ಮಾರುಕಟ್ಟೆಗೆ ಬಂತು ಪಕ್ಕಾ ಸ್ವದೇಶಿ ಬ್ರಾಂಡ್ ಬ್ಲೂಟೂತ್ ಸ್ಪೀಕರ್! ಬೆಲೆ ಎಷ್ಟು?
ಟೆಕ್ ವಲಯದಲ್ಲಿ ಬ್ಲೂಟೂತ್ ಸ್ಪೀಕರ್‌ಗಳಿಗೆ ಭಾರಿ ಬೇಡಿಕೆಯಿದೆ. ಅದರಲ್ಲೂ ರೆಟ್ರೋ ಶೈಲಿಯ ಸ್ಪೀಕರ್‌ಗಳು ಸಾಕಷ್ಟು ಸೌಂಡ್ ಮಾಡುತ್ತಿವೆ. ಯುವಜನರ ಪಾರ್ಟಿ ಮೂಡ್, ಜಾಲಿಮೂಡ್‌ಗಳಿಗೆ ಸರಿ ಹೊಂದುವ ಬ್ಲೂಟೂತ್ ಸ್ಪೀಕರ್‌ಗಳು ಭಾರಿ ಸಂಚಲನ ಮೂಡಿಸಿವೆ. ಇದೇ ಸಾಲಿಗೆ ಸೇರುವ ಹೊಸ ಸ್ಪೀಕರ್ ಅನ್ನು ಇನ್‌ಬೇಸ್ ಕಂಪೆನಿ ಪರಿಚಯಿಸಿದೆ.
ಹೌದು, ಇನ್‌ಬೇಸ್ ಟೆಕ್ನಾಲಜೀಸ್ ಕಂಪೆನಿ ವಿವಿಧ ಮಾದರಿಯ ಆಡಿಯೋ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಬ್ಲೂಟೂತ್ ಸ್ಪೀಕರ್‌ಗಳು ಕೂಡ ಸೇರಿವೆ. ಪಕ್ಕಾ ಸ್ವದೇಶಿ ಬ್ರಾಂಡ್ ಆಗಿರುವ ಇನ್‌ಬೆಸ್ ಇದೀಗ ಹೊಸ ಇನ್‌ಬೇಸ್ ಬೂಮ್ ಬಾಕ್ಸ್ ಬ್ಲೂಟೂತ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಪೀಕರ್ ಕೈಗೆಟಕುವ ಬೆಲೆಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಪೀಕರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಬೇಸ್ ಬೂಮ್ ಬಾಕ್ಸ್ ಬ್ಲೂಟೂತ್ ಸ್ಪೀಕರ್ ಫೀಚರ್ಸ್
ಇನ್‌ಬೇಸ್ ಬೂಮ್ ಬಾಕ್ಸ್ ಬ್ಲೂಟೂತ್ ಸ್ಪೀಕರ್ ಪಕ್ಕಾ ಸ್ವದೇಶಿ ಬ್ರಾಂಡ್ ಆಗಿದೆ. ಸಾಮಾನ್ಯ ವಾಯರ್‌ಲೆಸ್ ಸ್ಪೀಕರ್‌ಗಿಂತ ಹೆಚ್ಚಿನದನ್ನು ಬಯಸುವ ಗ್ರಾಹಕರಿಗೆ ಇದು ಬೆಸ್ಟ್ ಎನಿಸಲಿದೆ. ಇನ್ನು ಈ ಸ್ಪೀಕರ್ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದ್ದು, ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಅಲ್ಲದೆ ಈ ಡಿವೈಸ್ ಮಲ್ಟಿ ಫಂಕ್ಷನ್‌ಗಳನ್ನು ಹೊಂದಿರುವ ವಾಯರ್‌ಲೆಸ್ ಕರೋಕೆ ಮೈಕ್ರೊಫೋನ್ ಅನ್ನು ಒಳಗೊಂಡಿದೆ. ಇದರಲ್ಲಿ ವಿವಿಧ ಮೂಲಗಳಿಂದ ಮ್ಯೂಸಿಕ್ ಪ್ಲೇಬ್ಯಾಕ್ ಜೊತೆಗೆ ಆಲ್ ಇನ್ ಒನ್ ಕರೋಕೆ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಈ ಸ್ಪೀಕರ್ ಡೀಪ್ ಬಾಸ್ ಔಟ್‌ಪುಟ್ ಮತ್ತು ವರ್ಧಿತ ಒಟ್ಟಾರೆ ಆಡಿಯೊ ಅನುಭವವನ್ನು ನೀಡಲಿದೆ. ಜೊತೆಗೆ ಬಳಕೆದಾರರ ಅದ್ಯತೆಗೆ ಅನುಗುಣವಾಗಿ ಸಾಮಾನ್ಯ, ಬಾಸ್, ಆಲ್ಟೊ ಮತ್ತು ಸೊಪ್ರಾನೊ ಸೇರಿದಂತೆ ನಾಲ್ಕು ಸೌಂಡ್ ಮೋಡ್‌ಗಳನ್ನು ಹೊಂದಿದೆ. ಇದಲ್ಲದೆ ಕರೋಕೆ ಎಕ್ಸ್‌ಪಿರಿಯನ್ಸ್‌ಗಾಗಿ ಮೂರು ವಿಭಿನ್ನ ಸೌಂಡ್ ಮೋಡ್‌ಗಳನ್ನು ನೀಡಲಾಗಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ ಸಿಂಗಿಂಗ್, ಅನೌನ್ಸ್‌ಮೆಂಟ್, ಕ್ಲಾಸ್‌ರೂಮ್ಸ್ ಮತ್ತು ಸ್ಮಾರ್ಟ್ ಇವೆಂಟ್ಸ್‌ಗಳಿಗೆ ಸೂಕ್ತವಾಗಿದೆ.
