ದೇಶದ ವೇಗದ ಸುಪರ್‌ ಕಂಪ್ಯೂಟರ್‌ ಪರಮ್‌ ಯುವ - 2 ಲೋಕಾರ್ಪಣೆ

Posted By:

ದೇಶದ ಹೆಮ್ಮೆಯ ಸುಪರ್‌ ಕಂಪ್ಯೂಟರ್‌ ಪರಮ್‌ ಯುವ - 2 ಲೋಕಾರ್ಪಣೆಗೊಂಡಿದೆ. ಈ ಮೂಲಕ ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.ಯುವ -2 ಭಾರತದ ವೇಗದ ಮತ್ತು ವಿಶ್ವದಲ್ಲಿ 62ನೇ ಅತೀ ವೇಗದ ಸುಪರ್‌ ಕಂಪ್ಯೂಟರ್‌ ಎಂಬ ಹೆಗ್ಗಳಿಕೆಯನ್ನು ಪಡದಿದೆ.


ಪುಣೆಯ ಸಿ.ಡಾಕ್‌ ವಿಜ್ಞಾನಿಗಳು ಈ ಸುಪರ್‌ ಕಂಪ್ಯೂಟರ್‌ನ್ನು ನಿರ್ಮಾಣ ಮಾಡಿದ್ದಾರೆ.,ಹವಾಮಾನ,ಭೂಕಂಪ,ವೈಮಾನಿಕ ಇಂಜಿನಿಯರಿಂಗ್‌,ಔಷಧ ಕ್ಷೇತ್ರಗಳ ಹೆಚ್ಚಿನ ಅಧ್ಯಯನಕ್ಕೆ ಈ ಸುಪರ್‌ ಕಂಪ್ಯೂಟರ್‌ ಬಳಕೆ ಮಾಡಲಾಗುತ್ತದೆ.

ದೇಶದ ವೇಗದ ಸುಪರ್‌ ಕಂಪ್ಯೂಟರ್‌ ಪರಮ್‌ ಯುವ - 2 ಲೋಕಾರ್ಪಣೆ


ಪರಮ್ ಎಂದರೆ ಪರಮ - ಎಲ್ಲಕ್ಕಿಂತ ಉತ್ತಮವಾದದ್ದು ಎಂದು ಅರ್ಥ.  ಸಂಸ್ಕೃತದಿಂದ ಈ ಪದವನ್ನು ಆರಿಸಲಾಗಿದೆ. 1991ರಲ್ಲಿ ಬಿಡುಗಡೆಗೊಂಡ ಪರಮ್- 8000 ಭಾರತದ ಪ್ರಥಮ ಸುಪರ್‌ ಕಂಪ್ಯೂಟರ್‌ ಪರಮ್-ಯುವ 2008ಲ್ಲಿ ಬಿಡುಗಡೆಯಾಯಿತು. ಈ ಸುಪರ್‌ ಕಂಪ್ಯೂಟರ್‌ ಪ್ರತಿ ಕ್ಷಣಕ್ಕೆ 5,40,00,00,00,00,000 ಆಂದರೆ 5,40,000 ಶತಕೋಟಿ ಸೂಚನೆಗಳನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot