ಭಾರತೀಯ ವಾಯುಸೇನೆಯಿಂದ ಹೊಸ ಆನ್‌ಲೈನ್ ಗೇಮ್!..ನೀವೇ ಈಗ ಅಭಿನಂದನ್!

|

ದೇಶದ ಯುವಜನತೆಯ ಗೇಮಿಂಗ್ ಒಲವನ್ನು ಗಮನಿಸಿರುವ ಭಾರತೀಯ ವಾಯುಸೇನೆ ತನ್ನದೇ ವಿಶಿಷ್ಟ ರೀತಿಯ ಮೊಬೈಲ್ ಗೇಮ್ ಅನ್ನು ಪರಿಚಯಿಸಿದೆ. ಯುವ ಸಮುದಾಯವನ್ನು ಸೆಳೆಯುವ ಸಲುವಾಗಿ Indian Air Force: A Cut Above' ಎಂಬ ಗೇಮ್ ಅನ್ನು ಪರಿಚಯಿಸಿರುವ ವಾಯುಸೇನೆ, ಪಬ್‌ಜಿಯಂತಹ ಗೇಮ್‌ಗಳಿಗೆ ಪೈಪೋಟಿ ನೀಡಲು ತಯಾರಾಗಿದೆ.

ಭಾರತೀಯ ವಾಯುಸೇನೆಯಿಂದ ಹೊಸ ಆನ್‌ಲೈನ್ ಗೇಮ್!..ನೀವೇ ಈಗ ಅಭಿನಂದನ್!

ಹೌದು, ದೆಹಲಿಯಲ್ಲಿ ಇತ್ತೀಚಿಗಷ್ಟೇ ನಡೆದ ವಿಶೇಷ ಕಾರ್ಯಕ್ರಮದಲ್ಲಿ ವಾಯುಪಡೆಯ ಮುಖ್ಯಸ್ಥರಾದ ಬಿರಿಂದರ್ ಸಿಂಗ್ ಧನೋವಾ ಅವರು, Indian Air Force: A Cut Above' ಗೇಮ್ ಬಿಡುಗಡೆ ಮಾಡಿದ್ದಾರೆ. ಈ ಗೇಮ್ ಮೂಲಕ ಭಾರತೀಯ ವಾಯುಪಡೆಯ ಕುರಿತು ಯುವ ಜನತೆಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಮುಖ್ಯ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ವಾಯುಸೇನೆಯ ಈ 'Indian Air Force: A Cut Above' ಎಂಬುದು ಆನ್‌ಲೈನ್‌ನಲ್ಲಿ ಸಿಂಗಲ್ ಪ್ಲೇಯರ್ ಮತ್ತು ಮಲ್ಟಿ ಪ್ಲೇಯರ್ ಆಗಿ ಆಡಬಹುದಾದ 3D ಏರ್ ಕಾಂಬ್ಯಾಟ್ ಗೇಮ್ ಆಗಿದ್ದು, ಈ ಆಟದಲ್ಲಿ ಹತ್ತು ಮಿಷನ್‌ಗಳಿದ್ದು, ಪ್ರತಿ ಮಿಷನ್‌ನಲ್ಲೂ 3 ಆಟಗಳಿವೆ. ಅಂದರೆ, 3 ಕಾರ್ಯಾಚರಣೆಗಳಿವೆ. ಒಟ್ಟಾರೆಯಾಗಿ ಇದರಲ್ಲಿ ಒಟ್ಟು 30 ಮಿಷನ್ ಗೇಮ್‌ಗಳನ್ನು ನೀಡಲಾಗಿದೆ.

ಭಾರತೀಯ ವಾಯುಸೇನೆಯಿಂದ ಹೊಸ ಆನ್‌ಲೈನ್ ಗೇಮ್!..ನೀವೇ ಈಗ ಅಭಿನಂದನ್!

ಇನ್ನು ಈ ಗೇಮ್‌ನಲ್ಲಿ ವಾಯುಪಡೆಯಲ್ಲಿರುವ ಫೈಟರ್, ಹೆಲಿಕಾಪ್ಟರ್, ಏರ್ಡಿಫೆನ್ಸ್ ಮತ್ತು ಏರ್ಕ್ರಾಫ್ಟ್‌ಗಳೊಂದಿಗೆ, ಭವಿಷ್ಯದಲ್ಲಿ ಸೇರಲಿರುವ ಫೈಟ್ ಮತ್ತು ಕಾಂಬಾಟ್ ಏರ್ ಕ್ರಾಫ್ಟ್ಗಳನ್ನೂ ಸಹ ಕಾಣಬಹುದಾಗಿದೆ. ಪಾಕಿಸ್ಥಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ದೇಶದ ಹೆಮ್ಮೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಪಾತ್ರವನ್ನೂ ಇಲ್ಲಿ ಸೃಷ್ಟಿಸಲಾಗಿದೆ.

ಇದು ಮೊದಲ ಹಂತದ ಗೇಮ್ ಆಗಿದೆ ಎಂದು ವಾಯುಸೇನೆ ಹೇಳಿದೆ. ಮುಂಬರುವ ದಿನಗಳಲ್ಲಿ ಈ ಗೇಮ್‌ನ ಎರಡನೇ ಹಂತ ಕೂಡ ಬಿಡುಗಡೆಯಾಗಲಿದ್ದು, ಅದು ಮಲ್ಟಿಪ್ಲೇಯರ್ ಗೇಮ್ ಆಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2ನೇ ಹಂತದ ಗೇಮ್ ಅನ್ನು ವಾಯುಪಡೆ ದಿನಾಚರಣೆಯಂದು ಬಿಡುಗಡೆ ಮಾಡುವುದಾಗಿ ವಾಯುಪಡೆ ಮುಖ್ಯಸ್ಥ ಬಿ.ಎಸ್ ಧನೋವಾ ಅವರು ತಿಳಿಸಿದ್ದಾರೆ.

ವಿಶ್ವವೇ ಎದುರುನೋಡುತ್ತಿರುವ 'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆ ಸಮಯ ಫಿಕ್ಸ್!ವಿಶ್ವವೇ ಎದುರುನೋಡುತ್ತಿರುವ 'ಗ್ಯಾಲಕ್ಸಿ ಫೋಲ್ಡ್' ಬಿಡುಗಡೆ ಸಮಯ ಫಿಕ್ಸ್!

2014 ರಲ್ಲಿ ಮೊಟ್ಟ ಮೊದಲ ಬಾರಿಗೆ ವಾಯುಪಡೆಯು ಮೊಬೈಲ್ ಗೇಮ್ ಅನ್ನು ಪ್ರಾರಂಭಿಸಿತ್ತು. ಆದರೆ, ಈ ನೂತನ ಗೇಮ್ ಸಾಕಷ್ಟು ವಿಶೇಷತೆ ಹೊಂದಿದೆ. ಈ ಗೇಮ್‌ನ ಮೂಲಕ ಸೇನೆಯ ರಾಫಲ್ ಫೈಟರ್ ಜೆಟ್‌ಗಳನ್ನು ಹಾರಿಸಲು ಸಾಧ್ಯವಾಗುತ್ತದೆ. ವಾಯುಸೇನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗೆಗೆ ಮಾಹಿತಿ ತಿಳಿಯಬಹುದಾದ ಅಂಶಗಳು ಸೇರಿವೆ.

Best Mobiles in India

English summary
Indian Air Force launches the mobile game, features Wg Cdr Abhinandan Varthaman. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X