2017 ಕ್ಕೆ ಮೊಬೈಲ್‌ ವಂಚನೆಗಳು ಶೇ.65 ರಷ್ಟು ಹೆಚ್ಚಾಗಲಿವೆ: ನೀವು ಹುಷಾರ್?

ಡಿಜಿಟಲ್‌ ಹಣ ವ್ಯವಹಾರ ಆನ್‌ಲೈನ್‌ ಬ್ಯಾಂಕಿಂಗ್, ಮೊಬೈಲ್‌ ಬ್ಯಾಂಕಿಂಗ್, ಇ-ವ್ಯಾಲೆಟ್‌ಗಳ ಮುಖಾಂತರ ಹೆಚ್ಚಾಗೆ ನಡೆಯುತ್ತಿದೆ. ಇವುಗಳ ಮೂಲಕ ನಡೆಯುತ್ತಿರುವ ಹಣ ಪಾವತಿಯಿಂದ 2017 ರ ಅವಧಿಗೆ ಶೇ.65ರಷ್ಟು ಮೊಬೈಲ್ ವಂಚಕರು ಹೆಚ್ಚಾಗುವ ಸಂಭವವಿದೆ

By Suneel
|

ಹಳ್ಳಿಗಳಲ್ಲಿ ಡಿಜಿಟಲ್ ಹಣ ವ್ಯವಹಾರ ಇಲ್ಲದಿರಬಹುದು. ಆದ್ರೆ ಸಿಟಿಗಳಲ್ಲಿ ಡಿಜಿಟಲ್‌ ಹಣ ವ್ಯವಹಾರ ಆನ್‌ಲೈನ್‌ ಬ್ಯಾಂಕಿಂಗ್, ಮೊಬೈಲ್‌ ಬ್ಯಾಂಕಿಂಗ್, ಇ-ವ್ಯಾಲೆಟ್‌ಗಳ ಮುಖಾಂತರ ಹೆಚ್ಚಾಗೆ ನಡೆಯುತ್ತಿದೆ. ಇವುಗಳ ಮೂಲಕ ನಡೆಯುತ್ತಿರುವ ಹಣ ಪಾವತಿಯಿಂದ 2017 ರ ಅವಧಿಗೆ ಶೇ.60-65 ರಷ್ಟು ಮೊಬೈಲ್ ವಂಚಕರು ಹೆಚ್ಚಾಗುವ ಸಂಭವವಿದೆ ಎಂದು ಪ್ರಮುಖ ಉದ್ಯಮ ಸಂಸ್ಥೆ ಹೇಳಿದೆ.

2017 ಕ್ಕೆ ಮೊಬೈಲ್‌ ವಂಚನೆಗಳು ಶೇ.65 ರಷ್ಟು ಹೆಚ್ಚಾಗಲಿವೆ: ನೀವು ಹುಷಾರ್?

ಅಂದಹಾಗೆ ಈ ಮೇಲಿನ ಮಾಹಿತಿಯನ್ನು ಅಸ್ಸೋಛಾಮ್ ಮತ್ತು ಸಂಶೋಧನಾ ಸಂಸ್ಥೆ ಈವೈ ನಡೆಸಿದ "Strategic National Measures to Combat Cybercrime", ಟೈಟಲ್‌ನ ಅಧ್ಯಯನದಲ್ಲಿ ಹೇಳಿದ್ದಾರೆ. ಅಲ್ಲದೇ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಸೈಬರ್‌ಸ್ಪೇಸ್ ಮತ್ತು ಸರ್ಕಾರಿ ಸಂಸ್ಥೆಗಳು ಸೈಬರ್ ಅಪರಾಧದ ಬಗ್ಗೆ ಗಮನಹರಿಸಬೇಕು ಎಂದು ಹೇಳಲಾಗಿದೆ.

2017 ಕ್ಕೆ ಮೊಬೈಲ್‌ ವಂಚನೆಗಳು ಶೇ.65 ರಷ್ಟು ಹೆಚ್ಚಾಗಲಿವೆ: ನೀವು ಹುಷಾರ್?

