ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?!..ನೀವೆಷ್ಟು ಸುರಕ್ಷಿತ?
ಪ್ರತಿದಿನವೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಆನ್‌ಲೈನ್ ಮೋಸದ ಸುದ್ದಿಗಳಿಗೆ ಪೂರಕವಾಗುವಂತೆ ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ ಎಂದು ವರದಿಯೊಂದು ಹೇಳಿದೆ.
ಪ್ರತಿದಿನವೂ ಪತ್ರಿಕೆಗಳಲ್ಲಿ ಪ್ರಕಟವಾಗುವ ಆನ್‌ಲೈನ್ ಮೋಸದ ಸುದ್ದಿಗಳಿಗೆ ಪೂರಕವಾಗುವಂತೆ ಜಾಗತಿಕ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿ ಇದೆ ಎಂದು ವರದಿಯೊಂದು ಹೇಳಿದೆ. ಜಾಗತಿಕವಾಗಿ ಸೈಬರ್ ದಾಳಿ ಮತ್ತು ಇಂಟರ್‌ನೆಟ್ ಹ್ಯಾಕಿಂಗ್ ಕುರಿತು ಅಧ್ಯಯನ ನಡೆಸುವ ಸೈಮಂಟಿಕ್ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ಜಾಗತಿಕವಾಗಿ ಸೈಬರ್ ದಾಳಿ ಬೆದರಿಕೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದರೆ, ಸೈಬರ್ ದಾಳಿ ಬೆದರಿಕೆಯಲ್ಲಿ ಅಮೆರಿಕ ಮೊದಲ ಸ್ಥಾನ ಹಾಗೂ ಚೀನಾ ಎರಡನೇ ಸ್ಥಾನದಲ್ಲಿದೆ. ವಿಶ್ವದ ಟೆಕ್ ದೈತ್ಯ ರಾಷ್ಟ್ರ ಅಮೆರಿಕಾದಲ್ಲಿಯೇ ಸೈಬರ್ ದಾಳಿ ಬೆದರಿಕೆ ಹೆಚ್ಚಾಗಿದೆ ಎಂದು ಸೈಮಂಟಿಕ್ ಏಷ್ಯಾ ಪೆಸಿಫಿಕ್ ವಿಭಾಗದ ಮಾರುಕಟ್ಟೆ ಮುಖ್ಯಸ್ಥ ತರುಣ್ ಕೌರ ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಭಾರತವು ಸೈಬರ್ ದಾಳಿ ಬೆದರಿಕೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಇಮೇಲ್ ಮತ್ತು ವೆಬ್‌ಲಿಂಕ್ ದುರುಪಯೋಗ ಪ್ರಕರಣಗಳಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ. ಮೊಬೈಲ್‌ಗಳಲ್ಲಿ ವೈರಸ್‌ನಲ್ಲೂ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಸೈಬರ್ ದಾಳಿಯನ್ನು ಎದುರಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.

ಸುಲಭ ಪಾಸ್‌ವರ್ಡ್ ನೀಡದಿರಿ.!!
ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಗೂಗಲ್ ಹೇಳುತ್ತಿದೆ. ಹೌದು, ಸುಲಭವಾಗಿ ನೆನಪಿನಲ್ಲಿರಲಿ ಎನ್ನೋ ಕಾರಣಕ್ಕೆ ಬಹಳ ಸುಲಭವಾದ ಪಾಸ್‌ವರ್ಡ್‌ನ್ನು ಬಳಸುವವರೇ ಹೆಚ್ಚಿದ್ದು, ಸೈಬರ್ ಕ್ರಿಮಿನಲ್‌ಗಳಿಗೆ ಇದನ್ನು ಕ್ರಾಕ್ ಮಾಡಲು ಕ್ಷಣ ಮಾತ್ರದಲ್ಲಿ ಸಾಧ್ಯವಾಗುತ್ತದೆ.!! 111111, 22222222, 33333333, 44444444, 55555555, 66666666, 77777777, 0987654321, 987654321 ಇಂತಹ ಪಾಸ್‌ವರ್ಡ್ ಬಳಸಬೇಡಿ.

ಆಪ್ ಡೌನ್‌ಲೋಡ್ ಮಾಡಬೇಕಾದರೆ ಹುಷಾರು.!
ಗೂಗಲ್ ಆಪ್‌ಸ್ಟೋರ್‌ನಲ್ಲಿರುವ ಆಪ್‌ಗಳ ಬಗ್ಗೆ ಎಚ್ಚರವಿರಲಿ. ಏಕೆಂದರೆ ಆಪ್‌ಸ್ಟೋರ್‌ನಲ್ಲಿರುವ ಶೇಕಡ 3 ಪರ್ಸೆಂಟ್ ಆಪ್‌ಗಳು ನಂಬಿಕೆಗೆ ಅರ್ಹವಾಗಿಲ್ಲ. !ಆದರೆ, ಗೂಗಲ್ ಮಾತ್ರ ಇಂತಹ ಆಪ್‌ಗಳನ್ನು ಕಂಡುಹಿಡಿದು ನಿಷೇಧಿಸಲು ಸಾಧ್ಯವಿಲ್ಲ. ಹಾಗಾಗಿ, ಆಪ್ ಡೌನ್‌ಲೋಡ್ ಮಾಡಬೇಕಾದರೆ ನೀವೆ ಎಚ್ಚರಿಕೆಯಿಂದರಬೇಕು.!

ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ.!
ಯಾವುದೋ ಗೊತ್ತಿಲ್ಲದ ಇ-ಮೇಲ್ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮನ್ನು ಸೈಬರ್ ಕ್ರಿಮಿನಲ್‌ಗಳು ಸಂಪರ್ಕಿಸಲು ಸಾಧ್ಯ. ಇದರಿಂದ ನಿಮ್ಮ ಮಾಹಿತಿ ಅವರ ಪಾಲಾಗುವುದು ಕ್ಷಣಮಾತ್ರದಲ್ಲಿ ಸಾಧ್ಯ.! ಹಾಗಾಗಿ, ಅಪರಿಚಿತರು ಕಳುಹಿಸಿರುವ ತಿಳಿಯದ ಇ-ಮೇಲ್ ಲಿಂಕ್ ಕ್ಲಿಕ್ ಮಾಡದಿರಿ ಎಂದು ಗೂಗಲ್ ಹೇಳಿದೆ.!

ಪಾರ್ನ್ ನೋಡುವಾಗ ಎಚ್ಚರ!?
ಜನರೆ ಮುಗಿಬಿದ್ದು ಭೇಟಿ ನೀಡುತ್ತುರವ ವೆಬ್‌ಸೈಟ್‌ಗಳೆಂದರೆ ಅವು ಪಾರ್ನ್‌ಸೈಟ್. ಇದನ್ನೇ ಎನ್‌ಕ್ಯಾಶ್ ಮಾಡಿಕೊಂಡು ಜನರಿಗೆ ಮೋಸಗೊಳಿಸುವ ಸಾಧ್ಯತೆ ಹೆಚ್ಚು. ಕೆಲವೊಂದು ಪಾರ್ನ್‌ಸೈಟ್‌ಳನ್ನು ಬಿಟ್ಟರೆ, ಉಳಿದ ಬಹುತೇಕ ಪಾರ್ನ್‌ಸೈಟ್‌ಗಳು ಮೋಸದ ಜಾಲದಲ್ಲಿ ತೊಡಗಿವೆ ಹುಷಾರು.!

ಅಧಿಕೃತ ವೆಬ್ ತಾಣವೇ?
ಆನ್‌ಲೈನ್ ಬ್ಯಾಂಕಿಂಗ್ ಇರಲಿ ಅಥವಾ ಇನ್ನಾವುದೇ ವೆಬ್‌ತಾಣವೇ ಇರಲಿ. ಅವುಗಳನ್ನು ಆರಂಭಿಸುವುದಕ್ಕೂ ಮುನ್ನ ನೀವು ಬಳಸುತ್ತಿರುವ ತಾಣ ಅಧಿಕೃತವಾದುದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಕೆಲವು ನಕಲಿ ಆನ್‌ಲೈನ್ ತಾಣಗಳು ನಮ್ಮ ಮಾಹಿತಿ ಪಡೆಯಲು ಲಾಗಿನ್ ಆಗಲು ಪ್ರೇರೇಪಿಸುತ್ತವೆ ಅವುಗಳಿಂದ ದೂರವಿರಿ.


ಸ್ಮಾರ್ಟ್‌ಫೋನ್ ರಕ್ಷಣೆ!!
ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್ ಅನ್ನು ವೈರಸ್‌ಗಳಿಂದ ರಕ್ಷಣೆ ಮಾಡುವುದು ಅತ್ಯಗತ್ಯ. ಹ್ಯಾಕರ್‌ಗಳಿಂದ ಹುಟ್ಟಿರುವ ಇಂತಹ ವೈರಸ್ ತಂತ್ರಾಂಶಗಳು ಬ್ಯಾಂಕ್ ಖಾತೆಯ ಮಾಹಿತಿ ಪಡೆಯುವ ಸಾಧ್ಯತೆ ಇರುತ್ತದೆ.!ಹಾಗಾಗಿ, ಆಂಟಿ ವೈರಸ್ ಉಪಯೋಗಿಸಬೇಕು ಜೊತೆಗೆ ಬ್ಯಾಂಕಿಂಗ್ ಹಿಸ್ಟರಿಯನ್ನು ಡಿಲೀಟ್ ಮಾಡಬೇಕು.


Click it and Unblock the Notifications








