ಇನ್ಮುಂದೆ ಸ್ಮಾರ್ಟ್ ಡಿವೈಸ್ ಚಾರ್ಜರ್‌ಗಾಗಿ ನೀವು ಪರದಾಡಬೇಕಿಲ್ಲ!
ಇನ್ಮುಂದೆ ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೂ ಒಂದೇ ಮಾದರಿಯ ಚಾರ್ಜರ್ ಬರಲಿದೆ. ಏಕೆಂದರೆ ಭಾರತದಲ್ಲಿ ಹೆಚ್ಚಿನ ರೀತಿಯ ಚಾರ್ಜರ್‌ಗಳಿಂದ ಉಂಟಾಗುತ್ತಿರುವ ಇ-ವೇಸ್ಟ್ ತಡೆಗಟ್ಟಲು ಸರ್ಕಾರ ಹೊಸ ನೀತಿ ತರಲು ಮುಂದಾಗಿದೆ. ಇದಕ್ಕಾಗಿ ಹೊಸ ಚಾರ್ಜರ್ ನೀತಿ ತರಲು ಚಿಂತನೆ ನಡೆಸಿದ್ದು, ಅದರಂತೆ ಮುಂದಿನ ದಿನಗಳಲ್ಲಿ ಎಲ್ಲಾ ಮಾದರಿಯ ಸ್ಮಾರ್ಟ್ ಡಿವೈಸ್‌ಗಳು ಕೂಡ ಯುಎಸ್‌ಬಿ ಟೈಪ್ ಸಿ ಪೋರ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿವೆ ಎನ್ನಲಾಗಿದೆ.

ಹೌದು, ಭಾರತದಲ್ಲಿ ಹೊಸ ಚಾರ್ಜರ್ ನೀತಿ ಜಾರಿಗೆ ತರಲು ಕೇಂದ್ರ ಸರ್ಕಾರ ಪ್ಲಾನ್ ಮಾಡಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಅಂತರ್-ಸಚಿವಾಲಯ ಕಾರ್ಯಪಡೆಯ ಸಭೆಯಲ್ಲಿ ಮಧ್ಯಸ್ಥಗಾರರು ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮಧ್ಯಸ್ಥಗಾರರು ಒಮ್ಮತಕ್ಕೆ ಬಂದ ನಂತರ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳಿಗೆ ಒಂದೇ ಮಾದರಿಯ ಚಾರ್ಜಿಂಗ್ ಪೋರ್ಟ್ ಇರಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ. ಹಾಗಾದ್ರೆ ಹೊಸ ಚಾರ್ಜರ್ ನೀತಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಮಾರ್ಟ್ ಡಿವೈಸ್‌ಗಳನ್ನು ಚಾರ್ಜ್ ಮಾಡಲು ಬಳಸುವ ಚಾರ್ಜರ್‌ಗಳ ಸಂಖ್ಯೆ ಭಾರತದಲ್ಲಿ ಸಾಕಷ್ಟಿದೆ. ವಿವಿಧ ರೀತಿಯ ಸ್ಮಾರ್ಟ್ ಡಿವೈಸ್‌ಗಳು ತಮ್ಮದೇ ಶೈಲಿಯ ಚಾರ್ಜರ್‌ಗಳನ್ನು ಹೊಂದಿರುತ್ತವೆ. ಇದರಿಂದ ಹೊಸ ಡಿವೈಸ್ ಖರೀದಿಸಿದರೆ ಅದಕ್ಕಾಗಿ ಮತ್ತೊಂದು ಚಾರ್ಜರ್ ಖರೀದಿಸಬೇಕಾದ ಅನಿವಾರ್ಯತೆ ಇದೆ. ಹಳೆಯ ಚಾರ್ಜರ್ ಮೂಲೆ ಸೇರುತ್ತಿವೆ, ಇದರಿಂದ ದಿನೇ ದಿನೇ ಚಾರ್ಜರ್‌ಗಳ ಇ-ವೇಸ್ಟ್ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶಕ್ಕೆ ಸಾರ್ಕರ ಒನ್ ಚಾರ್ಜರ್ ಪಾಲಿಸಿ ತರಲು ಮುಂದಾಗಿದೆ.

ಒನ್ ಚಾರ್ಜರ್ ಪಾಲಿಸಿ ಜಾರಿಗೆ ಬಂದರೆ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳು ಕೂಡ ಯುಎಸ್‌ಬಿ-ಸಿ ಪೋರ್ಟ್ ಚಾರ್ಜರ್ ಅನ್ನು ಬೆಂಬಲಿಸಲಿವೆ. ಇದರಿಂದ ಹೊಸ ಸ್ಮಾರ್ಟ್ ಡಿವೈಸ್‌ಗಳಿಗೆ ಪ್ರತ್ಯೇಕವಾಗಿ ನೀವು ಚಾರ್ಜರ್ ಖರೀದಿಸುವ ಅಗತ್ಯ ಬರುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಬಳಸುವ ಚಾರ್ಜರ್ ಅನ್ನೇ ನಿಮ್ಮ ಲ್ಯಾಪ್‌ಟಾಪ್‌ಗೂ ಕೂಡ ಬಳಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ ನಿಮ್ಮ ಮನೆಯಲ್ಲಿ ಬಳಕೆಯಲ್ಲಿರುವ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳಿಗೆ ಅದೇ ಚಾರ್ಜರ್ ಅನ್ನು ಬಳಸಬಹುದು.

ಇದರಿಂದ ದೇಶದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಇ-ತ್ಯಾಜ್ಯದ ಪ್ರಮಾಣ ಕಡಿಮೆಯಾಗಲಿದೆ ಎನ್ನಲಾಗಿದೆ. ಏಕೆಂದರೆ ಭಾರತ 2021 ರಲ್ಲಿ 5 ಮಿಲಿಯನ್ ಟನ್‌ಗಳಷ್ಟು ಇ-ತ್ಯಾಜ್ಯವನ್ನು ಉತ್ಪಾದಿಸಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಗಂಬೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರುವ ಪ್ರಯತ್ನದಲ್ಲಿ. ಇದಕ್ಕಾಗಿ ಅಂತರ-ಸಚಿವಾಲಯ ಕಾರ್ಯಪಡೆಯನ್ನು ಕೂಡ ರಚಿಸಿದೆ. ಈ ಕಾರ್ಯಪಡೆಯ ಸಭೆಯಲ್ಲಿ ಎಲ್ಲ ಮಧ್ಯಸ್ಥಗಾರರು ಒಮ್ಮತದ ನಿರ್ಧಾರವನ್ನು ತೆಗೆದುಕೊಂಡ ನಂತರ ಒನ್ ಚಾರ್ಜರ್ ಪಾಲಿಸಿ ಜಾರಿಗೆ ಬರಲಿದೆ.

ಒನ್ ಚಾರ್ಜರ್ ಪಾಲಿಸಿ ಜಾರಿಗೆ ತರಲು ಮುಂದಾಗಿರುವ ದೇಶಗಳಲ್ಲಿ ಭಾರತವೇ ಮೊದಲೇನಲ್ಲ. ಈಗಾಗಲೇ ಮುಂದುವರೆದ ದೇಶಗಳಲ್ಲಿ ಪ್ರಮಾಣಿತ ಚಾರ್ಜಿಂಗ್ ಡಿವೈಸ್‌ಗಳು ಮತ್ತು ಪೋರ್ಟ್‌ಗಳ ಕಡೆಗೆ ಬದಲಾಗಿವೆ. ಇದರಲ್ಲಿ ಯುರೋಪಿಯನ್ ಯೂನಿಯನ್ (EU) ಯುಎಸ್‌ಬಿ-ಸಿ ಪೋರ್ಟ್ ಅನ್ನು ಎಲ್ಲಾ ಡಿವೈಸ್‌ಗಳಿಗೂ ಅನ್ವಯವಾಗುವಂತೆ ಮಾಡುವುದಕ್ಕೆ ಮುಂದಾಗಿದೆ. ಆಪಲ್‌ನ ಐಫೋನ್ ಸೇರಿದಂತೆ EU ನಲ್ಲಿ ಮಾರಾಟವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳನ್ನು 2024 ರ ಮಧ್ಯದ ವೇಳೆಗೆ USB-C ಪೋರ್ಟ್ ಬೆಂಬಲಿಸಬೇಕು ಎಂದು EU ತಾತ್ಕಾಲಿಕ ಕಾನೂನನ್ನು ಕೂಡ ಅಂಗೀಕರಿಸಿದೆ. .

ಇನ್ನು ಭಾರತದಲ್ಲಿ ಅಂತರ್-ಸಚಿವಾಲಯ ಕಾರ್ಯಪಡೆ ನಡೆಸಿದ ಸಭೆಯಲ್ಲಿ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಹಾರಾಜ ಅಗ್ರಸೇನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭಾರತೀಯ ಕೈಗಾರಿಕಾ ಒಕ್ಕೂಟ, ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರತಿನಿಧಿಗಳು ಭಾಗವಹಿಸಿದ್ದರು ಎನ್ನಲಾಗಿದೆ. ಇದರಲ್ಲಿ ಎಲ್ಲಾ ಡಿವೈಸ್‌ಗಳಿಗೂ ಯುಎಸ್‌ಬಿ ಸಿ ಪೋರ್ಟ್ ಚಾರ್ಜ್ ಅನ್ನು ಬಳಸುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.


Click it and Unblock the Notifications








