ಭಾರತದಲ್ಲಿ ನೋಕಿಯಾದ ಎರಡನೇ ಇನ್ನಿಂಗ್ಸ್ ಏನಾಗಿದೆ ಗೊತ್ತಾ?..ಇಲ್ಲಿದೆ ಫುಲ್ ಡೀಟೇಲ್ಸ್!

|

ಮೊಬೈಲ್ ಪ್ರಪಂಚದ ಪ್ರಿಯತಮೆ ಎಂದೇ ಕರೆಸಿಕೊಳ್ಳುವ ನೋಕಿಯಾದ ಎರಡನೇ ಇನ್ನಿಂಗ್ಸ್ ಭಾರತದಲ್ಲಿ ಏನಾಯಿತು ಎಂಬ ನಿಮ್ಮ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಎಚ್‌ಎಂಡಿ ಗ್ಲೋಬಲ್‌ನ ಆಶ್ರಯದಲ್ಲಿ ವಿಶ್ವದಾದ್ಯಂತ ಮತ್ತೆ ಸದ್ದು ಮಾಡಲು ಬಂದಿದ್ದ ನೋಕಿಯಾ ಕಂಪೆನಿಯು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇನ್ನೂ ಮಹತ್ವದ ಸಾಧನೆ ಮಾಡಿಲ್ಲ. ಏಕೆಂದರೆ, ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, ನೋಕಿಯಾ ಫೋನ್ ಬ್ರಾಂಡ್ ಈಗ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೇವಲ ಶೇ 1.9% ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ರ್ಟ್‌ಫೋನ್

ಹೌದು, ಭಾರತದಲ್ಲಿ ಕಟ್-ಥ್ರೋಟ್ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ನೋಕಿಯಾ ಈ ವರೆಗೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಪ್ರಸ್ತುತ, ನೋಕಿಯಾ ಅಸ್ತವ್ಯಸ್ತಗೊಂಡ 10,000-ರೂ 20,000 ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಆಡುತ್ತಿದೆ. ಆದರೆ, 10,000-ರೂ 20,000 ಬೆಲೆಯ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಕ್ರೂರವಾಗಿದೆ. ಈ ಮೊತ್ತದಲ್ಲಿ ಈಗಾಗಲೇ ಶಿಯೋಮಿ, ಸ್ಯಾಮ್‌ಸಂಗ್ ಮತ್ತು ರಿಯಲ್‌ಮಿ ಕಂಪೆನಿಗಳು ಗಟ್ಟಿಯಾಗಿ ನೆಲೆಯೂರಿವೆ. ಹಾಗಾಗಿ, ನೋಕಿಯಾದ ಆಟ ಇಲ್ಲಿ ನಡೆಯುತ್ತಿಲ್ಲ ಎಂದು ಅಂದಾಜಿಸಲಾಗಿದೆ.

ನೋಕಿಯಾ ಫೀಚರ್ ಫೋನ್

ಆದರೆ, ಕಂಪೆನಿ ಪುನರಾಗಮನದ ಮೂರು ವರ್ಷಗಳಲ್ಲಿ, ನೋಕಿಯಾ ಫೀಚರ್ ಫೋನ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ. 2019 ರಿಂದ, ನೋಕಿಯಾ ಫೀಚರ್ ಫೋನ್ ಮಾರುಕಟ್ಟೆಯ 9% ನಷ್ಟು ಹಕ್ಕು ಸಾಧಿಸಿದೆ ಮತ್ತು ಭಾರತದ ಅಗ್ರ ಐದು ಫೀಚರ್ ಫೋನ್ ಬ್ರಾಂಡ್‌ಗಳಲ್ಲಿ ಸ್ಥಾನ ಪಡೆದಿದೆ. ಉದ್ಯಮದ ಅಂದಾಜಿನ ಪ್ರಕಾರ, ಭಾರತೀಯ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಫೀಚರ್ ಫೋನ್‌ಗಳು ಸುಮಾರು 50% ನಷ್ಟಿದ್ದು, ಅದರಲ್ಲಿ ರಿಲಯನ್ಸ್ ಜಿಯೋ ಕಂಪೆನಿಯ ಜಿಯೋ 4G ಫೀಚರ್ ಫೋನ್‌ಗಳು ಹೆಚ್ಚು ಮಾರಾಟವಾಗಿ ಗಮನಸೆಳೆದಿವೆ.

