ದೇಶದ ಮೊದಲ ಇಂಜಿನ್​ರಹಿತ ರೈಲಲ್ಲಿ ಒಮ್ಮೆ ಪ್ರಯಾಣಿಸಲೇಬೇಕು!..ಏಕೆ ಗೊತ್ತಾ?

  |

  ಆಧುನಿಕ ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ತರಬಲ್ಲ ವಿನೂತನ ಟ್ರೈನ್ 18 ಹಳಿಗಿಳಿದು ಪ್ರಯೋಗಾರ್ಥ ಓಡಾಟ ಕಾಣಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಮೇಡ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿರುವ ದೇಶದ ಮೊದಲ ಇಂಜಿನ್​ರಹಿತ ರೈಲು (ಮೆಟ್ರೋ ಮಾದರಿ) 'ಟ್ರೈನ್ 18' ಸಿದ್ಧವಾಗಿದ್ದು, ವಾರದಲ್ಲೇ ಒಳಗಾಗಿ ಪ್ರಯೋಗಾರ್ಥ ಓಡಾಟ ಕಾಣಲಿದೆ.

  3 ದಶಕಗಳ ಕಾಲ ಕಾರ್ಯ ನಿರ್ವಹಿಸಿರುವ ಶತಾಬ್ದಿ ರೈಲುಗಳ ಬದಲಾಗಿ ಅತ್ಯಾಧುನಿಕ, ಆಕರ್ಷಕ ಟ್ರೇನ್ 18 ಹಳಿಗಿಳಿಸುವುದರ ಕುರಿತು ಭಾರತೀಯ ರೈಲ್ವೆ ಇಲಾಖೆ ಈ ಹಿಂದೆ ಘೋಷಣೆ ಮಾಡಿತ್ತು. ಅದರಂತೆ ಇದೀಗ ದೇಶದ ಮೊದಲ ಲೋಕೋಮೊಟಿವ್ ಇಲ್ಲದೇ ಚಲಿಸುವ ಈ ರೈಲು ತಯಾರಾಗಿದೆ. ಇನ್ನು ಎರಡನೇ 'ಟ್ರೈನ್ 18' ಗಾಡಿಯು ಮಾರ್ಚ್‌ ವೇಳೆಗೆ ಸಿದ್ಧವಿರಲಿದೆ.

  ದೇಶದ ಮೊದಲ ಇಂಜಿನ್​ರಹಿತ ರೈಲಲ್ಲಿ ಒಮ್ಮೆ ಪ್ರಯಾಣಿಸಲೇಬೇಕು!..ಏಕೆ ಗೊತ್ತಾ?

  ಶತಾಬ್ದಿ ರೈಲುಗಳನ್ನು ಟ್ರೈನ್ 18 ರೈಲುಗಳಾಗಿ ಬದಲಾಯಿಸಲು ಮುಂದಾಗಿರುವ ರೈಲ್ವೆ ಇಲಾಖೆ, ದೆಹಲಿ-ಭೋಪಾಲ್‌, ಬೆಂಗಳೂರು-ಚೆನ್ನೈ, ಮುಂಬಯಿ-ಅಹಮದಾಬಾದ್‌ ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದೆ ಎನ್ನಲಾಗಿದೆ. ಹಾಗಾದರೆ, ದೇಶದ ಮೊದಲ ಇಂಜಿನ್​ರಹಿತ ರೈಲಿನ ವಿಶೇಷತೆಗಳೇನು? ರೈಲಿನ ತಂತ್ರಜ್ಞಾನಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಹೇಗಿದೆ ಟ್ರೇನ್ 18 ರೈಲು?

  ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಗೊಂಡಿರುವ ಈ ರೈಲಿನ ವಿನ್ಯಾಸ ಬುಲೆಟ್ ಟ್ರೇನ್ ಮಾದರಿಯಲ್ಲಿದೆ. ಇಷ್ಟೇ ಅಲ್ಲದೇ ಅತ್ಯಾಧುನಿಕ ಒಳಾಂಗಣಗಳನ್ನು ರೈಲಿನಲ್ಲಿ ಒದಗಿಸಲಾಗುತ್ತಿದೆ. ಆರಾಮದಾಯಕ ಪ್ರಯಾಣ ಹಾಗೂ ಲಗೆಜ್ ಇಡಲು ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

  160 ಕಿ.ಮೀ ವೇಗದ ಟ್ರೈನ್!

  ಈಗಿರುವ ಸಾಮಾನ್ಯ ರೈಲುಗಳಲ್ಲಿ ಬೋಗಿಗಳನ್ನು ಇಂಜಿನ್ ಎಳೆದೊಯ್ಯುತ್ತದೆ. ಆದರೆ, ಟ್ರೇನ್ 18ನಲ್ಲಿ ಪ್ರತ್ಯೇಕ ಇಂಜಿನ್ ಇರುವುದಿಲ್ಲ. ಬದಲಾಗಿ ಮೆಟ್ರೋ ರೈಲು ಮಾದರಿಯಲ್ಲಿ ಬೋಗಿಯ ಕೆಳಗಡೆಯೇ ಇಂಜಿನ್ ಇರಲಿದೆ. ಈ ಟ್ರೈನಿನ ವೇಗ ಶತಾಬ್ದಿ ಟ್ರೈನ್ ವೇಗಕ್ಕಿಂತ ಹೆಚ್ಚಿರಲಿದ್ದು, ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

  ನಿರ್ವಹಣೆ ವೆಚ್ಚವೂ ಕಡಿಮೆ

  ಪ್ರತ್ಯೇಕ ಇಂಜಿನ್ ಇಲ್ಲದಿರುವ ಕಾರಣ ಈ ಟ್ರೈನ್ ವೇಗ ಸಾಮರ್ಥ್ಯ ಹೆಚ್ಚಳವಾಗಿದೆ. ಹಾಗೆಯೇ ಈ ಟ್ರೈನ್ ನಿರ್ವಹಣೆ ವೆಚ್ಚವೂ ಕಡಿಮೆ ಎನ್ನಲಾಗಿದೆ.ರೈಲಿನ ನಿರ್ಮಾಣದ ಮೂಲಕ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾದ ಹೊರೆ ತಗ್ಗಿದ್ದು, 170 ಕೋಟಿ ರೂ. ತಗಲಬೇಕಿದ್ದ ರೈಲು ವೆಚ್ಚವು 100ಕೋಟಿ ರೂ.ಗೆ ಇಳಿಕೆ ಕಂಡಿದೆ ಎನ್ನಲಾಗಿದೆ.

  ಸ್ಟೇನ್​ಲೆಸ್ ಸ್ಟೀಲ್ ಬೋಗಿ

  ಟ್ರೇನ್ 18ನ ಬೋಗಿಗಳನ್ನು ಸ್ಟೇನ್​ಲೆಸ್ ಸ್ಟೀಲ್​ನಿಂದ ನಿರ್ವಿುಸಲಾಗಿದೆ. ಇದರಲ್ಲಿ ಒಟ್ಟು 16 ಬೋಗಿಗಳಿರಲಿದ್ದು, ಎಲ್ಲವೂ ಹವಾನಿಯಂತ್ರಿತ ಆಗಿರಲಿವೆ. ಪ್ರತಿ ಬೋಗಿಯಲ್ಲಿ 56 ರಿಂದ 78 ಪ್ರಯಾಣಿಕರು ಪ್ರಯಾಣಿಸಬಹುದು. ಪ್ರತಿ ಬೊಗಿಯ ನಿರ್ಮಾಣಕ್ಕಾಗಿ 5 ರಿಂದ 6 ರೂಪಾಯಿಗಳನ್ನು ವೆಚ್ಚಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

  ಟ್ರೈನಿನ ವಿಶೇಷತೆಗಳು ಯಾವುವು?

  ಮೇಕ್ ಇನ್ ಇಂಡಿಯಾ ಯಶೋಗಾಥೆಯ ಈ ಟ್ರೈನ್ ಅತ್ಯುತ್ತಮ ವೇಗವರ್ಧಕ ಹಾಗು ಬ್ರೇಕಿಂಗ್ ವ್ಯವಸ್ಥೆ ಹೊಂದಿದೆ. ಈ ರೈಲಿನಲ್ಲಿ ಎಲ್‌ಇಡಿ ಬೆಳಕಿನ ವ್ಯವಸ್ಥೆ , ವೈಫೈ ಮತ್ತು ಜಿಪಿಎಸ್ ಆಧಾರಿತ ಪ್ರಯಾಣಿಕರ ವ್ಯವಸ್ಥೆ ಇರಲಿದೆ. ಬೋಗಿಗಳಲ್ಲಿ ಪ್ರತ್ಯೇಕ ಕಿಟಕಿಗಳನ್ನು ಅಳವಡಿಸುವ ಬದಲು ಪೂರ್ಣ ಬೋಗಿಗೆ ಕಿಟಕಿಯನ್ನು ನೀಡಿರುವುದು ಟ್ರೈನಿನ ವಿಶೇಷತೆಗಳಾಗಿವೆ.

  ಹಳಿ ಮೇಲೆ ಇಳಿಯುವುದು?

  100 ಕೋಟಿ ರು ವೆಚ್ಚದಲ್ಲಿ ಇಂಟಿಗ್ರಲ್ ಕೋಚ್ ಕಾರ್ಖಾನೆಯಲ್ಲಿ ನಿರ್ಮಿಸಲಾದ ಈ ರೈಲು ಚಾಲನೆಗೆ ಲೋಕೋಪೈಲೆಟ್​ಗಳಿಗೆ ಪ್ರತ್ಯೇಕ ತರಬೇತಿ ಅಗತ್ಯವಿದೆ. ವಾಣಿಜ್ಯ ಸಂಚಾರಕ್ಕೂ ಮುನ್ನ ರೈಲ್ವೆ ಸುರಕ್ಷತಾ ಆಯುಕ್ತರಿಂದ ಒಪ್ಪಿಗೆ ಪಡೆದು ಈ ರೈಲು ಹಳಿಯ ಮೇಲೆ ಓಡಲಿದೆ. ಈ ರೈಲಿನ ಮೂಲಕ ಪ್ರಯಾಣದ ಅವಧಿಯನ್ನು 10-15%ರಷ್ಟು ತಗ್ಗಿಸಲು ಚಿಂತನೆ ನಡೆದಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The first train set conceptualised, designed and manufactured completely in India, which looks like a bullet train, will be released for trial in a week’s time.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more