ಭಾರತದಲ್ಲಿ ಮೊದಲ ಮೊಬೈಲ್ ಕರೆ ಮಾಡಿ ಇಂದಿಗೆ 25 ವರ್ಷ! ಅಂದು ಕರೆ ಮಾಡಿದ್ದು ಯಾರು!

|

ಇಂದು ಮೊಬೈಲ್‌ ಅನ್ನೊ ಪದ ಚಿಕ್ಕ ಮಗುವಿನಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಹುಚ್ಚು ಹಿಡಿಸಿದೆ. ಮೊಬೈಲ್‌ ಅನ್ನೊ ಮಾಯೆಯೊಳಗೆ ಎಲ್ಲಾ ವಯೋಮಾನದವರು ಮುಲುಗಿ ಹೋಗಿದ್ದರೆ. ಇಡೀ ಜಗತ್ತೇ ಇಂದು ಮೊಬೈಲ್‌ ಅನ್ನು ಬಳಸುತ್ತಿದೆ. ಸಾಮಾನ್ಯ ಫೋನ್‌ಗಳಿಂದ ಶುರುವಾದ ಮೊಬೈಲ್‌ ಜಮಾನ ಇಂದು ಸ್ಮಾರ್ಟ್‌ಫೋನ್‌ಗಲವರೆಗೂ ಮುಂದುವರೆದುಕೊಂಡು ಬಂದಿದೆ. ಒಮದು ಹೊತ್ತಿನ ಊಟಬೇಕಾದರೂ ಬಿಡಬಲ್ಲೆ ಆದರೆ ಅರೆಗಳಿಗೆ ಮೊಬೈಲ್‌ ಅನ್ನು ಬಿಟ್ಟಿರಲಾರೆ ಎನ್ನುವ ಯುವಜನತೆಯನ್ನು ಸಹ ನಾವಿಂದು ಕಾಣಬಹುದು. ಆದರೆ ಭಾರತದಲ್ಲಿ ಮೊಬೈಲ್‌ ಬಳಕೆ ಮೊದಲು ಶುರುವಾಗಿದ್ದು, ಯಾವಾಗ ಗೊತ್ತಾ?

ಮೊಬೈಲ್

ಹೌದು, ಇಂದು ಮೊಬೈಲ್ ಅನ್ನೊ ಮಾಯೆ ಎಲ್ಲರನ್ನೂ ಆವರಿಸಿಕೊಂಡಿದೆ. ಕೇವಲ 25 ವರ್ಷಗಳ ಹಿಂದೆ ಭಾರತದಲ್ಲಿ ಶುರುವಾಗಿದ್ದ ಮೊಬೈಲ್‌ ಸೇವೆ ಇಂದು ಭಾರತದಲ್ಲಿ ಕೊಟ್ಯಾಂತರ ಜನರು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ನೂರು ಕೋಟಿಗೂ ಹೆಚ್ಚು ಮೊಬೈಲ್‌ ಸಿಮ್ ಬಳಕೆಯಾಗುತ್ತಿವೆ. ಕೋಟಿ ಕೋಟಿ ಮಂದಿ ಇಂಟರ್‌ನೆಟ್‌ ಸೇವೆಯನ್ನು ಸಹ ಬಳಸುತ್ತಿದ್ದಾರೆ. ಇಪ್ಪತ್ತು ಕೋಟಿಗೂ ಅದಿಕ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಆದರೆ, 25 ವರ್ಷಗಳ ಹಿಂದೆ ಇದೇ ದಿನ ಭಾರತದಲ್ಲಿ ಮೊದಲ ಮೊಬೈಲ್‌ ಕರೆಯೊಂದನ್ನು ಮಾಡಿದ್ದಾರೆ. ಹಾಗಾದ್ರೆ ಅಂದು ಮೊದಲ ಮೊಬೈಲ್‌ ಕರೆ ಮಾಡಿದ್ದು ಯಾರು, ಕರೆ ಸ್ವಿಕರಿಸಿದ್ದು ಯಾರು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೊಬೈಲ್‌

ಭಾರತ ಈ 25 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯನ್ನ ಕಂಡಿದೆ. ಅಭಿವೃದ್ದಿಯ ಹಾದಿಯಲ್ಲಿ ಸಾಕಷ್ಟು ಚಲನಶೀಲತೆಯನ್ನು ಹೊಂದಿದೆ. ಅದರಂತೆ ಮೊಬೈಲ್‌ ಬಳಕೆಯಲ್ಲಿಯೂ ಕುಡ ನಾವಿಂದು ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದೇವೆ. ದೇಶಿ ಮಾರುಕಟ್ಟೆಯಲ್ಲಿ ಎಲ್ಲಾ ದೇಶಗಳ ಸ್ಮಾರ್ಟ್‌ಫೋನ್‌ಗಳು ಇಂದು ಲಬ್ಯವಿವೆ. ಅಷ್ಟರ ಮಟ್ಟಿಗೆ ಭಾರತದ ಫೋನ್‌ ಮಾರುಕಟ್ಟೆ ವಿಶಾಲವಾಗಿದೆ. ಆದರೆ ಇದೇ ಜುಲೈ 31 1995ರಂದು ಭಾರತದಲ್ಲಿ ಮೊದಲ ಮೊಬೈಲ್ ಕರೆ ಮಾಡಲಾಗಿದ್ದು, ಅಂದು ಅಂದಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಕೇಂದ್ರದಲ್ಲಿ ದೂರಸಂಪರ್ಕ ಸಚಿವರಾಗಿದ್ದ ಸುಖ್ ರಾಮ್‌ಗೆ ಕರೆ ಮಾಡಿದ್ದರು. ಈ ಕರೆಯೆ ಭಾರತದಲ್ಲಿ ದಾಖಲಾದ ಮೊದಲ ಮೊಬೈಲ್‌ ಕರೆಯಾಗಿದೆ.

ಮೊಬೈಲ್

ಇಂದು ಇತಿಹಾಸದಲ್ಲಿ ದಾಖಲಾಗಿರುವ ಭಾರತದ ಈ ಮೊದಲ ಮೊಬೈಲ್ ಕರೆಯನ್ನು ಕೋಲ್ಕತ್ತಾದಿಂದ ದೆಹಲಿಗೆ ಮಾಡಲಾಗಿತ್ತು. ಇನ್ನು ನೋಕಿಯಾ ಹ್ಯಾಂಡ್‌ಸೆಟ್‌ಗಳನ್ನು ಬಳಸಿ ಭಾರತದಲ್ಲಿ ಮೊದಲ ಮೊಬೈಲ್ ಕರೆ ಮಾಡಲಾಗಿದೆ. ಅಲ್ಲದೆ ಭಾರತದ ಮೋದಿ ಗ್ರೂಪ್ ಮತ್ತು ಆಸ್ಟ್ರೇಲಿಯಾದ ಟೆಲಿಕಾಂ ಕಂಪೆನಿ ಟೆಲ್ಸ್ಟ್ರಾ ನಡುವಿನ ಜಂಟಿ ಉದ್ಯಮ 'ಮೋದಿ ಟೆಲ್ಸ್ಟ್ರಾ' ನೆಟ್ವರ್ಕ್‌ನಲ್ಲಿ ಮೊದಲ ಮೊಬೈಲ್ ಕರೆಯನ್ನು ಮಾಡಲಾಗಿತ್ತು.ಈ ಸೇವೆಯನ್ನು ಮೊಬೈಲ್ ನೆಟ್ ಎಂದು ಕರೆಯಲಾಯಿತು. ದೇಶದಲ್ಲಿ ಸೆಲ್ಯುಲರ್ ಸೇವೆ ಒದಗಿಸಲು ಪರವಾನಗಿ ಪಡೆದ 8 ಕಂಪನಿಗಳಲ್ಲಿ ಈ ಕಂಪನಿಯೂ ಒಂದಾಗಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಮೊಬೈಲ್‌

ಇದಿಷ್ಟೇ ಅಲ್ಲ ಇನ್ನೊಂದು ಗಮನಾರ್ಹ ವಿಚಾರವೆಂದರೆ ಇಂದು ಲಬ್ಯವಿರುವ ಟೆಲಿಕಾಂ ಕಂಪೆನಿಗಳು ಇಂಟರ್‌ನೆಟ್ ಪಡೆದರೆ ಅನ್‌ಲಿಮಿಟೆಡ್ ಉಚಿತ ಕರೆಗಳನ್ನು ಮಾಡಬಹುದಾದ ಅವಕಾಶವನ್ನು ಕಲ್ಪಿಸಿವೆ. ಆದರೆ ಭಾರತದಲ್ಲಿ ಮೊಬೈಲ್‌ನ ಮೊದಲ ಕರೆ ಮಾಡಿದ ದಿನಗಳಲ್ಲಿ ಹೊರಹೋಗುವ ಕರೆಗಳಿಗೆ ಒಂದು ನಿಮಿಷಕ್ಕೆ 16 ರೂ.ಗಳನ್ನೂ ವಿಧಿಸಲಾಗುತ್ತಿತ್ತು. ಒಳಬರುವ ಕರೆಗಳಿಗೂ ಸಹ ಶುಲ್ಕವನ್ನ ವಿದಿಸಲಾಗುತ್ತಿತ್ತು. ಇದೇ ಕಾರಣಕ್ಕೆ ಅಂದು ಮೊಬೈಲ್‌ ಅನ್ನುವ ಪದ ಕೇವಲ ಶ್ರೀಮಂತರ ಸ್ವತ್ತಾಗಿತ್ತು. ಶ್ರೀಮಂತಿಕೆ ಸೂಚಕವಾಗಿತ್ತು.

ಮೊಬೈಲ್

ಈಗ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಇಂದು ಭಾರತವು ಸುಮಾರು 448 ಮಿಲಿಯನ್ ಮೊಬೈಲ್ ಬಳಕೆದಾರರನ್ನು ಹೊಂದಿದೆ. ಚೀನಾ ನಂತರ ಮೊಬೈಲ್ ಬಳಕೆದಾರ ಅತಿ ಹೆಚ್ಚು ಇರುವ ಎರಡನೇ ದೇಶವಾಗಿ ಭಾರತ ಗುರುತಿಸಿಕೊಂಡಿದೆ. ಉಚಿತ ಕರೆಗಲ ಸೇವೆಯನ್ನು ಆರಂಬಿಸಿ ದೇಶದ ಟೆಲಿಕಾಂ ವಲಯದಲ್ಲಿ ಸುನಾಮಿ ಎಬ್ಬಿಸಿದ ಜೊಯೀ ಅಂತಹ ಕಂಪೆನಿಗಳು ಇಂಟರ್‌ನೆಟ್‌ ಬಳಕೆಯನ್ನ ಇನ್ನಷ್ಟು ಸುಲಭವಾಗಿ ಗ್ರಾಹಕರಿಗೆ ತಲುಪುವಂತೆ ಮಾಡಿವೆ. ಅಮದು ಭಾರತದಲ್ಲಿ ಮೊದಲ ಮೊಬೈಲ್‌ ಕರೆ ಮಾಡಿದ ದಿನಕ್ಕೂ 25 ವರ್ಷಗಳ ನಂತರದ ಇಂದಿನ ದಿನಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

Best Mobiles in India

English summary
As India celebrates 25 years of mobility, we take a look at the time when the first phone call was made and how things have changed now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X