ದೇಶದ 9 ರಾಜ್ಯಗಳಲ್ಲಿ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಯೋಜನೆ ಅನುಷ್ಠಾನ!

|

ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ಯೋಜನೆ ಸದ್ಯ ದೇಶದ 9 ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಕರ್ನಾಟಕ ಸೇರಿದಂತೆ ದೇಶದ 9 ರಾಜ್ಯಗಳು ಒಂದು ದೇಶ ಒಂದು ಪಡಿತರ ಕಾರ್ಡ್‌ ವ್ಯವಸ್ಥೆ ಅನುಷ್ಠಾನಗೊಳಿಸಿದ್ದು, ಈ ರಾಜ್ಯಗಳಲ್ಲಿ ದೇಶದ ಯಾವುದೇ ಭಾಗದ ನಾಗರಿಕರು ಪಡಿತರ ಅಂಗಡಿಗಳಿಂದ ಪಡಿತರ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.

ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌

ಹೌದು, ಕೇಂದ್ರ ಸರ್ಕಾರದ ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌ ಯೋಜನೆ ದೇಶದ 9 ರಾಜ್ಯಗಳಲ್ಲಿ ಅನುಷ್ಠಾನಗೊಂಡಿದೆ. ಸದ್ಯ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಗೋವಾ, ಗುಜರಾತ್‌, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಹಾಗೂ ಉತ್ತರ ಪ್ರದೇಶದಲ್ಲಿ ಪಡಿತರ ವಿತರಣಾ ವ್ಯವಸ್ಥೆಯ ಸುಧಾರಣೆಯನ್ನು ಉತ್ತಮಗೊಳಿಸಲಾಗಿದೆ. ಇದರಿಂದಾಗಿ ಈ ರಾಜ್ಯಗಳಲ್ಲಿ ಒನ್‌ ನೇಷನ್‌ ಒನ್‌ ರೇಷನ್‌ ಖಾರ್ಡ್‌ ಯೋಜನೆ ಜಾರಿ ಮಾಡುವುದು ಸುಲಭವಾಗಿದೆ. ಈ ಕಾರಣದಿಂದಾಗಿ ಈ ಯೋಜನೆಯನ್ನು 9 ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಕರ್ನಾಟಕ

ಸದ್ಯ ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಗುಜರಾತ್‌, ಹರಿಯಾಣ, ಕೇರಳ, ತೆಲಂಗಾಣ, ತ್ರಿಪುರ ಹಾಗೂ ಉತ್ತರ ಪ್ರದೇಶದಲ್ಲಿ ಒನ್‌ ನೇಷನ್‌ ಕಾರ್ಡ್‌ ಸ್ಕಿಮ್‌ ಶುರುವಾಗಿದೆ. ಇದರಿಂದಾಗಿ ದೇಶದ ಕೊಟ್ಯಾಂತರ ಜನರಿಗೆ ಉಪಯೋಗವಾಗಲಿದೆ. ಇನ್ನು ಈ ಯೋಜನೆಯ ಅನುಷ್ಠಾನದಿಂದಾಗಿ ಒಟ್ಟು 23,523 ಕೋಟಿ ರೂ. ಸಾಲ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಸದ್ಯ ಈ ಯೋಜನೆಯ ಅನ್ವಯ ಉತ್ತರ ಪ್ರದೇಶವು ಇದರ ಅತಿ ದೊಡ್ಡ ಫಲಾನುಭವಿಯಾಗಿದ್ದು, 4,851 ಕೋಟಿ ರೂ.ಹೆಚ್ಚುವರಿ ಸಾಲ ಪಡೆಯುವ ಅವಕಾಶ ಹೊಂದಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ 4,509 ಕೋಟಿ, ಗುಜರಾತ್‌ 4,352 ಕೋಟಿ. ರೂ ಹೆಚ್ಚುವರಿ ಸಾಲ ಪಡೆಯಬಹುದಾಗಿದೆ.

ಪಡಿತರ

ಇನ್ನು ಈ ಯೋಜನೆಯ ಅನುಷ್ಠಾನಕ್ಕಾಗಿ ಎಲ್ಲಾ ಪಡಿತರ ಚೀಟಿಗೆ ಆಧಾರ ಜೋಡಣೆ, ಫಲಾನುಭವಿಗಳ ಬಯೋಮೆಟ್ರಿಕ್‌ ಹಾಗೂ ಎಲ್ಲಾ ಪಡಿತರ ಅಂಗಡಿಗಳ ಯಂತ್ರೀಕರಣ(ಅಟೋಮೇಷನ್‌) ಮುಂತಾದ ಸುಧಾರಣೆ ಮುಖಾಂತರ ನಕಲಿ ಪಡಿತಕ್ಕೆ ಕಡಿವಾಣ ಹಾಕುವ ಉದ್ದೇಶವನ್ನು ಹೊಂದಿದೆ. ಸದ್ಯ ಕರ್ನಾಟಕ, ಆಂಧ್ರಪ್ರದೇಶ, ಗೋವಾ ಗುಜರಾತ್‌ ಹರಿಯಾಣ, ಕೇರಳ, ತೆಲಂಗಾಣ,ತ್ರಿಪುರ, ಉತ್ತರ ಪ್ರದೇಶದಲ್ಲಿ ಈ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ ಈ ಯೋಜನೆಯಿಂದಾಗಿ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ಲಭ್ಯವಾಗಲಿದೆ. ಪ್ರತಿ ತಿಂಗಳು 5 ಕೆಜಿ ಅಕ್ಕಿ ಅಥವಾ 5 ಕೆಜಿ ಗೋಧಿ ಮತ್ತು ಒಂದು ಕೆಜಿ ಬೇಳೆ ನೀಡಲಾಗುತ್ತದೆ.

ಒನ್ ನೇಷನ್, ಒನ್ ರೇಷನ್ ಕಾರ್ಡ್

ಒನ್ ನೇಷನ್, ಒನ್ ರೇಷನ್ ಕಾರ್ಡ್

ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆಯಲ್ಲಿ ನಾಗರಿಕರಿಗೆ ಒಂದೇ ಪಡಿತರ ಚೀಟಿ ವ್ಯವಸ್ಥೆ ಇರುತ್ತದೆ. ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ಭಾಗದಲ್ಲಿರುವ ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಹಾಗೆಯೇ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ.

ಒನ್ ನೇಷನ್, ಒನ್ ರೇಷನ್ ಕಾರ್ಡ್ ಪ್ರಯೋಜನ

ಒನ್ ನೇಷನ್, ಒನ್ ರೇಷನ್ ಕಾರ್ಡ್ ಪ್ರಯೋಜನ

* ಬಡವರಿಗೆ ಹೆಚ್ಚಿನ ಲಾಭ ದೊರೆಯಲಿದೆ
* ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡವರಿಗೆ ಪಡಿತರ ಪಡೆಯಲು ಅನುಕೂಲವಾಗಲಿದೆ.
* ನಕಲಿ ಪಡಿತರ ಚೀಟಿಗಳಿಗೆ ಬ್ರೇಕ್‌ ಮಾಡಲು ಸಹಾಯಕ.
* ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಸಂಪರ್ಕಿಸುವ ಮತ್ತು ಪಾಯಿಂಟ್ ಆಫ್ ಸೇಲ್, ಪಿಒಎಸ್ ಯಂತ್ರದ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
* 85 ರಷ್ಟು ಆಧಾರ್ ಕಾರ್ಡ್‌ಗಳನ್ನು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳಿಗೆ ಸಂಪರ್ಕಿಸಲಾಗಿದೆ.

Best Mobiles in India

Read more about:
English summary
Implementation of 'One Nation, One Ration Card' scheme in 9 states.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X