ಇದಲ್ಲದೆ ಇನ್‌ಬೇಸ್ ಬೂಮ್ ಬಾಕ್ಸ್ ಬ್ಲೂಟೂತ್ ಸ್ಪೀಕರ್ ಸಿಂಗಲ್ ಚಾರ್ಜ್‌ನಲ್ಲಿ 5 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ. ಜೊತೆಗೆ ಇದು USB-C ಪೋರ್ಟ್ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಸದ್ಯ ಭಾರತದಲ್ಲಿ ಲಾಂಚ್ ಆಗಿರುವ ಈ ಬ್ಲೂಟೂತ್ ಸ್ಪೀಕರ್ 2,299ರೂ. ಬೆಲೆಯನ್ನು ಹೊಂದಿದೆ. ಇದನ್ನು ಸನ್ಶೈನ್ ಬ್ಲೂ, ಗ್ರ್ಯಾಫೈಟ್ ಕಪ್ಪು, ಬೇಬಿ ಪಿಂಕ್ ಮತ್ತು ಮಿಸ್ಟಿ ಗ್ರೇ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಈ ಡಿವೈಸ್ ಅನ್ನು ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.
ಬ್ಲೂಟೂತ್ ಸ್ಪೀಕರ್‌ಗಳನ್ನು ಖರೀದಿಸುವಾಗ ನೀವು ಗಮನಿಸಬೇಕಾದ ಅಂಶಗಳು!
ಫೀಚರ್ಸ್‌ಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಿರಿ
ಬಹುತೇಕ ಬ್ಲೂಟೂತ್ ಡಿವೈಸ್‌ಗಳು ತಮ್ಮ ಫೀಚರ್ಸ್‌ಗಳ ಬಗ್ಗೆ ವಿಭಿನ್ನ ಜಾಹಿರಾತುಗಳನ್ನು ನೀಡುತ್ತಲೇ ಬಂದಿವೆ. ಇದರಲ್ಲಿ ತಮ್ಮ ಉತ್ಪನ್ನದ ವಿಶೇಷತೆ ಮತ್ತು ಫೀಚರ್ಸ್‌ಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆದರಿಂದ ತಾವು ಸ್ಪೀಕರ್‌ಗಳನ್ನು ಖರೀದಿಸುವ ಸಮಯದಲ್ಲಿ ಫೀಚರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಉತ್ತಮ.
ಬ್ಲೂಟೂತ್ ವರ್ಷನ್ ಬಗ್ಗೆ ಮಾಹಿತಿ ಇರಲಿ
ಬ್ಲೂಟೂತ್ ಸ್ಪೀಕರ್ಸ್‌ಗಳು ಬ್ಲೂಟೂತ್ ಕನೆಕ್ಟಿವಿಟಿಯಿಂದಲೇ ಕಾರ್ಯನಿರ್ವಹಿಸುತ್ತವೆ. ಆದರೆ ಈ ಸ್ಪೀಕರ್‌ಗಳು ವಿವಿಧ ರೀತಿಯ ಬ್ಲೂಟೂತ್ ವರ್ಷನ್‌ಗಳನ್ನು ಹೊಂದಿರುತ್ತವೆ. ಆದರಿಂದ ಈ ಬ್ಲೂಟೂತ್ ಸ್ಪೀಕರ್‌ಗಳನ್ನು ಖರೀದಿಸುವಾಗ ಉತ್ತಮ ಕನೆಕ್ಟಿವಿಟಿ ಸೌಲಭ್ಯ ನೀಡುವ ಬ್ಲೂಟೂತ್ ವರ್ಷನ್‌ಗಳ ಬಗ್ಗೆ ಗಮನಹರಿಸುವುದು ಸೂಕ್ತ.


Click it and Unblock the Notifications








