ಜಿಯೋ ದೇಶದಲ್ಲಿ ಫಾಸ್ಟ್, ಇಂಟರ್ನೆಟ್ ವೇಗದಲ್ಲಿ ಭಾರತ ಲಾಸ್ಟ್..!
ದೇಶದಲ್ಲಿ ಸದ್ಯ 4G ಹವಾ ಜೋರಾಗಿದೆ. ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ 4G VoLTE ಸೇವೆಯನ್ನು ಆರಂಭಿಸಿದ ನಂತರದಲ್ಲಿ ದೇಶಿಯ ಮೊಬೈಲ್ ಬ್ರಾಡ್ ಬ್ಯಾಂಡ್ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆಯನ್ನು ಕಾಣಬಹುದಾಗಿದೆ. ದೇಶದ ಬಳಕೆದಾರರು ಇನ್ನು 3G ಡೇಟಾವನ್ನು ಬಳಕೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಜಿಯೋ ಉಚಿತವಾಗಿ ಸೇವೆಯನ್ನು ನೀವು ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು.

ಇದಾದ ನಂತರದಲ್ಲಿ ಇತರೆ ಟೆಲಿಕಾಂ ಕಂಪನಿಗಳು 4G ಸೇವೆಯನ್ನು ಆರಂಭಿಸಿದವು ಎನ್ನಲಾಗಿದೆ. ಜಿಯೋದೊಂದಿಗೆ ಸ್ಪರ್ಧೆಗೆ ಬಿದ್ದು, ಜನರಿಗೆ ಉಚಿತ ಸೇವೆಗಳನ್ನು ನೀಡಿದವು. ಇದಲ್ಲದೇ ಬಳಕೆದಾರರಿಗೆ ಅತೀ ಕಡಿಮೆ ವೆಚ್ಚದಲ್ಲಿ ವೇಗದ ಇಂಟರ್ನೆಟ್ ಬಳಕೆಗೆ ದೊರೆಯುವಂತೆ ಆಗಿತ್ತು. 4G ವೇಗವು ಭಾರತೀಯರ ಪಾಲಿಗೆ ಶರವೇಗವಾಗಿತ್ತು ಎನ್ನಲಾಗಿದೆ. ಆದರೆ ಇದು ಜಾಗತೀಕವಾಗಿ ತೀರಾ ಕೆಳ ಮಟ್ಟದ ವೇಗ ಎನ್ನುವುದು ಬಹಳ ಹಿಂದಿನಿಂದಲೂ ಕೇಳಿಬಂದಿರುವ ಮಾತಾಗಿದ್ದು, ಮತ್ತೆ ಅದು ನಿಜವಾಗಿದೆ.

ಆದರೆ ಭಾರತದಲ್ಲಿಯೇ ಅತೀ ಕಡಿಮೆ ವೇಗ:
ಇಂಟರ್ನೆಟ್ ವೇಗವನ್ನು ಅಳೆಯುವ ಯುಕೆ ಮೂಲದ ಓಪನ್ ಸಿಗ್ನಲ್ ಹೊಸದೊಂದು ವರದಿಯನ್ನು ಹೊರಗೆ ಹಾಕಿದ್ದು, ಇದರಲ್ಲಿ ಭಾರತದಲ್ಲಿ ಅತೀ ಕಡಿಮೆ ವೇಗದ 4G ಸೇವೆಯು ಬಳಕೆದಾರರಿಗೆ ದೊರೆಯುತ್ತಿದೆ ಎನ್ನಲಾಗಿದೆ.

ಸಿಂಗಪುರ್ ನಂಬರ್ 1:
46.64 MBPS ವೇಗದಲ್ಲಿ ಸಿಂಗಪುರದಲ್ಲಿ 4G ಸೇವೆಯೂ ದೊರೆಯುತ್ತಿದೆ. ಸಿಂಗಪುರ ಓಪನ್ ಸಿಗ್ನಲ್ ಅತೀ ವೇಗದ 4G ಸೇವೆ ಪಟ್ಟಿಯಲ್ಲಿ ಮೊದಲನೇಯ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಈ ಪಟ್ಟಿಯಲ್ಲಿ ತೀರಾ ಹಿಂದುಳಿದೆ. ಭಾರತವು 77ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಭಾರತದ ವೇಗ:
ಭಾರತದಲ್ಲಿ ಸರಾಸರಿ 4G ವೇಗವೂ ಕೇವಲ 6.13MBPS ಎನ್ನಲಾಗಿದ್ದು, ಇತರೇ ದೇಶಗಳಿಗೆ ಹೋಲಿಸಿಕೊಂಡರೆ ಇದು ಅತೀ ಕಡಿಮೆ ವೇಗವಾಗಿದೆ. ಆದರೆ ದೇಶದಲ್ಲಿ ಕೆಲವು ಭಾಗಗಳಲ್ಲಿ 1 MBPS ವೇಗದ ಇಂಟರ್ನೆಟ್ ಸಹ ಇಲ್ಲ ಎನ್ನಬಹುದಾಗಿದೆ.


ದೇಶಿಯ ಮಾರುಕಟ್ಟೆ:
ದೇಶಿಯ ಮಾರುಕಟ್ಟೆಯಲ್ಲಿ 4G ನೆಟ್‌ವರ್ಕ್ ಇದುವರೆಗಿನ ಹೆಚ್ಚಿನ ವೇಗ ದಾಖಲಿಸಿದೆ ಆದರೆ ಜಾಗತಿಕ ಮಾರುಕಟ್ಟೆಗೆ ಹೋಲಿಕೆಯನ್ನು ಮಾಡಿದರೆ ಇದು ಭಾರೀ ಕಡಿಮೆ ಎನ್ನಲಾಗಿದೆ. ದೇಶಿಯ ನೆಟ್‌ವರ್ಕ್ ವೇಗವೂ ಏರಿಕೆಯಾಗುವದಿಲ್ಲ, ಗುಣಮಟ್ಟವು ಉತ್ತಮ ಪಡಿಸುವ ಯಾವುದೇ ಪ್ರಯತ್ನವು ನಡೆಯುತ್ತಿಲ್ಲ ಎನ್ನಲಾಗಿದೆ.


Click it and Unblock the Notifications








