Home
ಸುದ್ದಿಜಾಲ

ಪದೇ ಪದೇ ಅಂತರ್ಜಾಲ ನಿಲ್ಲಿಸುವುದರಲ್ಲಿ ಭಾರತ ಪ್ರಥಮ..! ಸರ್ಕಾರದ ನೆಟ್‌ ವಿರೋಧಿ ನೀತಿ..!

ಇತ್ತೀಚೆಗೆ ತಾನೇ 48 ಗಂಟೆಗಳ ಕಾಲ ಜಗತ್ತಿನಾದ್ಯಂತ ಇಂಟರ್‌ನೆಟ್‌ ಸ್ಥಗಿತವಾಗುವ ಕುರಿತು ಓದಿರುತ್ತೀರಿ. ಅದರಂತೆ, ಯೂಟ್ಯೂಬ್‌ ಸೇರಿದಂತೆ ಅನೇಕ ವೆಬ್‌ಸೈಟ್‌ಗಳ ಸರ್ವರ್‌ ಡೌನ್‌ಲೋಡ್‌ ಆಗಿದ್ದು ಬಿಟ್ಟರೆ ಬೇರೆನೂ ಆಗಲಿಲ್ಲ. ಆದರೆ, ಈಗ ಅದಲ್ಲ ವಿಷಯ ಒಂದು ವರದಿ ಬಿಡುಗಡೆಯಾಗಿದ್ದು, ಅತಿ ಹೆಚ್ಚು ಇಂಟರ್‌ನೆಟ್‌ ಸ್ಥಗಿತಗೊಂಡ ದೇಶದಲ್ಲಿ ಭಾರತ ಪ್ರಥಮ ಎಂದಿದೆ.

ಪದೇ ಪದೇ ಅಂತರ್ಜಾಲ ನಿಲ್ಲಿಸುವುದರಲ್ಲಿ ಭಾರತ ಪ್ರಥಮ..!

ದೆಹಲಿಯ ಸಾಫ್ಟ್‌ವೇರ್‌ ಫ್ರೀಡಂ ಲಾ ಸೆಂಟರ್‌ನ ಇಂಟರ್‌ನೆಟ್‌ ಶಟ್‌ಡೌನ್‌ ಟ್ರಾಕರ್‌ ಶೇಖರಿಸಿದ ಮಾಹಿತಿಯಂತೆ 2018ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಎಂದರೆ 121 ಸಲ ಇಂಟರ್‌ನೆಟ್‌ ಸ್ಥಗಿತಗೊಂಡಿದೆ. ಈ ಇಂಟರ್‌ನೆಟ್‌ ಶಟ್‌ಡೌನ್‌ಗೆ ಸರ್ಕಾರವೇ ಕಾರಣ ಎಂಬ ಅಂಶವನ್ನು ಸಹ ಆ ವರದಿ ಬಹಿರಂಗಪಡಿಸಿದೆ.

ಫ್ರೀಡಂ ಆನ್‌ ದಿ ನೆಟ್‌ನಲ್ಲೂ ಕುಸಿತ

ಫ್ರೀಡಂ ಆನ್‌ ದಿ ನೆಟ್‌ನಲ್ಲೂ ಕುಸಿತ

Freedom on The Net 2018ರ ವರದಿಯೂ ಸಹ ಗುರುವಾರ ಬಿಡುಗಡೆಯಾಗಿದ್ದು, ಭಾರತ 43ನೇ ಅಂಕಗಳನ್ನೂ ಪಡೆದಿದೆ. ಕಳೆದ ಭಾರಿ 41 ಅಂಕಗಳನ್ನು ಪಡೆದು ಒಂದಿಷ್ಟು ಉತ್ತಮ ಸ್ಥಿತಿಯಲ್ಲಿತ್ತು. 0 ಬಂದರೆ ಸಂಪೂರ್ಣ ನೆಟ್‌ ಸ್ವಾತಂತ್ರ್ಯ ಹಾಗೂ 100 ಬಂದರೆ ಯಾವುದೇ ನೆಟ್‌ ಸ್ವಾತಂತ್ರ್ಯವಿಲ್ಲ ಎಂದು ವರದಿ ಹೇಳುತ್ತದೆ.

ಸರ್ಕಾರದ ನಿಯಂತ್ರಣ

ಸರ್ಕಾರದ ನಿಯಂತ್ರಣ

Freedom on The Net 2018 ವರದಿ ಸರ್ಕಾರದ ನಿಯಂತ್ರಣದ ಬಗ್ಗೆಯೂ ಹೇಳಿದ್ದು, ಸರ್ಕಾರದ ಹೆಚ್ಚಿನ ನಿಯಂತ್ರಣದಿಂದ ಭಾರತದಲ್ಲಿ ಇಂಟರ್‌ನೆಟ್‌ ಸ್ವತಂತ್ರವಾಗಿಲ್ಲ ಎಂದು ವರದಿಯಿಂದ ಪ್ರತಿಬಿಂಬಿಸಿದೆ. ಈ ವರದಿಯಲ್ಲಿ ಭಾಗಶಃ ಸ್ವತಂತ್ರ ಇಂಟರ್‌ನೆಟ್‌ ದೇಶದ ವರ್ಗಿಕರಣಕ್ಕೆ ಸರಿದಿದೆ.

ಅಪರಾಧಗಳ ನಿಯಂತ್ರಣಕ್ಕೆ ಶಟ್‌ಡೌನ್‌

ಅಪರಾಧಗಳ ನಿಯಂತ್ರಣಕ್ಕೆ ಶಟ್‌ಡೌನ್‌

ಭಾರತದಲ್ಲಿ ಸರ್ಕಾರ ಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ ಇಂಟರ್‌ನೆಟ್‌ ಶಟ್‌ಡೌನ್‌ ಮಾಡುವ ಕಾರ್ಯ ಮಾಡುತ್ತಿದೆ. ಗಲಭೆಗಳು, ದ್ವೇಷದ ಪ್ರಕರಣಗಳನ್ನು ತಡೆಯಲು ಮತ್ತು ಪರೀಕ್ಷೆಗಳಲ್ಲಿ ನಕಲನ್ನು ತಡೆಯಲು ಸರ್ಕಾರ ಇಂಟರ್‌ನೆಟ್‌ ಶಟ್‌ಡೌನ್‌ ಮಾಡುತ್ತದೆ. ತಮಿಳುನಾಡಿನಲ್ಲಿ ಮಗು ಕಿಡ್ನಾಪ್‌ ಆಗಿರುವ ವಿಡಿಯೋ ವಾಟ್ಸ್‌ಆಪ್‌ನಲ್ಲಿ ವೈರಲ್‌ ಆಗುತ್ತಿದ್ದಾಗ ಸರ್ಕಾರ ಇಂಟರ್‌ನೆಟ್‌ ಸ್ಥಗಿತಗೊಳಿಸಿ ನಿಯಂತ್ರಿಸಿತು. ನೈಜವಾಗಿ ಇದು ಪಾಕಿಸ್ತಾನದ ವಿಡಿಯೋ ಆಗಿತ್ತು ಎಂದು ವರದಿ ಹೇಳಿದೆ.

ಸುಪ್ರಿಂ ಕೋರ್ಟ್‌ ತೀರ್ಪು

ಸುಪ್ರಿಂ ಕೋರ್ಟ್‌ ತೀರ್ಪು

ವರದಿಯು ಸುಪ್ರಿಂ ಕೋರ್ಟ್‌ ಆಗಸ್ಟ್‌ 2017ರಲ್ಲಿ ಕೊಟ್ಟ ತೀರ್ಪನ್ನು ಕೂಡ ಗಮನಿಸಿದೆ. ಈ ತೀರ್ಪು ಇಂಟರ್‌ನೆಟ್‌ ಸ್ವಾತಂತ್ರ್ಯಕ್ಕೆ ಸಿಕ್ಕ ಜಯವಾಗಿತ್ತು. ಭದ್ರತಾ ಉಲ್ಲಂಘನೆಯ ಹೆಚ್ಚಳಕ್ಕೂ ಈ ತೀರ್ಪು ಕಾರಣವಾಗಿತ್ತು. ಅದಲ್ಲದೇ ಭಾರತದಲ್ಲಿ ನಾಗರೀಕರ ಮಾಹಿತಿ ಸಂಗ್ರಹಕ್ಕೆ ಹೆಚ್ಚಿನ ಭದ್ರತೆಯಿಲ್ಲ ಎನ್ನುವುದನ್ನು ಕೂಡ ಆಧಾರ್ ಮಾಹಿತಿ ಸೋರಿಕೆಯಿಂದ ಗೊತ್ತಾಗಿರುವುದಾಗಿ ವರದಿಯಲ್ಲಿ ಹೇಳಿದೆ.

Best Mobiles in India

English summary
India tops world with most net shutdowns: Report. To Know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+