Home
ಸುದ್ದಿಜಾಲ

ಮೊಬೈಲ್‌ ಜಾಹೀರಾತು ವಂಚನೆಯಲ್ಲಿ ಭಾರತ ಮುಂಚೂಣಿ..!

By Gizbot Bureau

ಮೊಬೈಲ್ ಜಾಹೀರಾತು ವಂಚನೆಯಲ್ಲಿ ಭಾರತ ಏಷ್ಯಾದಲ್ಲಿಯೇ ಮುಂಚೂಣಿಯಲ್ಲಿದೆ, ಹೌದು, ಭಾರತದಲ್ಲಿ ಶೇ.62ರಷ್ಟು ಮೊಬೈಲ್‌ ಜಾಹೀರಾತು ವಂಚನೆ ನಡೆಯುತ್ತಿದೆ ಎಂದು ವರದಿಯೊಂದು ಬಹಿರಂಗವಾಗಿದೆ. ಇದಷ್ಟೇ ಅಲ್ಲದೇ, ಮಾರಾಟಗಾರರು ತಮ್ಮ ಜಾಹೀರಾತು ಬಜೆಟ್‌ನ ಶೇ.20ರಷ್ಟು ಹಣವನ್ನು ಜಾಹೀರಾತು ವಂಚನೆಗಾಗಿ ಖರ್ಚು ಮಾಡುತ್ತಿದ್ದಾರೆ ಎಂಬ ಅಂಶವನ್ನು ಕೂಡ ವರದಿ ಹೊರಹಾಕಿದೆ.

ಸುಧಾರಣೆಯ ಅಗತ್ಯ

ಸುಧಾರಣೆಯ ಅಗತ್ಯ

ಜಾಹೀರಾತು ವಂಚನೆ ತಡೆಗಟ್ಟುವ ವಿಧಾನಗಳಲ್ಲಿ ಇನ್ನು ಸುಧಾರಣೆ ತರಬೇಕು ಎಂದು 10 ಮಾರಾಟಗಾರರಲ್ಲಿ ಒಂಬತ್ತು ಮಂದಿ ಹೇಳಿದ್ದಾರೆ, ಆದರೆ, ಕಡಿಮೆ ದಂಡ ಹಾಗೂ ಉದ್ಯಮದ ನಿಯಮಗಳಲ್ಲಿರುವ ಪಾರದರ್ಶಕತೆ ಕೊರತೆ ಜಾಹೀರಾತು ವಂಚನೆಗೆ ಕಾರಣವಾಗುತ್ತೆ ಎಂದು ಶೇ.95ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ಆಡ್‌ಫ್ರಾಡ್‌ ಬೆಂಚ್‌ಮಾರ್ಕ್

ಆಡ್‌ಫ್ರಾಡ್‌ ಬೆಂಚ್‌ಮಾರ್ಕ್

ಈ ಜಾಹೀರಾತು ವಂಚನೆಯ ಅಂಶಗಳನ್ನು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿರುವ ಮೊಬೈಲ್‌ ಮಾರ್ಕೆಟಿಂಗ್‌ ಅಸೋಸಿಯೇಷನ್‌ ತನ್ನ ಜಾಗತಿಕ ಮಟ್ಟದ 'ಆಡ್ ಫ್ರಾಡ್ ಬೆಂಚ್‌ಮಾರ್ಕ್ ವರದಿ' ಎಂಬುದರಲ್ಲಿ ಉಲ್ಲೇಖಿಸಿದೆ. ಪ್ರಮುಖ ಸಂಶೋಧನಾ ಸಂಸ್ಥೆ ಡಿಸಿಷನ್ ಲ್ಯಾಬ್‌ನ ಸಹಯೋಗದೊಂದಿಗೆ ವರದಿಯನ್ನು ಪ್ರಕಟಿಸಲಾಗಿದೆ.

ಕುಕೀ ಸ್ಟಫಿಂಗ್‌ ಹೆಚ್ಚು

ಕುಕೀ ಸ್ಟಫಿಂಗ್‌ ಹೆಚ್ಚು

ಜಾಹೀರಾತು ವಂಚನೆಗಳಲ್ಲಿ ಕುಕೀ ಸ್ಟಫಿಂಗ್ (ಶೇ.74), ಆಡ್‌ವೇರ್ ಟ್ರಾಫಿಕ್ (ಶೇ.65), ಡೇಟಾ ವಂಚನೆ (ಶೇ.61) ಮತ್ತು ಆಡ್‌ ಇಂಜೆಕ್ಷನ್ (ಶೇ.54) ಪ್ರಮುಖವಾಗಿವೆ. ಇನ್ನು, ಬ್ಲಾಕ್‌ಚೇನ್ ಮತ್ತು ವಂಚನೆ ತಡೆಗಟ್ಟುವಿಕೆಯ ನಿಯಮದ ಬಗ್ಗೆ ಕೇವಲ ಶೇ.37ರಷ್ಟು ಜನರಿಗೆ ಮಾತ್ರ ತಿಳಿದಿದೆ ಎಂದು ವರದಿ ಹೇಳಿದೆ.

ಜಾಗೃತಿಯ ಕೊರತೆ

ಜಾಗೃತಿಯ ಕೊರತೆ

ಭಾರತದಲ್ಲಿ ಜಾಹೀರಾತು ವಂಚನೆ ಅಪಾಯಗಳ ಬಗ್ಗೆ ಜಾಗೃತಿ ತುಂಬಾ ಕಡಿಮೆಯಾಗಿದೆ. ಸುಮಾರು ಐದನೇ ಒಂದು ಭಾಗದಷ್ಟು ಮಾರಾಟಗಾರರು ತಮ್ಮ ಜಾಹೀರಾತು ವಂಚನೆ ಬಜೆಟ್ ಬಗ್ಗೆ ಸ್ಪಷ್ಟತೆಯನ್ನು ಹೊಂದಿಲ್ಲ. ಇದರಿಂದ ವಂಚನೆಯ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಎಂಎಂಎ ಇಂಡಿಯಾದ ಕಂಟ್ರಿ ಹೆಡ್ ಮೊನೆಕಾ ಖುರಾನಾ ಹೇಳಿದ್ದಾರೆ.

ಬ್ಲಾಕ್‌ಚೈನ್‌ ಸಹಾಯ

ಬ್ಲಾಕ್‌ಚೈನ್‌ ಸಹಾಯ

ವಂಚನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮೊಬೈಲ್ ಮಾರ್ಕೆಟಿಂಗ್ ಪರಿಸರ ವ್ಯವಸ್ಥೆಯಲ್ಲಿ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಸೃಷ್ಟಿಸಲು ಸಹಾಯ ಮಾಡುವ ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನಗಳ ಸಾಮರ್ಥ್ಯವನ್ನು ಮಾರುಕಟ್ಟೆದಾರರು ಅರ್ಥಮಾಡಿಕೊಳ್ಳಬೇಕು ಎಂದು ಖುರಾನಾ ಹೇಳಿದ್ದಾರೆ.

Best Mobiles in India

English summary
India Is Leading In Ads Fraud In Asia With 62 Percent Market Share.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+