ಭಾರತದ ಟೆಲಿಕಾಂಗಳಲ್ಲಿ ಜಿಯೋನೆ ಬೆಸ್ಟ್!..ಆದರೆ, ವಿಶ್ವದಲ್ಲಿ ಭಾರತ ಲಾಸ್ಟ್!!
ಜಿಯೋ ಕಾರಣದಿಂದ ಅತ್ಯಂತ ಕಡಿಮೆ ಬೆಲೆಗೆ ಹೈ ಭಾರತೀಯರಿಗೆ ಸ್ಪೀಡ್ ಡೇಟಾ ಸಿಕ್ಕಿದರೂ ಕೂಡ ಇಂಟರ್‌ನೆಟ್ ಡೌನ್‌ಲೋಡ್ ವಿಷಯದಲ್ಲಿ ಭಾರತ ಇತರೆ ರಾಷ್ಟ್ರಗಳಿಗಿಂತ ಭಾರೀ ಹಿಂದುಳಿದಿದೆ.!!
ಜಿಯೋ ಬಂದ ನಂತರ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹೈ ಸ್ಪೀಡ್ ಡೇಟಾ ಸಿಗುತ್ತಿದೆ ಎಂದು ನೀವೆಂದುಕೊಂಡಿದ್ದರೆ ಅದು ತಪ್ಪಾಗಬಹುದು.! ಏಕೆಂದರೆ, ಜಿಯೋ ಕಾರಣದಿಂದ ಅತ್ಯಂತ ಕಡಿಮೆ ಬೆಲೆಗೆ ಹೈ ಭಾರತೀಯರಿಗೆ ಸ್ಪೀಡ್ ಡೇಟಾ ಸಿಕ್ಕಿದರೂ ಕೂಡ ಇಂಟರ್‌ನೆಟ್ ಡೌನ್‌ಲೋಡ್ ವಿಷಯದಲ್ಲಿ ಭಾರತ ಇತರೆ ರಾಷ್ಟ್ರಗಳಿಗಿಂತ ಭಾರೀ ಹಿಂದುಳಿದಿದೆ.!!
ಹೌದು, ಜಾಗತಿಕ ಇಂಟರ್‌ನೆಟ್ ಪರೀಕ್ಷಾ ಸಂಸ್ಥೆ ಓಕ್ಲಾ ಈ ಬಗ್ಗೆ ಅಧ್ಯಯನ ನಡೆಸಿದ್ದು, ವಿಶ್ವದಾಧ್ಯಂತ ನೆಟ್‌ವರ್ಕ್ ಕವರೇಜ್ ದೃಷ್ಟಿಯಿಂದ ಉತ್ತಮ ಸ್ಥಾನವನ್ನೇ ಪಡೆದಿರುವ ಭಾರತ ಡೌನ್‌ಲೋಡಿಂಗ್ ವೇಗದಲ್ಲಿ ಮಾತ್ರ ಇನ್ನೂ ಹಿಂದುಳಿದ ದೇಶವಾಗಿಯೇ ಉಳಿದಿದೆ.! ಇಂಟರ್‌ನೆಟ್ ಡೌನ್‌ಲೋಡ್ ವೇಗದಲ್ಲಿ ಭಾರತ 109 ನೇ ಸ್ಥಾನ ಪಡೆದಿದೆ.!!

ಇನ್ನು ದೇಶದ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೋಲಿಸಿದರೆ ರಿಲಯನ್ಸ್ ಜಿಯೋ ರಾಷ್ಟ್ರ ವ್ಯಾಪ್ತಿ ಹೆಚ್ಚಿನ ಕವರೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನ ಹೇಳಿದ್ದು, ಹಾಗಾದರೆ, ಭಾರತದಲ್ಲಿ ಇಂಟರ್‌ನೆಟ್ ಪೂರೈಕೆ ಬಗ್ಗೆ ನಡೆದ ಇನ್ನಿತರ ಅಧ್ಯಯನಗಳಲ್ಲಿ ತಿಳಿದುಬಂದಿರುವ ಕುತೋಹಲ ಅಂಶಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

109 ನೇ ಸ್ಥಾನದಲ್ಲಿ ಭಾರತ!!
ಇಂಟರ್‌ನೆಟ್ ಸಂಪರ್ಕ ವೇಗದಲ್ಲಿ 3ಜಿ ಮತ್ತು 4ಜಿ ಎಲ್‌ಟಿಇಯನ್ನು ಒಟ್ಟಿಗೇ ಪರಿಗಣಿಸಿದರೆ ವಿಶ್ವದಲ್ಲಿ ಭಾರತ 109 ನೇ ಸ್ಥಾನದಲ್ಲಿದೆ. ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಅಂತರ್ಜಾಲ ಸಂಪರ್ಕ ವೇಗದ ವಿಚಾರದಲ್ಲಿ ಭಾರತ ಸಾಧಿಸುವುದಕ್ಕೆ ತುಂಬಾ ಇದೆ.!!

ಸರಾಸರಿ ಡೌನ್‌ಲೋಡ್ ವೇಗ 16.6 ಎಂಬಿ!!
ಓಪನ್ ಸಿಗ್ನಲ್ ಸಂಸ್ಥೆ ನಡೆಸಿರುವ ಅಧ್ಯಯನ ಪ್ರಕಾರ ವಿಶ್ವದ ಸರಾಸರಿ ಡೌನ್‌ಲೋಡ್ ವೇಗ ಸೆಕೆಂಡಿಗೆ ಕೇವಲ 16.6 ಎಂಬಿಗಳು ಎಂದು ತಿಳಿಸಿದೆ. ನೆಟ್‌ವರ್ಕ್ ತಲಪುವಿಕೆಯಲ್ಲಿ ದಕ್ಷಿಣ ಕೊರಿಯಾ ಹಾಗೂ ಇಂಟರ್‌ನೆಟ್ ವೇಗದ ವಿಚಾರದಲ್ಲಿ ಸಿಂಗಾಪುರ ಅಗ್ರ ಸ್ಥಾನ ಪಡೆದಿದ್ದರೂ ಇವುಗಳ ಸರಾಸರಿ ಡೌನ್‌ಲೋಡ್ ವೇಗ 50 ಎಂಬಿಗಿಂತ ಕಡಿಮೆ ಇದೆ.!!

ಹೆಚ್ಚಲಿದೆ 4ಜಿ ಸಂಪರ್ಕ
ಸಮೀಕ್ಷೆಯ ಪ್ರಕಾರ ದೇಶದ 84 ಶೇ. ಭೂಭಾಗ 4ಜಿ ಎಲ್‌ಟಿಇ ಸಂಪರ್ಕ ಪಡೆದಿದೆ.! 2016 ಕ್ಕೆ ಹೋಲಿಸಿದರೆ, 2017 ರಲ್ಲಿ ಭಾರತದ ಶೇ.10 ರಷ್ಟು ಹೆಚ್ಚಿನ ಭೂಭಾಗಕ್ಕೆ 4ಜಿ ಸಂಪರ್ಕ ದೊರಕಿದೆ. 2018 ರಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಹಣ ಹೂಡಿಕೆಯಾಗಲಿದ್ದು, 4ಜಿ ಸಂಪರ್ಕ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಸಮೀಕ್ಷೆಗಳು ಹೇಳಿವೆ.

4ಜಿ ಎಲ್‌ಟಿಇ ಸಂಪರ್ಕ!!
ಇಂಟರ್'ನೆಟ್ ತಲುಪುವಿಕೆ ದೃಷ್ಟಿಯಿಂದ ನೋಡಿದಾಗ ಭಾರತದಲ್ಲಿ ಶೇ.32 ಪಾಯಿಂಟ್‌ಗಳೊಂದಿಗೆ ಜಿಯೋ ಅಗ್ರಸ್ಥಾನದಲ್ಲಿದೆ. ದೇಶದಲ್ಲಿನ ಇತರ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಹೋಲಿಸಿದರೆ 4ಜಿ ಎಲ್‌ಟಿಇಯಲ್ಲಿ ರಿಲಯನ್ಸ್ ಜಿಯೋ ರಾಷ್ಟ್ರ ವ್ಯಾಪ್ತಿ ಹೆಚ್ಚಿನ ಕವರೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದೆ.!!

ಟೆಲಿಕಾಂಗಳು ಸುಳ್ಳು ಹೇಳುತ್ತಿವೆ.!!
ಗ್ರಾಹಕರ ಹಕ್ಕುಗಳಿಗಾಗಿ ಕೆಲಸ ಮಾಡುವ ಸ್ವಯಂಪ್ರೇರಿತ ಸಂಸ್ಥೆ " ಕಸ್ಟಮರ್ ವಾಯ್ಸ್" ನಡೆಸಿದ ಅಧ್ಯಯನವೊಂದು ದೇಶದಲ್ಲಿ ಬಳಕೆದಾರರಿಗೆ ಟೆಲಿಕಾಂ ಕಂಪೆನಿಗಳು ಹೇಳಿಕೊಂಡಷ್ಟು ಇಂಟರ್ನೆಟ್ ವೇಗ ನೀಡುವುದಿಲ್ಲ ಎಂದು ಹೇಳಿದೆ.!ಅವರು ಹೇಳಿಕೊಳ್ಳುವ ವೇಗಕ್ಕಿಂತ ಕಡಿಮೆ ಡೇಟಾ ಒದಗಿಸುತ್ತಾರೆ ಎಂದು ದಾಖಲೆ ಸಮೇತ ತೋರಿಸಿದೆ.!!

