ಭಾರತದ ಸೋಲಾರ್ ವಿಮಾನ ನಿಲ್ದಾಣ ವಿಶ್ವದಲ್ಲೇ ಪ್ರಥಮ

Written By:

ಏರ್ ಕಂಡೀಶನಿಂಗ್, ಪ್ಯಾಸೆಂಜರ್ ಲಾಂಜಸ್, ಡಿಪಾರ್ಚರ್ ಪ್ರದೇಶಗಳು ಮುಂತಾಗಿ ಏರ್‌ಪೋರ್ಟ್‌ಗಳು ಹೆಚ್ಚಿನ ವಿದ್ಯುತ್ ಶಕ್ತಿಯನ್ನು ಬಳಸಿಕೊಳ್ಳುತ್ತವೆ. ಭಾರತದಂತಹ ದೇಶಗಳು ಲೋಡ್ ಶೆಡ್ಡಿಂಗ್ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಏರ್‌ಪೋರ್ಟ್‌ಗಳ ನಿರ್ವಹಣೆ ತುಸು ಕಷ್ಟದ ಮಾತಾಗಿದೆ. ಆದರೆ ನಮ್ಮ ದೇಶದಲ್ಲೂ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ.

ಓದಿರಿ: ಉಪ್ಪುನೀರಿನ ಲ್ಯಾಂಪ್‌ನಿಂದ 8 ಗಂಟೆ ಬೆಳಕು

ಬನ್ನಿ ಇಂದಿನ ಲೇಖನದಲ್ಲಿ ಇಂತಹ ಏರ್‌ಪೋರ್ಟ್ ಸಮಸ್ಯೆಗೂ ಪರಿಹಾರವನ್ನು ಕಂಡುಕೊಂಡಿದ್ದು ಅದೇನು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಲಾರ್ ಶಕ್ತಿ

ವಿಶ್ವದಲ್ಲೇ ಪ್ರಥಮ

ಕೊಚ್ಚಿಯ ಅಂತರಾಷ್ಟ್ರೀಯ ಏರ್‌ಪೋರ್ಟ್ ಸೋಲಾರ್ ಶಕ್ತಿಯನ್ನು ಬಳಸಿಕೊಂಡು ನಿರ್ವಹಣೆ ಪಡೆದುಕೊಳ್ಳುತ್ತಿರುವ ವಿಶ್ವದ ಪ್ರಥಮ ಏರ್‌ಪೋರ್ಟ್ ಆಗಿದೆ.

ಸೋಲಾರ್ ಪವರ್ ಪ್ಲಾಂಟ್

ಪ್ರತ್ಯೇಕ ಪವರ್ ಪ್ಲಾಂಟ್

ಏರ್‌ಫೀಲ್ಡ್‌ಗೆ ನಂತರದ ಪ್ರದೇಶದಲ್ಲಿ ಪ್ರತ್ಯೇಕ ಸೋಲಾರ್ ಪವರ್ ಪ್ಲಾಂಟ್ ಅನ್ನು ಇನ್‌ಸ್ಟಾಲ್ ಮಾಡಲಾಗಿದೆ.

12 ಮೆಗಾವ್ಯಾಟ್‌

ಸೌರವ್ಯವಸ್ಥೆ ಯೋಜನೆ

45 ಎಕರೆಗಳಲ್ಲಿ 46,150 ಪ್ಯಾನೆಲ್‌ಗಳಾದ್ಯಂತ ಸೌರವ್ಯವಸ್ಥೆ ಯೋಜನೆ ಹರಡಿಕೊಂಡಿದೆ. 12 ಮೆಗಾವ್ಯಾಟ್‌ಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.

ಜನರಿಗೆ ಒದಗಿಸುವ ಯೋಜನೆ ಕೂಡ

ಹೆಚ್ಚುವರಿ ಶಕ್ತಿ

ಇನ್ನು ಇದರಿಂದ ಉತ್ಪಾದಿತವಾದ ಹೆಚ್ಚುವರಿ ಶಕ್ತಿಯನ್ನು ಸ್ಥಳೀಯ ಜನರಿಗೆ ಒದಗಿಸುವ ಯೋಜನೆ ಕೂಡ ಇದರಲ್ಲಿ ಅಡಗಿದೆ.

ಮುಂದಿನ 25 ವರ್ಷಗಳಲ್ಲಿ ಉಳಿಸಲು

ಹೊಸ ವ್ಯವಸ್ಥೆಯ ಅಳವಡಿಸುವಿಕೆ

ಈ ಹೊಸ ವ್ಯವಸ್ಥೆಯ ಅಳವಡಿಸುವಿಕೆಯೊಂದಿಗೆ ಏರ್ಪೋರ್ಟ್ 300,000 ಮೆಟ್ರಿಕ್ ಟೋನ್‌ಗಳಷ್ಟು ಕಾರ್ಬನ್ ಡಯಾಕ್ಸೈಡ್‌ಗಳನ್ನು ಮುಂದಿನ 25 ವರ್ಷಗಳಲ್ಲಿ ಉಳಿಸಲು ಸಾಧ್ಯವಾಗುತ್ತದೆ.

ವಿಶ್ವದ ಎಲ್ಲಾ ಏರ್‌ಪೋರ್ಟ್‌

ಇದೇ ರೀತಿಯ ವ್ಯವಸ್ಥೆ

ಇನ್ನು ಇದೇ ರೀತಿಯ ವ್ಯವಸ್ಥೆಯನ್ನು ವಿಶ್ವದ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಅಳವಡಿಸುವುದರಿಂದ ಇನ್ನೆಷ್ಟು ಪ್ರಮಾಣದ ನೈಸರ್ಗಿಕ ಶಕ್ತಿಯನ್ನು ಉಳಿಸಬಹುದು ಎಂಬುದನ್ನು ಯೋಚಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Chochin International Airport is the world’s only airport operating entirely on solar energy giving the growing renewable energy industry of the developing nation a good boost.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot