ಭಾರತೀಯರ ಮೇಲೆ ದಾಳಿ ಮಾಡಲು ರಷ್ಯಾ ಮತ್ತೆ ಅಮೆರಿಕ ನಡುವೆ ಪೈಪೋಟಿ!!

|

ಭಾರತವನ್ನು ಗುರಿಯಾಗಿಸಿ ರಷ್ಯಾ 2,55,589 ಸೈಬರ್ ದಾಳಿ ನಡೆಸಿದ್ದರೆ, ಅಮೆರಿಕ 1,03.458 ಸೈಬರ್ ದಾಳಿ ನಡೆಸಿದೆ. ದೇಶದ ಮೇಲೆ ನಡೆದ ದಾಳಿ ಸಂಖ್ಯೆಯ ಪ್ರಕಾರ ಭಾರತ ಜಾಗತಿಕವಾಗಿ 21ನೇ ಸ್ಥಾನ ಪಡೆದಿದ್ದರೆ, ಭಾರತ ನಡೆಸಿದ ದಾಳಿಯ ಪ್ರಕಾರ 13ನೇ ಸ್ಥಾನ ಪಡೆದಿದೆ. ಇಂತಹದೊಂದು ಶಾಕಿಂಗ್ ರಿಪೋರ್ಟ್ ಅನ್ನು ಎಫ್-ಸೆಕ್ಯೂರ್ ಬಿಡುಗಡೆ ಮಾಡಿದೆ.

ಹೌದು, ಸೈಬರ್ ಭದ್ರತೆ ಒದಗಿಸುವ ಎಫ್-ಸೆಕ್ಯೂರ್ ದೇಶದ ಇಂಟರ್‌ನೆಟ್‌ ಬಳಕೆದಾರರನ್ನು ಗುರಿಯಾಗಿಸಿ ನಡೆಸುವ ಸೈಬರ್ ದಾಳಿಯ ಬಗ್ಗೆ ತನ್ನ ನೂತನ ವರದಿಯಲ್ಲಿ ತಿಳಿಸಿದೆ. ಹ್ಯಾಕರ್‌ಗಳಿಗೆ ತಿಳಿಯದಂತೆ ಅವರ ಕಣ್ಣಿಗೆ ಮಣ್ಣೆರಚುವ ಮೂಲಕ ಎಫ್-ಸೆಕ್ಯೂರ್ ರಿಪೋರ್ಟ್ ಇಂತಹದೊಂದು ರಿಪೋರ್ಟ್ ನೀಡಿರುವುದು ಭಾರತೀಯರಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಭಾರತೀಯರ ಮೇಲೆ ದಾಳಿ ಮಾಡಲು ರಷ್ಯಾ ಮತ್ತೆ ಅಮೆರಿಕ ನಡುವೆ ಪೈಪೋಟಿ!!

ನೋಡಲು ಸಂಸ್ಥೆಯೊಂದರ ಸರ್ವರ್‌ನಂತೆ ಮತ್ತು ಕ್ಷೀಣವಾಗಿರುವಂತೆ ಕಾಣಿಸುವ ಹನಿಪಾಟ್ ಸರ್ವರ್‌ಗಳನ್ನು ಹೊಂದಿರುವ ಎಫ್-ಸೆಕ್ಯೂರ್ ಸಂಸ್ಥೆ ಜಗತ್ತಿನಾದ್ಯಂತ 41ಕ್ಕೂ ಅಧಿಕ ಹನಿಪಾಟ್‌ಗಳನ್ನು ಇರಿಸಿದೆ. ಇದರ ಮೂಲಕ ಹ್ಯಾಕರ್‌ಗಳಿಗೆ ತಿಳಿಯದಂತೆ ಅವರ ಕಣ್ಣಿಗೆ ಮಣ್ಣೆರಚಿ ಹ್ಯಾಕರ್‌ಗಳು ಹೊಂದಿರುವ ನೂತನ ತಂತ್ರಗಳ ಕುರಿತು ಮಾಹಿತಿ ಸಂಗ್ರಹಿಸುತ್ತದೆ.

ಎಫ್-ಸೆಕ್ಯೂರ್ ರಿಪೋರ್ಟ್ ಪ್ರಕಾರ, ವರ್ಷದ ಜನವರಿಯಿಂದ ಜೂನ್‌ವರೆಗೆ 6.95 ಲಕ್ಷಕ್ಕೂ ಅಧಿಕ ಸೈಬರ್ ದಾಳಿಗಳು ಭಾರತದ ಬಳಕೆದಾರರ ಮೇಲೆ ನಡೆದಿವೆ. ಇವುಗಳಲ್ಲಿ ಭಾರತೀಯರಿಗೆ ಮೋಸ ಮಾಡಲು ರಷ್ಯಾ ಮತ್ತೆ ಅಮೆರಿಕ ದೇಶಗಳ ನಡುವೆ ಪೈಪೋಟಿ ನಡೆದಿದ್ದು, ರಷ್ಯಾದಿಂದ 2,55,589 ಹಾಗೂ ಅಮೆರಿಕದಿಂದ 1,03.458 ಸೈಬರ್ ದಾಳಿಗಳು ನಡೆಸಿವೆ ಎಂದು ತಿಳಿಸಿದೆ.

ಭಾರತೀಯರ ಮೇಲೆ ದಾಳಿ ಮಾಡಲು ರಷ್ಯಾ ಮತ್ತೆ ಅಮೆರಿಕ ನಡುವೆ ಪೈಪೋಟಿ!!

ಈ ವರದಿಯಲ್ಲಿ, ರಷ್ಯಾ, ಅಮೆರಿಕ ಮತ್ತಿ ಚೀನಾಗಿಂತ ಅತ್ಯಂತ ಹೆಚ್ಚಿನ ಸಂಖ್ಯೆಯ ಸೈಬರ್ ದಾಳಿ ಭಾರತದ ಮೇಲೆ ನಡೆದಿದೆ ಎಂಬ ಶಾಕಿಂಗ್ ಸುದ್ದಿ ಕೂಡ ಸೇರಿದೆ. ಇನ್ನು ಇದೇ ಸಂದರ್ಭದಲ್ಲಿ ದೇಶದ ಹ್ಯಾಕರ್‌ಗಳು ಆಸ್ಟ್ರಿಯಾ, ನೆದರ್ಲೆಂಡ್, ಇಂಗ್ಲೆಂಡ್ ಮತ್ತು ಜಪಾನ್ ಬಳಕೆದಾರರನ್ನು ಗುರಿಯಾಗಿಸಿ 35,563 ಸೈಬರ್ ದಾಳಿಗಳನ್ನು ನಡೆಸಿದ್ದಾರೆ ಎಂದು ಹೇಳಿದೆ.

ಓದಿರಿ: ಶಾಕಿಂಗ್!..ಸಂಶೋಧನೆಯ ಪ್ರಕಾರ ಮೊಬೈಲ್ ಸ್ಫೋಟಕ್ಕೆ ನಿಖರ ಕಾರಣ ಇದಂತೆ!

Best Mobiles in India

English summary
However, India took the 13th spot in terms of hackers initiating attacks with ... India witnessed over 4.36 lakh cyberattacks from Russia, US. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X