2018ರ 'ಅಂಡರ್‌ವಾಟರ್ ಚಿತ್ರ' ಪ್ರಶಸ್ತಿಗಾಗಿ ಪೈಪೋಟಿ ನೀಡಿದ ಮನಸೋಲುವ ಚಿತ್ರಗಳು!

|

ನಮಗೆ ಅಂಡರ್‌ವಾಟರ್ ಫೋಟೊಗ್ರಫಿ ಎಂಬ ಕಲ್ಪನೆ ಮೂಡುವಷ್ಟರಲ್ಲಿಯೇ ಅಂತರಾಷ್ಟ್ರೀಯ ಮಟ್ಟದಲ್ಲಿ ಇದು ಹೆಚ್ಚು ಸದ್ದನ್ನು ಮಾಡುತ್ತಿದೆ. ಭೂಮಿಯ ಮೇಲಿನ ಕೌತುಕಗಳನ್ನು ಚಿತ್ರಿಸಿ ತೋರಿಸುತ್ತಿದ್ದ ಕ್ಯಾಮೆರಾ ಕಣ್ಣುಗಳು ಈಗ ನಿರಿನಾಳಕ್ಕೂ ಇಳಿದು ಸೌಂದರ್ಯದ ಸೊಬಗನ್ನು ಸೆರೆಹಿಡಿಯುತ್ತಿವೆ. ನೀರಿನಾಳದ ಕ್ಯಾಮೆರಾ ನೋಟ ನಿಜಕ್ಕೂ ಆಶ್ಚರ್ಯವೆನಿಸುತ್ತದೆ.

ನಿರಿನಾಳಕ್ಕೂ ಇಳಿದು ಸೌಂದರ್ಯದ ಸೊಬಗನ್ನು ಸೆರೆಹಿಡಿದಿರುವ ಚಿತ್ರಗಳನ್ನು 2018ರ ಅಂಡರ್‌ವಾಟರ್ ಛಾಯಾಗ್ರಾಹಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ನೀರಾನಾಳದಲ್ಲಿ ಮುಳುಗಿದ್ದ ನೌಕೆಯ ಒಳಗಿನ ನಾರ್ಟನ್ 16H ಮೋಟಾರು ಬೈಕ್ ಚಿತ್ರಗಳು ಸೇರಿದಂತೆ, ಅದ್ಬುತವೆಂಬಂತಿರುವ ಚಿತ್ರಗಳು ನಮಗೆ ನಂಬಲಾಗದ ದೃಶ್ಯಾವಳಿಯನ್ನು ತೋರಿಸುತ್ತಿವೆ.

2018ರ 'ಅಂಡರ್‌ವಾಟರ್ ಚಿತ್ರ' ಪ್ರಶಸ್ತಿಗಾಗಿ ಪೈಪೋಟಿ ನೀಡಿದ ಮನಸೋಲುವ ಚಿತ್ರಗಳು!

ನೀರಿನಾಳದಲ್ಲಿ ಒಂದು ದೃಶ್ಯವನ್ನು ಒಂದು ಚೌಕಟ್ಟಿನಲ್ಲಿ ಚಿತ್ರಿಸಲು ಸ್ಥಳಾವಕಾಶ ಇರುವುದಿಲ್ಲ. ಆದರೂ, ಅಂಡರ್‌ವಾಟರ್ ಛಾಯಾಗ್ರಾಹಕರು ಚಿತ್ರಿಸಿರುವ ಈ ನೀರಿನಾಳದ ನಿಖರ ಚಿತ್ರಗಳು ನಮ್ಮ ಗಮನ ಸೆಳೆಯುತ್ತಿವೆ. ಹಾಗಾಗಿ, 2018ನೇ ವರ್ಷದಲ್ಲಿ ಅಂಡರ್ವಾಟರ್ ಛಾಯಾಗ್ರಾಹಕ ಪ್ರಶಸ್ತಿಗೆ ಆಯ್ಕೆಯಾಗಿರುವ ಅಂಡರ್‌ವಾಟರ್ ಛಾಯಾಚಿತ್ರಗಳನ್ನು ಮುಂದೆ ನೋಡೋಣ.

1

1

ಜರ್ಮನ್ ಛಾಯಾಗ್ರಾಹಕ ಟೊಬಿಯಾಸ್ ಫ್ರೆಡ್ರಿಕ್ ಅವರು ತೆಗೆದ ಈ ಅದ್ಭುತ ಛಾಯಾಚಿತ್ರವು ವರ್ಷದ ಒಟ್ಟಾರೆ ಅಂಡರ್ವಾಟರ್ ಛಾಯಾಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ. ಕೆಂಪು ಸಮುದ್ರದಲ್ಲಿ ನಡೆದಿದ್ದ ನೌಕಾಘಾತದೊಳಗೆ ಮಿಲಿಟರಿ ನೌಕೆಯ ಒಳಗೆ ಇದ್ದ ನಾರ್ಟನ್ 16H ಮೋಟಾರು ಬೈಕ್ ಚಿತ್ರವಿದು.

2.

2.

ಬ್ಲ್ಯಾಕ್‌ಟೈಪ್ ರೆಂಡೆಜ್ವಸ್ ಎಂಬ ಹೆಸರಿನ ಈ ನಿರಿನಾಳದ ಚಿತ್ರವನ್ನು ಅಮೆರಿಕನ್ ಛಾಯಾಗ್ರಾಹಕ ರೆನೀ ಕಾಪೊಝೊಲಾ ಅವರು ಚಿತ್ರೀಕರಿಸಿದ್ದಾರೆ. ಫ್ರೆಂಚ್ ಪಾಲಿನೇಷಿಯಾದ ಸೂರ್ಯಾಸ್ತದ ಸಮಯದಲ್ಲಿ ಶಾರ್ಕ್ಗಳನ್ನು ಚಿತ್ರೀಕರಿಸಲಾಗಿದೆ.

3.

3.

ನೆದರ್‌ಲ್ಯಾಂಟ್ ಛಾಯಾಗ್ರಾಹಕ ವೆಂಡಿ ಟಿಮ್ಮರ್ಮನ್ಸ್ ಚಿತ್ರಸಿರುವ ಈ ಚಿತ್ರಕ್ಕೆ 'ಡೌನ್ ಸ್ಟ್ರೀಮ್' ಎಂದು ಹೇಳಿದ್ದಾರೆ, ಮೆಕ್ಸಿಕೊದಲ್ಲಿ ತೆಗೆದ ಛಾಯಾಚಿತ್ರವನ್ನು ನೈಸರ್ಗಿಕ ಬೆಳಕಿನಿಂದ ಮಾತ್ರ ತೆಗೆದುಕೊಳ್ಳಲಾಗಿದೆ

4.

4.

ಚೀನೀ ಛಾಯಾಗ್ರಾಹಕ ಟಿಯಾನ್ಹಾಂಗ್ ವಾಂಗ್ ಅವರು, ಈ ಜಪಾನಿನ ಪಿಗ್ಮಿ ಸೀಹಾರ್ಸ್ ಅದ್ಭುತ ಚಿತ್ರವನ್ನು ತೆಗೆದಿದ್ದಾರೆ. ಜಪಾನ್‌ ಕಾಶಿವಾಜಿಮಾದಲ್ಲಿ ಈ ಚಿತ್ರವನ್ನು ಚಿತ್ರಿಸಲಾಗಿದೆ.

5.

5.

ಯುನೈಟೆಡ್ ಕಿಂಗ್‌ಡಮ್‌ನ ಮಾರ್ಕಸ್ ಬ್ಲಾಚ್ಫೋರ್ಡ್ ಅವರು ಮಾಲ್ಟಾದ ಗೊಜೊನಲ್ಲಿ ಈ ಅಂಡರ್‌ವಾಟರ್ ಛಾಯಾಚಿತ್ರ ವನ್ನು ಚಿತ್ರೀಕರಿಸಿದ್ದಾರೆ.

6.

6.

ನಿಜವಾದ ಭ್ರಮೆ ಎಂಬ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವನ್ನು ಜರ್ಮನಿಯ ಕಾನ್ಟಾಟಿನ್ ಕಿಲ್ಲರ್ ಅವರು ಚಿತ್ರಿಸಿದ್ದಾರೆ. ಇದನ್ನು ಜರ್ಮನಿಯ ಡೈವ್ 4 ಲೈಫ್ ಸೀಬರ್ಗ್‌ನಲ್ಲಿ ಚಿತ್ರೀಕರಿಸಲಾಗಿದೆ.

7.

7.

ಫಿನ್ಲೆಂಡ್‌ನ ಪೆಕ್ಕಾ ಟುಯುರಿ ಅವರು, ತಮ್ಮ ದೇಶದ ಲೇಕ್ ಸೈಮಾದ ಕೆಳಭಾಗದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದಾರೆ. ಈ ಕಾರು ಐಸ್ ಒಳಗೆ ಹೋದರು ಹಾಗೆಯೇ ಇದೆ.

8.

8.

ಚೀನೀ ಛಾಯಾಗ್ರಾಹಕ ಕೆ. ಝಾಂಗ್ 'ಬಬಲ್' ಶೀರ್ಷಿಕೆಯ ಚಿತ್ರವನ್ನು ಚಿತ್ರೀಕರಿಸಿದರು. ಜಪಾನ್ ಯಕುಷಿಮಾದಲ್ಲಿ ಬ್ಲೆನ್ನಿ ಮೀನು ಅದರ ಪ್ರತಿಬಿಂಬವನ್ನು ಸೆರೆಹಿಡಿಯುತ್ತಿದೆ.

9.

9.

ಮೆಕ್ಸಿಕೊದ ಛಾಯಾಗ್ರಾಹಕ ಟಾಮ್ ಸೇಂಟ್ ಜಾರ್ಜ್ ಅವರು ಸೆನೋಟ್ ಕಾರ್ವಾಶ್ ಎಂಬ ಪ್ರದೇಶದಲ್ಲಿ ಈ ಫೋಟೋವನ್ನು ಚಿತ್ರಿಸಿದ್ದಾರೆ.

10

10

ಇಟಾಲಿಯನ್ ಛಾಯಾಗ್ರಾಹಕ ಮಾರ್ಚಿಯೋನ್ ಜಿಯಾಕೊಮೊ ಅವರು ಕಪ್ಪು-ಸ್ಯಾಡಲ್ ಸೀಗಡಿ ಸಮತೋಲನದ ಈ ಫೋಟೋವನ್ನು ಚಿತ್ರೀಕರಿಸಿದ್ದಾರೆ.

Best Mobiles in India

English summary
Sunken World War II military vehicles, shipwrecks and stunning marine life: The breathtaking images voted among the best of 2018's underwater photos.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X