Just In
- 1 hr ago ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- 2 hrs ago AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- 17 hrs ago Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- 18 hrs ago iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
Don't Miss
- Finance ಇನ್ಮುಂದೆ ದುಬಾರಿಯಾಗಲಿದೆ ಎಸ್ಬಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ನಿರ್ವಹಣಾ ಶುಲ್ಕ
- Sports RCB vs KKR: ಚಿನ್ನಸ್ವಾಮಿಯಲ್ಲಿ ಮತ್ತೊಂದು ರೋಚಕ ಪಂದ್ಯ; ಸಂಭಾವ್ಯ ಆಡುವ 11ರ ಬಳಗ, ಲೈವ್ ಸ್ಟ್ರೀಮಿಂಗ್
- News DK Suresh Assets: ಕೋಟಿ ಕೋಟಿ ಒಡೆಯ ಡಿಕೆ ಸುರೇಶ್! ಇಲ್ಲೆಲ್ಲಾ ಇದೆ ಜಮೀನು, ಮನೆ, ಸಾಲ!
- Automobiles Jonty Rhodes: ರಾಯಲ್ ಎನ್ಫೀಲ್ಡ್ ಬೈಕ್ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Movies ಮಂಗಳ ಗ್ರಹದಿಂದ ಬಂದಿದ್ದಾರೆ ಎಂಬಷ್ಟು ವಿಚಿತ್ರ ವ್ಯಕ್ತಿ ರಾಹುಲ್ ಗಾಂಧಿ ; ಕಂಗನಾ ರಣಾವತ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾರತೀಯರ ಭಾಷೆಗಳು ಅಲೆಕ್ಸಾಗೆ ಸವಾಲು!
"ಭಾರತಕ್ಕಾಗಿ ಅಲೆಕ್ಸಾವನ್ನು ಅಭಿವೃದ್ಧಿಪಡಿಸುವುದು ಭಾಷಾ ಸಂಸ್ಕರಣೆಗೆ ಅತ್ಯಂತ ಸವಾಲಿನ ಅನುಭವ, ಆದರೆ ಅತ್ಯಂತ ಲಾಭದಾಯಕ ಅನುಭವವಾಗಿದೆ" ಎಂದು ಅಲೆಕ್ಸಾ ಎಐ ಮತ್ತು ನ್ಯಾಚುರಲ್ ಅಂಡ್ ರ್ಸ್ಟ್ಯಾಂಡಿಂಗ್ ಮುಖ್ಯಸ್ಥ ಉಪಾಧ್ಯಕ್ಷ ಪ್ರೇಮ್ ನಟರಾಜನ್ ಅವರು ಹೇಳಿದ್ದಾರೆ. ಜಗತ್ತಿನ ಇತರ ಭಾಷೆಗಳಲ್ಲಿ ಸಹಜ ಭಾಷಾ ಅರಿವಿನ ಪ್ರಕ್ರಿಯೆಯನ್ನು ಅಲೆಕ್ಸಾ ಒಂದೇ ಭಾಷೆಯಾಗಿ ಪರಿಗಣಿಸುತ್ತಿದ್ದರೆ, ಭಾರತದಲ್ಲಿ ಹಾಗಲ್ಲ. ಸಿಸ್ಟಂನ ಪ್ರತಿಯೊಂದು ವಾಕ್ಯಕ್ಕೂ ಹಲವು ಭಾಷೆಗಳ ಪದ ಭಂಡಾರವನ್ನು ಸಂಸ್ಕರಿಸುವ ಅನಿವಾರ್ಯತೆ ಅದಕ್ಕಿದೆ ಎಂದಿದ್ದಾರೆ.
ಭಾರತವು ಭಾಷೆಗಳು, ಶಬ್ದಕೋಶ, ಉಪಭಾಷೆಗಳು ಮತ್ತು ಉಚ್ಚಾರಣೆಗಳ ನಂಬಲಾಗದ ವೈವಿಧ್ಯತೆಯನ್ನು ಹೊಂದಿದೆ. ಭಾರತದಲ್ಲಿ ಲಭ್ಯವಾಗಿರುವ ಭಾಷಾ ವೈವಿಧ್ಯತೆ, ಪದ ಭಂಡಾರ, ಆಡುನುಡಿಗಳು ಮತ್ತು ಉಚ್ಚಾರಣೆಗಳಿವೆ. ಅದರ ಜತೆಗೆ, ಭಾರತೀಯರು ವಿಶಿಷ್ಟವಾಗಿ ಹಲವು ಭಾಷೆಗಳನ್ನು ಸೇರಿಸಿಕೊಂಡು ಮಾತನಾಡುತ್ತಾರೆ. ಭಾರತೀಯರು ಅಲೆಕ್ಸಾಕ್ಕೆ ಮಿಶ್ರ ಭಾಷೆಯ ಪ್ರಶ್ನೆಗಳನ್ನು ಹಾಕುತ್ತಾ ಉತ್ತರ ಪಡೆಯಲು ಬಯಸುತ್ತಿದ್ದಾರೆ. ಇದು ಭಾರತದಲ್ಲಿ ವಿಶಿಷ್ಟವಾದ ವರ್ತನೆ. ಇದು ಅತ್ಯಂತ ಲಾಭದಾಯಕ ಅನುಭವವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲೆಕ್ಸಾಗೆ ಭಾರತದಲ್ಲಿ ಎದುರಾಗಿರುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ, ಪ್ರಾದೇಶಿಕ ಭಾಷೆಗಳಲ್ಲಿನ ಪದಗಳಿಗಾಗಿ ನಿರ್ದಿಷ್ಟವಾದ ಮತ್ತು ಮಾದರಿಯಾದ ಸ್ಪೆಲ್ಲಿಂಗ್ ಇಲ್ಲದಿರುವುದು, ಇಲ್ಲಿ ವಿಭಿನ್ನ ಕಾಗುಣಿತ ಮತ್ತು ಉಚ್ಚಾರಣೆಗಳಿರುತ್ತವೆ. ಈ ಸವಾಲು ಪರಿಹಾರಕ್ಕಾಗಿ ಅಲೆಕ್ಸಾ ಭಾರತದಲ್ಲಿ ಧ್ವನ್ಯಾತ್ಮಕ ಹುಡುಕಾಟಕ್ಕಾಗಿ ದೊಡ್ಡ ಪದಕೋಶವನ್ನೇ ತನ್ನ ಒಡಲಲ್ಲಿರಿಸಿಕೊಂಡಿದೆ. ಇದರಿಂದ ಭಾಷಾ ಸಂಸ್ಕರಣೆ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಭಾರತೀಯರಿಗಾಗಿ ಅಲೆಕ್ಸಾ ಅಭಿವೃದ್ಧಿಪಡಿಸುವುದು ಅತಿದೊಡ್ಡ ಸವಾಲಿನ ಕಾರ್ಯವಾಗಿತ್ತು ಎಂದು ಅವರು ಹೇಳಿದ್ದಾರೆ.
ಪ್ರಪಂಚದ ಇತರ ಭಾಗಗಳಲ್ಲಿ, ಅಲೆಕ್ಸಾ ನೈಸರ್ಗಿಕ ಭಾಷಾ ತಿಳುವಳಿಕೆಯನ್ನು ಏಕ ಭಾಷಾ ಮಾಡೆಲಿಂಗ್ ಅಥವಾ ಸಂಸ್ಕರಣೆಯಂತೆ ನೋಡುತ್ತದೆ. ಆದರೆ ಭಾರತದಲ್ಲಿ ಇದು ವ್ಯವಸ್ಥೆಯ ಪ್ರತಿಯೊಂದು ಘಟಕಕ್ಕೂ ಬಹುಭಾಷಾ ಮಾಡೆಲಿಂಗ್ ಅಥವಾ ಸಂಸ್ಕರಣೆ ಎಂದು ಭಾವಿಸುತ್ತದೆ.ಭಾರತದಂತಹಾ ದೇಶದ ವಿವಿಧತೆಯ ನಾಡಿನಲ್ಲಿ ಸವಾಲಿನ ಸಮಸ್ಯೆಗಳು ಬಂದಾಗಲೆಲ್ಲಾ, ಜಗತ್ತಿನಾದ್ಯಂತ ಇರುವ ಇತರರಿಗೂ ಇರಬಹುದಾದ ಸಮಸ್ಯೆಗಳನ್ನು ಪರಿಹರಿಸಬಲ್ಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಅದು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ.
2017ರ ಅಕ್ಟೋಬರ್‌ನಲ್ಲಿ ಯುಎಸ್, ಯುಕೆ ಮತ್ತು ಜರ್ಮನಿಗಳಲ್ಲಿ ಧ್ವನಿ ಸಹಾಯಕವನ್ನು ಪ್ರಾರಂಭಿಸಿದ ನಂತರ ಭಾರತವು ನಾಲ್ಕನೇ ದೇಶವಾಗಿ ಅಲೆಕ್ಸಾ ಸೇವೆಯನ್ನು ಪಡೆಯಿತು. ಅಮೆಜಾನ್ ಕೃತಕ ಬುದ್ಧಿಮತ್ತೆ ಆಧಾರಿತ (ಎಐ) ಅಲೆಕ್ಸಾ ತಂತ್ರಾಂಶವನ್ನು ತನ್ನ ಇಕಾಮರ್ಸ್, ಕ್ಲೌಡ್, ಮ್ಯೂಸಿಕ್ ಮತ್ತು ಮನರಂಜನಾ ಸೇವೆಗಳಿಗೆ ಸಂಪೂರ್ಣವಾಗಿ ವಿಸ್ತರಿಸಲು ಕೆಲಸ ಮಾಡುತ್ತಿದೆ. ಈ ಅಲೆಕ್ಸಾ ಸೇವೆಯನ್ನು ಭವಿಷ್ಯದಲ್ಲಿ ಎಲ್ಲಾ ಸಹಾಯಕ ಕಾರ್ಯಗಳಿಗೂ ಉಪಯೋಗವಾಗುವಂತೆ ಮಾಡುವುದು ಅಮೆಜಾನ್ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999