ಊಟ, ನಿದ್ದೆ, ಕೆಲಸ ಬಿಟ್ಟು 'ಆನ್‌ಲೈನ್ ಗೇಮ್' ಆಡುವ ಭಾರತೀಯರು!!
ಮೊಬೈಲ್ ಮತ್ತು ಇಂಟರ್‌ನೆಟ್ ಅಡಿಕ್ಟ್ ಬಗ್ಗೆ ಹೆಚ್ಚು ಅಧ್ಯಯನ ನಡೆಸುತ್ತಿದ್ದ ಸಂಶೋಧಕರು ಇದೀಗ ಆನ್‌ಲೈನ್ ಗೇಮ್ ಆಡುವ ಭಾರತೀಯರ ಬಗ್ಗೆ ವರದಿಯೊಂದನ್ನು ತಯಾರಿಸಿದ್ದಾರೆ. ಆನ್ಲೈನ್ ಆಟಗಳನ್ನು ಆಡುತ್ತಿರುವಾಗ ಶೇ. 49.2 ರಷ್ಟು ಮಂದಿ ತಮ್ಮ ಉದ್ಯೋಗವನ್ನು ಬಿಟ್ಟು ಗೇಮಿಂಗ್ ಅನ್ನೇ ವೃತ್ತಿಯಾಗಿಸಿಕೊಳ್ಳಲು ಶೇ. 49.2 ಮಂದಿ ಸಿದ್ಧರಾಗಿದ್ದಾರೆ. ಜೊತೆಗೆ ಊಟ, ನಿದ್ದೆ, ಕೆಲಸ ಮತ್ತು ಸಾಮಾಜಿಕ ಜೀವನ ಬಿಟ್ಟು ಪೂರ್ಣವಾಗಿ ಗೇಮ್‌ನಲ್ಲೇ ತೊಡಗಿಸಿಕೊಳ್ಳುತ್ತಾರೆ ಎಂದು ವರದಿಯ ಮೂಲಕ ತಿಳಿಸಿದ್ದಾರೆ.
ಭಾರತದಲ್ಲಿ ಆನ್‌ಲೈನ್ ಗೇಮ್ ಆಡುವವರು ಪ್ರತಿ ವಾರ ಸುಮಾರು ಏಳು ಗಂಟೆಗಳ ಕಾಲ ಆನ್ಲೈನ್ ಗೇಮ್‌ಗಳನ್ನು ಆಡುತ್ತಿದ್ದಾರೆ. ದೇಶದ 23.4 ಪ್ರತಿಶತ ಆಟಗಾರರು ಪ್ರತಿ ವಾರದ ಏಳು ಗಂಟೆಗಳವರೆಗೆ ಆಡುತ್ತಿದ್ದರೆ, 11.4 ಪ್ರತಿಶತ ಭಾರತೀಯರು ವಾರಕ್ಕೆ 12 ಗಂಟೆಗಳಿಗೂ ಕಾಲ ಹೆಚ್ಚು ಆನ್ಲೈನ್ ಗೇಮ್‌ಗಳಿಗಾಗಿ ಸಮಯವನ್ನು ವಿನಿಯೋಗಿಸುತ್ತಾರೆ ಎಂದು ಯುಎಸ್ ಮೂಲದ ಕ್ಲೌಡ್ ಸರ್ವಿಸ್ ಪ್ರೊವೈಡರ್ ಲೈಮೆಲೈಟ್ ಸಂಸ್ಥೆಯು 'ಸ್ಟೇಟ್ ಆಫ್ ಆನ್ಲೈನ್ ಗೇಮಿಂಗ್' ಎಂಬ ವರದಿ ಮೂಲಕ ಬಹಿರಂಗಪಡಿಸಿದೆ.

ಭಾರತೀಯ ಗೇಮರ್‌ಗಳು ಗೇಮ್ ಆಡಲು ಖರ್ಚು ಮಾಡುತ್ತಿರುವ ಸಮಯವು ಅವರ ಜೀವನಶೈಲಿ, ಸಾಮಾಜಿಕ ಚಟುವಟಿಕೆಗಳು ಮತ್ತು ವೃತ್ತಿಗಳೊಂದಿಗೆ ಬೆಸೆದುಕೊಂಡಿದೆ. ವರದಿ ಪ್ರಕಾರ, ಗೇಮ್ ಆಡುವ 45 ಪ್ರತಿಶತ ಭಾರತೀಯ ಗೇಮರ್‌ಗಳು ಅವರ ನಿದ್ದೆ ಕಳೆದುಕೊಂಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ, 37 ರಷ್ಟು ಮಂದಿ ಊಟವನ್ನು ತಪ್ಪಿಸಿಕೊಂಡಿದ್ದಾರೆ, 35% ಸ್ನೇಹಿತರು ಸ್ನೇಹಿತರೊಂದಿಗೆ ಸಮಯ ಕಳೆದುಕೊಳ್ಳುತ್ತಿದ್ದಾರೆ ಮತ್ತು ಕೇವಲ ಗೇಮ್ ಆಡಲು ಶೇ. 24.2 ರಷ್ಟು ಕೆಲಸ ಬಿಟ್ಟುಬಿಟ್ಟಿದ್ದಾರೆ ಎಂದು ವರದಿ ಹೇಳಿದೆ.
18 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 500 ಆಟಗಾರರ ಪ್ರತಿಕ್ರಿಯೆಗಳ ಮೇಲೆ ಆಧಾರಿತವಾಗಿ ಈ ವರದಿಯನ್ನು ತಯಾರಿಸಲಾಗಿದ್ದು, ಸುಲಭದ ಡೇಟಾ ಲಭ್ಯತೆ, ಹೆಚ್ಚು ಸಾಮರ್ಥ್ಯದ ಸ್ಮಾರ್ಟ್‌ಫೋನ್, ವಿವಿಧ ಮಾದರಿಯ ಆನ್‌ಲೈನ್ ಗೇಮ್ ಆಯ್ಕೆ ಜನರಿಗೆ ಆನ್‌ಲೈನ್ ಗೇಮಿಂಗ್ ಕ್ರೇಜ್ ಹುಟ್ಟಿಸಿದೆ. ಭಾರತದಲ್ಲಿ ಆನ್‌ಲೈನ್ ಗೇಮ್‌ಗಳನ್ನು ಆಡಲು ಮೊಬೈಲ್ ಫೋನ್‌ಗಳು ಹೆಚ್ಚು ಜನಪ್ರಿಯವಾಗಿವೆ. ನಂತರ ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್‌ಗಳು ಹೆಚ್ಚು ಜಾಗ ಪಡೆದಿವೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಹೆಚ್ಚು ಭಾರತೀಯರು ಭಾರತೀಯ ಗೇಮ್‌ಗಳನ್ನೇ ಡೌನ್ಲೋಡ್ ಮಾಡಲು ಬಯಸುತ್ತಾರೆ. ಶೇ. 90 ಪ್ರತಿಶತ ಜನರು ವೀಡಿಯೋ ಗೇಮ್ಗಳನ್ನು ನಿರಾಶೆಗೊಳಿಸುವ ಪ್ರಕ್ರಿಯೆಯನ್ನು ಕಂಡುಕೊಳ್ಳುತ್ತಿದ್ದಾರೆ ಎಂಬ ವರದಿಯ ಅಂಶಗಳು ಸಹ ಕುತೋಹಲಕಾರಿಯಾಗಿವೆ. ಒಟ್ಟಿನಲ್ಲಿ ಈ ಆನ್‌ಲೈನ್ ಸೇರಿದಂತೆ ಗೇಮಿಂಗ್ ಲೋಕದಲ್ಲಿ ಹಲವರು ಸಿಲುಕಿ ನಲುಗುತ್ತಿದ್ದಾರೆ. ಈ ವರದಿಗೂ ಮುನ್ನವೇ ಬಿಡುಗಡೆಯಾದ ಈ ಗೇಮಿಂಗ್ ಎಂಬ ಕರಾಳ ಲೋಕದ ಬಗ್ಗೆ ನೀವು ಕೆಳಗೆ ಓದಿ ತಿಳಿದರೆ ಅದರ ಅನುಭವ ನಿಮಗಾಗಲಿದೆ.

‘ಸೆಕ್ಸ್’ಗಿಂತ ಜನಪ್ರಿಯ ಈ ಗೇಮ್!
ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು ‘ಸೆಕ್ಸ್' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.

ಬೇಕೇ ಬೇಕು ಗೇಮ್!
ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.

ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.
ಹಲವು ಅಧ್ಯಯನಗಳು ಆನ್‌ಲೈನ್ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಠ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.

ಕೋಟ್ಯಾಂತರ ಮಾರುಕಟ್ಟೆ!
1970ರಲ್ಲಿ ಆರಂಭವಾದ ಆನ್‌ಲೈನ್ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.

ಗೇಮಿಂಗ್ ಎಂಬ ಕರಾಳ ಲೋಕ!
ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್ ಗೇಮ್ ಈಗ ಗೇಮ್ ಅಲ್ಲ!
ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.

ಸಮಸ್ಯೆ ಬಹಳಷ್ಟಿದೆ.
ಕೋಟ್ಯಾಂತರ ಜನ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ನಿಮ್ಮಿಂದ ಸಾಧ್ಯವೇ.?


Click it and Unblock the Notifications