Subscribe to Gizbot

ಏಷ್ಯಾದಲ್ಲೇ ನಿಧಾನಗತಿಯ ಸಂಪರ್ಕದಲ್ಲಿ ಭಾರತಕ್ಕೆ ಸ್ಥಾನ

Written By:

ಭಾರತವು ಏಷ್ಯಾದಲ್ಲೇ ನಿಧಾನಗತಿಯ ಅಂತರ್ಜಾಲ ವೇಗವನ್ನು ಹೊಂದಿದೆ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ. ಅಕ್ಮಯಿ ಅಂತರ್ಜಾಲ ವಿಷಯ ಡೆಲಿವರಿ ನೆಟ್‌ವರ್ಕ್ ಹೇಳುವಂತೆ, ಭಾರತದಲ್ಲಿ ಸರಾಸರಿ ಅಂತರ್ಜಾಲ ಸಂಪರ್ಕ 1.7 ಎಮ್‌ಬಿಪಿಎಸ್ ಆಗಿದ್ದು, ಜಾಗತಿಕವಾಗಿ ಥೈಲಾಂಡ್, ಇಂಡೋನೇಶ್ಯಾ, ಫಿಲಿಫೈನ್ಸ್ ಅನ್ನು ಹಿಂದಿಕ್ಕಿ 118 ನೇ ಸ್ಥಾನವನ್ನು ಅಲಂಕರಿಸಿದೆ.

ಭಾರತದಲ್ಲಿ ಶೇಕಡ 0.7% ದಷ್ಟು ಜನರು 10 ಎಮ್‌ಬಿಪಿಎಸ್‌ಗಿಂತಲೂ ಹೆಚ್ಚಿನ ಅಂತರ್ಜಾಲ ವೇಗವನ್ನು ಪಡೆದಿದ್ದು, 4.9%ದಷ್ಟು ಜನರು 4 ಎಮ್‌ಬಿಪಿಎಸ್ ಅಥವಾ ಅದಕ್ಕಿಂತ ಹೆಚ್ಚಿನ ವೇಗವುಳ್ಳ ಅಂತರ್ಜಾಲ ಸಂಪರ್ಕವುಳ್ಳ ಸೌಲಭ್ಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಇಂಟರ್ನೆಟ್ ವೇಗ ಕಡಿಮೆ ಅಂತೆ!!!

ಅಕ್ಮಯಿ ಇಂಟರ್ನೆಟ್ ಕಂಟೆಂಟ್ ಡೆಲಿವರಿ ನೆಟ್‌ವರ್ಕ್ ಪ್ರಕಾರ 10 ಎಮ್‌ಬಿಪಿಎಸ್‌ಗಿಂತ ಹೆಚ್ಚಿನ ವೇಗವನ್ನು ಹೈ ಬ್ರಾಡ್‌ಬ್ಯಾಂಡ್ ಎಂದು ಗುರುತಿಸಿದೆ. ಈ ಸಂಖ್ಯೆಯು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 39% ದಷ್ಟು ಮತ್ತು ವರ್ಷದಿಂದ ವರ್ಷಕ್ಕೆ 106% ಕ್ಕೆ ಏರುತ್ತಿದೆ.

ಶೇಕಡಾವಾರು ಬಳಕೆದಾರರು 4 ಎಮ್‌ಬಿಪಿಎಸ್ ಅಥವಾ ಅದಕ್ಕಿಂತ ಹೆಚ್ಚಿನ ಸಂಪರ್ಕ ವೇಗವನ್ನು ಪಡೆದುಕೊಳ್ಳುತ್ತಿರುವ ಬಳಕೆದಾರರು ಬ್ರಾಂಡ್‌ಬ್ಯಾಂಡ್‌ನಿಂದ ಈ ವೇಗವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಅಕ್ಮಯಿ ನಿಶ್ಚಯಿಸಿದೆ.

4 ಎಮ್‌ಬಿಪಿಎಸ್ ಸಂಪರ್ಕಗಳನ್ನು ಹೊಂದಿರುವ ಶೇಕಡಾವಾರು ಬಳಕೆದಾರರು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 17%ದಷ್ಟು ಹೆಚ್ಚಾಗಿದ್ದು ವರ್ಷದಿಂದ ವರ್ಷಕ್ಕೆ ಇದೇ ಪ್ರಮಾಣ 111% ಕ್ಕೆ ಏರಿದೆ.

ದಕ್ಷಿಣ ಕೊರಿಯಾದ ಇಂಟರ್ನೆಟ್ ಸಂಪರ್ಕವ ವೇಗವು 23.6 ಎಮ್‌ಬಿಪಿಎಸ್ ಆಗಿದ್ದು, ಮತ್ತು ಹೆಚ್ಚಿನ ಸರಾಸರಿ ವೇಗ ಮಟ್ಟವು 68.5 ಎಮ್‌ಬಿಪಿಎಸ್ ಆಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot