ವಿದ್ಯೆ ತಲೆಗೆ ಹತ್ತದಿದ್ದರೂ ಯಶಸ್ಸು ಕೈ ಬಿಡಲಿಲ್ಲ

By Shwetha
|

ಸ್ಟೀವ್ ಜಾಬ್ ಮತ್ತು ಮಾರ್ಕ್ ಜುಕರ್ ಬರ್ಗ್ ಯಶಸ್ವಿ ಟೆಕ್ ಪುರುಷರ ಹೆಸರನ್ನು ಯಾರು ಕೇಳಿರಲಿಕ್ಕಿಲ್ಲ ಹೇಳಿ. ಅವರ ಯಶಸ್ಸಿನ ಪೂರ್ವ ಕಥಾನಕವನ್ನು ವಿಶ್ಲೇಷಿಸಿದಾಗ ತಿಳಿದು ಬರುವ ಅಂಶವೆಂದರ ಅವರುಗಳು ಕಾಲೇಜು ಶಿಕ್ಷಣಕ್ಕೆ ಅರ್ಧದಲ್ಲೇ ಎಳ್ಳು ನೀರು ಬಿಟ್ಟವರು ಎಂಬುದಾಗಿದೆ. ಶಿಕ್ಷಣವೇ ನಮ್ ಯಶಸ್ಸಿನ ಮೈಲುಗಲ್ಲಾಗುವುದಿಲ್ಲ ಬದಲಿಗೆ ಸಾಧಿಸುವ ಛಲ ನಮ್ಮದಲ್ಲಿದ್ದರೆ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂಬುದನ್ನೇ ಈ ಯಶಸ್ವಿ ಉದ್ಯಮಿಗಳು ತೋರಿಸಿಕೊಟ್ಟಿದ್ದಾರೆ.

ಇಂದಿನ ಲೇಖನದಲ್ಲಿ ತಮ್ಮ ವೃತ್ತಿ ರಂಗದಲ್ಲೇ ಅದ್ಭುತ ಯಶಸ್ಸನ್ನು ಪಡೆದುಕೊಂಡಿರುವ ವ್ಯಕ್ತಿಗಳ ಪರಿಚಯವನ್ನು ನಾವು ನಿಮಗೆ ಮಾಡಿಕೊಡುತ್ತಿದ್ದು ಅವರು ಕಡಿಮೆ ಶಿಕ್ಷಣವನ್ನೇ ಪಡೆದುಕೊಂಡಿದ್ದರೂ ತಮ್ಮ ವ್ಯವಹಾರ ರಂಗದಲ್ಲಿ ಚತುರರು ಎಂದೆನಿಸಿಕೊಂಡಿದ್ದಾರೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇವರುಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳೋಣ.

#1

#1

ಪ್ರೊಗ್ರಾಮರ್ ಹಾಗೂ ವೆಬ್ ವಿನ್ಯಾಸಕಾರರಾಗಿರುವ ವರುಣ್ ಶೂರ್ ಕಾಯ್‌ಕೊ ಸಂಸ್ಥೆಯನ್ನು 2001 ರಲ್ಲಿ ಕಟ್ಟಿದರು. ತಮ್ಮ 17 ರ ಹರೆಯದಲ್ಲೇ ಕಾಲೇಜು ಶಿಕ್ಷಣಕ್ಕೆ ಎಳ್ಳು ನೀರು ಬಿಟ್ಟು ಇವರು ತಮ್ಮ ಸಂಸ್ಥೆಯನ್ನು ಕಟ್ಟಿದರು.

#2

#2

ಮಹಾರಾಷ್ಟ್ರದ ಅತಿ ಸಣ್ಣ ಹಳ್ಳಿಯಲ್ಲಿ ಜನಿಸಿದ ಕೈಲಾಶ್ ಕ್ವಿಕ್ ಹೇಲ್ ಸಂಸ್ಥೆಯ ಬೆನ್ನೆಲುಬಾಗಿದ್ದಾರೆ. ಸ್ಥಳೀಯ ರೇಡಿಯೊ ಮತ್ತು ಕ್ಯಾಲ್ಕುಲೇಟರ್ ರಿಪೇರಿ ಶಾಪ್‌ನಲ್ಲಿ ಇವರು ತಮ್ಮ ಆರಂಭಿಕ ಉದ್ಯೋಗವನ್ನು ತೊಡಗಿಸಿಕೊಂಡರು. ನಂತರ 1993 ರಲ್ಲಿ CAT ಕಂಪ್ಯೂಟರ್ ಸೇವೆಗಳನ್ನು ಆರಂಭಿಸಿ ವಿಶ್ವದಾದ್ಯಂತ ತಮ್ಮ ಉತ್ಪನ್ನಗಳನ್ನು ಪ್ರಚಾರ ಪಡಿಸಿದರು.

#3

#3

ಕಂಪ್ಯೂಟರ್ ಸೈನ್ಸ್ ಅಧ್ಯಯನಕ್ಕೆ ಗುಡ್ ಬೈ ಹೇಳಿ ತಮ್ಮ ಹವ್ಯಾಸವಾದ ಕಂಪ್ಯೂಟರ್ ಕಲಿಕೆಯನ್ನು ಅನುಸರಿಸಿದರು. ಕ್ವೆಸ್ಟ್ ಟೆಕ್ನಾಲಜೀಸ್‌ನ ಸ್ಥಾಪಕರು ಇವರೆನಿಸಿದ್ದಾರೆ.

#4

#4

ಓಲಾ ಫಾರ್ ರೂಮ್ಸ್, ಒಯೊ ರೂಮ್ಸ್‌ಗಳ ಹಿಂದಿರುವ ವ್ಯಕ್ತಿಯಾಗಿದ್ದಾರೆ. ಬಜೆಟ್ ಹೋಟೆಲ್‌ಗಳನ್ನು ಒದಗಿಸುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.

#5

#5

ಫ್ರಿಚಾರ್ಜ್ ಹೆಸರಾಂತ ಕಂಪೆನಿಯು ಮೂರು ಹಂತಗಳ ರೀಚಾರ್ಜ್ ಅನ್ನು ಆಫರ್‌ಗಳೊಂದಿಗೆ ಒದಗಿಸುತ್ತಿದೆ. ಕುನಾಲ್ ಶಾ ಮತ್ತು ಸಂದೀಪ್ ತಂಡನ್ ಈ ಸಂಸ್ಥೆಯನ್ನು ಹುಟ್ಟು ಹಾಕಿದವರು.

#6

#6

ಮಾರ್ಕೆಟಿಂಗ್ ಕೌನ್ಸಿಲ್‌ನಲ್ಲಿ 29 ವರ್ಷಗಳ ಸೇವೆಯನ್ನು ಇವರು ಒದಗಿಸಿದ್ದು ಹೊಸ ಸ್ಟಾರ್ಟಪ್‌ಗಳಿಗೆ ಮಾರುಕಟ್ಟೆ ಕೌನ್ಸಿಲ್ ಮತ್ತು ಫಂಡಿಂಗ್ ಅನ್ನು ಇವರು ಮಾಡುತ್ತಿದ್ದಾರೆ. ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಮನೆ ಮನೆಗೆ ವಾಕ್ಯೂಮ್ ಕ್ಲೀನರ್‌ನ ಮಾರಾಟವನ್ನು ಇವರು ಮಾಡಿದ್ದಾರೆ.

#7

#7

ತನ್ನ 4 ನೇ ವರ್ಷದ ಕಾಲೇಜು ಜೀವನ (ಏಳನೇ ಸೆಮಿಸ್ಟರ್) ಅನ್ನು ತ್ಯಜಿಸಿದ ಈತ ಸುದ್ದಿಯನ್ನು ಒದಗಿಸುವ ಒಂದೇ ಒಂದು ಅಪ್ಲಿಕೇಶನ್ ಅನ್ನು ತಯಾರಿಸಿ ಸುದ್ದಿಯಾಗಿದ್ದಾನೆ. 60 ಪದಗಳಲ್ಲಿ ಪ್ರತೀ ಸುದ್ದಿಯ ಒಳಹೊರಗನ್ನು ಈ ಅಪ್ಲಿಕೇಶನ್ ಬಿಚ್ಚಿಡುತ್ತದೆ.

#8

#8

ಹೌಸಿಂಗ್.ಕಾಮ್ ಸಂಸ್ಥೆಯ ಹಿಂದಿನ ರುವಾರಿಯಾಗಿದ್ದಾರೆ ರಾಹುಲ್ ಯಾದವ್. ಐಐಟಿ ಬಾಂಬೆಯಲ್ಲಿ ಓದುತ್ತಿದ್ದ ಇವರು ತಮ್ಮ 4 ವರ್ಷದ ಕಲಿಕೆಗೆ ಪೂರ್ಣವಿರಾಮವನ್ನಿಟ್ಟು ಹೌಸಿಂಗ್.ಕಾಮ್‌ನ ಒಡೆಯ ಎಂದೆನಿಸಿದ್ದಾರೆ.

#9

#9

ಇಂಟರ್ನೆಟ್ ಡೊಮೇನ್ ರಿಜಿಸ್ಟ್ರಾರ್ ಕಂಪೆನಿ ಡಿರೆಕ್ಟಿಯ ಸ್ಥಾಪಕರಾಗಿರುವ ಭವಿನ್ 1998 ರಲ್ಲಿ ತಮ್ಮ ಸಹೋದರನೊಂದಿಗೆ ಈ ಸಂಸ್ಥೆಯನ್ನು ಕಟ್ಟಿದರು.

#10

#10

ರೇಜರ್ ಫ್ಲೊ ಹಾಗೂ ಫ್ಯುಶನ್ ಚಾರ್ಟ್ಸ್ ಸಿಇಒ ಆಗಿರುವ ಪಲ್ಲವ್ ನಧಾನಿ ಮಲ್ಟಿ ಟಾಸ್ಕರ್ ಕೂಡ ಹೌದು. 16 ನೆಯ ಹರೆಯದಲ್ಲೇ ಈ ಕಂಪೆನಿಯನ್ನು ಅವರು ಆರಂಭಿಸಿದರು. ಇವರ ಈ ಸಂಸ್ಥೆಯು ಡೇಟಾ ವಿಶ್ಲೇಷಣೆ ಉತ್ಪನ್ನಗಳನ್ನು ಒದಗಿಸತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿ </a><br /><a href=ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಬಳಕೆಗೆ ಕಡಿವಾಣ ಹಾಕಿದ ದೇಶಗಳು
ತನ್ನೊಳಗೆ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿರುವ ನಿಗೂಢ ಫೋಟೋಗಳು" title="ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿ
ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಬಳಕೆಗೆ ಕಡಿವಾಣ ಹಾಕಿದ ದೇಶಗಳು
ತನ್ನೊಳಗೆ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿರುವ ನಿಗೂಢ ಫೋಟೋಗಳು" />ಒಬಾಮ ಮತ್ತು ಕಿಮ್‌ ಜಾಂಗ್‌ ಉನ್‌ ಸೆಲ್ಫಿ ಆಸ್ಕರ್‌ ಸಮಾರಂಭದಲ್ಲಿ ಹೇಗಿತ್ತು ನೋಡಿ
ಫೇಸ್‌ಬುಕ್, ಟ್ವಿಟ್ಟರ್, ಯೂಟ್ಯೂಬ್ ಬಳಕೆಗೆ ಕಡಿವಾಣ ಹಾಕಿದ ದೇಶಗಳು
ತನ್ನೊಳಗೆ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿರುವ ನಿಗೂಢ ಫೋಟೋಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
We came up with a list of college dropouts turned entrepreneurs from the Indian startup ecosystem who have taken the country by storm.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X