'5G' ತರುವಲ್ಲಿ ವಿಶ್ವಕ್ಕೆ ಸೆಡ್ಡುಹೊಡೆಯುತ್ತಿದೆ ಭಾರತ!

|

ಅಂತರ್ಜಾಲದಲ್ಲಿ 2G, 3G ನಂತರ 4G ಬರುವ ವೇಳೆಗೆ ಹಲವು ವರ್ಷಗಳೇ ಕಳೆದಿದ್ದವು. ಆದರೆ, ಅಂತರ್ಜಾಲದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಕಂಡರೆ ಇನ್ನೊಂದು ವರ್ಷದಲ್ಲೇ 4G ಕಾಲವನ್ನು 5G ತಂತ್ರಜ್ಞಾನ ಆವರಿಸಿಕೊಳ್ಳಲಿದೆ. 2019 ರ ಅಂತ್ಯಕ್ಕೆ ವಿಶ್ವಕ್ಕೆ 5ಜಿ ಕಾಲಿಡಲಿದ್ದು, ಇದೇ ಮೊದಲ ಬಾರಿಗೆ ಭಾರತ ಕೂಡ ವಿಶ್ವದ ಜೊತೆ ಗುರುತಿಸಿಕೊಳ್ಳಲಿದೆ ಎನ್ನಲಾಗಿದೆ.

ವಿಶ್ವದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳೆಲ್ಲವೂ ಭಾರತದ ಮೊಬೈಲ್ ಮಾರುಕಟ್ಟೆಯ ಬೆಳವಣಿಗೆಯ ವೇಗವನ್ನು ಗಮನಿಸುತ್ತಿವೆ. ಲಕ್ಷಾಂತರ ಕೋಟಿ ಮಾರುಕಟ್ಟೆಯಾಗಿರುವ ಭಾರತ ಕೂಡ ಅವುಗಳ 5G ಮಾರುಕಟ್ಟೆ ಯಾಗಿರಲಿದೆ. ಹಾಗಾಗಿ, ಭಾರತ ಕೂಡ ವಿಶ್ವದ ಜೊತೆಯಲ್ಲಿಯೇ ಭವಿಷ್ಯದ 5G ತಂತ್ರಜ್ಞಾನವನ್ನು ಹೊಂದಲಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

'5G' ತರುವಲ್ಲಿ ವಿಶ್ವಕ್ಕೆ ಸೆಡ್ಡುಹೊಡೆಯುತ್ತಿದೆ ಭಾರತ!

2ಜಿ, 3ಜಿ ತಂತ್ರಜ್ಞಾನ ಬಳಕೆದಾರರನ್ನು ತಲುಪಲು ಸಾಕಷ್ಟು ಸಮಯವನ್ನು ತೆಗೆದುಕೊಂಡವು. ಈಗ 4ಜಿ ಜಮಾನ ಆರಂಭವಾಗಿದೆ. ಆದರೆ, 5ಜಿ ತಂತ್ರಜ್ಞಾನ ತ್ವರಿತವಾಗಿ ಮೊಬೈಲ್ ಮಾರುಕಟ್ಟೆಯನ್ನು ಆಕ್ರಮಿಸಲಿದೆ ಎಂದಿದ್ದಾರೆ. ಹಾಗಾದರೆ, ಭಾರತದಲ್ಲಿ 5ಜಿ ತಂತ್ರಜ್ಞಾನದ ಅಭಿವೃದ್ದಿ ವೇಗ ಹೇಗೆ ಸಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಮುಂದಿನ ವರ್ಷದಲ್ಲೇ 5G!

ಮುಂದಿನ ವರ್ಷದಲ್ಲೇ 5G!

ಭಾರತದಲ್ಲಿ 2019ರ ಆರಂಭದಲ್ಲೇ ಪ್ರಾಯೋಗಿಕವಾಗಿ 5ಜಿ ಸೇವೆ ಆರಂಭಗೊಳ್ಳಲಿದೆ. 2019ರ ಅರ್ಧಭಾಗದ ಹೊತ್ತಿಗೆ ತರಂಗಗುಚ್ಛಗಳ ಹರಾಜು ನಡೆಯಲಿದ್ದು, 2020ರ ಹೊತ್ತಿಗೆ 5ಜಿ ಸೇವೆಯು ಕಮರ್ಷಿಯಲ್ ಆಗಿ ಆರಂಭವಾಗಲಿದೆ. ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ನಿಗದಿತ ಸಮಯದೊಳಗೆ ದೇಶದಲ್ಲಿ ವ್ಯಾಪಿಸಲು ಭಾರತ ಸರಕಾರವೂ ತಯಾರಾಗಿದೆ.

5ಜಿ ಸ್ಮಾರ್ಟ್‌ಫೋನ್‌ ತಯಾರಿಕೆ!

5ಜಿ ಸ್ಮಾರ್ಟ್‌ಫೋನ್‌ ತಯಾರಿಕೆ!

2019ರ ಜನವರಿಯಿಂದಲೇ ಭಾರತಕ್ಕೆ ಪ್ರಾಯೋಗಿಕವಾಗಿ 5ಜಿ ಸ್ಮಾರ್ಟ್‌ಫೋನ್‌ಗಳು ಬರಲಿವೆ ಎಂದು ಉದ್ಯಮ ತಜ್ಞರು ಹೇಳುತ್ತಿದ್ದಾರೆ. ದಕ್ಷಣ ಕೊರಿಯಾ ಮೂಲದ ಪ್ರಮುಖ ಮೊಬೈಲ್ ತಯಾರಕ ಕಂಪನಿ ಸ್ಯಾಮ್‌ಸಂಗ್‌ ಹಾಗೂ ಚೀನಾದ ಒನ್‌ಪ್ಲಸ್‌, ಹುವಾವೆ, ವಿವೊ, ಒಪ್ಪೊ, ಕ್ಸಿಯೋಮಿ ಕಂಪನಿಗಳು 5ಜಿ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಗೆ ಈಗಾಗಲೇ ಸಜ್ಜಾಗಿವೆ.

ವಿಶ್ವದ ಜೊತೆ ಭಾರತದ ಹೆಜ್ಜೆ!

ವಿಶ್ವದ ಜೊತೆ ಭಾರತದ ಹೆಜ್ಜೆ!

ಒಂದು ವೇಳೆ ಟೆಲಿಕಾಂ ತಜ್ಞರು ಅಂದಾಜಿಸಿದಂತೆ ನಡೆದರೆ, ಇದೆ ಮೊದಲ ಬಾರಿಗೆ ಭಾರತ ಕೂಡ ವಿಶ್ವದ ಜೊತೆಯಲ್ಲಿಯೇ ಭವಿಷ್ಯದ 5G ತಂತ್ರಜ್ಞಾನವನ್ನು ಹೊಂದಲಿದೆ. ಅಮೆರಿಕಾ ಹಾಗೂ ದಕ್ಷಿಣಾ ಕೋರಿಯಾಗಳು 5G ಬಳಕೆಗೆ ಸಜ್ಜಾಗಿರುವ ಮಾತಿದೆ. ಇನ್ನು 5G ತರಲು ಭಾರತದಲ್ಲಿ ಏರ್‌ಟೆಲ್, ಜಿಯೋ ಕಂಪೆನಿಗಳು ಈಗಾಗಲೇ ಪೈಪೋಟಿಗೆ ಬಿದ್ದಿರುವುದನ್ನು ನೋಡಬಹುದು.

ಜಿಯೋ ಹೆಜ್ಜೆ ಹೇಗಿದೆ?

ಜಿಯೋ ಹೆಜ್ಜೆ ಹೇಗಿದೆ?

