10 ಲಕ್ಷ ರೂ.ಬೆಲೆಯ 'ಐಮ್ಯಾಕ್ ಪ್ರೊ' ರಿಲೀಸ್!..ಹೇಗಿದೆ ಗೊತ್ತಾ?

|

ತಂತ್ರಜ್ಞಾನ ದೈತ್ಯ ಕಂಪೆನಿ ಆಪಲ್ ಯಾವುದೇ ಉತ್ಪನ್ನವನ್ನು ಬಿಡುಗಡೆ ಮಾಡಿದರೂ ಅದಕ್ಕೆ ತನ್ನದೇ ಆದ ವಿಶೇಷತೆಗಳು ಇರುತ್ತದೆ. ಆಪಲ್ ಉತ್ಪನ್ನದ ಬೆಲೆ ಹೆಚ್ಚಿದೆ ಎಂದರೆ ಆ ಉತ್ಪನ್ನದ ಫೀಚರ್ಸ್ ಮತ್ತು ಗುಣಮಟ್ಟ ಕೂಡ ಹೆಚ್ಚಾಗಿಯೇ ಇರುತ್ತದೆ. ಇದಕ್ಕೆ ಉದಾಹರಣೆ ಎಂದರೆ, ಆಪಲ್ ಇತ್ತೀಚಿಗಷ್ಟೇ 10 ಲಕ್ಷ ಬೆಲೆಬಾಳುವ 'ಐಮ್ಯಾಕ್ ಪ್ರೊ' ಬಿಡುಗಡೆ ಮಾಡಿದೆ.

ಹೌದು, ತಂತ್ರಜ್ಞಾನ ದೈತ್ಯ ಆಪಲ್ ಇದೀಗಷ್ಟೇ ಎರಡು ಐಮ್ಯಾಕ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಇದರ ಜತೆಗೆ 10 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಬಾಳುವ ಐಮ್ಯಾಕ್ ಪ್ರೊ ಮಾದರಿಯನ್ನು ಅಪ್‌ಗ್ರೇಡ್ ಮಾಡಿದೆ. 2.3GHz 18 ಕೋರ್ ಪ್ರೊಸೆಸರ್, 5ಕೆ ಡಿಸ್‌ಪ್ಲೇ ಮತ್ತು 256GB RAM ಹೊಂದಿರುವ ನೂತನ 'ಐಮ್ಯಾಕ್ ಪ್ರೊ' ಇದೀಗ ಮಾರುಕಟ್ಟೆಗೆ ಬಂದಿದೆ.

10 ಲಕ್ಷ ರೂ.ಬೆಲೆಯ 'ಐಮ್ಯಾಕ್ ಪ್ರೊ' ರಿಲೀಸ್!..ಹೇಗಿದೆ ಗೊತ್ತಾ?

10 ಲಕ್ಷ ಬೆಲೆಬಾಳುವ 'ಐಮ್ಯಾಕ್ ಪ್ರೊ'ನಲ್ಲಿ 8ನೇ ತಲೆಮಾರಿನ ಕ್ವಾಡ್ ಕೋರ್ ಹಾಗೂ ಮೊದಲ ಬಾರಿಗೆ 6 ಕೋರ್ ಪ್ರೊಸೆಸರ್‌ಗಳು ಹಿಂದಿಗಿಂತಲೂ ಶೇಕಡಾ 60ರಷ್ಟು ಹೆಚ್ಚು ವೇಗದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಆಪಲ್ ತಿಳಿಸಿದೆ. ಹಾಗಾದರೆ, ಆಪಲ್ ಕಂಪೆನಿಯ ಅತಿ ದುಬಾರಿ ಐಮ್ಯಾಕ್ ಮಾಡೆಲ್‌ 'ಐಮ್ಯಾಕ್ ಪ್ರೊ' ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹೇಗಿದೆ 'ಐಮ್ಯಾಕ್ ಪ್ರೊ'!

ಹೇಗಿದೆ 'ಐಮ್ಯಾಕ್ ಪ್ರೊ'!

ಇದೇ ಮೊದಲ ಬಾರಿಗೆ 21.5 ಇಂಚು ಐಮ್ಯಾಕ್, ರೆಟಿನಾ 4ಕೆ ಡಿಸ್‌ಪ್ಲೇ ಜತೆ 27 ಇಂಚುಗಳ ಐಮ್ಯಾಕ್ ರೆಟಿನಾ 5ಕೆ ಡಿಸ್‌ಪ್ಲೇ ಪರಿಚಯಿಸಲಾಗಿದೆ. 4ಕೆ ಹಾಗೂ 5ಕೆ ಡಿಸ್‌ಪ್ಲೇ ಜತೆಗೆ 14.7 ಮಿಲಿಯನ್ ಪಿಕ್ಸೆಲ್ , 1 ಬಿಲಿಯನ್ ಕಲರ್, 4ಕೆ ವೀಡಿಯೋ ಇತ್ಯಾದಿ ಫೀಚರ್ಸ್‌ಗಳನ್ನು 'ಐಮ್ಯಾಕ್ ಪ್ರೊ' ಹೊಂದಿದೆ. ಇದು ಆಪಲ್ ತಂದಿರುವ ಭವಿಷ್ಯದ ಫೀಚರ್ಸ್‌ಗಳಾಗಿವೆ.

'ಐಮ್ಯಾಕ್ ಪ್ರೊ' ಪ್ರೊಸೆಸರ್

'ಐಮ್ಯಾಕ್ ಪ್ರೊ' ಪ್ರೊಸೆಸರ್

ಮೊದಲೇ ಹೇಳಿದಂತೆ, 'ಐಮ್ಯಾಕ್ ಪ್ರೊ' 2.3 GHz 18 ಕೋರ್ ಇಂಟೆಲ್ ಕ್ಸಿಯೋನ್ ಡಬ್ಲ್ಯು ಪ್ರೊಸೆಸರ್ ಹೊಂದಿದೆ. ಈ ಪ್ರೊಸೆಸರ್ 256GB RAM ಮತ್ತು ರೇಡಿಯೋನ್ ಪ್ರೊ ವೇಗಾ 64ಎಕ್ಸ್ ಗ್ರಾಫಿಕ್ಸ್ ಜೊತೆಗೆ ಸಂಯೋಗ ಹೊಂದಿದ್ದು, ಹೊಸ ಅಪ್‌ಗ್ರೇಡ್ ಆಯ್ಕೆಗಳು ಟೆಕ್ ಜಗತ್ತಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದೆ. ಐಮ್ಯಾಕ್ ಪ್ರೊ ಕಾರ್ಯನಿರ್ವಹಣೆ ಕೂಡ ಗಮನಸೆಳೆದಿದೆ.

ಬೆಳಕಿನ ವೇಗದಲ್ಲಿ ಕೆಲಸ?

ಬೆಳಕಿನ ವೇಗದಲ್ಲಿ ಕೆಲಸ?

9ನೇ ತಲೆಮಾರಿನ ಕ್ವಾಡ್ ಕೋರ್ ಹಾಗೂ ಮೊದಲ ಬಾರಿಗೆ 6 ಕೋರ್ ಪ್ರೊಸೆಸರ್‌ಗಳನ್ನು ಹೊತ್ತು 'ಐಮ್ಯಾಕ್ ಪ್ರೊ' ಬಿಡುಗಡೆಯಾಗಿದೆ. ಇದು ಹಿಂದಿಗಿಂತಲೂ ಶೇಕಡಾ 60ರಷ್ಟು ಹೆಚ್ಚು ವೇಗದಲ್ಲಿ ಕಾರ್ಯ ನಿರ್ವಹಿಸಲು ನೆರವಾಗಲಿದೆ. ಹಾಗಾಗಿ, ಆರು ಹಾಗೂ ಎಂಟು ಕೋರ್ ಪ್ರೊಸೆಸರ್‌ಗಳಲ್ಲಿ 'ಐಮ್ಯಾಕ್ ಪ್ರೊ' ಕಾರ್ಯನಿರ್ವಹಣೆ ಕೂಡ ಬೆಳಕಿನ ವೇಗದಲ್ಲಿರುತ್ತದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

14.7 ಮಿಲಿಯನ್ ಪಿಕ್ಸೆಲ್, 1 ಬಿಲಿಯನ್ ಕಲರ್ಸ್, 500 ಬ್ರೈಟ್‌ನೆಟ್ ನಿಟ್ಸ್, ರೆಡಿಯನ್ ಪ್ರೊ ವೆಗಾ ಗ್ರಾಫಿಕ್ಸ್ ಮತ್ತು ಪಿ3 ವೈಡ್ ಕಲರ್ ಗ್ಯಾಮಟ್ ( ಫುಲ್ ರೆಸಲ್ಯೂಶನ 4k ವಿಡಿಯೋ ಎಡಿಟ್ ಮಾಡುವ ಫೀಚರ್)ಗಳು 'ಐಮ್ಯಾಕ್ ಪ್ರೊ'ನಲ್ಲಿ ಹೆಚ್ಚು ಗಮನಸೆಳೆಯುತ್ತಿವೆ. 9ನೇ ತಲೆಮಾರಿನ 6 ಮತ್ತು 8 ಕೋರ್‌ಗಳ ಪ್ರೊಸೆಸರ್‌ನಲ್ಲಿ ಇರುವುದು ಮತ್ತಿತರ ವಿಶೇಷತೆಗಳು.

'ಐಮ್ಯಾಕ್ ಪ್ರೊ' ಬೆಲೆಗಳು

'ಐಮ್ಯಾಕ್ ಪ್ರೊ' ಬೆಲೆಗಳು

ಭಾರತದಲ್ಲಿ ಐಮ್ಯಾಕ್ ಪ್ರೊನ ಎರಡು ಮಾದರಿಗಳು ಮಾತ್ರ ಲಭ್ಯವಿದ್ದು, 21.5 ಇಂಚುಗಳ ಐಮ್ಯಾಕ್ ಬೆಲೆ 1.19 ಲಕ್ಷ ರೂ.ಗಳಿಂದ ಪ್ರಾರಂಭವಾಗಲಿದೆ. ಇನ್ನು 27 ಇಂಚುಗಳ ಆವೃತ್ತಿಯು ಆರಂಭಿಕ ಬೆಲೆ 1.69 ಲಕ್ಷ ರೂ.ಗಳಿಂದ ಆರಂಭವಾಗಿದೆ. ಆದರೆ. 10 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಬಾಳುವ ಐಮ್ಯಾಕ್ ಪ್ರೊ ಮಾದರಿಯು ಭಾರತದಲ್ಲಿ ಬಿಡುಗಡೆಯಾಗುವ ಮಾಹಿತಿ ಇಲ್ಲ.

Most Read Articles
Best Mobiles in India

English summary
And this high-end computing device costs $15,699 which translates to over Rs 10.84 lakh in India. The new iMac Pro with 256GB of 2,666MHz. to know more vfisit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X