ಕೇವಲ 5 ನಿಮಿಷದಲ್ಲೇ 21,744 ಕೋಟಿ ವ್ಯವಹಾರ!..ದಾಖಲೆ ಸೃಷ್ಟಿಸಿದ ಅಲಿಬಾಬ!!

|

ಚೀನಾದ ಇ-ಕಾಮರ್ಸ್​​ ದಿಗ್ಗಜ ಅಲಿಬಾಬಾ ತನ್ನ ವಾರ್ಷಿಕ ಆನ್​ಲೈನ್​ ಶಾಪಿಂಗ್​ ಸೇಲ್​​ನಲ್ಲಿ ಕೇವಲ 5 ನಿಮಿಷದಲ್ಲಿ 3 ಬಿಲಿಯನ್​ ಡಾಲರ್ಸ್​( ಅಂದಾಜು 21,744 ಕೋಟಿ) ವ್ಯವಹಾರ ನಡೆಸಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಒಂದು ದಿನದ ಅವಧಿಯಲ್ಲಿ 25 ಬಿಲಿಯನ್ ಡಾಲರ್​ ವ್ಯವಹಾರ ನಡೆಸಿದ್ದ ಅಲಿಬಾಬ ಈ ವರ್ಷ ಮತ್ತೊಂದು ದಾಖಲೆ ವ್ಯವಹಾರ ನಡೆಸಿ ಗಮನಸೆಳೆದಿದೆ.

ಇಲ್ಲಿನ ಬಿಗ್‌ಬಿಲಿಯನ್ ಡೇಸ್ ಹಾಗೂ ಗ್ರೇಟ್ ಫೆಸ್ಟಿವಲ್‌ಗಳಂತೆ ಚೀನಾದಲ್ಲಿ ಪ್ರತಿ ವರ್ಷ ಸಿಂಗಲ್ಸ್​ ಡೇ ಆಚರಿಸಲಾಗುತ್ತದೆ. ಈ ಸಿಂಗಲ್ಸ್​ ಡೇ ಸೇಲ್‌ನ ಮೊದಲ 5 ನಿಮಿಷದಲ್ಲಿ ಮೂರು ಬಿಲಿಯನ್ ಡಾಲರ್​​(21 ಸಾವಿರ ಕೋಟಿ) ವ್ಯವಹಾರ ನಡೆದಿದ್ದು, ಮೊದಲ 1 ನಿಮಿಷ 25 ಸೆಕೆಂಡ್​​ಗಳಲ್ಲೇ 1 ಬಿಲಿಯನ್ ಡಾಲರ್​ (7,250 ಕೋಟಿ)ಗಳಿಸಿರುವುದಾಗಿ ಅಲಿಬಾಬ ಸಂಸ್ಥೆ ತಿಳಿಸಿದೆ.

ಕೇವಲ 5 ನಿಮಿಷದಲ್ಲೇ 21,744 ಕೋಟಿ ವ್ಯವಹಾರ!..ದಾಖಲೆ ಸೃಷ್ಟಿಸಿದ ಅಲಿಬಾಬ!!

ಅಲಿಬಾಬ ಕಂಪೆನಿ ಪ್ರತಿವರ್ಷದ ನವೆಂಬರ್​​ 11 ರಂದು ಸಿಂಗಲ್ಸ್​ ಡೇ ಆಚರಿಸುತ್ತಿದ್ದು, ಚೀನಾ ಸೇರಿದಂತೆ ವಿಶ್ವದೆಲ್ಲೆಡೇ ಈ ಸಿಂಗಲ್ಸ್​ ಡೇ ಮಾರಾಟ ಮೇಳವನ್ನು ಹಮ್ಮಿಕೊಳ್ಳುತ್ತದೆ. ಈ ವರ್ಷದ ಸಿಂಗಲ್ಸ್​ ಡೇ ಸೇಲ್‌ನಲ್ಲಿ ಲಾಸ್​ ಏಂಜಲೀಸ್​, ಟೋಕಿಯೋ ಮತ್ತು ಫ್ರಾಂಕ್​ಫರ್ಟ್​ ನಗರಗಳಲ್ಲಿ ಹೆಚ್ಚಿನ ಸರಕುಗಳು ಮಾರಾಟವಾಗಿವೆ ಎಂದು ಅಲಿಬಾಬ ಸಂಸ್ಥೆ ತಿಳಿಸಿದೆ.

ಕೇವಲ 5 ನಿಮಿಷದಲ್ಲಿ 3 ಬಿಲಿಯನ್​ ಡಾಲರ್ಸ್​( ಅಂದಾಜು 21,744 ಕೋಟಿ) ವ್ಯವಹಾರ ನಡೆಸಿರುವ ಅಲಿಬಾಬ, ಮೊದಲ 1 ನಿಮಿಷ 25 ಸೆಕೆಂಡ್​​ಗಳಲ್ಲೇ 1 ಬಿಲಿಯನ್ ಡಾಲರ್​ (7,250 ಕೋಟಿ) ಹಾಗೂ 1 ಗಂಟೆಯಲ್ಲಿ 10 ಬಿಲಿಯನ್ ಡಾಲರ್​ (72,480 ಕೋಟಿ) ವ್ಯವಹಾರ ನಡೆಸಿದೆ. ಇದು ಅಲಿಬಾಬ ಇತಿಹಾಸದಲ್ಲೇ ಮೊದಲು ಎಂಬುದನ್ನು ಸಹ ಅಲಿಬಾಬ ಸ್ಪಷ್ಟಪಡಿಸಿದೆ.

ಕೇವಲ 5 ನಿಮಿಷದಲ್ಲೇ 21,744 ಕೋಟಿ ವ್ಯವಹಾರ!..ದಾಖಲೆ ಸೃಷ್ಟಿಸಿದ ಅಲಿಬಾಬ!!

ಇನ್ನು ಅಲಿಬಾಬಾ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜ್ಯಾಕ್ ಮಾ ಅವರು ಕೂಡ ಈ ದಾಖಲೆ ಮಾರಾಟದ ಸಮಯಕ್ಕೆ ಸಾಕ್ಷಿಯಾಗಿದ್ದಾರೆ. ಇತ್ತೀಚಿಗಷ್ಟೇ ಅಲಿಬಾಬದಿಂದ ನಿವೃತ್ತಿ ತೆಗೆದುಕೊಳ್ಳುವುದಾಗಿ ತಿಳಿಸಿರುವ ಜಾಕ್ ಮಾ ಅವರು, ಗ್ಲೋಬಲ್ ಶಾಪಿಂಗ್ ಫೆಸ್ಟಿವಲ್‌ ಆರಂಭದ ಸಮಯ ರಾತ್ರಿ 11.11ಕ್ಕೆ ಉಪಸ್ಥಿತರಿದ್ದು, ಸಿಂಗಲ್ಸ್​ ಡೇ ಕೌಂಟ್‌ಡೌನ್‌ಗೆ ಸಾಕ್ಷಿಯಾದರು.

Best Mobiles in India

English summary
Alibaba recorded the purchases of products worth $10 billion in the period of little over an hour. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X