2019-20ಕ್ಕೆ ಭಾರತದಲ್ಲಿ 5ಜಿ ಎಕೊಸಿಸ್ಟಮ್ ಸೃಷ್ಟಿಯಾಗಬಹುದು. ಆದರೆ, ಅಗ್ಗದ ದರದ ಮತ್ತು ದೊಡ್ಡ ಪ್ರಮಾಣದ 5ಜಿ ಸ್ಮಾರ್ಟ್‌ಫೋನ್‌ಗಳ ಸದ್ದು 2021ರಿಂದಷ್ಟೇ ಸಾಧ್ಯ ಎಂದು ರಿಲಯನ್ಸ್ ಜಿಯೋ ಅಂದಾಜು ಮಾಡಿದೆ. ಆದರೆ, 5G ತರುವಲ್ಲಿ ಯಾವುದೇ ಕಾರಣಕ್ಕೂ ಹಿಂದುಳಿಯಬಾರದು ಎಂದು ಜಿಯೋ ವಿಶ್ವ ಮಟ್ಟದಲ್ಲಿ 5Gತರಲು ಹೋರಾಟ ನಡೆಸುತ್ತಿದೆ.

4ಜಿ ಸ್ಮಾರ್ಟ್‌ಫೋನ್‌ ಜಮಾನ ಅಲ್ಪಾಯು?

4ಜಿ ಸ್ಮಾರ್ಟ್‌ಫೋನ್‌ ಜಮಾನ ಅಲ್ಪಾಯು?

5G ತಂತ್ರಜ್ಞಾನದ ಇತ್ತೀಚಿನ ವರದಿಗಳನ್ನು ಗಮನಿಸಿದರೆ 4ಜಿ ಸ್ಮಾರ್ಟ್‌ಫೋನ್‌ ಜಮಾನ ಅಲ್ಪಾಯು ಎಂದೆನಿಸುತ್ತದೆ. 2019ರ ಅಂತ್ಯಕ್ಕೆ ಅಥವಾ 2020ರ ಆರಂಭದ ಹೊತ್ತಿಗೆ 5ಜಿ ಸ್ಮಾರ್ಟ್‌ಫೋನ್‌ಗಳು ಭಾರತಕ್ಕೆ ಬರಲಿವೆ. 2020ರ ಮುಕ್ತಾಯದ ಹೊತ್ತಿಗೆ ದೊಡ್ಡ ಪ್ರಮಾಣದಲ್ಲಿ 5ಜಿ ಸ್ಮಾರ್ಟ್‌ಫೋನ್‌ಗಳು ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡಲಿವೆ.

5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!!

5G ನೆಟ್‌ವರ್ಕ್‌ ವೇಗ ಹೇಗಿರಲಿದೆ ಗೊತ್ತಾ?..ನೀವು ಊಹಿಸಲು ಸಾಧ್ಯವಿಲ್ಲ!!

ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗ ಏರ್‌ಟೆಲ್‌ ಹಾಗೂ ಚೀನಾದ ಮೊಬೈಲ್ ತಯಾರಿಕ ಕಂಪೆನಿ ಸಂಸ್ಥೆ ಹುವಾವೇ ಕಂಪೆನಿಗಳು ಜೊತೆಸೇರಿ ಇತ್ತೀಚಿಗಷ್ಟೇ ಭಾರತದಲ್ಲಿ 5ಜಿ ನೆಟ್‌ವರ್ಕ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿವೆ. ಈ ಪರೀಕ್ಷೆಯಲ್ಲಿ ಇಂಟರ್‌ನೆಟ್ ಡೌನ್‌ಲೋಡ್ ವೇಗ ಸೆಕೆಂಡಿಗೆ 3 ಗಿಗಾಬೈಟ್‌ವರೆಗೆ ತಲುಪಿದೆ.!!

ನಾವೆಲ್ಲರೂ ಮೊಬೈಲ್‌ಗಳ ಬಳಕೆಯಲ್ಲಿ ಈವರೆಗೆ ನಾಲ್ಕು ತಲೆಮಾರುಗಳ ತಂತ್ರಜ್ಞಾನವನ್ನು ನೋಡಿರುವುದರಿಂದ ಇದೀಗ 5G ತಂತ್ರಜ್ಞಾನವನ್ನು ಕಾತುರದಿಂದ ಕಾಯುತ್ತಿದ್ದೇವೆ. ಈಗಿನ 4G ತಲೆಮಾರಿನ ತಂತ್ರಜ್ಞಾನಕ್ಕಿಂತ ಮತ್ತಷ್ಟು ಅಭಿವೃದ್ಧಿಯಾಗಿ, ಹೊಸ ರೂಪ ಪಡೆದುಕೊಂಡು ಬರುವ 5G ಎಲ್ಲರಿಗೂ ಆಶ್ಚರ್ಯ ಮೂಡಿಸಲು ಸಜ್ಜಾಗಿದೆ.!!

ಗುಣಮಟ್ಟದ ಕರೆ, ಹೆಚ್ಚು ವೇಗದ ಡೇಟಾ, ಐಪಿ ಆಧಾರಿತ ಹಲವು ಸೌಲಭ್ಯಗಳನ್ನು ಪ್ರಸ್ತುತ ಬಳಕೆಯಲ್ಲಿರುವ 4ಜಿ ನೆಟ್‌ವರ್ಕ್‌ ನೀಡುತ್ತಿರುವುದರಿಂದ 5G ನೆಟ್‌ವರ್ಕ್‌ ವೇಗಕ್ಕೆ ಎಲ್ಲರೂ ಆಶ್ಚರ್ಯದಿಂದ ಕಾಯುತ್ತಿದ್ದಾರೆ. ಹಾಗಾದರೆ, ಭವಿಷ್ಯದ 5G ನೆಟ್‌ವರ್ಕ್‌ ವೇಗ ಹೇಗಿರಲಿದೆ? 5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು ಎಂಬುದನನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಸಂವಹನ ವೇಗ 100ಪಟ್ಟು ಹೆಚ್ಚು!!

ಸಂವಹನ ವೇಗ 100ಪಟ್ಟು ಹೆಚ್ಚು!!

5ಜಿ ನೆಟ್‌ವರ್ಕ್‌ ತಂತ್ರಜ್ಞಾನ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಬಂದರೆ ಸಂವಹನ ವೇಗ 4ಜಿಗಿಂತ 100ಪಟ್ಟು ಹೆಚ್ಚಾಗಲಿದೆ. 4ಜಿ ನೆಟ್‌ವರ್ಕ್‌ನ ಸೌಲಭ್ಯಗಳ ಜತೆಗೆ, OFDM, MC-CDMA, LAS-CDMA, UWB, LMDS ನೆಟ್‌ವರ್ಕ್ ಮತ್ತು IPV6ನಂತಹ ಹಲವು ಸೌಲಭ್ಯಗಳು ಬಳಕೆದಾರರಿಗೆ ಸಿಗಲಿವೆ.!

ವರ್ಚುವಲ್ ರಿಯಾಲಿಟಿ!!

ವರ್ಚುವಲ್ ರಿಯಾಲಿಟಿ!!

ಪರಸ್ಪರ ಸಂವಹನ ಸಾಧಿಸುವ ಡಿಜಿಟಲ್‌ ಉಪಕರಣಗಳು ಆಗ್ಯುಮೆಂಟ್ ರಿಯಾಲಿಟಿ ಹಾಗೂ ವರ್ಚುವಲ್ ರಿಯಾಲಿಟಿಯಂತಹ ತಂತ್ರಜ್ಞಾನ ಬಳಕೆ ಮತ್ತಷ್ಟು ಹೆಚ್ಚಾಗಲಿದೆ. ಮನೆ, ಕಾರುಗಳೆಲ್ಲವೂ ಸ್ಮಾರ್ಟ್‌ ಆಗಲಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ವೇಗ ಸಮರ್ಥವಾಗಿ ಅಂತರ್ಜಾಲ ಬಳಕೆ ಮಾಡುವ ಸೌಲಭ್ಯವನ್ನು ಈ ನೆಟ್‌ವರ್ಕ್‌ ಕಲ್ಪಿಸಲಿದೆ.!!

