Home
ಸುದ್ದಿಜಾಲ

ಚೀನಾ ಮೂಲದ 54 ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ!

ಭಾರತ ಸರ್ಕಾರ ಚೀನಾ ಮೂಲದ ಅಪ್ಲಿಕೇಶನ್‌ಗಳಿಗೆ ಬಿಗ್‌ ಶಾಕ್‌ ನೀಡಿದೆ. ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಅನೇಕ ಅಪ್ಲಿಕೇಶನ್‌ಗಳನ್ನು ಇದೀಗ ಬ್ಯಾನ್‌ ಮಾಡಿದೆ. ಈ ಮೂಲಕ ಚೀನಾ ಅಪ್ಲಿಕೇಶನ್‌ಗಳಿಗೆ ಮತ್ತೊಮ್ಮೆ ಗೇಟ್‌ಪಾಸ್‌ ನೀಡಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಾಹಿತಿ ಪ್ರಕಾರ ಹೊಸದಾಗಿ 54 ಚೀನೀ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ. ಜೂನ್ 2020 ರಿಂದ ಶುರುವಾದ ಚೀನಾ ಅಪ್ಲಿಕೇಶನ್‌ ಬ್ಯಾನ್‌ ಇದೀಗ ಮತ್ತೊಮ್ಮೆ ಮುಂದುವರೆದಿದೆ.

ಅಪ್ಲಿಕೇಶನ್‌

ಹೌದು, ಕೇಂದ್ರ ಸರ್ಕಾರ ಚೀನಾ ಮೂಲದ 54 ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ. ಈ ಅಪ್ಲಿಕೇಶನ್‌ಗಳಲ್ಲಿ ದೇಶದ ಭದ್ರತೆಗೆ ದಕ್ಕೆ ತರುವಂತಹ ಅಂಶಗಳು ಕಂಡುಬಂದಿವೆ ಎನ್ನಲಾಗಿದೆ. ಇನ್ನು ಚೀನಾ ಮೂಲದ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿರುವುದು ಇದೇ ಮೊದಲೇನಲ್ಲ. ಈಗಾಗಲೇ ಭಾರತ ಸರ್ಕಾರ ಟಿಕ್‌ಟಾಕ್‌, ಶೇರ್‌ಇಟ್‌ ಸೇರಿದಂತೆ ಸುಮಾರು 224ಕ್ಕೂ ಅಧಿಕ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಿದೆ. ಹಾಗಾದ್ರೆ ಭಾರತ ಸರ್ಕಾರ ಹೊಸದಾಗಿ ಬ್ಯಾನ್‌ ಮಾಡಿದ ಚೀನಾದ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌ಗಳು

ಭಾರತ ಸರ್ಕಾರದ ಹೊಸದಾಗಿ ಬ್ಯಾನ್‌ ಮಾಡಿದ ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಬ್ಯೂಟಿ ಕ್ಯಾಮೆರಾ ಅಪ್ಲಿಕೇಶನ್‌ ಸೇರಿದಂತೆ ಹಲವು ಜನಪ್ರಿಯ ಅಪ್ಲಿಕೇಶನ್‌ಗಳು ಸೇರಿವೆ.
* ಸ್ವೀಟ್ ಸೆಲ್ಫಿ ಎಚ್‌ಡಿ
* ಬ್ಯೂಟಿ ಕ್ಯಾಮೆರಾ - ಸೆಲ್ಫಿ ಕ್ಯಾಮೆರಾ
* ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್
* ಕ್ಯಾಮ್‌ಕಾರ್ಡ್ ಫಾರ್ ಸೇಲ್ಸ್‌ಫೋರ್ಸ್ ಎಂಟ್
* ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್
* ವಿವಾ ವಿಡಿಯೋ ಎಡಿಟರ್
* ಟೆನ್ಸೆಂಟ್ ಕ್ರೈವರ್
* ಆನ್‌ಮಿಯೊಜಿ ಚೆಸ್
* ಆನ್‌ಮಿಯೊಜಿ ಅರೆನಾ
* ಆಪ್‌ಲಾಕ್
* ಡ್ಯುಯಲ್ ಸ್ಪೇಸ್ ಲೈಟ್
ಇವುಗಳ ಜೊತೆಗೆ ಅನೇಕ ಚೀನೀ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ಬ್ಯಾನ್‌ ಮಾಡಲಾಗಿದೆ.

ಕೇಂದ್ರ

ಇನ್ನು ಕೇಂದ್ರ ಸರ್ಕಾರದ ಪ್ರಕಾರ ಇದೀಗ ಭಾರತದಲ್ಲಿ ಬ್ಯಾನ್‌ ಮಾಡಲಾದ 54 ಚೀನಿ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಈ ಹಿಂದೆ ಬ್ಯಾನ್‌ ಮಾಡಿದ ಅಪ್ಲಿಕೇಶನ್‌ಗಳು ಹೊಸ ಹೆಸರಿನೊಂದಿಗೆ ಮರಳಿ ಬಂದಿರುವುದು ಕೂಡ ಸೇರಿದೆ. ಬ್ಯಾನ್‌ ಆದ ನಂತರ ಮತ್ತೊಂದು ಹೆಸರಿನಲ್ಲಿ ರಿ ಬ್ರಾಂಡ್‌ ಆಗಿರುವ ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ಗುರುತಿಸಿ ಮತ್ತೆ ಬ್ಯಾನ್‌ ಮಾಡಿದೆ. ಬ್ಯಾನ್‌ ಆದ ನಂತರ ಹೊಸ ಹೆಸರಿನೊಂದಿಗೆ ರೀ ಎಂಟ್ರಿ ನೀಡಿವೆ ಮತ್ತೆ ಹಳೆಯ ಚಾಳಿಯನ್ನು ಮುಂದುವರೆಸಿವೆ. ಈ ಅಪ್ಲಿಕೇಶನ್‌ಗಳು ದುರುದ್ದೇಶಪೂರಿತ ಸಾಫ್ಟ್‌ವೇರ್ ಅನ್ನು ರನ್ ಮಾಡುತ್ತವೆ ಅಥವಾ ಬಳಕೆದಾರರ ಅನುಮತಿಯಿಲ್ಲದೆ ಚೀನಾ ಮೂಲದ ಡೇಟಾ ಕೇಂದ್ರಗಳಿಗೆ ಬಳಕೆದಾರರ ಮಾಹಿತಿಯನ್ನು ನೇರವಾಗಿ ಕಳುಹಿಸುತ್ತವೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಅಪ್ಲಿಕೇಶನ್‌ಗಳನ್ನು

ಭಾರತದಲ್ಲಿ ಚೀನಿ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಚೀನಾ ದೇಶ ಭಾರತದ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆಸಿದ ಘರ್ಷಣೆಯ ನಂತರ ಅನೇಕ ಚಿನಾ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಲಾಗಿತ್ತು. 2020 ಸೆಪ್ಟೆಂಬರ್‌ನಲ್ಲಿ, ಭಾರತ ಸರ್ಕಾರವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ದಕ್ಕೆ ತರುವ ಅಪ್ಲಿಕೇಶನ್‌ಗಳು ಎಂದು ಚೀನಾದ 118 ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿತ್ತು. ನಂತರದ ಹಂತಗಳಲ್ಲಿ ಚೀನಾದ ಅನೇಕ ಅಪ್ಲಿಕೇಶನ್‌ಗಳು ಬ್ಯಾನ್‌ ಆಗಿವೆ. ಇದೀಗ ಅದರ ಮುಂದುವರೆದ ಭಾಗವಾಗಿ ಚೀನಾ ಮೂಲದ 54 ಅಪ್ಲಿಕೇಶನ್‌ಗಳು ಭಾರತದಿಂದ ಗೇಟ್‌ಪಾಸ್‌ ಪಡೆದುಕೊಂಡಿವೆ.

Best Mobiles in India

English summary
India to ban another 54 Chinese apps which poses security threat to the country
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+