2018-19 ಗ್ಯಾಜೆಟ್ ಬಜೆಟ್!..ಮೊಬೈಲ್ ತೆರಿಗೆ ಶೇ20ರಷ್ಟು ಹೆಚ್ಚು, 5Gಗಾಗಿ ಚೆನ್ನೈನಲ್ಲಿ ಕಸರತ್ತು!!

  ಇಂದು ನಡೆದ 2018-19ರ ವಾರ್ಷಿಕ ಬಜೆಟ್ ಭಾಷಣದಲ್ಲಿ, ಮೊಬೈಲ್ ಫೋನ್‌ಗಳ ಮೇಲೆ 15% ರಿಂದ 20% ರವರೆಗೆ ಕಸ್ಟಮ್ ತೆರಿಗೆಯನ್ನು ಸರ್ಕಾರ ಹೆಚ್ಚಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 'ಮೇಕ್ ಇನ್ ಇಂಡಿಯಾ' ಕ್ರಮವಾಗಿ ಮೊಬೈಲ್ ಫೋನ್‌ಗಳ ಆಮದು ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.!!

  ಹೊಸ ಬಜೆಟ್ ಅನ್ವಯ ಚೀನಾ ಮೊಬೈಲ್ ಕಂಪೆನಿಗಳು ಸೇರಿದಂತೆ ಇತರೆ ದಿಗ್ಗಜ ಆಪಲ್‌ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳಿಗೆ ಹೊಡೆತಬೀಳಲಿದೆ.! ಸ್ಯಾಮ್‌ಸಂಗ್, ಶಿಯೋಮಿ ಮತ್ತು ಆಪಲ್ ಕಂಪೆನಿಗಳು ಭಾರತದಲ್ಲಿಯೇ ಸ್ಮಾರ್ಟ್‌ಫೋನ್ ತಯಾರಿಕೆ ಮಾಡುತ್ತಿರದ್ದರೂ ತಯಾರಿಕೆ ಪ್ರಮಾಣ ಭಾರಿ ಕಡಿಮೆ ಇರುವುದು ಅವುಗಳಿಗೂ ಕಂಟಕವಾಗಿದೆ.!!

  2018-19 ಗ್ಯಾಜೆಟ್ ಬಜೆಟ್!..ಮೊಬೈಲ್ ತೆರಿಗೆ ಶೇ20ರಷ್ಟು ಹೆಚ್ಚು!!

  ಇದು ಈ ವಾರ್ಷಿಕ ಬಜೆಟ್ ಮಂಡನೆಯಲ್ಲಿ ಗ್ಯಾಜೆಟ್ ಪ್ರಪಂಚದ ಪ್ರಮುಖ ಸುದ್ದಿಯಾಗಿದ್ದು, ಸರ್ಕಾರ ಗ್ಯಾಜೆಟ್ ಪ್ರಪಂಚಕ್ಕೆ ನೀಡಿರುವ ಇನ್ನಿತರ ಪ್ರಮುಖ ಯೋಜನೆಗಳು ಏನು? ಇದರಿಂದ ಗ್ಯಾಜೆಟ್ ಪ್ರಪಂಚದಲ್ಲಿ ಆಗಬಹುದಾದ ಬದಲಾವಣೆಗಳೇನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಮಾರ್ಟ್‌ಫೋನ್ ಗ್ರಾಹಕರಿಗೂ ಬರೆ!!

  2018-19ರ ವಾರ್ಷಿಕ ಬಜೆಟ್ ಮೊಬೈಲ್ ಕಂಪೆನಿಗಳಿಗೆ ಮಾತ್ರವಲ್ಲದೆ ಸ್ಮಾರ್ಟ್‌ಫೋನ್ ಗ್ರಾಹಕರಿಗೂ ಬರೆಹಾಕಿದೆ.! ಸರ್ಕಾರದ ಈ ನಿರ್ಧಾರದಿಂದ ಸ್ಮಾರ್ಟ್‌ಫೋನ್ ಖರೀದಿಸುವ ಎಲ್ಲಾ ಗ್ರಾಹಕರು ಹೆಚ್ಚು ಹಣ ತೆರಬೇಕಾದ ಪರಿಸ್ಥಿತಿ ಬಂದಿದೆ.! ಇದು ಮೊಬೈಲ್ ಮಾರುಕಟ್ಟೆಯ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ.!!

  ಚೆನ್ನೈನಲ್ಲಿ 5ಜಿ!!

  2020 ರ ಒಳಗಾಗಿ ಇಡೀ ವಿಶ್ವದ ಜೊತೆಯಲ್ಲಿಯೇ ತಾನೂ 5ಜಿ ತಂತ್ರಜ್ಞಾನಕ್ಕೆ ತೆರೆದುಕೊಳ್ಳಲು ಭಾರತ ತಯಾರಾಗಿದೆ. ಹಾಗಾಗಿ. ಚೆನ್ನೈ ಐಐಟಿಯಲ್ಲಿ 5ಜಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರ ಪ್ರಸ್ತಾವ ಸಲ್ಲಿಸಿದ್ದು, ಭಾರತದ ಡಿಜಿಟಲ್ ಕ್ರಾಂತಿಗೆ ಈ ಯೋಜನೆ ಪೂರಕವಾಗಲಿದೆ ಎಂದು ಹೇಳಬಹುದು.!!

  ಹೈಸ್ಪೀಡ್ ಗ್ರಾಮ ಪಂಚಾಯತ್!!

  ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ವ್ಯವಸ್ಥೆಯನ್ನು ಬಹುಬೇಗ ಡಿಜಿಟಲೀಕರಣ ಮಾಡಲು ಸರ್ಕಾರ ಮುಂದಾಗಿದೆ.! ಹಾಗಾಗಿ, ಈ ಬಜೆಟ್‌ನಲ್ಲಿ ಒಂದು ಲಕ್ಷ ಗ್ರಾಮ ಪಂಚಾಯತ್‌ಗಳಿಗೆ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯವನ್ನು ನೀಡುವುದಾಗಿ ಘೋಷಿಸಿದೆ.!!

  How to Activate UAN Number? KANNADA
  ರೈಲ್ವೆಯಲ್ಲಿ ಕ್ಯಾಮೆರಾ, ವೈಫೈ!!

  ರೈಲ್ವೆಯಲ್ಲಿ ಕ್ಯಾಮೆರಾ, ವೈಫೈ!!

  ಭಾರತದಲ್ಲಿರುವ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಉಚಿತ ಇಂಟರ್‌ನೆಟ್ ಒದಗಿಸುವುದಾಗಿ ಈ ಮೊದಲೇ ಹೇಳಿದ್ದ ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ, ವೈಫೈ ಅಳವಡಿಕೆಗೆ ನಿರ್ಧರಿಸಿದೆ. ಹಾಗಾಗಿ, ರೈಲ್ವೆ ಇನ್ನು ಸಂಪೂರ್ಣ ಡಿಜಿಟಲ್ ಆಗಲಿದೆ.!!

  ಶಿಕ್ಷಣವಿನ್ನು ಡಿಜಿಟಲ್!!

  ದೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್‌ ಸೌಲಭ್ಯ ಹೆಚ್ಚಿಸಲು ಈ ಬಾರಿಯ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಭವಿಷ್ಯದ ಭಾರತದ ನಿರ್ಮಾಣಕ್ಕೆ ಅತ್ಯುತ್ತಮ ಶಿಕ್ಷಣದ ಅವಶ್ಯಕತೆ ಇರುವುದರಿಂದ ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.!!

  ಓದಿರಿ:ಫೇಸ್‌ಬುಕ್‌ನಲ್ಲಿ ಅನ್‌ಫ್ರೆಂಡ್ ಮಾಡದೇ ಅವರ ಪೋಸ್ಟ್ ಹೈಡ್ ಮಾಡುವುದು ಹೇಗೆ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Arun Jaitley, Finance Minister said that the government had increased the custom duty on mobile phones from 15% to 20%. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more