ಕೇವಲ 899ರೂ ಬೆಲೆಯಲ್ಲಿ ಬರಲಿದೆ ಈ ಪ್ರಾಡಕ್ಟ್! ಇದು ಸ್ವದೇಶಿ ಮೇನಿಯಾದ ಎಫೆಕ್ಟ್!
ಜನಪ್ರಿಯ ಇಯರ್‌ಬಡ್ಸ್ ತಯಾರಕ ಇನ್‌ಬೇಸ್ ಕಂಪೆನಿ ಮತ್ತೊಮ್ಮೆ ಸದ್ದು ಮಾಡ್ತಿದೆ. ಈ ಭಾರಿ ಭಾರತದಲ್ಲಿ ಮೂರು ವಿವಿಧ ಮಾದರಿಯ ವಾಯರ್‌ಲೆಸ್ ಇಯರ್‌ಬಡ್ಸ್‌ಗಳನ್ನು ಲಾಂಚ್ ಮಾಡಿದೆ. ಈ ಮೂರು ಇಯರ್‌ಬಡ್ಸ್‌ಗಳು ಕೂಡ ವಿವಿಧ ಆದ್ಯತೆಗಳು ಮತ್ತು ಲೈಫ್‌ಸ್ಟೈಲ್‌ಗೆ ತಕ್ಕಂತ ವಿನ್ಯಾಸವನ್ನು ಪಡೆದುಕೊಂಡಿವೆ.
ಹೌದು, ಇನ್‌ಬೇಸ್ ಕಂಪೆನಿ ಭಾರತದಲ್ಲಿ ಫ್ರೀ ಬಡ್ಸ್ ಎಲೈಟ್, ಫ್ರೀ ಬಡ್ಸ್ ನಿಯೋ ಮತ್ತು ಫ್ರೀ ಬಡ್ಸ್ ಡಾಟ್ಸ್ ಎಂಬ ಹೆಸರಿನ ಇಯರ್‌ಬಡ್ಸ್‌ಗಳನ್ನು ಅನಾವರಣಗೊಳಿಸಿದೆ. ಈ ಮೂರು ಇಯರ್‌ಬಡ್ಸ್‌ಗಳು ಬಜೆಟ್ ಸ್ನೇಹಿಯಾಗಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಹಾಗಾದ್ರೆ ಈ ಮೂರು ಹೊಸ ಇಯರ್‌ಬಡ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಬೇಸ್ ಫ್ರೀ ಬಡ್ಸ್ ಎಲೈಟ್ ಫೀಚರ್ಸ್ ಹೇಗಿದೆ?
ಇನ್‌ಬೇಸ್ ಫ್ರೀ ಬಡ್ಸ್ ಎಲೈಟ್ ಇಯರ್‌ಬಡ್ಸ್ ಪ್ರೀಮಿಯಂ ಮ್ಯಾಟ್ ಮೆಟಲ್ ಫಿನಿಶ್ ಅನ್ನು ಹೊಂದಿದೆ. ಬಳಕೆದಾರರಿಗೆ ಅಗತ್ಯ ಸೌಕರ್ಯಕ್ಕಾಗಿ ಹಿತಕರವಾದ ವಿನ್ಯಾಸವನ್ನು ಹೊಂದಿದೆ. ಇನ್ನು ಇಯರ್‌ಬಡ್ಸ್ 40 ಗಂಟೆಗಳ ಪ್ಲೇಟೈಮ್ ಮತ್ತು 400 ಗಂಟೆಗಳ ಸ್ಟ್ಯಾಂಡ್‌ಬೈ ನೀಡಲಿದ್ದು, ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಬಳಕೆದಾರರು ಸಿಂಗಲ್ ಟ್ಯಾಪ್ ಮೂಲಕ ಸಿರಿ ಮತ್ತು ಗೂಗಲ್ ಅನ್ನು ಸಕ್ರಿಯಗೊಳಿಸಬಹುದು. ಭಾರತದಲ್ಲಿ ಇದರ ಬೆಲೆ 999ರೂ ಆಗಿದ್ದು, ಕಪ್ಪು ಮತ್ತು ಪರ್ಲ್ ವೈಟ್ ಕಲರ್‌ನಲ್ಲಿ ಲಭ್ಯವಿದೆ.
ಇನ್‌ಬೇಸ್ ಫ್ರೀ ಬಡ್ಸ್ ಡಾಟ್ಸ್ ಫೀಚರ್ಸ್ ಹೇಗಿದೆ?
ಇನ್‌ಬೇಸ್ ಫ್ರೀ ಬಡ್ಸ್ ಡಾಟ್ಸ್ ಇಯರ್‌ಬಡ್ಸ್ ವಿಶೇಷವಾದ ಕಾಂಪ್ಯಾಕ್ಟ್ ವಿನ್ಯಾಸದೊಂದಿಗೆ ಬರಲಿದೆ. ಇದು 13 ಎಂಎಂ ಆಡಿಯೋ ಡ್ರೈವರ್‌ಗಳೊಂದಿಗೆ ಸಜ್ಜುಗೊಂಡಿದ್ದು, ಟೈಪ್-ಸಿ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಇಯರ್‌ಬಡ್ಸ್ ಬರೋಬ್ಬರಿ 40 ಗಂಟೆಗಳವರೆಗೆ ಪ್ಲೇಟೈಮ್ ಅನ್ನು ನೀಡಲಿದೆ. ಇದಲ್ಲದೆ ಕನೆಕ್ಟಿವಿಟಿ ಆಯ್ಕೆಗಾಗಿ ಬ್ಲೂಟೂತ್ 5.3 ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದರಲ್ಲಿ ಬಳಕೆದಾರರು ಅನುಕೂಲಕರ ಹ್ಯಾಂಡ್ಸ್-ಫ್ರೀ ಆಜ್ಞೆಗಳನ್ನು ಆನಂದಿಸಬಹುದು. ಭಾರತದಲ್ಲಿ ಇದರ ಬೆಲೆ 899ರೂ ಆಗಿದ್ದು, ಕ್ಲಾಸಿಕ್ ನೀಲಿ, ಬಿಳಿ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಇನ್‌ಬೇಸ್ ಫ್ರೀ ಬಡ್ಸ್ ನಿಯೋ ಫೀಚರ್ಸ್ ಏನು?
ಇನ್‌ಬೇಸ್ ಫ್ರೀ ಬಡ್ಸ್ ನಿಯೋ ಇಯರ್‌ಬಡ್ಸ್ ಲೈಪ್ ಸ್ಟೈಲ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಉತ್ತಮ ಧ್ವನಿಗಾಗಿ 13 ಎಂಎಂ ಡ್ರೈವರ್‌ಗಳನ್ನು ಹೊಂದಿದ್ದು, 30 ಗಂಟೆಗಳ ಪ್ಲೇಟೈಮ್ ಮತ್ತು 400 ಗಂಟೆಗಳ ಸ್ಟ್ಯಾಂಡ್‌ಬೈ ಅನ್ನು ನೀಡಲಿದೆ. ಈ ಇಯರ್‌ಬಡ್ಸ್ ಬ್ಲೂಟೂತ್ 5.3 ಕನೆಕ್ಟಿವಿಟಿಯನ್ನು ನೀಡಲಿದ್ದು, ಹ್ಯಾಂಡ್ಸ್-ಫ್ರೀ ನಿಯಂತ್ರಣಕ್ಕಾಗಿ ಇಯರ್‌ಬಡ್‌ಗಳನ್ನು ಸಂಯೋಜಿಸಲಾಗಿದೆ. ಇದು ಭಾರತದಲ್ಲಿ 899ರೂ ಬೆಲೆಯಲ್ಲಿ ಲಭ್ಯವಾಗಲಿದೆ.

ಇನ್‌ಬೇಸ್ ಕಂಪೆನಿ ಬಿಡುಗಡೆ ಮಾಡಿರುವ ಈ ಇಯರ್‌ಬಡ್ಸ್‌ಗಳನ್ನು ಪ್ರಮುಖ ಚಿಲ್ಲರೆ ಅಂಗಡಿಗಳು ಮತ್ತು Amazon.in ಮತ್ತು Flipkart ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸಬಹುದು.
ಇದಲ್ಲದೆ ಇನ್‌ಬೇಸ್ ಕಂಪೆನಿ ಇದೇ ವರ್ಷ ಭಾರತದಲ್ಲಿ ಹೊಸ ಬೂಮ್ ಬಾಕ್ಸ್ ಬ್ಲೂಟೂತ್ ಸ್ಪೀಕರ್ ಅನ್ನು ಪರಿಚಯಿಸಿತ್ತು. ಈ ಸ್ಪೀಕರ್ ಕಾಂಪ್ಯಾಕ್ಟ್ ವಿನ್ಯಾಸವನ್ನು ಹೊಂದಿದ್ದು, ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ. ಅಲ್ಲದೆ ಈ ಡಿವೈಸ್ ಮಲ್ಟಿ ಫಂಕ್ಷನ್‌ಗಳನ್ನು ಹೊಂದಿರುವ ವಾಯರ್‌ಲೆಸ್ ಕರೋಕೆ ಮೈಕ್ರೊಫೋನ್ ಅನ್ನು ಒಳಗೊಂಡಿದೆ. ಇದರಲ್ಲಿ ವಿವಿಧ ಮೂಲಗಳಿಂದ ಮ್ಯೂಸಿಕ್ ಪ್ಲೇಬ್ಯಾಕ್ ಜೊತೆಗೆ ಆಲ್ ಇನ್ ಒನ್ ಕರೋಕೆ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನು ಸ್ಪೀಕರ್ ಡೀಪ್ ಬಾಸ್ ಔಟ್‌ಪುಟ್ ಮತ್ತು ವರ್ಧಿತ ಒಟ್ಟಾರೆ ಆಡಿಯೊ ಅನುಭವವನ್ನು ನೀಡಲಿದೆ. ಜೊತೆಗೆ ಬಳಕೆದಾರರ ಅದ್ಯತೆಗೆ ಅನುಗುಣವಾಗಿ ಸಾಮಾನ್ಯ, ಬಾಸ್, ಆಲ್ಟೊ ಮತ್ತು ಸೊಪ್ರಾನೊ ಸೇರಿದಂತೆ ನಾಲ್ಕು ಸೌಂಡ್ ಮೋಡ್‌ಗಳನ್ನು ಹೊಂದಿದೆ. ಇದಲ್ಲದೆ ಕರೋಕೆ ಎಕ್ಸ್‌ಪಿರಿಯನ್ಸ್‌ಗಾಗಿ ಮೂರು ವಿಭಿನ್ನ ಸೌಂಡ್ ಮೋಡ್‌ಗಳನ್ನು ನೀಡಲಾಗಿದೆ. ಇನ್ನು ಈ ಬ್ಲೂಟೂತ್ ಸ್ಪೀಕರ್ ಸಿಂಗಿಂಗ್, ಅನೌನ್ಸ್‌ಮೆಂಟ್, ಕ್ಲಾಸ್‌ರೂಮ್ಸ್ ಮತ್ತು ಸ್ಮಾರ್ಟ್ ಈವೆಂಟ್ಸ್‌ಗಳಿಗೆ ಸೂಕ್ತವಾಗಿದೆ.


Click it and Unblock the Notifications








