Subscribe to Gizbot

ಗ್ಯಾಜೆಟ್ ಗ್ರಾಹಕರಿಗೆ ಮಾರಕವಾಯ್ತು ಕೇಂದ್ರ ಸರ್ಕಾರದ ಹೊಸ ನಿರ್ಧಾರ!!

Written By:

ಮೊಬೈಲ್, ಟಿವಿ ಸೇರಿ ಬಹುತೇಕ ಎಲ್ಲಾ ಗ್ಯಾಜೆಟ್‌ಗಳಿಗೂ ವಿದೇಶಿ ಕಸ್ಟಮ್ಸ್ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಕಸ್ಟಮರ್ ಡ್ಯುರೆಬಲ್ ಅಸಂಘಟಿತ ಸಂಸ್ಥೆಗಳ ನಿರ್ಗಮನವಾಗಲಿದೆ ಮತ್ತು ದೇಶೀಯ ಗ್ರಾಹಕರಿಗೂ ಸ್ಮಾರ್ಟ್‌ಫೋನ್‌ಗಳು ಸೇರಿ ಇತರೆ ಎಲ್ಲಾ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಖರೀದಿಸುವ ಆಯ್ಕೆ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.!!

ದೇಶಿ ತಯಾರಕರ ಹಿತಾಸಕ್ತಿ ರಕ್ಷಿಸಿ ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಮದು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸುಂಕ ವಿಧಿಸಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿತ್ತು. ಆದರೆ, ಕೇಂದ್ರ ಸರ್ಕಾರದ ಈ ನಿರ್ಧಾರ ಅಸಂಘಟಿತ ಸಂಸ್ಥೆಗಳು ಮತ್ತು ಗ್ರಾಹಕರಿಗೆ ಮಾರಕವಾಗಿವೆ ಎಂದು ಹೇಳಲಾಗುತ್ತಿದೆ.!! ಹಾಗಾದರೆ, ತೆರಿಗೆ ಹೆಚ್ಚಳದಿಂದ ಆಗುತ್ತಿರುವ ಪರಿಣಾಮಗಳೇನು? ಗ್ರಾಹಕರಿಗೆ ಏನು ನಷ್ಟ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವುದಕ್ಕೆ ಎಷ್ಟು ಸುಂಕ ಏರಿಕೆ?

ಯಾವುದಕ್ಕೆ ಎಷ್ಟು ಸುಂಕ ಏರಿಕೆ?

ಈ ಮೊದಲು ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದ ಸ್ಮಾರ್ಟ್‌ಫೋನ್‌ಗಳಿಗೆ ಯಾವುದೇ ಆಮದು ಸುಂಕ ಇರಲಿಲ್ಲ. ಇದೀಗ ಶೇ ಸ್ಮಾರ್ಟ್‌ಫೋನ್‌ಗಳಿಗೆ ಶೇ 15 ರಷ್ಟು ಸುಂಕ ವಿಧಿಸಲಾಗಿದೆ.!! ಟೆಲಿವಿಷನ್‌ ಮೇಲಿನ ಆಮದು ಸುಂಕ ಶೇ 10 ರಿಂದ ಶೇ 20ಕ್ಕೆ ಏರಿಕೆ ಮಾಡಲಾಗಿದ್ದರೆ, ಕೆಲ ಉತ್ಪನ್ನಗಳ ಮೇಲಿನ ಸುಂಕವು ದುಪ್ಪಟ್ಟಾಗಿದೆ.

ದೇಶಿ ತಯಾರಕರ ರಕ್ಷಣೆ!?

ದೇಶಿ ತಯಾರಕರ ರಕ್ಷಣೆ!?

ಎಲೆಕ್ಟ್ರಾನಿಕ್ ಉತ್ಪನ್ನಗಳು ವಿದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿರುವುದರಿಮದ ದೇಶೀಯ ತಯಾರಕರಿಗೆ ತೊಂದರೆಯಾಗುತ್ತಿದೆ ಎಂದು ಹಣಕಾಸು ಸಚಿವಾಲಯ ಹೇಳಿತ್ತು.! ಆದರೆ, ಆಗುತ್ತಿರುವದೇ ಬೇರೆ.! ಏಕೆಂದರೆ, ಹಲವು ದೇಶಿಯ ಬಹುತೇಕ ಅಸಂಘಟಿತ ಕೈಗಾರಿಗೆಗಳು ಈಗಲೂ ವಿದೇಶಿ ಮೂಲವಸ್ತುಗಳನ್ನೇ ನಂಬಿಕೊಂಡಿವೆ.!!

ಅಸಂಘಟಿತ ಸಂಸ್ಥೆಗಳ ನಿರ್ಗಮನ!!

ಅಸಂಘಟಿತ ಸಂಸ್ಥೆಗಳ ನಿರ್ಗಮನ!!

ಆಮದು ಸುಂಕವನ್ನು ಹೆಚ್ಚಿಸಿರುವುದು ಹಲವು ದೇಶೀಯ ಅಸಂಘಟಿತ ಅಥವಾ ಬ್ರಾಂಡೆಡ್ ಅಲ್ಲದ ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಚೀನಾದಿಂದ ಅಗ್ಗದ ಬೆಲೆಯಲ್ಲಿ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಹಲವು ಸಂಸ್ಥೆಗಳಿಗೆ ಈ ನೀತಿಯಿಂದ ದೊಡ್ಡ ಹೊಡೆತ ಬಿದ್ದಿದೆ ಎಂದು ಮಾರುಕಟ್ಟೆಯಲ್ಲಿ ವಿಶ್ಲೇಶಿಸಲಾಗಿದೆ.!!

ಗ್ರಾಹಕರಿಗೂ ಬರೆ!!

ಗ್ರಾಹಕರಿಗೂ ಬರೆ!!

ದೇಶಿ ತಯಾರಕರ ಹಿತಾಸಕ್ತಿ ರಕ್ಷಿಸಿ ಅವರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಮದು ಶುಲ್ಕ ಹೆಚ್ಚಿಸಿರುವುದರಿಂದ ಗ್ರಾಹಕರಿಗೂ ಕೂಡ ನಷ್ಟವಾಗಲಿದೆ. ಮೊಬೈಲ್, ಟಿವಿ ಸೇರಿ ಬಹುತೇಕ ಎಲ್ಲಾ ಗ್ಯಾಜೆಟ್‌ಗಳ ಬೆಲೆ ಹೆಚ್ಚುವುದರಿಂದ ಗ್ರಾಹಕರಿಗೆ ಇವುಗಳನ್ನು ಕೊಳ್ಳುವ ಶಕ್ತಿ ಕಡಿಮೆಯಾಗಲಿದೆ.!!

ಕೆಲವರಿಗೆ ಮಾತ್ರ ಲಾಭ.!!

ಕೆಲವರಿಗೆ ಮಾತ್ರ ಲಾಭ.!!

ಅಗ್ಗದ ಬೆಲೆಯ ವಸ್ತುಗಳ ಮೂಲಕ ಭಾರಿ ಮಾರುಕಟ್ಟೆ ವಿಸ್ತರಿಸುತ್ತಿರುವ ಚೀನಾ ಸೇರಿ ಎಲ್ಲಾ ವಿದೇಶಿ ಮೊಬೈಲ್‌ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ ಎಂಬುದು ಸುಳ್ಳಾಗಿದೆ.! ಆಮದು ಶುಲ್ಕ ಹೆಚ್ಚಿಸಿರುವುದರಿಂದ ಸರ್ಕಾರ ಮತ್ತು ಇತರೆ ಕೆಲವು ಕಂಪೆನಿಗಳಿಗೆ ಮಾತ್ರ ಹೆಚ್ಚು ಲಾಭವಾಗಲಿದ್ದು, ಇದು ಜನರಿಗೆ ಬಹುದೊಡ್ಡ ಶಾಕ್ ಎನ್ನಬಹುದು.!!

ಓದಿರಿ:2017ನೇ ವರ್ಷದಲ್ಲಿನ ಟಾಪ್ ಗ್ಯಾಜೆಟ್‌ಗಳ ಲೀಸ್ಟ್!!..ವರ್ಷದ ಬೆಸ್ಟ್ ಮೊಬೈಲ್ ಇದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Aside from the fact that a host of products like television sets, imported mobile phones and LED lamps are going to become expensive. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot