ದೇಶದ ಮೊದಲ ಮಾನವಸಹಿತ ಗಗನಯಾನ ಯೋಜನೆಗೆ 10,000 ಕೋಟಿ!!

|

ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಐತಿಹಾಸಿಕ 'ಗಗನಯಾನ' ಯೋಜನೆಗೆ ಭಾರತ ಸರ್ಕಾರ ಒಪ್ಪಿಗೆ ನೀಡಿದೆ. 2022ರ ವೇಳೆಗೆ ದೇಶದ ಚೊಚ್ಚಲ ಮಾನವಸಹಿತ ಗಗನಯಾನಕ್ಕೆ ಮೂವರು ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳಿಹಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸಂಪುಟ ಒಪ್ಪಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಸ್ವಾತಂತ್ರ್ಯೋತ್ಸವದ ಭಾಷಣದ ಸಂದರ್ಭದಲ್ಲಿ 2022 ರೊಳಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದ್ದರು. ಅದಾದ ಕೇವಲ ನಾಲ್ಕೂವರೆ ತಿಂಗಳ ನಂತರ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ 'ಗಗನಯಾನ' ಯೋಜನೆಗೆ ಅನುಮೋದನೆ ನೀಡಲಾಗಿದೆ.

ದೇಶದ ಮೊದಲ ಮಾನವಸಹಿತ ಗಗನಯಾನ ಯೋಜನೆಗೆ 10,000 ಕೋಟಿ!!

ಇದು ದೇಶದ ಚೊಚ್ಚಲ ಮಾನವಸಹಿತ ಗಗನಯಾನ ಯೋಜನೆಯಾಗಲಿದ್ದು, 2022ರ ವೇಳೆಗೆ ಮೂವರು ಭಾರತೀಯ ಗಗನಯಾತ್ರಿಗಳನ್ನು ಏಳು ದಿನಗಳ ಕಾಲ ಬಾಹ್ಯಾಕಾಶಕ್ಕೆ ಕಳಿಸಲಾಗುತ್ತಿದೆ.ಹಾಗಾದರೆ, ಐತಿಹಾಸಿಕ 'ಗಗನಯಾನ' ಯೋಜನೆಗೆ ಭಾರತ ಸರ್ಕಾರ ಮತ್ತು ಇಸ್ರೊ ಹೇಗೆಲ್ಲಾ ತಯಾರಿ ನಡೆಸಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

10 ಸಾವಿರ ಕೋಟಿ ವೆಚ್ಚ

10 ಸಾವಿರ ಕೋಟಿ ವೆಚ್ಚ

ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಐತಿಹಾಸಿಕ ‘ಗಗನಯಾನ' ಯೋಜನೆಗೆ ಭಾರತ ಸರ್ಕಾರ ಒಪ್ಪಿಗೆ ನೀಡಿ ಯೋಜನೆಗಾಗಿ ₹10 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಈ ಯೋಜನೆಗೆ ಅಂದಾಜು 10 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಕಾನೂನು ಸಚಿವ ರವಿಂಶಕರ್ ಪ್ರಸಾದ್‌ ತಿಳಿಸಿದ್ದಾರೆ.

ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಭಾರತ

ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಭಾರತ

ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಭಾರತ ಯಶಸ್ವಿಯಾಗಿ ಕೈಗೊಂಡರೆ ಸಂಪೂರ್ಣ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ರಾಕೆಟ್‌ ಮತ್ತು ಗಗನನೌಕೆಯಲ್ಲಿ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಲಿರುವ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.ಅಮೆರಿಕ, ರಷ್ಯಾ, ಚೀನಾದಂತಹ ಪ್ರತಿಷ್ಠಿತ ರಾಷ್ಟ್ರಗಳ ಪಟ್ಟಿಗೆ ಭಾರತ ಕೂಡ ಸೇರ್ಪಡೆಯಾಗಲಿದೆ.

ಐತಿಹಾಸಿಕ ಯಾನಕ್ಕೆ ತಯಾರಿ ಹೀಗಿದೆ

ಐತಿಹಾಸಿಕ ಯಾನಕ್ಕೆ ತಯಾರಿ ಹೀಗಿದೆ

ಸಂಪೂರ್ಣ ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಗಗನನೌಕೆ ಉಡಾವಣೆ ಜಿಎಸ್‌ಎಲ್‌ವಿ ಮಾರ್ಕ್‌ (ಎಂಕೆ)-3 ರಾಕೆಟ್‌, 2022ರಲ್ಲಿ ಶ್ರೀಹರಿಕೋಟಾ ಉಡ್ಡಯನ ಕೇಂದ್ರದಿಂದ ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಹೊತ್ತು ಒಯ್ಯಲಿದೆ. ರಾಕೆಟ್ ಚಿಮ್ಮಿದ ಕೆಲವೇ ನಿಮಿಷಗಳಲ್ಲಿ ಮೂವರು ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶವನ್ನು ತಲುಪುತ್ತಾರೆ.

ಗಗನಯಾನ ಹೀಗಿರಲಿದೆ!

ಗಗನಯಾನ ಹೀಗಿರಲಿದೆ!

ಎಸ್‌ಎಲ್‌ವಿ ಮಾರ್ಕ್‌ (ಎಂಕೆ)-3 ರಾಕೆಟ್‌ ನಭಕ್ಕೆ ಚಿಮ್ಮಿದ ಕೇವಲ 16 ನಿಮಿಷಗಳಲ್ಲಿ ಮೂವರು ಭಾರತೀಯ ಗಗನಯಾತ್ರಿಗಳು ಬಾಹ್ಯಾಕಾಶ ತಲುಪಲಿದ್ದಾರೆ. ಐದರಿಂದ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿರುತ್ತಾರೆ. ಬಾಹ್ಯಾಕಾಶದಲ್ಲಿ ಒಟ್ಟು 36 ನಿಮಿಷದ ಪಯಣದ ನಂತರ ಅವರು ಭೂಮಿಗೆ ಮರಳಲಿದ್ದಾರೆ ಎಂಬ ಮಾಹಿತಿಯನ್ನು ಇಸ್ರೊ ಮಾಧ್ಯಮಗಳಿಗೆ ನೀಡಿದೆ.

ನೌಕೆ ಭೂಸ್ಪರ್ಶ ಎಲ್ಲಿ?

ನೌಕೆ ಭೂಸ್ಪರ್ಶ ಎಲ್ಲಿ?

ಎಸ್‌ಎಲ್‌ವಿ ಮಾರ್ಕ್‌ (ಎಂಕೆ)-3 ರಾಕೆಟ್‌ ಭೂಮಿಯ ಕೆಳಹಂತದ ಕಕ್ಷೆ ಅಂದರೆ 300- 400 ಕಿ.ಮೀ ಎತ್ತರದಲ್ಲಿ ಬಾಹ್ಯಾಕಾಶ ನೌಕೆಯನ್ನು ನೆಲೆಗೊಳಿಸಲಿದೆ. ನೌಕೆ ಭೂಸ್ಪರ್ಶ ಮಾಡುವಾಗ ತಾಂತ್ರಿಕ ತೊಂದರೆ ಎದುರಾದರೆ ನೌಕೆಯನ್ನು ಬಂಗಾಳ ಕೊಲ್ಲಿಯಲ್ಲಿ ಸುರಕ್ಷಿತವಾಗಿ ಇಳಿಸಲಾಗುತ್ತದೆ. ಈ ನೌಕೆಗೂ ಮುನ್ನ ಎರಡು ಮಾನವ ರಹಿತ ನೌಕೆಗಳ ಉಡಾವಣೆ ನಡೆಸಲಾಗುತ್ತದೆ.

Best Mobiles in India

English summary
India's manned space mission is on track. On Friday, the Cabinet okayed Gaganyaan, India's human spaceflight programme, which will see a 3-member crew spend a minimum of 7 days in space at an overall cost of Rs 10,000 crore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X