ಡುಬಾಕೊರ್ ಇಮೇಲ್ ಹಾಕುವುದರಲ್ಲಿ ಇಂಡಿಯಾ 1st !

Posted By: Varun
ಡುಬಾಕೊರ್ ಇಮೇಲ್ ಹಾಕುವುದರಲ್ಲಿ ಇಂಡಿಯಾ 1st !

ಬೆಳೆಗ್ಗೆ ಆಫೀಸಿಗೆ ಒಳ್ಳೆ ಮೂಡಲ್ಲಿ ಬಂದು ಕಂಪ್ಯೂಟರ್ ಆನ್ ಮಾಡಿ ಇಮೇಲ್ ನೋಡಣ ಅಂತ ಸೈನ್ ಇನ್ ಮಾಡಿ ಮೇಲ್ ಬಾಕ್ಸ್ ಓಪನ್ ಮಾಡಿದ್ರೆ ನಿಮ್ಮ ಕಣ್ಣಿಗೆ ಈ ರೀತಿ ಇಮೇಲ್ ಗಳು ಕಾಣಿಸಿದರೆ ಹೇಗಿರುತ್ತೆ ನೋಡಿ:

1) ಬಾಡಿ ಮಸಾಜ್ ಮಾಜ್ ಮಾಡಿಸಿಕೊಳ್ಳಿ 50 % ಡಿಸ್ಕೌಂಟ್ ಇದೆ

2) ನಿಮ್ಮ ಭವಿಷ್ಯ ಹೇಳ್ತೀವಿ ಉದ್ದಾರ ಆಗಿ

3) ಉದ್ರೇಕ ಆಗಲ್ಲ ಅಂದ್ರೆ ಈ ಔಷಧಿ ತಗೊಳ್ಳಿ

4) ನಿಮಗೆ ಬಹುಮಾನ ಬಂದಿದೆ ಕಣ್ರೀ ಆನ್ಲೈನ್ ಲಾಟರಿಯಲ್ಲಿ, ಈಗಲೇ ಕ್ರೆಡಿಟ್ ಕಾರ್ಡ್ ಡೀಟೇಲ್ ಫೈಲ್ ಮಾಡಿ ಕಳ್ಸಿ.

ಈ ರೀತಿ ಈಮೇಲ್ ಗಳು ರಾಶಿ ರಾಶಿಯಾಗಿ ಬಂದ್ರೆ ನಿಮಗೆ ತಲೆ ಕೆಡುತ್ತೂ ಇಲ್ವೋ ಹೇಳಿ? ಈ ರೀತಿಯ ಹಾವಳಿ ಮೇಲ್ (ಸ್ಪಾಮ್ ಮೇಲ್) ಗಳ ಮೇಲೆ ಅಧ್ಯಯನ ನಡೆಸಿದ ಸೋಫೋಸ್ ಲ್ಯಾಬ್ಸ್ ಎಂಬ ಕಂಪನಿ ಮಾಡಿರುವ ವರದಿಯಂತೆ ಇಂಡಿಯಾ ಸ್ಪಾಮ್ ಮೇಲ್ ಗಳನ್ನು ಕಳುಹಿಸುವುದರಲ್ಲಿ ನಂ.1 ಸ್ಥಾನದಲ್ಲಿ ಇದೆಯಂತೆ.

ಇಂಟರ್ನೆಟ್ ಉಪಯೋಗಿಸುವ ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಭಾರತದ ಪಾಲು ಕೇವಲ 5.3% ಇದ್ದರೂ, ಸ್ಪಾಮ್ ಗಳ ಲೆಕ್ಕದಲ್ಲಿ 11.4 % ಪಾಲು ಹೊಂದಿದೆ! ಈ ಪಟ್ಟಿ ಯಲ್ಲಿ ಇಟಲಿ ದೇಶ ಎರಡನೆ ಸ್ಥಾನದಲ್ಲಿದ್ದರೆ, ಕೊರಿಯಾ ಮೂರನೆ ಸ್ಥಾನದಲ್ಲಿದೆ.

ಅದೇ ಖಂಡಗಳ ವಿಷಯಕ್ಕೆ ಬಂದರೆ ಏಶಿಯಾ 49.7 % ನಷ್ಟು ಸ್ಪಾಮ್ ಉತ್ಪಾದಿಸುತ್ತದೆ!. ನಂತರದ ಸ್ಥಾನ ಯುರೋಪ್ ಹಾಗು ದಕ್ಷಿಣ ಅಮೇರಿಕಾ ಖಂಡದ್ದು ಎಂದೂ ಈ ವರದಿ ತಿಳಿಸುತ್ತದೆ.

ಈ ರೀತಿಯ ಸ್ಪಾಮ್ ಮೇಲ್ ಗಳಿಂದ ಕೆಲವೊಮ್ಮೆ ವೈರಸ್ ಗಳು,ಮಾಲ್ವೇರ್ ಗಳು ಬರಬಹುದು ಹಾಗು ಕೆಲವೊಮ್ಮೆ ಟೋಪಿ ಸ್ಕೀಮುಗಳು ಹಾಕಿ ನಿಮ್ಮನ್ನು ಏಮಾರಿಸಲು ಗಾಳ ಹಾಕುತ್ತಾರೆ ಕೂಡ. ಹಾಗಾಗಿ ಈ ರೀತಿಯ ಮೆಲುಗಳಿಂದ ದೂರವಿರಿ ಪ್ಲೀಜ್.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot