ಚೀನಾಗೆ ಸೆಡ್ಡು ಹೊಡೆದ ಭಾರತ: ಜಾಗತಿಕ ಉತ್ಪಾದನ ಕೇಂದ್ರವಾಗುವತ್ತ ಭಾರತದ ಹೆಜ್ಜೆ!

|

ಇದು ಟೆಕ್ನಾಲಜಿ ಜಮಾನ, ಎಲ್ಲಾ ವಲಯಗಳಲ್ಲೂ ಟೆಕ್ನಾಲಜಿ ಆಧಾರಿತ ಸೇವೆಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತ ಕೂಡ ಟೆಕ್ನಾಲಜಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದೇ ಕಾರಣಕ್ಕೆ ದೇಶದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಟೆಕ್ನಾಲಜಿ ಆಧಾರಿತ ಸೇವೆಗಳ ಪರಿಣಾಮ ಕೊರೊನಾ ದಂತಹ ಸಂದರ್ಭದಲ್ಲೂ ಕೆಲವು ಸೇವೆಗಳನ್ನು ಪಡೆದುಕೊಳ್ಳಲು ಸಾದ್ಯವಾಗಿದೆ. ಇನ್ನು ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಟೆಕ್ನಾಲಜಿ ಮೇಲಿನ ಹೂಡಿಕೆ ಹೆಚ್ಚಾಗುತ್ತಿದೆ. ಆದರಲ್ಲೂ ಭಾರತೀಯ ಉದ್ಯಮಗಳು 2021 ರಲ್ಲಿ information and communication technology (ICT) ಗೆ ಹೆಚ್ಚು ಖರ್ಚು ಮಾಡಲಿವೆ ಎಂದು ವರದಿ ಆಗಿದೆ.

ಭಾರತ

ಹೌದು, ಭಾರತದ ಉದ್ಯಮಗಳು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ (ICT) 2021 ರಲ್ಲಿ ಹೆಚ್ಚು ಖರ್ಚು ಮಾಡಲಿದೆ ಎಂದು ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ ವರದಿ ಮಾಡಿದೆ. ಈ ವರದಿಯ ಪ್ರಕಾರ, ಭಾರತದಲ್ಲಿ ICT ಖರ್ಚು 2021 ರಲ್ಲಿ 10% ರಷ್ಟು ಹೆಚ್ಚಳಗೊಂಡು 91 ಬಿಲಿಯನ್ ತಲುಪುತ್ತದೆ ಎನ್ನಲಾಗಿದೆ. ಹಾಗಾದ್ರೆ ಭಾರತದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಮುಂದಿನ ದಿನಗಳಲ್ಲಿ ಯಾಕೆ ಹೆಚ್ಚು ಖರ್ಚು ಮಾಡಲಾಗುತ್ತೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಭಾರತ

ಭಾರತ ದೇಶವೂ ಕೂಡ ಕಳೆದ ಕೆಲವು ವರ್ಷಗಳಿಂದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನಿಡುತ್ತಾ ಬಂದಿದೆ. ಆದರಂತೆ ಇನ್ನು ಮುಂದಿನ ಮೂರು ವರ್ಷಗಳಲ್ಲಿ ITC ಖರ್ಚು 111 ಬಿಲಿಯನ್ ಡಾಲರ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ತಿಳಿಸಿದೆ. ಈ ವರದಿಯು ಮೂಲಸೌಕರ್ಯ ಮತ್ತು ಡಿವೈಸ್‌ಗಳಾದ್ಯಂತ 15 ಹಾರ್ಡ್‌ವೇರ್ ಮಾರುಕಟ್ಟೆಗಳು, 83 ಸಾಫ್ಟ್‌ವೇರ್ ಕಾರ್ಯಗಳು ಮತ್ತು 12 ಐಟಿ ಸೇವೆಗಳು ಸೇರಿದಂತೆ 120 ತಂತ್ರಜ್ಞಾನಗಳನ್ನು ಒಳಗೊಂಡಿದೆ.

ಮೇಕ್ ಇನ್ ಇಂಡಿಯಾ

ಇನ್ನು IDC ಯ ವರದಿ ಪ್ರಕಾರ, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLA), ಮೇಕ್ ಇನ್ ಇಂಡಿಯಾ ಮತ್ತು ಹೆಚ್ಚಿನವುಗಳಂತಹ ಸರ್ಕಾರದ ಕಾರ್ಯಕ್ರಮಗಳು ಡಿಜಿಟಲ್ ಪರಿವರ್ತನೆಯತ್ತ ಭಾರತವನ್ನು ಮುಂದಡಿ ಇಡುವಂತೆ ಮಾಡಿವೆ. ಅಲ್ಲದೆ ಭಾರತದ ಡಿಜಿಟಲ್‌ ಕಾರ್ಯಕ್ರಮಗಳು ತಂತ್ರಜ್ಞಾನ ನೇತೃತ್ವದ ಹೂಡಿಕೆಗಳನ್ನು ಅನಿವಾರ್ಯವಾಗಿಸಿವೆ. ಜಾಗತಿಕ ಉತ್ಪಾದನಾ ಕೇಂದ್ರವಾಗಿ ಚೀನಾಕ್ಕೆ ಪರ್ಯಾಯವಾಗಿ ರೂಪುಗೊಳ್ಳುವ ದಿಶೆಯಲ್ಲಿ ಭಾರತ ಹೆಚ್ಚಿನ ಗಮನವನ್ನು ಟೆಕ್ನಾಲಜಿಗೆ ನೀಡುತ್ತಿದೆ ಎನ್ನಲಾಗಿದೆ. ಇದು ಜಾಗತಿಕ ರಂಗದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ICT

ICT ಖರ್ಚಿನ ಬೆಳವಣಿಗೆಯಲ್ಲಿ ಭಾರತದ ಆರ್ಥಿಕ ಚಟುವಟಿಕೆಗಳಲ್ಲಿ ಪುನರುಜ್ಜೀವನ ಮತ್ತು ಗ್ರಾಹಕರ ಬೇಡಿಕೆ ಹೆಚ್ಚುತ್ತಿದೆ ಎಂದು IDC ಹೇಳಿದೆ. ಉದ್ಯಮಗಳು ಡಿಜಿಟಲ್-ಆಧಾರಿತ ಅನುಭವಗಳನ್ನು ನೀಡಲು ಗಮನ ಹರಿಸಿವೆ. ಅಲ್ಲದೆ ಡಿಜಿಟಲ್‌ ಆಧಾರಿತ ವ್ಯವಹಾರಗಳಿಗೆ ಅಧ್ಯತೆ ನೀಡುತ್ತಿವೆ. ಅದರಲ್ಲೂ ಕಳೆದ ವರ್ಷಾಂತ್ಯದಲ್ಲಿ ಮತ್ತು 2021 ರವರೆಗೆ ಸುಧಾರಿತ ಪೂರೈಕೆಯಿಂದಾಗಿ ಬೇಡಿಕೆ ಹೆಚ್ಚಾದಂತೆ ಪ್ರಮುಖ ಕೈಗಾರಿಕೆಗಳು ಸೂಕ್ತ ಮಟ್ಟದಲ್ಲಿ ಕಾರ್ಯಾಚರಣೆಯನ್ನು ತಲುಪಿವೆ ಎಂದು IDC ವರದಿ ಮಾಡಿದೆ.

ಟೆಲಿಕಾಂ

ಇನ್ನು ಆಂಕಿಂಗ್ ಮತ್ತು ಟೆಲಿಕಾಂ ಕೈಗಾರಿಕೆಗಳು 2021 ರಲ್ಲಿ ಭಾರತದ ಐಸಿಟಿ ಖರ್ಚಿಗೆ ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆಯಿದೆ. ಇದು ಒಟ್ಟಾರೆ ಖರ್ಚಿನ ಸುಮಾರು 14% ನಷ್ಟಿದೆ. ಟೆಲಿಕಾಂ ಉದ್ಯಮವು ತನ್ನ ಐಸಿಟಿ ವೆಚ್ಚವನ್ನು 2021 ರಲ್ಲಿ 9.1% ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಹೈಬ್ರಿಡ್ ಆಪರೇಟಿಂಗ್ ಮಾದರಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದರಿಂದ ಶಿಕ್ಷಣ ಕ್ಷೇತ್ರವು ತಂತ್ರಜ್ಞಾನಕ್ಕೆ ಹೆಚ್ಚಿನ ಖರ್ಚು ಮಾಡುವ ನಿರೀಕ್ಷೆಯಿದೆ. ಕಳೆದ ವರ್ಷ ಲಾಕ್‌ಡೌನ್‌ಗಳಿಂದ ವೈಯಕ್ತಿಕ ಮತ್ತು ಗ್ರಾಹಕ ಸೇವೆಗಳೂ ಬದಲಾಗಿವೆ, ಇದರಿಂದಾಗಿ ತಂತ್ರಜ್ಞಾನಕ್ಕಾಗಿ ಹೆಚ್ಚಿನ ಖರ್ಚು ಮಾಡಲು ಕಂಪನಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಇದಲ್ಲದೆ ಭಾರತದಾದ್ಯಂತದ ಎಲ್ಲಾ ಕೈಗಾರಿಕೆಗಳಿಗೆ ಡಿಜಿಟಲ್ ರೂಪಾಂತರ ನೀಡುವ ದಿನಗಳು ಹತ್ತಿರದಲ್ಲಿದೆ ಎಂದು ವರದಿಯಾಗಿದೆ.

Best Mobiles in India

English summary
Indian enterprises will spend more on information and communication technologies in 2021.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X