ದೇಶದಲ್ಲಿಯೇ ತಯಾರಾಗಲಿವೆ ಸೂಪರ್ ಕಂಪ್ಯೂಟರ್ಸ್!...ಇಲ್ಲಿದೇ ಫುಲ್ ಡೀಟೆಲ್ಸ್!!

‘ಭಾರತದಲ್ಲೇ ತಯಾರಿಸಿ' ಯೋಜನೆಯ ಅಡಿಯಲ್ಲಿ ಸೂಪರ್‌ ಕಂಪ್ಯೂಟರ್‌ಗಳನ್ನು ತಯಾರಿಸಲು ಕೇಂದ್ರ ಸರ್ಕಾರದ ಮುಂದಾಗಿದೆ.!

|

'ಭಾರತದಲ್ಲೇ ತಯಾರಿಸಿ' ಯೋಜನೆಯ ಅಡಿಯಲ್ಲಿ ಸೂಪರ್‌ ಕಂಪ್ಯೂಟರ್‌ಗಳನ್ನು ತಯಾರಿಸಲು ಕೇಂದ್ರ ಸರ್ಕಾರದ ಮುಂದಾಗಿದೆ.! ₹4,500 ಕೋಟಿ ರೂ ಯೂಜನಾ ವೆಚ್ಚದಲ್ಲಿ ಮೂರು ಹಂತಗಳ ಯೀಜನೆಗಳನ್ನು ಹಾಕಿಕೊಂಡಿದ್ದು, ಈ ಯೋಜನೆಗೆ ರಾಷ್ಟ್ರೀಯ ಸೂಪರ್‌ ಕಂಪ್ಯೂಟರ್‌ ಯೋಜನೆ (ಎನ್‌ಎಸ್‌ಎಂ) ಎಂದು ಹೆಸರಿಡಲಾಗಿದೆ.!!

ದೇಶೀಯವಾಗಿ ವೇಗದ ಇಂಟರ್‌ನೆಟ್‌ ಸಂಪರ್ಕ ಒದಗಿಸುವ ಸಾಧನ ಸೇರಿದಂತೆ ಸೂಪರ್‌ ಕಂಪ್ಯೂಟರ್‌ ತಯಾರಿಕೆಗೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿ ಸಂಸ್ಥೆ ಪುಣೆಯ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್ಡ್ ಕಂಪ್ಯೂಟಿಂಗ್‌ (ಸಿ-ಡಾಕ್‌ ) ಅಭಿವೃದ್ದಿಪಡಿಸಲಿದೆ.!!

ಹಾಗಾದರೆ, ಸೂಪರ್‌ ಕಂಪ್ಯೂಟರ್‌ಗಳು ಭಾರತದಲ್ಲಿ ಯಾವಾಗ ತಯಾರಾಗುತ್ತವೆ.? ಸೂಪರ್ ಕಂಪ್ಯೂಟರ್ ಕಾರ್ಯನಿರ್ವಹಣೆ ಹೇಗೆ? ಎಷ್ಟು ಕ್ಯಾಪಾಸಿಟಿ ಸೂಪರ್‌ ಕಂಪ್ಯೂಟರ್‌ಗಳು ಭಾರತದಲ್ಲಿ ತಯಾರಾಗುತ್ತಿವೆ? ಎಂಬೆಲ್ಲಾ ಅಂಶಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

50 ಸೂಪರ್‌ ಕಂಪ್ಯೂಟರ್‌ಗಳನ್ನು ತಯಾರಿಸುವ ಗುರಿ!!

50 ಸೂಪರ್‌ ಕಂಪ್ಯೂಟರ್‌ಗಳನ್ನು ತಯಾರಿಸುವ ಗುರಿ!!

2016ನೇ ವರ್ಷದ ಮಾರ್ಚ್‌ನಲ್ಲಿಯೇ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಮೂರು ಹಂತಗಳಲ್ಲಿ 50 ಸೂಪರ್‌ ಕಂಪ್ಯೂಟರ್‌ಗಳನ್ನು ತಯಾರಿಸುವ ಗುರಿಯನ್ನು ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್ಡ್ ಕಂಪ್ಯೂಟಿಂಗ್‌ ಸಂಸ್ಥೆ ಹೊಂದಿದೆ.!!

ಮೊದಲ ಹಂತದಲ್ಲಿ 6 ಕಂಪ್ಯೂಟರ್!!

ಮೊದಲ ಹಂತದಲ್ಲಿ 6 ಕಂಪ್ಯೂಟರ್!!

