ಇನ್ಮುಂದೆ ನಿಮ್ಮ ATM ಕಾರ್ಡ್ ಹಣವನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲಾ!!..ಏಕೆ ಗೊತ್ತಾ?

ನೂತನ ತಂತ್ರಜ್ಞಾನವನ್ನು ಬಳಕೆಗೆ ಬರುತ್ತಿದ್ದು, ಭವಿಷ್ಯದಲ್ಲಿ ಕಾರ್ಡ್‌ ವಂಚನೆಗಳು ನಿಲ್ಲುವ ಸೂಚನೆ ಸಿಕ್ಕಿದೆ.!!

|

ಎಟಿಎಂ ಕಾರ್ಡ್‌ ಅಥವಾ ಡೆಬಿಟ್ ಕಾರ್ಡ್‌ಗಳಿಂದ ಬ್ಯಾಂಕಿಂಗ್ ಕಾರ್ಯಗಳೇನೊ ಸುಲಭವಾದರೆ, ಸೈಬರ್ ಕ್ರಿಮಿನಲ್ ಚಟುವಟಿಕೆಗಳು ಭಾರಿ ಹೆಚ್ಚಾಗಿವೆ. ಪ್ರತಿದಿನವೂ ಹಣ ಕಳೆದುಕೊಂಡವರ ಸುದ್ದಿ ಎಲ್ಲೆಡೇ ಹರಿದಾಡುತ್ತಿದೆ.! ಆದರೆ, ಇನ್ನು ಹಾಗಾಗುವುದಿಲ್ಲ.!!

ನಿಮ್ಮ ಮಾಮೂಲಿ TV ಗೂ ಇಂಟರ್ನೆಟ್ ಬೇಕಾ..?ನಿಮ್ಮ ಮಾಮೂಲಿ TV ಗೂ ಇಂಟರ್ನೆಟ್ ಬೇಕಾ..?

ಹೌದು, ಸದ್ಯ ದೇಶದಲ್ಲಿ ಮ್ಯಾಗ್ನೆಟಿಕ್ ಸ್ಟ್ರಿಪ್ ಇರುವ ಡೆಬಿಟ್‌ ಕಾರ್ಡ್‌ಗಳ ಸಂಖ್ಯೆ ಹೆಚ್ಚಿದ್ದು, ವಂಚಕರು ಮ್ಯಾಗ್ನೆಟಿಕ್‌ ಸ್ಟ್ರಿಪ್‌ನಲ್ಲಿರುವ ಮಾಹಿತಿ ಕದಿಯಲು ಸ್ಕಿಮ್ಮಿಂಗ್ ತಂತ್ರಜ್ಞಾನ ಬಳಸುತ್ತಿದ್ದರು. ಆದರೆ, ಇದೀಗ ನೂತನ ತಂತ್ರಜ್ಞಾನವನ್ನು ಬಳಕೆಗೆ ಬರುತ್ತಿದ್ದು, ಭವಿಷ್ಯದಲ್ಲಿ ಕಾರ್ಡ್‌ ವಂಚನೆಗಳು ನಿಲ್ಲುವ ಸೂಚನೆ ಸಿಕ್ಕಿದೆ.!!

ಸದ್ಯ ಅತ್ಯಂತ ಹೆಚ್ಚು ತಂತ್ರಜ್ಞಾನ ಹೊಂದಿರುವ ಎರಡು ಮಾದರಿಯ ನೂತನ ಹಣ ವರ್ಗವಣೆ ವ್ಯವಸ್ಥೆ ಜಾರಿಯಲ್ಲಿದ್ದು, ಮುಂದಿನ ದಿವಸಗಳಲ್ಲಿ ಈ ಸೇವೆ ದೇಶದೆಲ್ಲೆಡೆಡೇ ಚಾಲ್ತಿಗೆ ಬರುವ ದಿವಸಗಳು ದೂರವಿಲ್ಲಾ.!! ಹಾಗಾದರೆ, ಆ ಹೆಚ್ಚು ತಂತ್ರಜ್ಞಾನ ಸೇವೆಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬಯೊ ಮೆಟ್ರಿಕ್‌ ಎಟಿಎಂ

ಬಯೊ ಮೆಟ್ರಿಕ್‌ ಎಟಿಎಂ

ಡೆಬಿಟ್ ಕಾರ್ಡ್‌/ ಪಿನ್‌ ವಂಚನೆ ತಡೆಯಲು ಹಲವು ಬ್ಯಾಂಕ್‌ಗಳು ಬಯೊ ಮೆಟ್ರಿಕ್‌ ಆಧಾರಿತ ಎಟಿಎಂಗಳನ್ನು ಪರಿಚಯಿಸಿವೆ. ಇದರಿಂದ ಗ್ರಾಮೀಣ ಭಾಗದ ಅನಕ್ಷರಸ್ಥ ಗ್ರಾಹಕರನ್ನು ತಲುಪಲೂ ಬ್ಯಾಂಕ್‌ಗಳಿಗೆ ಅನುಕೂಲವಾಗಿದೆ. ಈ ತಂತ್ರಜ್ಞಾನದಿಂದ ಪಿನ್‌ ಮರೆಯುವ ಅಥವಾ ಬೇರೆಯವರು ದುರ್ಬಳಕೆ ಮಾಡುವ ಆತಂಕ ಇರುವುದಿಲ್ಲ.

ಹೆಬ್ಬೆಟ್ಟಿನ ಗುರುತು!!

ಹೆಬ್ಬೆಟ್ಟಿನ ಗುರುತು!!

ಪಿನ್‌ ಬಳಸುವ ಬದಲಿಗೆ ಹೆಬ್ಬೆಟ್ಟಿನ ಗುರುತು ನೀಡಿ ಹಣ ವರ್ಗಾವಣೆ ನಡೆಸುವ ಸೌಲಭ್ಯವನ್ನು ಬಯೊ ಮೆಟ್ರಿಕ್‌ ಎಟಿಎಂಗಳಲ್ಲಿ ಜಾರಿಗೆ ತರಲಾಗುತ್ತಿದೆ.! ಅನಕ್ಷರಸ್ಥರೂ ಕೂಡ ಯಾವುದೇ ಭಯವಿಲ್ಲದೇ ಬ್ಯಾಂಕ್ ವ್ಯವಹಾರ ಮಾಡಬಹುದಾಗಿದ್ದು, ಹೆಬ್ಬೆಟ್ಟಿನ ಗುರುತಿನ ಮೂಲಕ ಹೆಚ್ಚಿನ ಸುರಕ್ಷತೆ ದೊರೆಯುತ್ತದೆ!!

ಕಣ್ಣನ್ನು ಸ್ಕ್ಯಾನ್ ಮಾಡುತ್ತವೆ ಎಟಿಎಂಗಳು.!!

ಕಣ್ಣನ್ನು ಸ್ಕ್ಯಾನ್ ಮಾಡುತ್ತವೆ ಎಟಿಎಂಗಳು.!!

ಹೆಬ್ಬೆಟ್ಟಿನ ಗುರುತನ್ನು ಸಹ ನಕಲು ಮಾಡಿ ಹಣ ಖದಿಯುವ ಖದೀಮರಿರುತ್ತಾರೆ. ಹಾಗಾಗಿಗೇ, ಕ್ಯಾಮೆರಾದಲ್ಲಿ ಕಣ್ಣನ್ನು ಸ್ಕ್ಯಾನ್ ಮಾಡುವ ವ್ಯವಸ್ಥೆ ಸಹ ಶೀಘ್ರದಲ್ಲಿಯೇ ಎಟಿಎಂಗಳಲ್ಲಿ ಜಾರಿಗೆ ಬರಲಿದೆ. ಹೆಬ್ಬೆಟ್ಟಿನ ಗುರುತು ಮತ್ತು ಕಣ್ಣಿನ ಗುರುತು ಎರಡೂ ಇದ್ದರೆ ಯಾರೂ ಮೋಸ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು.!!

ಚಿಪ್‌ ಆಧಾರಿತ ಕಾರ್ಡ್‌ ಬಂದಿವೆ.!!

ಚಿಪ್‌ ಆಧಾರಿತ ಕಾರ್ಡ್‌ ಬಂದಿವೆ.!!

ಕಾರ್ಡ್ ಬಳಕೆದಾರನ ಖಾತೆಯ ಮಾಹಿತಿಯನ್ನು ಒಂದು ಚಿಪ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಜೊತೆಗೆ ಆ ಮಾಹಿತಿಯು ಗೂಢಲಿಪಿಯಲ್ಲಿ (ಎನ್‌ಕ್ರಿಪ್ಟ್) ಇರುತ್ತದೆ. ಈ ಚಿಪ್‌ ಆಧಾರಿತ ಕಾರ್ಡ್‌ ‘ಪಿನ್‌' ನೀಡಿದರೆ ಮಾತ್ರವೇ ಹಣ ವರ್ಗಾವಣೆ ಸಾಧ್ಯ. ಹೀಗಾಗಿ ಕಾರ್ಡ್‌ ನಕಲು ಮಾಡಲು ಆಗುವುದಿಲ್ಲ. ಹಾಗಾಗಿ, ಮುಂದೆ ಚಿಪ್‌ಕಾರ್ಡ್‌ಗಳ ಮೂಲಕ ಹಣ ವ್ಯವಹಾರ ಯೋಗ್ಯ.!!

<strong>ಒಂದು ಕಡೆ ಕಚ್ಚಿರುವ ರೀತಿಯಲ್ಲಿ ಆಪಲ್ ಲೋಗೊ ತಯಾರಾಗಿದ್ದು ಏಕೆ? ಇಲ್ಲಿದೆ ಉತ್ತರ!!</strong>ಒಂದು ಕಡೆ ಕಚ್ಚಿರುವ ರೀತಿಯಲ್ಲಿ ಆಪಲ್ ಲೋಗೊ ತಯಾರಾಗಿದ್ದು ಏಕೆ? ಇಲ್ಲಿದೆ ಉತ್ತರ!!

Best Mobiles in India

Read more about:
English summary
Biometric ATMs are self-service automated teller machines (ATMs), or cash machines, that use abiometric measure to identify customers and allow them to withdraw cash. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X