Home
ಸುದ್ದಿಜಾಲ

ಇಡೀ ಜಗತ್ತು ಮೇಡ್‌ ಇನ್‌ ಇಂಡಿಯಾ ಫೋನ್‌ ಬಳಸುವ ಕಾಲ ಬರಲಿದೆ! ಪ್ರಧಾನಿ ಮೋದಿ ಘೋಷಣೆ!

ಭಾರತ ಮೊಬೈಲ್ ಕಾಂಗ್ರೆಸ್ (IMC) 2023ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಶೀಘ್ರದಲ್ಲೇ ಭಾರತದಲ್ಲಿ ತಯಾರಿಸಿದ ಫೋನ್‌ಗಳನ್ನು ಇಡೀ ಜಗತ್ತು ಬಳಸುತ್ತಿದೆ ಎಂದು ನಾವು ಹೆಮ್ಮೆಪಡುತ್ತೇವೆ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಸದ್ಯದಲ್ಲೇ ಭಾರತದಲ್ಲಿಯೇ ಸ್ಮಾರ್ಟ್‌ಫೋನ್‌ಗಳನ್ನು ಉತ್ಪಾದನೆ ಮಾಡಲಾಗುತ್ತದೆ ಎನ್ನುವ ಸೂಚನೆ ನೀಡಿದ್ದಾರೆ.

ಹೌದು, ಭಾರತವು ಪ್ರಸ್ತುತ ಹಲವು ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ 2024ರ ವೇಳೆಗೆ ಭಾರತದಲ್ಲಿಯೇ ಜನಪ್ರಿಯ ಮೊಬೈಲ್‌ ಬ್ರ್ಯಾಂಡ್‌ಗಳು ಫೋನ್‌ಗಳನ್ನು ಉತ್ಪಾದಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ. ಅದರಲ್ಲೂ ಗೂಗಲ್‌ ಪಿಕ್ಸೆಲ್ 8 ಸರಣಿಯನ್ನು ಭಾರತದಲ್ಲಿಯೇ ತಯಾರಿಸುವ ಗೂಗಲ್‌ನ ಪ್ಲಾನ್‌ ಬಗ್ಗೆ ಕೂಡ ಮೋದಿ ಮಾತನಾಡಿದ್ದಾರೆ. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಡೀ ಜಗತ್ತು ಮೇಡ್‌ ಇನ್‌ ಇಂಡಿಯಾ ಫೋನ್‌ ಬಳಸುವ ಕಾಲ ಬರಲಿದೆ! ಪ್ರಧಾನಿ ಘೋಷಣೆ!

ಭಾರತದಲ್ಲಿ ಪ್ರಸ್ತುತ ಯಾವುದೇ ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳು ತಯಾರಾಗ್ತಿಲ್ಲ. ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಆದರೆ ಶೀಘ್ರದಲ್ಲಿಯೇ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿಯೇ ಉತ್ಪಾದನೆ ಆಗುವ ಕಾಲ ದೂರವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಷ್ಟೆ ಅಲ್ಲ ಭಾರತವು ಪ್ರಬಲವಾದ ಸೆಮಿಕಂಡಕ್ಟರ್‌ ಪ್ರೊಡಕ್ಷನ್‌ ಅನ್ನು ಹೊಂದಬೇಕಾದ ಅಗತ್ಯದ ಬಗ್ಗೆ ಕೂಡ ಮಾತನಾಡಿದ್ದಾರೆ.

ಪ್ರಬಲವಾದ ಸೆಮಿಕಂಡಕ್ಟರ್‌ ಉತ್ಪಾದನೆಯು ಮೊಬೈಲ್‌ ಮಾರುಕಟ್ಟೆಯ ಉತ್ಪಾದನಾ ಉದ್ಯಮವನ್ನು ಮುನ್ನಡೆಸುವುದಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ. ಇದಕ್ಕಾಗಿ ಮೇಕ್ ಇನ್ ಇಂಡಿಯಾ ಉಪಕ್ರಮದಲ್ಲಿ ಭಾಗವಹಿಸಲು OEM ಗಳನ್ನು ಉತ್ತೇಜಿಸುವ ಭಾರತದ 80,000 ಕೋಟಿ ರೂಗಳ PLI ಯೋಜನೆಯ ಬಗ್ಗೆ ಮಾತನಾಡಿದ್ದಾರೆ.

ಇಡೀ ಜಗತ್ತು ಮೇಡ್‌ ಇನ್‌ ಇಂಡಿಯಾ ಫೋನ್‌ ಬಳಸುವ ಕಾಲ ಬರಲಿದೆ! ಪ್ರಧಾನಿ ಘೋಷಣೆ!

ಭಾರತವು 6G ಯಲ್ಲಿ ಜಗತ್ತನ್ನು ಮುನ್ನಡೆಸಲಿದೆ
ಪ್ರಸ್ತುತ ಭಾರತದಲ್ಲಿ 5G ನೆಟ್‌ವರ್ಕ್‌ ಜಾಲ ಎಲ್ಲಾ ಕಡೆ ವ್ಯಾಪಿಸಿಕೊಳ್ಳುತ್ತಿದೆ. 5G ಬಿಡುಗಡೆಯ ನಂತರ ಕೇವಲ ಒಂದು ವರ್ಷದಲ್ಲಿ, 400,000 ಕ್ಕೂ ಹೆಚ್ಚು ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. ಇದು ಭಾರತದ ಜನಸಂಖ್ಯೆಯ 80% ವ್ಯಾಪ್ತಿಯನ್ನು ಒದಗಿಸುತ್ತಿದ್ದು, 97% ಚಂದಾದಾರರಿಗೆ ಸೇವೆ ಸಲ್ಲಿಸುತ್ತಿದೆ. ಆದರೆ 6G ರೋಲ್‌ಔಟ್‌ ಮೂಲಕ ಭಾರತವು ಇಡೀ ಜಗತ್ತನ್ನು ಮುನ್ನಡೆಸಲಿದೆ ಎಂದು ಹೇಳಿದ್ದಾರೆ.

ಸೈಬರ್ ಭದ್ರತೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಪ್ರಧಾನಿ ಮೋದಿ ಅವರು ಸೈಬರ್ ಭದ್ರತೆಯ ವಿಚಾರದ ಬಗ್ಗೆಯೂ ಕೂಡ ಮಾತನಾಡಿದ್ದಾರ. ಭಾರತದಲ್ಲಿಯೇ ನಡೆದ G20 ಸಭೆಗಳಲ್ಲಿಯೂ ಸಹ, ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೈಬರ್‌ ಸುರಕ್ಷತೆಯ ಸುರಕ್ಷತೆಗೆ ಸಂಬಂಧಿಸಿದಂತೆ ಗಣನೀಯ ಚರ್ಚೆಗಳು ನಡೆದಿವೆ ಎಂದು ಹೇಳಿದ್ದಾರೆ. ಅಲ್ಲದೆ ಸೈಬರ್ ಭದ್ರತೆಯನ್ನು ಹೆಚ್ಚಿಸುವಲ್ಲಿ ಮತ್ತು ನೆಟ್‌ವರ್ಕ್ ಮೂಲಸೌಕರ್ಯವನ್ನು ರಕ್ಷಿಸುವಲ್ಲಿ ಆತ್ಮನಿರ್ಭರ್‌ ಭಾರತ್‌ ನಿಣಾರ್ಯಕ ಪಾತ್ರವನ್ನು ವಹಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಡೀ ಜಗತ್ತು ಮೇಡ್‌ ಇನ್‌ ಇಂಡಿಯಾ ಫೋನ್‌ ಬಳಸುವ ಕಾಲ ಬರಲಿದೆ! ಪ್ರಧಾನಿ ಘೋಷಣೆ!

ಇದಲ್ಲದೆ ತಂತ್ರಜ್ಞಾನದ ಆವಿಷ್ಕಾರಕ್ಕಾಗಿ ಈ ಹಿಂದೆ ದೇಶವು ಹಲವು ಅವಕಾಶಗಳನ್ನು ಕಳೆದುಕೊಂಡಿದೆ. ಆದರೆ ಭಾರತವು ಚಿಂತನಶೀಲ ನಾಯಕನ ಪಾತ್ರಕ್ಕೆ ಕಾಲಿಡುವ ಸಮಯ ಇದೀಗ ಬಂದಿದೆ ಎಂದಿದ್ದಾರೆ. UPI ಮತ್ತು CoWIN ನಂತಹ ಉಪಕ್ರಮಗಳ ಮೂಲಕ ಡಿಜಿಟಲ್ ಪಾವತಿಗಳಲ್ಲಿ ಭಾರತವು ಈಗಾಗಲೇ ತನ್ನ ಚಿಂತನೆಯ ನಾಯಕತ್ವವನ್ನು ಪ್ರದರ್ಶಿಸಿದೆ ಎಂದು ಹೇಳಿದ್ದಾರೆ. ಇದಲ್ಲದೆ ಭಾರತದಲ್ಲಿನ ಯುವಜನತೆ ಕಾರಣಕ್ಕಾಗಿ ಭಾರತವು ತನ್ನನ್ನು ಚಿಂತನೆಯ ನಾಯಕನಾಗಿ ಸ್ಥಾಪಿಸಲು ಸಾಧ್ಯವಾಗಿದೆ ಎಂದಿದ್ದಾರೆ.

ಈ ಮೂಲಕ ಭಾರತವು ಮುಂದಿನ ದಿನಗಳಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳನ್ನು ಉತ್ಪಾದಿಸಲಿದೆ ಅನ್ನೊದನ್ನ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಮೂಲಕ ಶೀಘ್ರದಲ್ಲೇ ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ರಿಂಗಣಿಸೋದು ಪಕ್ಕಾ ಆಗಿದೆ.

Best Mobiles in India

English summary
IMC 2023: whole world will soon be using made-in-India smartphones Says PM Modi !
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+