2019ರ ಗ್ಲೋಬಲ್ ಇನ್ನೋವೇಶನ್ ಪಟ್ಟಿಯಲ್ಲಿ ಭಾರತಕ್ಕೆ 52ನೇ ಸ್ಥಾನ!

|

ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ ಪಟ್ಟಿಯಲ್ಲಿ ಭಾರತ ಐದು ಸ್ಥಾನಗಳು ಜಿಗಿತಕಾಣುವ ಮೂಲಕ 2019 ರಲ್ಲಿ 52ನೇ ಸ್ಥಾನಕ್ಕೆ ತಲುಪಿದೆ. ಜುಲೈ 24 ರಂದು ವಾಣಿಜ್ಯ ಸಚಿವಾಲಯ ಮತ್ತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಯಾದ ಜಿಐಐ ಪ್ರಕಾರ, ಭಾರತವು ಈಗ ಮಧ್ಯ ಮತ್ತು ದಕ್ಷಿಣ ಏಷ್ಯಾದ ಅತ್ಯಂತ ನವೀನ ಆರ್ಥಿಕತೆಯಾಗಿದೆ.

2019ರ ಗ್ಲೋಬಲ್ ಇನ್ನೋವೇಶನ್ ಪಟ್ಟಿಯಲ್ಲಿ ಭಾರತಕ್ಕೆ 52ನೇ ಸ್ಥಾನ!

ಹೌದು, ಆವಿಷ್ಕಾರ ಮತ್ತು ಹೊಸದಾಗಿ ಹೊರ ಹೊಮ್ಮುತ್ತಿರುವ ತಂತ್ರಜ್ಞಾನಗಳಲ್ಲಿ ಭಾರತವು ಉತ್ತಮ ಸಾಧನೆ ತೋರುತ್ತಿದ್ದು, ಜಾಗತಿಕ ಸೂಚ್ಯಂಕದಲ್ಲಿ 2015ರಲ್ಲಿದ್ದ ಸ್ಥಾನಕ್ಕಿಂತ 29 ಸ್ಥಾನಗಳ ಜಿಗಿತ ದಾಖಲಿಸಿದೆ. ಈ ಪಟ್ಟಿಯನ್ನು ಕಾರ್ನೆಲ್ ವಿವಿ, ಇನ್‌ಸೀಡ್‌ ಮತ್ತು ವಿಶ್ವ ಬೌದ್ಧಿಕ ಆಸ್ತಿಸಂಘಟನೆ (ಡಬ್ಲ್ಯುಐಪಿಒ) ಹಾಗೂ ಜಿಐಐ ನಾಲೆಜ್ಡ್ ಪಾರ್ಟನರ್‌ಗಳು ಸೇರಿ ಸಿದ್ಧಪಡಿಸುತ್ತವೆ.

129 ದೇಶಗಳನ್ನು ಒಳಗೊಂಡ 12ನೇ ಆವೃತ್ತಿಯ ರ್ಯಾಂಕ್‌ಗಳು ಬಿಡುಗಡೆಯಾಗಿದ್ದು, 80 ಅಂಶಗಳನ್ನು ಆಧರಿಸಿ ಸ್ಥಾನಗಳನ್ನು ನಿಗದಿ ಮಾಡಲಾಗುತ್ತದೆ. ಮೊಬೈಲ್‌ ಅಪ್ಲಿಕೇಷನ್ ಸೃಷ್ಟಿ , ಶಿಕ್ಷಣ,ವೆಚ್ಚಗಳು, ವೈಜ್ಞಾನಿಕ ಮತ್ತು ತಾಂತ್ರಿಕ ಅಂಶಗಳನ್ನು ರ್ಯಾಂಕಿಂಗ್ ವೇಳೆ ಪರಾಮರ್ಶೆ ಮಾಡಲಾಗುತ್ತದೆ. ಇವುಗಳಲ್ಲಿ ಭಾರತ ಕಳೆದ ಹಲವು ವರ್ಷಗಳಿಂದ ಉತ್ತಮ ಸಾಧನೆ ಮಾಡಿದೆ.

2019ರ ಗ್ಲೋಬಲ್ ಇನ್ನೋವೇಶನ್ ಪಟ್ಟಿಯಲ್ಲಿ ಭಾರತಕ್ಕೆ 52ನೇ ಸ್ಥಾನ!

ದೇಶದಲ್ಲಿ ಆವಿಷ್ಕಾರ ಸಂಸ್ಕೃತಿ ವ್ಯಾಪಕಗೊಳ್ಳುತ್ತಿದೆ. ನಮ್ಮ ಬಳಿ ಈಗ 85,000 ಪೇಟೆಂಟ್‌ಗಳಿವೆ. ಈ ಮೊದಲು ಇದ್ದ ಪೇಟೆಂಟ್‌ಗಳ ಸಂಖ್ಯೆ 16,000. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾರತದ ಆವಿಷ್ಕಾರಗಳನ್ನು ಜಿಐಐ ಅಂಶಕ್ಕೆ ಸೇರಿಸಬೇಕು ಎಂದು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಗೆ ಮನವಿ ಮಾಡಲಾಗುವುದು ಎಂದು ಸಚಿವ ಪಿಯೂಷ್ ಗೋಯೆಲ್ ಅವರು ತಿಳಿಸಿದ್ದಾರೆ.

ಟ್ಯಾಬ್ಲೆಟ್ ಕಾಲಕ್ಕೆ ಅಂತ್ಯ ಹಾಡಿದ ಸ್ಮಾರ್ಟ್‌ಫೋನ್!ಟ್ಯಾಬ್ಲೆಟ್ ಕಾಲಕ್ಕೆ ಅಂತ್ಯ ಹಾಡಿದ ಸ್ಮಾರ್ಟ್‌ಫೋನ್!

ಪ್ರಧಾನಿ ನರೇಂದ್ರ ಮೋದಿಯವರು ನಿಗದಿಪಡಿಸಿರುವ ಗುರಿಯಾಘಿ ಜಿಐಐನಲ್ಲಿ ಅಗ್ರ 50 ಸ್ಥಾನಗಳನ್ನು ಮುರಿಯುವ ಪ್ರಯತ್ನವನ್ನು ಭಾರತ ಮುಂದುವರಿಸಲಿದೆ ಎಂದು ಗೋಯಲ್ ಹೇಳಿದ್ದಾರೆ. ಅಗ್ರ 10 ಸ್ಥಾನಗಳನ್ನು ತಲುಪುವುದು ನಮ್ಮ 'ಅಂತಿಮ ಗುರಿ' ಎಂದು ಅವರು ಹೇಳಿದ್ದು, ಈ ಪಟ್ಟಿಯಲ್ಲಿ ಭಾರತ ಸೇರುವವರೆಗೂ ಸರ್ಕಾರ ವಿಶ್ರಮಿಸುವುದಿಲ್ಲ ಎಂದು ತಿಳಿಸಿದ್ದಾರೆ.

'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!'ಹಾನರ್ ವ್ಯೂ 20' ಮೇಲೆ 12 ಸಾವಿರ ಡಿಸ್ಕೌಂಟ್!..ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ!

ಇನ್ನು ಜಿಐಐ ( ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್) ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಸ್ವಿಜರ್ಲೆಂಡ್ ಕಾಯ್ದಿಟ್ಟುಕೊಂಡಿದೆ. ಟಾಪ್‌ 10 ಸ್ಥಾನದಲ್ಲಿಸ್ವೀಡನ್, ಅಮೆರಿಕ, ನೆದರ್ಲೆಂಡ್, ಬ್ರಿಟನ್‌, ಫಿನ್ಲೆಂಡ್, ಡೆನ್ಮಾರ್ಕ್‌, ಸಿಂಗಾಪುರ, ಜರ್ಮನಿ ಮತ್ತು ಇಸ್ರೇಲ್ ದೇಶಗಳು ಸ್ಥಾನ ಪಡೆದುಕೊಂಡಿದೆ. ಏಷ್ಯಾದಲ್ಲಿ ಭಾರತವು ನೂತನ ಆವಿಷ್ಕಾರ ಕೇಂದ್ರವಾಗಿ ಬೆಳೆಯುತ್ತಿದೆ.

Best Mobiles in India

English summary
India improved its ranking in the Global Innovation Index (GII) by five places to 52nd in 2019 from 57th position in the last year. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X