Home
ಸುದ್ದಿಜಾಲ

Har Ghar Tiranga: 'ಹರ್ ಘರ್ ತಿರಂಗ' ಪ್ರಮಾಣಪತ್ರ ಪಡೆಯಲು ಇದೇ ಸರಳ ವಿಧಾನ! ನಿಮಿಷದಲ್ಲಿ ಡೌನ್‌ಲೋಡ್​ ಆಗುತ್ತೆ

Har Ghar Tiranga: ಸ್ವಾತಂತ್ರ್ಯೋತ್ಸವಕ್ಕೆ ಕೇವಲ ಒಂದೇ ದಿನ ಬಾಕಿ! 78ನೇ ಸ್ವಾತಂತ್ರ್ಯ ಸಂಭ್ರಮಕ್ಕೆ (Independence Day 2024) ಸಾಕ್ಷಿಯಾಗಲು ದೇಶದ ಜನತೆ ಎದುರು ನೋಡುತ್ತಿದೆ. ಎಲ್ಲೆಡೆ ತ್ರಿವರ್ಣ ರಂಗು ಭಾರತವನ್ನು ಬೆಳಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ಅವರ ಬಲಿದಾನಕ್ಕೊಂದು ಸೆಲ್ಯೂಟ್‌ ಹೇಳುತ್ತಾ ಹಬ್ಬವನ್ನಾಗಿ ಆಚರಿಸಲು ಇಡೀ ದೇಶ ಕಾತರದಿಂದ ಕಾಯುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಆಗಸ್ಟ್‌ 9 ರಿಂದ 'ಹರ್‌ ಘರ್‌ ತಿರಂಗ' (ಮನೆ ಮನೆಯಲ್ಲೂ ತಿರಂಗ-Har Ghar Tiranga) ಅಭಿಯಾನಕ್ಕೆ ಚಾಲನೆ ನೀಡಿದೆ. ಆಗಸ್ಟ್‌ 15 ರವೆರೆಗೆ ಈ ಅಭಿಯಾನ ಇರಲಿದೆ.

ಹೌದು, ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ ಈ ವಿಶೇಷ ಸಂದರ್ಭದಲ್ಲಿ, 'ಹರ್‌ ಘರ್‌ ತಿರಂಗ' ಅಭಿಯಾನವನ್ನು ಮತ್ತೊಮ್ಮೆ ಸಂಪೂರ್ಣ ಉತ್ಸಾಹದಿಂದ ನಡೆಸಲಾಗುತ್ತಿದೆ. 2022ರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಾರಂಭಿಸಲಾದ ಈ ಅಭಿಯಾನ, ಸ್ವಾತಂತ್ರ್ಯ ದಿನದಂದು ಸಾಧ್ಯವಾದಷ್ಟು ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಗುರಿಯನ್ನು ಹೊಂದಲಾಗಿದೆ. ರಾಷ್ಟ್ರಧ್ವಜದ ಜೊತೆಗೆ ತಮ್ಮ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನ ಅಪ್ಲೋಡ್‌ ಮಾಡುವ ಮೂಲಕ ಈ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಬಹುದಾಗಿದೆ.

Har Ghar Tiranga: 'ಹರ್ ಘರ್ ತಿರಂಗ' ಪ್ರಮಾಣಪತ್ರ ಡೌನ್‌ಲೋಡ್ ಮಾಡುವುದು ಹೇಗೆ?

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಈ ಅಭಿಯಾನದ ಭಾಗವಾಗಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ನಾಗರಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ ಪ್ರಧಾನಿಯವರು ತಮ್ಮ ಪ್ರೊಫೈಲ್ ಚಿತ್ರವನ್ನು ರಾಷ್ಟ್ರಧ್ವಜದೊಂದಿಗೆ ಬದಲಿಸುವ ಬಗ್ಗೆ ಮತ್ತು ಅಧಿಕೃತ ಪ್ರಚಾರ ವೆಬ್‌ಸೈಟ್ harghartiranga.com ನಲ್ಲಿ ಸೆಲ್ಫಿ ಹಂಚಿಕೊಳ್ಳುವ ಬಗ್ಗೆ ತಿಳಿಸಿದ್ದಾರೆ. ಇದರ ಹೊರತಾಗಿ ನೀವು 'ಹರ್ ಘರ್ ತಿರಂಗ' ಪ್ರಮಾಣಪತ್ರವನ್ನು ಸಹ ಡೌನ್‌ಲೋಡ್ ಮಾಡಬಹುದು.

ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಮಾಡಬೇಕಿರುವುದು ಇಷ್ಟೇ..!

ದೇಶದ ಅತಿ ದೊಡ್ಡ ಸಂಭ್ರಮದಲ್ಲಿ ಪಾಲ್ಗೊಳ್ಳಲು ನೀವು https://harghartiranga.com/ ವೆಬ್‌ಸೈಟ್‌ಗೆ ತೆರಳಬೇಕು. ಅಲ್ಲಿ ನಿಮ್ಮ ಹೆಸರು, ಮೊಬೈಲ್‌ ಸಂಖ್ಯೆ, ರಾಜ್ಯದ ಹೆಸರನ್ನು ನಮೂದಿಸಬೇಕು. ನಂತರ ರಾಷ್ಟ್ರಧ್ವಜದ ಜೊತೆಗೆ ನೀವು ಇರುವಂತಹ ಸೆಲ್ಫಿ ಫೋಟೋವನ್ನು ಅಪ್ಲೋಡ್‌ ಕೊಡಬೇಕು. ಈ ಮೂಲಕ ನಿಮ್ಮ ರಾಷ್ಟ್ರಧ್ವಜ ಸಹಿತ ಸೆಲ್ಫಿ ಫೋಟೋವನ್ನು 'ಹರ್‌ಘರ್‌ ತಿರಂಗ'ದಲ್ಲಿ ಕಾಣಿಸುವಂತೆ ಮಾಡಬಹುದಾಗಿದೆ.

ಹರ್ ಘರ್ ತಿರಂಗ ಪ್ರಮಾಣಪತ್ರ ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ಹರ್ ಘರ್ ತಿರಂಗ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಲು ನೀವು ಬಯಸಿದರೆ, ನಾವು ಈ ಕೆಳಗೆ ನೀಡಿರುವ ವಿಧಾನಗಳನ್ನು ಬಳಸಿ.

  • ಮೊದಲು ನೀವು hargartiranga.com ವೆಬ್‌ಸೈಟ್‌ ಓಪನ್ ಮಾಡಿ
  • ಇದರ ನಂತರ 'ಅಪ್ಲೋಡ್ ಸೆಲ್ಫಿ' ಆಯ್ಕೆಯನ್ನು ಕ್ಲಿಕ್ ಮಾಡಿ.
  • ಇದರ ಬಳಿಕ 'Click to participate' ಆಯ್ಕೆಗೆ ಹೋಗಿ.
  • ಇಲ್ಲಿ ನಿಮ್ಮ ಹೆಸರು, ಫೋನ್ ನಂಬರ್, ದೇಶ ಮತ್ತು ರಾಜ್ಯದ ಹೆಸರನ್ನು ನಮೂದಿಸಬೇಕು. ಈ ವಿವರಗಳನ್ನು ಭರ್ತಿ ಮಾಡಿ ನಂತರ ನಿಮ್ಮ ಸೆಲ್ಫಿ ತೆಗೆದುಕೊಂಡು ಅದನ್ನು ಅಪ್‌ಲೋಡ್ ಮಾಡಿ.
  • ಬಳಿಕ, 'Generate Certificate' ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿ.

ಹರ್ ಘರ್ ತಿರಂಗ ಅಭಿಯಾನದ ಉದ್ದೇಶವೇನು?

ಹರ್ ಘರ್ ತಿರಂಗ ಅಭಿಯಾನದ ಉದ್ದೇಶವು ದೇಶಪ್ರೇಮಕ್ಕಾಗಿ ಜನರನ್ನು ಪ್ರೇರೇಪಿಸುವುದು ಮತ್ತು ಭಾರತೀಯ ರಾಷ್ಟ್ರಧ್ವಜದ ಬಗ್ಗೆ ಜಾಗೃತಿ ಮೂಡಿಸುವುದು. ಇದರಿಂದ ದೇಶವು ಏಕತೆ ಮತ್ತು ಹೆಮ್ಮೆಯಿಂದ ಮುನ್ನಡೆಯಬಹುದು. ಹರ್ ಘರ್ ತಿರಂಗ ಅಭಿಯಾನವು ಇದಕ್ಕೂ ಮೊದಲು ಬಹಳ ಯಶಸ್ವಿಯಾಗಿದೆ. 2022ರಲ್ಲಿ ಸುಮಾರು 23 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು.

10 ಕೋಟಿ ಜನರ ಸೆಲ್ಫಿಗಳು ಅಪ್ಲೋಡ್

2023 ರಲ್ಲಿ ಸುಮಾರು 10 ಕೋಟಿ ಜನರು ತಮ್ಮ ಸೆಲ್ಫಿಗಳನ್ನು ಅಪ್ಲೋಡ್ ಮಾಡಿದ್ದರು. ಪ್ರಸ್ತುತ ನೀವು ನಿಮ್ಮ ಸೆಲ್ಫಿಯನ್ನು ಸಹ ಅಪ್ಲೋಡ್ ಮಾಡಬಹುದು. ಮತ್ತು ಈ ಅಭಿಯಾನದಲ್ಲಿ ಭಾಗವಹಿಸಬಹುದು. ಕೇಂದ್ರ ಸರ್ಕಾರದ ಮನವಿಯಂತೆ ಈ ವರ್ಷವೂ ಹರ್ ಘರ್ ತಿರಂಗ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ನಾವು ಕೈಜೋಡಿಸಬೇಕಿದೆ.

Best Mobiles in India

English summary
Independence Day 2024: How to download your Har Ghar Tiranga Certificate online; you will get complete information here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+