ವರ್ಲ್ಡ್ ಲೆನ್ಸ್‌ನಿಂದ ನಿಮ್ಮ ಭಾಷೆಯ ಅನುವಾದ ಪಡೆಯಿರಿ

Written By:

ಪ್ರಯಾಣದ ಸಮಯದಲ್ಲಿ ನಮಗೆ ಅಗತ್ಯವಾಗಿರುವ ಎಲ್ಲವನ್ನೂ ನಮ್ಮ ಜೊತೆಗೆ ನಾವು ಕೊಂಡೊಯ್ಯುತ್ತೇವೆ. ಆದರೆ ನಿಮ್ಮೊಂದಿಗೆ ಫೋನ್ ಒಯ್ಯುವಾಗ ಅನುಕೂಲಕರವಾದ ಅಪ್ಲಿಕೇಶನ್ ವರ್ಲ್ಡ್ ಲೆನ್ಸ್ ಅನ್ನು ಕೊಂಡೊಯ್ಯುವುದು ಕೂಡ ಅಗತ್ಯವಾದುದು ಎಂಬುದು ನಿಮಗೆ ತಿಳಿದಿದೆಯೇ?

2010 ರಲ್ಲಿ, ಕ್ವೆಸ್ಟ್ ವಿಶುವಲ್ ಎನ್ನುವ ಸಣ್ಣ ಅಪ್ಲಿಕೇಶನ್ ಅಸಾಧ್ಯವಾದುದುನ್ನು ಸಾಧ್ಯವಾಗಿಸಿತ್ತು. ಈ ಅಪ್ಲಿಕೇಶನ್ ನೈಜ ಸಮಯದಲ್ಲಿ ವಿವಿಧ ಭಾಷೆಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾ ಬಳಸಿಕೊಂಡು ಅನುವಾದಿಸುವ ಜಾಣ್ಮೆಯನ್ನು ತೋರಿಸಿತು. ನೀವು ಹೊರದೇಶಕ್ಕೆ ಪ್ರಯಾಣಿಸುತ್ತಿರುವಾಗ ನಿಮಗೆ ಅರ್ಥವಾಗದ ಭಾಷೆಯ ಬೋರ್ಡ್ ಮೇಲೆ ಸುಮ್ಮನೆ ಫೋನ್ ಕ್ಯಾಮೆರಾವನ್ನು ಹಿಡಿದರೆ ಸಾಕು ಅದು ನಿಮಗೆ ತಿಳಿಯುವ ಭಾಷೆಯಲ್ಲಿ ಅದನ್ನು ಅನುವಾದಿಸುತ್ತದೆ.

ವರ್ಲ್ಡ್ ಲೆನ್ಸ್‌ನಿಂದ ನಿಮ್ಮ ಭಾಷೆಯ ಅನುವಾದ ಪಡೆಯಿರಿ

ಇಂಗ್ಲೀಷ್, ಪೋರ್ಚುಗೀಸ್, ಜರ್ಮನ್, ಇಟಾಲಿಯನ್, ಫ್ರೆಂಚ್, ರಷ್ಯನ್ ಸ್ಪ್ಯಾನಿಶ್ ಭಾಷೆಗಳ ನಡುವೆ ಬಳಕೆದಾರರು ಅನುವಾದಿಸುವ ವಿಶಿಷ್ಟ ತಂತ್ರಗಾರಿಕೆ ಈ ಅಪ್ಲಿಕೇಶನ್‌ಗಿದೆ. ಯಾವುದೇ ಭಾಷೆಯಲ್ಲಿ ಜಗತ್ತಿನ ಮಾಹಿತಿಯನ್ನು ನಿಮಗಿಲ್ಲಿ ಹುಡುಕಬಹುದು. ವ್ಯವಾಹಾರಿಕವಾಗಿ ಈ ಅಪ್ಲಿಕೇಶನ್ ಅನ್ನು ಬಳಸುತ್ತಿರುವವರಿಗೆ ಇದರ ಇನ್ನೊಂದು ಮುಖ್ಯ ಪ್ರಯೋಜನವೆಂದರೆ ಇದಕ್ಕೆ ಅಂತರ್ಜಾಲದ ಸಂಪರ್ಕ ಬೇಕೆಂದಿಲ್ಲ.

ಐಫೋನ್ ಮತ್ತು ಐಪ್ಯಾಡ್‌ಗೆ ಇವೆರಡರಲ್ಲೂ ಈ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್ ಖರೀದಿಯ ಮೂಲಕ ಅನುವಾದಗಳು ಲಭ್ಯವಿದ್ದು ಇದು ಉಚಿತವಾಗಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಹ ಇದು ಲಭ್ಯವಿದೆ.

ವರ್ಲ್ಡ್ ಲೆನ್ಸ್ ಅಪ್ಲಿಕೇಶನ್ ಗೂಗಲ್ ಸ್ಟೋರ್‌ಗಳಲ್ಲಿ ಎಷ್ಟು ಸಮಯ ಲಭ್ಯವಿದೆ ಎಂಬುದು ತಿಳಿದಿಲ್ಲ, ಆದ್ದರಿಂದ ಇದನ್ನು ಬಳಸುವ ಗ್ರಾಹಕರು ಕೂಡಲೇ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot