ಭಾರತದ ಟಾಪ್‌ 5 ಐಟಿ ಕಂಪನಿಗಳಲ್ಲಿ ನೇಮಕ ಪ್ರಕ್ರಿಯೆ ಗಣನೀಯ ಹೆಚ್ಚಳ!

|

ಐಟಿ ಉದ್ಯೋಗಿಗಳ ಭವಿಷ್ಯ ಕಮರಿಹೋಯಿತು ಎನ್ನುತ್ತಿದ್ದ ಕಾಲ ಇದೀಗ ಮುಗಿಗಿದೆ. ಜಾಗತಿಕ ಅನಿಶ್ಚಿತತೆ ಮತ್ತು ಆರ್ಥಿಕ ಕುಸಿತದ ನಡುವೆಯೇ ಭಾರತದ ಟಾಪ್‌ 5 ಐಟಿ ಕಂಪನಿಗಳಲ್ಲಿನ ನೇಮಕ ಪ್ರಕ್ರಿಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಟಿಸಿಎಸ್, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್‌, ವಿಪ್ರೊ ಮತ್ತು ಟೆಕ್‌ ಮಹೀಂದ್ರಾ ಕಂಪನಿಗಳಲ್ಲಿ ಶೇ.57ರಷ್ಟು ಹೆಚ್ಚು ನೇಮಕಗಳು ಆಗಿವೆ ಎಂದು ವರದಿಯಲ್ಲಿ ತಿಳಿಸಿವೆ.

ಭಾರತದ ಟಾಪ್‌ 5 ಐಟಿ ಕಂಪನಿಗಳಲ್ಲಿ ನೇಮಕ ಪ್ರಕ್ರಿಯೆ ಗಣನೀಯ ಹೆಚ್ಚಳ!

ಹೌದು, ಕಳೆದ ಆರರಿಂದ ಎಂಟು ತ್ರೈಮಾಸಿಕಗಳಲ್ಲಿ ನಿಧಾನವಾಗಿದ್ದ ಐಟಿ ವಲಯದ ನೇಮಕಾತಿ ಮತ್ತೆ ವೇಗವನ್ನು ಪಡೆಯುತ್ತಿದೆ. ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಈ ತ್ರೈಸಿಕದಲ್ಲಿ ಭಾರತದ ಅಗ್ರ ಐದು ಐಟಿ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಟೆಕ್ ಮತ್ತು ಟೆಕ್ ಮಹೀಂದ್ರಾ 57% ರಷ್ಟು ಉದ್ಯೋಗಿಗಳನ್ನು ನೇಮಿಸಿಕೊಂಡಿವೆ. ಐಟಿ ಸೇವಾ ಸಂಸ್ಥೆಗಳಿಂದ ನಿವ್ವಳ ಉದ್ಯೋಗಿಗಳ ಸೇರ್ಪಡೆ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 27,300ಕ್ಕಿಂತ ಹೆಚ್ಚಾಗಿದೆ ಎಂದು ಮಾಧ್ಯಮ ವರದಿಯಿಂದ ತಿಳಿದುಬಂದಿದೆ.

ಉದ್ಯೋಗಿಗಳನ್ನು ಹೆಚ್ಚು ನೇಮಕ ಮಾಡಿಕೊಂಡಿರುವ ಕಂಪನಿಗಳಲ್ಲಿ ಟಿಸಿಎಸ್ ಕಂಪೆನಿ ಮುಂಚೂಣಿಯಲ್ಲಿದ್ದು, ಒಟ್ಟು 12,356 ಮಂದಿಯನ್ನು ನೇಮಕ ಮಾಡಿಕೊಂಡಿದ್ದರೆ, ಇನ್ಫೋಸಿಸ್‌ ಕೇವಲ 906 ಮಂದಿಯನ್ನು ನೇಮಕ ಮಾಡಿಕೊಂಡಿದೆ. ಈ ವರ್ಷ ಹೆಚ್ಚಿನ ಕ್ಯಾಂಪಸ್ ಆಯ್ಕೆಗಳೂ ನಡೆದಿವೆ. ಜಾಗತಿಕ ಮಟ್ಟದ ಕ್ಲೈಂಟ್‌ಗಳಿಂದ ಡಿಜಿಟಲ್‌ ಸೇವೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ನೇಮಕ ಪ್ರಕ್ರಿಯೆ ಚುರುಕಾಗಿದೆ. ಕಳೆದ ವರ್ಷಕ್ಕಿಂತಲೂ ವಿಪ್ರೊ ಮತ್ತು ಟಿಸಿಎಸ್‌ಗಳು ಹೆಚ್ಚಿನ ನೇಮಕಗಳನ್ನು ಮಾಡಿಕೊಂಡಿವೆ.