"ಮೊಬೈಲ್ ವಂಚಕರು ಶೇ.40-45 ಕಂಪನಿಗಳು ಆನ್‌ಲೈನ್‌ ಹಣ ವ್ಯವಹಾರವನ್ನು ನಡೆಸುತ್ತಾರೆ ಎಂಬುದನ್ನು ಉತ್ತಮ ಪ್ರದೇಶವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಣ ವ್ಯವಹಾರ ಮೊಬೈಲ್ ಡಿವೈಸ್‌ಗಳ ಮೂಲಕವೇ ನಡೆಯುವುದರಿಂದ ಮೊಬೈಲ್‌ ವಂಚಕರು ಶೇ.60-65 ರಷ್ಟು ಹೆಚ್ಚಾಗಲಿದ್ದಾರೆ" ಎಂದು ಅಧ್ಯಯನ ಸೂಚಿಸಿದೆ.

2017 ಕ್ಕೆ ಮೊಬೈಲ್‌ ವಂಚನೆಗಳು ಶೇ.65 ರಷ್ಟು ಹೆಚ್ಚಾಗಲಿವೆ: ನೀವು ಹುಷಾರ್?

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವಂಚನೆಗಳ ಚಟುವಟಿಕೆಗಳು ಸೈಬರ್ ಅಪರಾಧ ದಾಖಲೆಯಲ್ಲಿ ಟಾಪ್‌ನಲ್ಲಿವೆ. ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಮೊಬೈಲ್‌ ಇದು 6 ಪಟ್ಟು ಹೆಚ್ಚಾಗಿದೆ.

ಡೇಟಾ ಪ್ರಕಾರ, ಶೇ.46 ರಷ್ಟು ದೂರುಗಳು ಆನ್‌ಲೈನ್‌ ಬ್ಯಾಂಕಿಂಗ್ ಸಂಬಂಧಿಸಿದಂತೆ ಇದ್ದು, ಇವುಗಳಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ವಂಚನೆಗಳು ಫೇಸ್‌ಬುಕ್'ನಿಂದ ನಡೆಯುತ್ತಿವೆ ಎಂದು ದೂರುಗಳಿವೆ(ಶೇ.39 ರಷ್ಟು ಅಪರಾಧಗಳು ಚಿತ್ರಗಳು/ಸೈಬರ್ ಹಿಂಬಾಲಿಸುವಿಕೆ/ ಸೈಬರ್ ಬೆದರಿಕೆ ಮೂಲಕ ನಡೆಯುತ್ತಿವೆ) ಎಂದು ಅಧ್ಯಯನ ಹೇಳಿದೆ.

2017 ಕ್ಕೆ ಮೊಬೈಲ್‌ ವಂಚನೆಗಳು ಶೇ.65 ರಷ್ಟು ಹೆಚ್ಚಾಗಲಿವೆ: ನೀವು ಹುಷಾರ್?

ಇತರೆ ಸೈಬರ್ ದೂರುಗಳು ಮೊಬೈಲ್ ಮೂಲಕ ಮೋಸ ಮಾಡುತ್ತಿರುವುದು (ಶೇ.21), ಇಮೇಲ್‌ ಐಡಿ ಹ್ಯಾಕಿಂಗ್ (ಶೇ.18), ನಿಂದನಾ / ಆಕ್ರಮಣಕಾರಿ / ಅಶ್ಲೀಲ ಕರೆಗಳು ಹಾಗೂ ಎಸ್‌ಎಂಎಸ್ (ಶೇ.12) ಮತ್ತು ಇತರೆ.

2017 ಕ್ಕೆ ಮೊಬೈಲ್‌ ವಂಚನೆಗಳು ಶೇ.65 ರಷ್ಟು ಹೆಚ್ಚಾಗಲಿವೆ: ನೀವು ಹುಷಾರ್?

ಡೇಟಾ ಸುರಕ್ಷತಾ ಕ್ರಮಗಳು ಮತ್ತು ಪೂರ್ವಭಾವಿಯಾಗಿ ಭದ್ರತಾ ಮೇಲ್ವಿಚಾರಣೆ ರಚಿಸುವ ಸಾಮರ್ಥ್ಯವು, ಮೋಸಹೋಗದಂತೆ ತಡೆಯಲು ನಿರ್ವಹಿಸುವಲ್ಲಿ ಪ್ರಮುಖವಾಗಿದೆ. ಆದ್ದರಿಂದ ಆರ್ಥಿಕ, ಬೌದ್ಧಿಕ ಮತ್ತು ಗ್ರಾಹಕ ಸಂಬಂಧಿತ ಮಾಹಿತಿಯನ್ನು ರಕ್ಷಿಸಲು ಅಧ್ಯಯನ ತಿಳಿಸಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
India to see 65% rise in Mobile frauds in 2017: Study. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X