ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಫೋನ್‌ಗಳಿಗೆ ಇಷ್ಟೊಂದು ಬೇಡಿಕೆ ಇದೆಯಾ! ಏನಿದು ಅಚ್ಚರಿ!
ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನು ಯಾರ್ ತಗೋತಾರೇ ಅಂತಾ ನಿವು ಮೂಗು ಮುರಿಬಹುದು. ಆದರೆ ಸೆಕೆಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿ ಅನ್ನೊ ವಿಚಾರ ಇದೀಗ ಬಹಿರಂಗವಾಗಿದೆ. ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಖರೀದಿಸುವವರ ಸಂಖ್ಯೆ ಭಾರತದಲ್ಲಿ ಅಧಿಕವಾಗಿದೆ ಎನ್ನುತ್ತಿದೆ ಈ ವರದಿ.
ಹೌದು, ಭಾರತ ದೇಶವೂ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ವರ್ಷದಿಂದ ವರ್ಷಕ್ಕೆ 19% ಬೆಳವಣಿಗೆಯನ್ನು ಸಾಧಿಸಿದೆ ಎಂದು ವರದಿಯಾಗಿದೆ. ಹಾಗಾದ್ರೆ ಭಾರತದಲ್ಲಿ ಯಾವ ಬ್ರ್ಯಾಂಡ್‌ನ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳು ಜಾಸ್ತಿ ಮಾರಾಟವಾಗುತ್ತಿವೆ, ಸೆಕೆಂಡ್ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಬೇಡಿಕೆ ಬರುವುದಕ್ಕೆ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ. ಪ್ರತಿನಿತ್ಯವೂ ಹೊಸ ಸ್ಮಾರ್ಟ್‌ಫೋನ್‌ಗಳ ಭರಾಟೆ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದರ ನಡುವೆಯೂ ಕೆಲವು ಜನಪ್ರಿಯ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳು ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿವೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿಯಲ್ಲಿ ತಿಳಿಸಲಾಗಿದೆ.
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಜನಪ್ರಿಯತೆ
ಕೌಂಟರ್ ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ ಜಾಗತಿಕವಾಗಿ ಸೆಕೆಂಡ್ ಹ್ಯಾಂಡ್ ಫೋನ್ ಮಾರುಕಟ್ಟೆಯು 2022 ರಿಂದೀಚಿಗೆ ಹೆಚ್ಚು ಬೆಳವಣಿಗೆ ಸಾಧಿಸಿದೆ. ವರ್ಷದಿಂದ ವರ್ಷಕ್ಕೆ ಜಾಗತಿಕವಾಗಿ 5% ಬೆಳವಣಿಗೆ ಸಾದಿಸಿದೆ. ಇದೇ ಅವಧಿಯಲ್ಲಿ ಭಾರತ ದೇಶವು ಸೆಕೆಂಡ್ ಹ್ಯಾಂಡ್ ಫೋನ್‌ಗಳ ಮಾರುಕಟ್ಟೆಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಅಂದರೆ ಭಾರತೀಯ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ 19% ಬೆಳವಣಿಗೆ ಕಂಡುಬಂದಿದೆ ಎನ್ನಲಾಗಿದೆ.

ಚೀನಾದಲ್ಲಿ ತೀವ್ರ ಕುಸಿತ
ಇನ್ನು ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳ ವಿಷಯದಲ್ಲಿ ಚೀನಾ 17% ಕುಸಿತ ಕಂಡಿದೆ ಎಂದು ವರದಿಯಾಗಿದೆ. ಚೀನಾದಲ್ಲಿ ಕೋವಿಡ್ ನಂತರದ ನಿಯಮಗಳು, ಕೋವಿಡ್ ಜಿರೋ ಪಾಲಿಸಿ ಇದಕ್ಕೆಲ್ಲಾ ಕಾರಣ ಎಂದು ಹೇಳಲಾಗಿದೆ.
ಸೆಕೆಂಡ್ ಹ್ಯಾಂಡ್ ಫೋನ್ ಮಾರುಕಟ್ಟೆಯಲ್ಲಿ ಐಫೋನ್‌ಗಳಿಗೆ ಭಾರಿ ಬೇಡಿಕೆ
ಇನ್ನು ಕೌಂಟರ್ ಪಾಯಿಂಟ್ ರಿಸರ್ಚ್ ವರದಿಯ ಪ್ರಕಾರ, ಆಪಲ್ ಕಂಪೆನಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಜಾಗತಿಕವಾಗಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಈ ಮಾರುಕಟ್ಟೆಯಲ್ಲಿ ಆಪಲ್‌ನ ಪಾಲು ವರ್ಷದಿಂದ ವರ್ಷಕ್ಕೆ 16% ಬೆಳವಣಿಗೆ ಸಾಧಿಸಿದೆ ಎನ್ನಲಾಗಿದೆ. ಅಂದರೆ ಹೆಚ್ಚಿನ ಜನರು ಸೆಕೆಂಡ್ ಹ್ಯಾಂಡ್ ಐಫೋನ್‌ಗಳನ್ನು ಖರೀದಿಸುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ ಎನ್ನಬಹುದು.

ಸ್ಯಾಮ್‌ಸಂಗ್ ಬ್ರ್ಯಾಂಡ್‌ಗಿದೆಯಾ ಬೇಡಿಕೆ?
ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಫೋನ್‌ಗಳಿಗೆ ಬೇಡಿಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎನ್ನಲಾಗಿದೆ. ಅದರಂತೆ 2021 ರಲ್ಲಿ 28% ರಿಂದ 2022 ರಲ್ಲಿ 26% ಕ್ಕೆ ಇಳಿದಿದೆ ಎನ್ನಲಾಗಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಲಾಗಿದೆ, ಇದರಲ್ಲಿ ಮುಖ್ಯ ಕಾರಣ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಊಹೆಗೂ ನಿಲುಕದ ಬೆಲೆಯಲ್ಲಿ ಐಫೋನ್‌ಗಳನ್ನು ಖರೀದಿಸುವುದಕ್ಕೆ ಇರುವ ಅವಕಾಶ ಎನ್ನಲಾಗಿದೆ.
ಸೆಕೆಂಡ್ ಮಾರುಕಟ್ಟೆಯಲ್ಲಿ 4G ಫೋನ್‌ಗಳಿಗೆ ಬೇಡಿಕೆ ಕುಸಿತ
ಭಾರತವೂ ಸೇರಿದಂತೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ 4G ಫೋನ್‌ಗಳಿಗೆ ಬೇಡಿಕೆ ಕುಸಿತಗೊಂಡಿದೆ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಜನರು 5G ಫೋನ್‌ಗಳನ್ನು ಖರೀದಿಸಲು ಬಯಸುತ್ತಾರೆ. ಇದೇ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಒಟ್ಟು ಫೋನ್‌ಗಳಲ್ಲಿ 13% ಫೋನ್‌ಗಳು 5G ಫೋನ್‌ಗಳಾಗಿವೆ. ಸದ್ಯ 5G ಸ್ಮಾರ್ಟ್‌ಫೋನ್ ಹಂಚಿಕೆಯು ಗಣನೀಯವಾಗಿ ಹೆಚ್ಚಾದಂತೆ 4G ಸ್ಮಾರ್ಟ್‌ಫೋನ್‌ಗಳು ಬೇಡಿಕೆ ಕಳೆದುಕೊಳ್ಳಲಿವೆ ಎಂದು ಕೌಂಟರ್‌ಪಾಯಿಂಟ್ ರಿಸರ್ಚ್ ವರದಿಯಲ್ಲಿ ಹೇಳಲಾಗಿದೆ.
ಒಪ್ಪೋ, ವಿವೋಗಿದೆಯಾ ಸ್ಥಾನ
ಒಟ್ಟಾರೆ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ, ಒಪ್ಪೋ ಮತ್ತು ವಿವೋ ಫೋನ್‌ಗಳು 3% ಮಾರುಕಟ್ಟೆ ಪಾಲು ಪಡೆದುಕೊಂಡಿವೆ. ಇನ್ನು ಹುವಾವೇ ಫೋನ್‌ಗಳ ಮಾರುಕಟ್ಟೆ ಪಾಲು 2% ಇದೆ. ಆದರೆ "ಇತರರು" 17% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications