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ!!

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ!!

ಮಿಲಿ ಸೆಕೆಂಡ್‌ನಲ್ಲಿ ಅಂತರ್ಜಾಲ ಸಂಪರ್ಕ ಪಡೆಯುವ ತಂತ್ರಿಕತೆಯನ್ನು 5G ನೆಟ್‌ವರ್ಕ್‌ ಹೊಂದಿದೆ. ಅಂದರೆ, ನೀವು ಕಣ್ಣುಮುಚ್ಚಿ ಕಣ್ಣು ಬಿಡುವುದರ ಒಳಲಾಗಿ ಅಂತರ್ಜಾಲ 10 ಬಾರಿ ಲೋಡಿಂಗ್ ಆಗಿರಲಿದೆ. ಹಾಗಾಗಿಯೇ, 5G ನೆಟ್‌ವರ್ಕ್‌ ವೇಗಕ್ಕೆ ವಿಶ್ವವೇ ಆಶ್ಚರ್ಯದಿಂದ ಕಾಯುತ್ತಿದೆ.!!

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು!!

ಸಿನಿಮಾ ಡೌನ್‌ಲೋಡ್ ಆಗಲು ಸೆಕೆಂಡ್ಸ್ ಸಾಕು!!

ಭವಿಷ್ಯದ 5G ನೆಟ್‌ವರ್ಕ್‌ ಬಳಕೆಗೆ ಬಂದರೆ ಎರಡೂವರೆ ಗಂಟೆ ಅವಧಿಯ ಚಲನಚಿತ್ರ ಡೌನ್‌ಲೋಡ್ ಆಗಲು ಕೇವಲ 5 ಸೆಕೆಂಡುಗಳಲ್ಲಿ ಸಾಕಾಗುತ್ತವೆ. ಪ್ರಸ್ತುತ ಜಿ ನೆಟ್‌ವರ್ಕ್‌ ಸಾಮರ್ಥ್ಯ 100ಎಂಬಿಪಿಎಸ್‌ನಿಂದ 1ಜಿಬಿವರೆಗೆ ಇದ್ದರೆ ಇದರ ಹತ್ತು ಪಟ್ಟು ವೇಗವನ್ನು 5G ನೆಟ್‌ವರ್ಕ್‌ ಪಡೆಯಲಿದೆ ಎಂದು ಹೇಳಲಾಗಿದೆ.!!

5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು?

5G ನೆಟ್‌ವರ್ಕ್‌ನಿಂದ ಆಗುವ ಲಾಭಗಳೇನು?

ಏಕ ಕಾಲದಲ್ಲಿ ಒಂದೇ ಆಕ್ಸೆಸ್‌ ಪಾಯಿಂಟ್‌ನಿಂದ ವಿವಿಧ ಡಿವೈಸ್‌ಗಳಿಗೆ ಅಡೆತಡೆಯಿಲ್ಲದ ಸಂಪರ್ಕವನ್ನು 5G ನೆಟ್‌ವರ್ಕ್‌ನಿಂದ ನಾವು ಪಡೆಯಬಹುದಾಗಿದೆ. ವೈ-ಫೈ ಸಂಪರ್ಕದಲ್ಲಿ ಸೆಕೆಂಡ್‌ಗೆ 10ಜಿಬಿವರೆಗೆ ವೇಗವನ್ನು ಪಡೆಯುವ ತಂತ್ರಜ್ಞಾನ, ಕಡಿಮೆ ಬ್ಯಾಟರಿ ಬಳಕೆ ಬಳಕೆ ಮಾಡಿಕೊಳ್ಳಲಿದೆ ಎಂಬುದೇ ವಿಶೇಷ.!!

Best Mobiles in India

English summary
For 5G adoption, Indian government needs to create demand for it: Report. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X