ಹ್ಯಾಕರ್‌ಗಳ ಕಣ್ಣಿಗೆ ನೀವು ಗುರಿಯಾಗುತ್ತಿರುವುದು ಈ ಕಾರಣದಿಂದಲೇ!?
ಅತ್ಯಂತ ಗೋಪ್ಯವಾಗಿ ಇಡಬೇಕಾದ ಪಾಸ್‌ವರ್ಡ್‌ಗಳ ಬಗ್ಗೆ ಜನರು ನಿರ್ಲಕ್ಷ ತೋರುತ್ತಾರೆ ಎಂದು ಈಗಾಗಲೇ ಹಲವು ಅಧ್ಯಯನಗಳು ಹೇಳಿವೆ.! ಆದರೆ, ಸೈಬರ್ ಕ್ರಿಮಿನಲ್‌ಗಳ ಉಪಟಳ ಹೆಚ್ಚಾದಂತೆಯೂ ಕೂಡ ಪಾಸ್‌ವರ್ಡ್ ವಿಷಯದಲ್ಲಿ ಜನರು ಯಾವುದೇ ರೀತಿಯಲ್ಲಿ ಬದಲಾಗಿಲ್ಲ ಎಂಬುದು ಮತ್ತೊಂದು ವರದಿಯಲ್ಲಿ ದಾಖಲಾಗಿದೆ.!!
ಹೌದು, ಜನರು ಪಾಸ್‌ವರ್ಡ್‌ಗಳ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ಎಷ್ಟರ ಮಟ್ಟಿಗೆ ಇದೆ ಎಂದರೆ, ಸೈಬರ್ ಕ್ರಿಮಿನಲ್ ಮಾತ್ರವಲ್ಲದೇ ಸಾಮಾನ್ಯ ಕಂಪ್ಯೂಟರ್ ಬಳಕೆದಾರನು ಸಹ ಹಲವರ ಪಾಸ್‌ವರ್ಡ್ ಇದು ಎಂದು ತಿಳಿಯಬಹುದಂತೆ.!! ಹಾಗಾದರೆ, ಏನಿದು ಶಾಕಿಂಗ್ ವರದಿ? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!
ಶೇ 40ರಷ್ಟು ಇಂಟರ್‌ನೆಟ್ ಬಳಕೆದಾರರು ಒಮ್ಮೆ ಪಾಸ್‌ವರ್ಡ್ ಇಟ್ಟರೆ, ಎಷ್ಟು ವರ್ಷಗಳಾದರೂ ಅದನ್ನು ಪುನಃ ಬದಲಾಯಿಸಲು ಆಸಕ್ತಿ ತೋರುವುದಿಲ್ಲವಂತೆ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!
ಶೇ 37ರಷ್ಟು ಮಂದಿ ಮಾತ್ರ ತಿಂಗಳಿಗೊಮ್ಮೆ ಪಾಸ್‌ವರ್ಡ್ ಬದಲಾಯಿಸಲು ಆಸಕ್ತಿ ತೋರಿಸುತ್ತಿದ್ದಾರಂತೆ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!
ಶೇ 60 ರಷ್ಟು ಇಂಟರ್‌ನೆಟ್ ಬಳಕೆದಾರರು ಒಂದೇ ರಹಸ್ಯ ಪದವನ್ನು ನಾಲ್ಕೈದು ಕಡೆ ಬಳಸುತ್ತಿದ್ದಾರೆ. ಉದಾ: (ಫೇಸ್‌ಬುಕ್, ಮೇಲ್, ಮೊಬೈಲ್ ಫೋನ್)

ಪಾಸ್‌ವರ್ಡ್ ಶಾಕಿಂಗ್ ವರದಿ!!
ಶೇ 25ರಷ್ಟು ಮಂದಿ ತಮ್ಮ ಮನೆ ಹೆಸರನ್ನೇ ಪಾಸ್‌ವರ್ಡ್ ಮಾಡಿಕೊಂಡಿದ್ದಾರಂತೆ.


ಪಾಸ್‌ವರ್ಡ್ ಶಾಕಿಂಗ್ ವರದಿ!!
ಶೇ 90ರಷ್ಟು ಉದ್ಯೋಗಿಗಳು ತಮ್ಮ ಖಾತೆಗಳು ಮತ್ತು ಡಿವೈಸ್‌ಗಳಿಗಡ ಬಳಸುತ್ತಿರುವ ಪಾಸ್‌ವರ್ಡ್‌ಗಳನ್ನು ಕೇವಲ 6 ಗಂಟೆಯಲ್ಲಿ ಹ್ಯಾಕ್ ಮಾಡಬಹುದಂತೆ.!!

ಪಾಸ್‌ವರ್ಡ್ ಶಾಕಿಂಗ್ ವರದಿ!!
ರೋಮ್ಯಾಂಟಿಕ್ ಪದಗಳನ್ನು ಪಾಸ್‌ವರ್ಡ್‌ಗಳಾಗಿ, ತಮ್ಮ ಸಾಕು ಪ್ರಾಣಿಗಳ ಹೆಸರುಗಳನ್ನೇ ಪಾಸ್‌ವರ್ಡ್‌ಗಳಾಗಿ ಬಳಸಿಕೊಳ್ಳಲು ಹಲವರು ಆಸಕ್ತಿ ತೋರಿಸುತ್ತಿದ್ದಾರಂತೆ.!!


Click it and Unblock the Notifications








