತಿತಿಂಗಳು ಲಕ್ಷಾಂತರ ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ.


Click it and Unblock the Notifications