ಓಎಸ್ ನವೀಕರಣಗಳು

ನೋಕಿಯಾದ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡು ವರ್ಷಗಳ ಓಎಸ್ ನವೀಕರಣಗಳು ಮತ್ತು ಮೂರು ವರ್ಷಗಳ ಮಾಸಿಕ ಭದ್ರತಾ ಪ್ಯಾಚ್‌ಗಳನ್ನು ನೀವು ಭರವಸೆಯನ್ನು ಕಂಪೆನಿ ನೀಡಿದೆ. ಆದ್ದರಿಂದ, ಬಳಕೆದಾರರು ಒಮ್ಮೆ ನೋಕಿಯಾ ಸ್ಮಾರ್ಟ್‌ಪೋನ್ ಖರೀದಿಸಿದರೆ ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಲು ಫೋನ್‌ಗಳನ್ನು ಬದಲಾಯಿಸುತ್ತಲೇ ಇರಬೇಕಾಗಿಲ್ಲ ಎಂದು ಎಚ್‌ಎಂಡಿ ಗ್ಲೋಬಲ್‌ನ ಎಪಿಎಸಿ ಮತ್ತು ಭಾರತದ ಮುಖ್ಯಸ್ಥ ಅಜಯ್ ಮೆಹ್ತಾ ಹೇಳುತ್ತಾರೆ. ಆದರೆ, ಭಾರತದಂತಹ ಮಾರುಕಟ್ಟೆಯಲ್ಲಿ ಇದು ಕೂಡ ವಿಫಲವಾಗಿರುವುದಕ್ಕೆ ಕಾರಣ ಕೂಡ ಇದೆ.

ಅತ್ಯುತ್ತಮ ವಿಶೇಷತೆಗಳು

ನೋಕಿಯಾದ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ವಿಶೇಷತೆಗಳು ಮತ್ತು ಗುಣಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದರೂ ಸ್ಪರ್ಧಾತ್ಮಕ ವಲಯದಲ್ಲಿ ಸೋತಿವೆ. ನೋಕಿಯಾ ನೀಡುತ್ತಿರುವ ಓಎಸ್ ಮತ್ತು ಅದರ ನವೀಕರಣಗಳಂತಹ ಸಾಫ್ಟ್‌ವೇರ್ ವಿವರಗಳಿಗಿಂತ ಹೆಚ್ಚಿನ ಗ್ರಾಹಕರು ಹೊಸ ವೈಶಿಷ್ಟ್ಯಗಳು ಮತ್ತು ಹಾರ್ಡ್‌ವೇರ್ ವಿಶೇಷಣಗಳಿಗೆ ಆದ್ಯತೆ ನೀಡುತ್ತಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ನೋಕಿಯಾ ಗ್ರಾಹಕರಿಗೆ ತಾನು ಏನು ನೀಡುತ್ತಿದ್ದೇನೆ ಎಂದು ತೋರಿಸುವದರಲ್ಲಿ ಹೆಚ್ಚು ಎಡವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪರಂಪರೆಯ ಶಕ್ತಿ

ತಜ್ಞರ ಪ್ರಕಾರ, ನೋಕಿಯಾ ತನ್ನ ಪರಂಪರೆಯ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಹೆಚ್ಚು ಆಕ್ರಮಣಕಾರಿಯಾಗಿ ಮಾರುಕಟ್ಟೆ ಮಾಡಬೇಕಾಗುತ್ತದೆ.ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ನೋಕಿಯಾದ ಕಡಿಮೆ ಗೋಚರತೆ ಎದ್ದುಕಾಣುತ್ತದೆ. ನೋಕಿಯಾ ಫೋನ್‌ಗಳನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡರಲ್ಲೂ ಮಾರಾಟ ಮಾಡಲಾಗಿದ್ದರೂ, ಕಂಪನಿಯು ಫ್ಲ್ಯಾಷ್ ಮಾರಾಟದಿಂದ ದೂರವಿರುತ್ತದೆ - ಇದು ಶಿಯೋಮಿ, ರಿಯಲ್ಮೆ ಮತ್ತು ಒನ್‌ಪ್ಲಸ್‌ನಂತಹ ಬ್ರಾಂಡ್‌ಗಳಿಗೆ ಲಾಭದಾಯಕವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಂದಾಜಿಸಿದ್ದಾರೆ.

Best Mobiles in India

English summary
Currently, Nokia is playing in the cluttered Rs 10,000-Rs 20,000 smartphone price band where competition is brutal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X