2018ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಇಷ್ಟಿರಲಿದೆ.!!

ಚೀನಾ ನಂತರ ಸ್ಥಾನವನ್ನು ಭಾರತ ಪಡೆಯಲಿದ್ದು, ನಂತರದ ಸ್ಥಾನದಲ್ಲಿ ಅಮೆರಿಕಾ ಇರಲಿದೆ ಎಂದು ಜಿನಿತ್ ಹೇಳಿದೆ.!!

|

ಪ್ರಸ್ತುತ ಸ್ಮಾರ್ಟ್‌ಫೋನ್ ಬೆಳವಣಿಗೆ ದರವನ್ನು ನೋಡಿದರೆ ಭಾರತದಲ್ಲಿ 2018ರ ವೇಳೆಗೆ 530 (53 ಕೋಟಿ) ಮಿಲಿಯನ್ ಬಳಕೆದಾರರನ್ನು ಹೊಂದಲಿದೆ ಎಂದು ಯುಎಸ್ ಮೂಲದ ''ಜಿನಿತ್'' ಮೀಡಿಯಾ ಏಜೆನ್ಸಿ ವರದಿ ಮಾಡಿದೆ.!! ಚೀನಾ ನಂತರ ಸ್ಥಾನವನ್ನು ಭಾರತ ಪಡೆಯಲಿದ್ದು, ನಂತರದ ಸ್ಥಾನದಲ್ಲಿ ಅಮೆರಿಕಾ ಇರಲಿದೆ ಎಂದು ಜಿನಿತ್ ಹೇಳಿದೆ.!!

2018ರ ವೇಳೆಗೆ ಚೀನಾ 1.3 ಬಿಲಿಯನ್ (130 ಕೋಟಿ) ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದಲಿದ್ದರೆ, ಭಾರತ 530 (53 ಕೋಟಿ) ಮಿಲಿಯನ್ ಹಾಗೂ ಅಮೆರಿಕಾ 229 ಮಿಲಿಯನ್ ( 23 ಕೋಟಿ)ಬಳಕೆದಾರನ್ನು ಹೊಂದಲಿವೆ ಎಂದು ವರದಿ ಮಾಡಿದೆ.!! ಹಾಗಾದರೆ, ಜಿನಿತ್ ವರದಿ ಮಾಡಿರುವ ಇನ್ನಿತರ ಪ್ರಮುಖ ಅಂಶಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇಂಟರ್‌ನೆಟ್ ಬಳಕೆ ಹೆಚ್ಚಳ!!

ಇಂಟರ್‌ನೆಟ್ ಬಳಕೆ ಹೆಚ್ಚಳ!!

ಸ್ಮಾರ್ಟ್‌ಪೋನ್ ಮೂಲಕ ಇಂಟರ್‌ನೆಟ್ ಬಳಕೆ ಮಾಡುತ್ತಿರುವ ಪ್ರಮಾಣ 2017 ರಲ್ಲಿ 70% ರಷ್ಟಿದ್ದು, 2018 ರಲ್ಲಿ ಅಂತರ್ಜಾಲ ಬಳಕೆ ಮಾಡುವ ಪ್ರಮಾಣ ಶೇ73% ರಷ್ಟಾಗಿದೆ.!! ಇನ್ನು 2019ರ ವೇಳೆಗೆ ಮೊಬೈಲ್ ಇಂಟರ್ನೆಟ್ ಬಳಕೆ ಶೇ 76% ರಷ್ಟಿರುತ್ತದೆ ಎಂದು ಜಿನೀತ್ ಲೆಕ್ಕಹಾಕಿದೆ.!!

ಇಂಟರ್ನೆಟ್ ಜಾಹೀರಾತು ಹೆಚ್ಚಾಗುತ್ತದೆ.!!

ಇಂಟರ್ನೆಟ್ ಜಾಹೀರಾತು ಹೆಚ್ಚಾಗುತ್ತದೆ.!!

ಇಂಟರ್ನೆಟ್ ಜಾಹೀರಾತಿನ ಹಣದಲ್ಲಿ 2017 ರಲ್ಲಿ 59 ರಷ್ಟು ಹಣ ಮೊಬೈಲ್ ಜಾಹಿರಾತುಗಳಿಗಾಗಿ ಹೋಗುತ್ತದೆ ಎಂದು ಜೆನಿತ್ ಅಂದಾಜು ಮಾಡಿದೆ. ಭವಿಷ್ಯದಲ್ಲಿ ಈ ಬೆಳವಣಿಗೆ ಮತ್ತಷ್ಟು ಹೆಚ್ಚಾಗಲಿದ್ದು, 2018 ರಲ್ಲಿ ಶೇ 59% ರಷ್ಟು ಮತ್ತು 2019 ರಲ್ಲಿ 62% ರಷ್ಟು ಏರಿಕೆಯಾಗಲಿದೆ ಎಂದು ಜೆನಿತ್ ಅಧ್ಯಯನವು ನಿರೀಕ್ಷಿಸಿದೆ.

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು.!!

ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು.!!

ಕೌಂಟರ್‌ಪಾಯಿಂಟ್ ರಿಸರ್ಚ್‌ ಪ್ರಕಾರ, ಭಾರತದಲ್ಲಿ ಸುಮಾರು 650 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರಿದ್ದಾರೆ, ಅವರಲ್ಲಿ ಸುಮಾರು 300 ಮಿಲಿಯನ್ ಜನರು ಮಾತ್ರ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದು, ವರ್ಷಕ್ಕೆ 17 ರಿಂದ 18 ಪರ್ಸೆಂಟ್ ಬೆಳವಣಿಗೆ ದಾಕಲಾಗುತ್ತಿದೆ ಎಂದು ವರದಿ ಹೇಳಿದೆ.!!

ಇಂಟರ್ನೆಟ್ ಬಳಕೆದಾರರ ಸಂಖ್ಯೆ!!

ಇಂಟರ್ನೆಟ್ ಬಳಕೆದಾರರ ಸಂಖ್ಯೆ!!

ಭಾರತದಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು 450-465 ಮಿಲಿಯನ್ ತಲುಪಲಿದೆ ಎಂದು ಇತ್ತೀಚೆಗೆ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಐಎಎಂಎಐ) ಮತ್ತು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಐಎಮ್ಆರ್‌ಬಿ ಇಂಟರ್ನ್ಯಾಷನಲ್ ಸಹ ತಿಳಿಸಿದ್ದವು.!!

ವಿಶ್ವದ ಎಲ್ಲಾ ಜನರಿಗೂ ಇಂಗ್ಲೀಷ್ ಬಿಟ್ಟು ಈ ಭಾಷೆ ಕಲಿಸಿ ಎಂದ ಆಪಲ್ ಸಿಇಒ!!.ಯಾವುದು?ವಿಶ್ವದ ಎಲ್ಲಾ ಜನರಿಗೂ ಇಂಗ್ಲೀಷ್ ಬಿಟ್ಟು ಈ ಭಾಷೆ ಕಲಿಸಿ ಎಂದ ಆಪಲ್ ಸಿಇಒ!!.ಯಾವುದು?

Best Mobiles in India

English summary
Zenith estimated that 59 percent of all internet ad spending will go to ads viewed on mobile devices in 2017. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X