ಭಾರತದ ಟಾಪ್‌ 5 ಐಟಿ ಕಂಪನಿಗಳಲ್ಲಿ ನೇಮಕ ಪ್ರಕ್ರಿಯೆ ಗಣನೀಯ ಹೆಚ್ಚಳ!

ಭಾರತೀಯ ಸಾಫ್ಟ್‌ವೇರ್ ಉದ್ಯಮದ ಆದಾಯದ ಹೆಚ್ಚಿನ ಪಾಲನ್ನು ಹೊಂದಿರುವ ಅಗ್ರ-ಐದು ಐಟಿ ಕಂಪನಿಗಳು ಕಳೆದ ಆರು ರಿಂದ ಎಂಟು ತ್ರೈಮಾಸಿಕಗಳಲ್ಲಿ ಸಾಂಪ್ರದಾಯಿಕ ಸೇವೆಗಳಿಂದ ಡಿಜಿಟಲ್ ಸೇವೆಗಳಿಗೆ ತಮ್ಮ ಗಮನವನ್ನು ಬದಲಾಯಿಸಿದ್ದರಿಂದ ನಿಧಾನಗತಿಯನ್ನು ಕಂಡಿದೆ. ಆದಾಗ್ಯೂ, ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕೃತಗೊಂಡಂತಹ ಡಿಜಿಟಲ್ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯು ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ತಂತ್ರಜ್ಞಾನವನ್ನು ಬಳಸುವುದನ್ನು ಅರ್ಥೈಸುತ್ತದೆ ಎಂದು ಹೇಳಲಾಗಿದೆ.

ಎರಡು ದಿನ ಸರೋವರದಲ್ಲಿ ಮುಳುಗಿದ್ದ 'ಐಫೋನ್ ಎಕ್ಸ್' ಕೆಲಸ ಮಾಡುತ್ತಿದೆ!ಎರಡು ದಿನ ಸರೋವರದಲ್ಲಿ ಮುಳುಗಿದ್ದ 'ಐಫೋನ್ ಎಕ್ಸ್' ಕೆಲಸ ಮಾಡುತ್ತಿದೆ!

177 ಶತಕೋಟಿ ಡಾಲರ್‌ನ ಭಾರತೀಯ ಸಾಫ್ಟ್‌ವೇರ್‌ ಉದ್ಯಮವು ಪ್ರತಿ ತ್ರೈಮಾಸಿಕದಲ್ಲೂ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಡಿಜಿಟಲ್‌ ಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನಗಳ ವ್ಯಾಪ್ತಿ ಹೆಚ್ಚುತ್ತಿದ್ದು, ಹೊಸ-ಯುಗದ ತಂತ್ರಜ್ಞಾನದಲ್ಲಿ ವಾಣಿಜ್ಯ ಸಮಸ್ಯೆಗಳನ್ನು ತಂತ್ರಜ್ಞಾನದ ಸಾಧನಗಳ ಮೂಲಕ ಬಗೆಹರಿಸುವ ಹೆಚ್ಚುಹೆಚ್ಚು ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ಈ ಕ್ಷೇತ್ರಗಳಲ್ಲಿನ ಪ್ರತಿಭಾವಂತರಿಗೆ ಬೇಡಿಕೆಯು ಏರುಮುಖವಾಗಿಯೇ ಇರುವುದು ಐಟಿ ಉದ್ಯೋಗಿಗಳಿಗೆ ಸಿಹಿಸುದ್ದಿದ ಎಂದು ಹೇಳಬಹುದು.

Best Mobiles in India

English summary
According to the report, the top five IT firms have hired over 27,300 employees, compared with a net addition of 17,383 in the same period last year. Among them, TCS emerged as the top recruiter. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X