ಸೂಪರ್‌ ಕಂಪ್ಯೂಟರ್‌ ತಯಾರಿಕೆಯ ಮೊದಲ ಹಂತದಲ್ಲಿ ಆರು ಸೂಪರ್‌ ಕಂಪ್ಯೂಟರ್‌ಗಳನ್ನು ತಯಾರಿಸುವ ಯೋಜನೆ ರೂಪಿಸಲಾಗಿದೆ. ಇವುಗಳಲ್ಲಿ ಮೂರು ಕಂಪ್ಯೂಟರ್ ಆಮದು ಮಾಡಿಕೊಂಡು ಇನ್ನುಳಿದ ಮೂರು ಕಂಪ್ಯೂಟರ್‌ಗಳ ಬಿಡಿ ಭಾಗಗಳನ್ನು ಹೊರದೇಶಗಳಲ್ಲಿ ತಯಾರಿಸಿ ನಂತರ ಅವುಗಳನ್ನು ಭಾರತದಲ್ಲಿ ಜೋಡಿಸಲಾಗುವುದು ಎಂದು ಹಿರಿಯ ವಿಜ್ಞಾನಿ ಹಾಗೂ ಯೋಜನೆಯ ಮೇಲ್ವಿಚಾರಕ ಮಿಲಿಂದ್‌ ಕುಲಕರ್ಣಿ ಅವರು ಹೇಳಿದ್ದಾರೆ.

ವೈಜ್ಞಾನಿಕ ಸಂಶೋಧನೆಗೆ ಲಭ್ಯ!!

ವೈಜ್ಞಾನಿಕ ಸಂಶೋಧನೆಗೆ ಲಭ್ಯ!!

ಈ ಯೋಜನೆ ಮೂಲಕ ತಯಾರಿಸುತ್ತಿರುವ ಸೂಪರ್ ಕಂಪ್ಯೂಟರ್‌ಗಳನ್ನು ದೇಶದಾಧ್ಯಂತ ವೈಜ್ಞಾನಿಕ ಸಂಶೋಧನೆಗೆ ಬಳಸಿಕೊಳ್ಳಲಾಗುತ್ತದೆ.! ಇನ್ನು ಮೊದಲ ಹಂತದಲ್ಲಿ ತಯಾರಾಗಲಿರುವ ಆರು ಸೂಪರ್‌ ಕಂಪ್ಯೂಟರ್‌ಗಳ ಪೈಕಿ ಒಂದು ಕಂಪ್ಯೂಟರ್‌ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಸಿಗಲಿದೆ.!!

ಮೂರನೇ ಹಂತದಲ್ಲಿ ದೇಶೀಯ ಸೂಪರ್ ಕಂಪ್ಯೂಟರ್!!

ಮೂರನೇ ಹಂತದಲ್ಲಿ ದೇಶೀಯ ಸೂಪರ್ ಕಂಪ್ಯೂಟರ್!!

2017ರ ಒಳಗಾಗಿ 6 ಸೂಪರ್ ಕಂಪ್ಯೂಟರ್‌ಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿದ್ದು, ಮೂರನೇ ಹಂತದಲ್ಲಿ ಇಡೀ ಸೂಪರ್‌ ಕಂಪ್ಯೂಟರ್‌ ದೇಶೀಯವಾಗಿ ತಯಾರಾಗಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಶುತೋಷ್ ಶರ್ಮ ಹೇಳಿದ್ದಾರೆ.

ಎಷ್ಟು ಕ್ಯಾಪಾಸಿಟಿ ಸೂಪರ್‌ ಕಂಪ್ಯೂಟರ್‌ಗಳು!!

ಎಷ್ಟು ಕ್ಯಾಪಾಸಿಟಿ ಸೂಪರ್‌ ಕಂಪ್ಯೂಟರ್‌ಗಳು!!

6 ಕಂಪ್ಯೂಟರ್‌ಗಳಲ್ಲಿ ಎರಡು ಕಂಪ್ಯೂಟರ್‌ಗಳು ಎರಡು ಪೆಟಾಫ್ಲಾಪ್‌ಗಳಷ್ಟು (petaflops) ಕಾರ್ಯನಿರ್ವಹಣಾ ಸಾಮರ್ಥ್ಯ ಹೊಂದಿರಲಿವೆ. ಉಳಿದವುಗಳ ಸಾಮರ್ಥ್ಯ 500 ಟೆರಾಫ್ಲಾಪ್‌ಗಳಿಷ್ಟರಲಿವೆ (teraflops).!!

<strong>ಸೈಬರ್ ಕ್ರಿಮಿನಲ್‌ಗಳು ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ?..ಈ ಸ್ಟೋರಿ ನೋಡಿ!!</strong>ಸೈಬರ್ ಕ್ರಿಮಿನಲ್‌ಗಳು ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ?..ಈ ಸ್ಟೋರಿ ನೋಡಿ!!

Best Mobiles in India

English summary
the supercomputer will be a million times faster than even the fastest of consumer laptops.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X