ಡಿಜಿಟಲ್ ಕರೆನ್ಸಿ ಬಳಸಿದರೆ ಬ್ಯಾಂಕ್‌ಗಳಿಂದ ಸಿಗಲಿದೆ ಭರ್ಜರಿ ಕ್ಯಾಶ್‌ಬ್ಯಾಕ್! ಏನಿದು ಇ-ರೂಪಾಯಿ!
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಕರೆನ್ಸಿ ಇ-ರೂಪಾಯಿಯ ಬಗ್ಗೆ ಬ್ಯಾಂಕ್‌ಗಳಿಂದ ಸಂದೇಶ ಬರುತ್ತಿರುವುದನ್ನು ನೀವು ಗಮನಿಸಿರಬಹುದು. ಇದು ದೇಶದಲ್ಲಿ ಡಿಜಿಟಲ್ ಕರೆನ್ಸಿ ಇ-ರೂಪಾಯಿಯನ್ನು ಬಳಸುವುದಕ್ಕೆ ಪ್ರೋತ್ಸಾಹ ನೀಡುವ ಅಭಿಯಾನವಾಗಿದೆ. ಡಿಜಿಟಲ್ ಕರೆನ್ಸಿ ಪ್ರಮಾಣವನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಪ್ರೋತ್ಸಾಹಕ ಅಭಿಯಾನವನ್ನು ನಡೆಸುತ್ತಿದೆ.
ಹೌದು, ದೇಶದಲ್ಲಿ ಡಿಜಿಟಲ್ ಕರೆನ್ಸಿಯನ್ನು ಬಳಸುವುದಕ್ಕೆ ಪ್ರೋತ್ಸಾಹಕ ಅಭಿಯಾನ ನಡೆಸಲಾಗ್ತಿದೆ. ಇದರ ಅಂಗವಾಗಿ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಇ-ರುಪಿ ಬಗ್ಗೆ ವಿಶೇಷ ಸಂದೇಶಗಳನ್ನು ಕಳುಹಿಸುತ್ತಿವೆ. ಅಲ್ಲದೆ ಇ-ರೂಪಾಯಿ ಮೂಲಕ ವಹಿವಾಟು ನಡೆಸುವ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ನಂತಹ ರಿವಾರ್ಡ್‌ಗಳನ್ನು ಸಹ ನೀಡುತ್ತಿವೆ. ಹಾಗಾದ್ರೆ ಇ-ರೂಪಾಯಿ ಬಳಸಿದರೆ ಬ್ಯಾಂಕ್‌ಗಳು ನೀಡುತ್ತಿರುವ ರಿವಾರ್ಡ್‌ಗಳೇನು? ಡಿಜಿಟಲ್ ರೂಪಾಯಿ ಹೇಗೆ ಬಳಕೆಯಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಜಿಟಲ್ ಕರೆನ್ಸಿ ಬಳಸುವವರಿಗೆ ಸಿಗಲಿದೆ ಬಂಪರ್ ಕ್ಯಾಶ್‌ಬ್ಯಾಕ್
ದೇಶದಲ್ಲಿ ಈಗಾಗಲೇ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಸಲಾಗಿದೆ. ಇದರ ಮುಂದುವರೆದ ಭಾಗವಾಗಿ ದೇಶದ ಪ್ರಮುಖ ಬ್ಯಾಂಕ್‌ಗಳು ಕೂಡ ತಮ್ಮ ಗ್ರಾಹಕರಿಗೆ ಡಿಜಿಟಲ್ ಕರೆನ್ಸಿಯ ಬಗ್ಗೆ ವಿಶೇಷ ಸಂದೇಶಗಳನ್ನು ಕಳುಹಿಸುತ್ತಿವೆ. ಅಲ್ಲದೆ ಡಿಜಿಟಲ್ ಕರೆನ್ಸಿ ಬಳಸುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್‌ನಂತಹ ಆಫರ್‌ಗಳನ್ನು ಸಹ ನೀಡುತ್ತಿವೆ. ಇದರಲ್ಲಿ HDFC ಬ್ಯಾಂಕ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇನ್ನು ಯೆಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಂತಹ ಮೈಕ್ರೋ ಫೈನಾನ್ಸ್‌ಗಳು ಕೂಡ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುತ್ತಿವೆ. ಈ ರಿವಾರ್ಡ್‌ಗಳನ್ನು ಟ್ರಾವಲ್ ಬುಕಿಂಗ್, ಮೊಬೈಲ್ ರೀಚಾರ್ಜ್‌ಗಳು ಮತ್ತು ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆ ಫಾಸ್ಟ್‌ಟ್ಯಾಗ್ ಮೂಲಕ ಎನ್‌ಕ್ಯಾಶ್ ಮಾಡಬಹುದು. ಇದಲ್ಲದೆ ICICI ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್‌ನ ಕಾರ್ಯನಿರ್ವಾಹಕರು ಕೂಡ ಡಿಜಿಟಲ್ ಕರೆನ್ಸಿ ಬಳಕೆದಾರರಿಗೆ ಇದೇ ರೀತಿಯ ಬಹುಮಾನಗಳನ್ನು ನೀಡುವ ನಿರೀಕ್ಷೆಯಿದೆ.
ಇ-ರೂಪಾಯಿ ಎಂದರೇನು
ಇನ್ನು ನಿಮಗೆಲ್ಲಾ ತಿಳಿದಿರುವಂತೆ ಭಾರತದಲ್ಲಿ ಕಳೆದ ವರ್ಷ ಅಂದರೆ ಡಿಸೆಂಬರ್ 2022 ರಲ್ಲಿ, RBI ಇ-ರೂಪಾಯಿಯನ್ನು ಪ್ರಾಯೋಗಿಕವಾಗಿ ಪರಿಚಯಿಸಿತು. 'ಇ-ರುಪೀ' (e-Rupee) ಸದ್ಯ ಲಭ್ಯವಿರುವ ಹಣದ ರೂಪಗಳಿಗೆ ಹೆಚ್ಚುವರಿ ಆಯ್ಕೆಯನ್ನು ಒದಗಿಸುತ್ತದೆ. ಇದು ಬ್ಯಾಂಕ್ ನೋಟುಗಳಿಗಿಂತ ಗಣನೀಯವಾಗಿ ಭಿನ್ನವಾಗಿಲ್ಲ. ಆದರೆ ಡಿಜಿಟಲ್ ಆಗಿರುವುದರಿಂದ ಇದು ಸರಳ, ವೇಗ ಮತ್ತು ಅಗ್ಗವಾಗಿದೆ. ಡಿಜಿಟಲ್ ಹಣದ ಇತರ ರೂಪಗಳ ಎಲ್ಲಾ ವಹಿವಾಟಿನ ಪ್ರಯೋಜನಗಳನ್ನೂ ಇದು ಹೊಂದಿದೆ, ಎಂದು ಆರ್‌ಬಿಐ (RBI) ಹೇಳಿದೆ.

ಇ-ರೂಪಾಯಿಯು ಸಂಪೂರ್ಣ ಡಿಜಿಟಲ್ ಆಗಿದ್ದು, ಕ್ಯಾಶ್‌ಲೆಸ್ ವಹಿವಾಟಿಗೆ ಸೂಕ್ತ ವೇದಿಕೆಯಾಗಿದೆ. ಇನ್ನು ಸೆಂಟ್ರಲ್ ಬ್ಯಾಂಕ್ 2023 ರ ಅಂತ್ಯದ ವೇಳೆಗೆ ಪ್ರತಿದಿನ ಒಂದು ಮಿಲಿಯನ್ ಡಿಜಿಟಲ್ ರೂಪಾಯಿ ವಹಿವಾಟುಗಳನ್ನು ನಡೆಸುವ ಗುರಿಯನ್ನು ಇರಿಸಿಕೊಂಡಿದೆ. ಅದರಂತೆ ಇ ರೂಪಾಯಿ ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆಸುವುದಕ್ಕಾಗಿ ಬಳಕೆದಾರರಿಗೆ ರಿವಾರ್ಡ್‌ಗಳನ್ನು ನೀಡಲಾಗ್ತಿದೆ.
'ಇ-ರುಪೀ' (e-Rupee) ಹೇಗಿರಲಿದೆ?
ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ಡಿಜಿಟಲ್ ಕರೆನ್ಸಿಯು ಪ್ರಸ್ತುತ ಚಲಾವಣೆಯಲ್ಲಿರುವ 'ಫಿಯಟ್' (ಭೌತಿಕ) ಕರೆನ್ಸಿಯಂತೆಯೇ ವಿಶಿಷ್ಟ ಅಂಕಿಗಳನ್ನು ಹೊಂದಿರುತ್ತದೆ. ಇದು 'ಫಿಯಟ್' ಕರೆನ್ಸಿಗಿಂತ ಭಿನ್ನವಾಗಿರುವುದಿಲ್ಲ. ಮೌಲ್ಯದಲ್ಲಿ ಕೂಡ ಫಿಯಟ್ ಕರೆನ್ಸಿ ಮತ್ತು ಡಿಜಿಟಲ್ ರೂಪಾಯಿ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದು ಪ್ರಸ್ತುತ ಕರೆನ್ಸಿಯ ಡಿಜಿಟಲ್ ರೂಪವಾಗಿರುತ್ತದೆ ಅಷ್ಟೇ. ಫಿಯೆಟ್ ಕರೆನ್ಸಿಯನ್ನು ಸರಕಾರವು ಹೇಗೆ ಅಧಿಕೃತವಾಗಿ ಟಂಕಿಸುತ್ತದೆಯೋ, ಹಾಗೆಯೇ ಡಿಜಿಟಲ್ ರೂಪಾಯಿ ಕೂಡ ಸರಕಾರದಿಂದ ಖಾತರಿಪಡಿಸಿದ ಡಿಜಿಟಲ್ ವ್ಯಾಲೆಟ್ ಎಂದು ಹೇಳಬಹುದು. ಇದು ಭವಿಷ್ಯದಲ್ಲಿ ಕ್ಯಾಶ್‌ಲೆಸ್ ಇಂಡಿಯಾದ ಪರಿಕಲ್ಪನೆಗೆ ಸಹಾಯ ಮಾಡಲಿದೆ ಎಂದು ಹೇಳಲಾಗಿದೆ.


Click it and Unblock the Notifications








