ಕೆಲವು ನಕಲಿ ಪಾಸ್ ಪೋರ್ಟ್ ವೆಬ್ ಸೈಟ್ ಗಳ ಬಗ್ಗೆ ಎಚ್ಚರಿಕೆ ನೀಡಿದ ಸರ್ಕಾರ
ನಿಮ್ಮ ಪಾಸ್ ಪೋರ್ಟ್ ಗೆ ಸಂಬಂಧಿಸಿದ ಸೇವೆಗಳನ್ನು ನೀಡುವುದಾಗಿ ಹೇಳುವ ಕೆಲವು ವೆಬ್ ಸೈಟ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿದೇಶಾಂಗ ಸಚಿವಾಲಯವು ನಾಗರೀಕರಿಗೆ ಎಚ್ಚರಿಗೆ ನೀಡಿದೆ. ಪಾಸ್ ಪೋರ್ಟ್ ರಿನೀವಲ್ ಅಥವಾ ಹೊಸ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಈ ನಕಲಿ ವೆಬ್ ಸೈಟ್ ಗಳ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಅದು ಹೇಳಿದೆ. ಈ ಫೇಕ್ ವೆಬ್ ಸೈಟ್ ಗಳು ಕೇವಲ ಅತಿಯಾದ ಶುಲ್ಕ ಪಡೆಯುವುದು ಮಾತ್ರವಲ್ಲ ಬದಲಾಗಿ ನಿಮ್ಮ ಡಾಟಾ ಕದಿಯುವ ಕೆಲಸವನ್ನು ಕೂಡ ಮಾಡುತ್ತವೆ. ಇತ್ತೀಚೆಗೆ ನಕಲಿ ವೆಬ್ ಸೈಟ್ ಗಳು ಮಾತ್ರವಲ್ಲ ಬದಲಾಗಿ ಬಾಹ್ಯ ವ್ಯವಹಾರಗಳ ಸಚಿವಾಲಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿಕೊಳ್ಳುವ ಕೆಲವು ಮೊಬೈಲ್ ಅಪ್ಲಿಕೇಷನ್ ಗಳ ಸಂಖ್ಯೆಯೂ ಕೂಡ ಅಧಿಕವಾಗುತ್ತಿದೆಯಂತೆ.

ನಿಮಗೆ ತಿಳಿದಿರಬೇಕಾಗಿರುವ ಪ್ರಮುಖ ಅಂಶವೇನೆಂದರೆ ಪಾಸ್ ಪೋರ್ಟ್ ಸೇವೆಗಳಿಗಾಗಿ ಇರುವ ಅಧಿಕೃತ ವೆಬ್ ಸೈಟ್ ಯಾವುದೆಂದರೆ "passportindia.gov.in" ( ಕೆಲವೊಮ್ಮೆ ಇದು "portal2.passportindia.gov.in" ಎಂದು ತೆರೆದುಕೊಳ್ಳುತ್ತದೆ. ಆದರೆ ಡೊಮೈನ್ ಯಾವಾಗಲೂ ಕೂಡ gov.in ಆಗಿರುತ್ತದೆ). ಇದು ಅಧಿಕೃತ ಆಪ್ "mPassport Seva". ಇದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕೂಡ ಲಭ್ಯವಿದೆ. ಇವುಗಳನ್ನು ಹೊರತು ಪಡಿಸಿ ಹಲವು ನಕಲಿ ಆಪ್ ಗಳಿವೆ. ಅವುಗಳ ಬಗ್ಗೆ ನಾಗರೀಕರು ಎಚ್ಚರ ವಹಿಸಿ ಎಂದು ಸಚಿವಾಲಯವು ಎಚ್ಚರಿಕೆ ನೀಡಿದೆ.

ಇಂಡಿಯಾ ಪಾಸ್ ಪೋರ್ಟ್. ಓಆರ್ ಜಿ (indiapassport.org)
ಇದು ಕೂಡ ನಕಲಿ ಆಪ್ ಆಗಿದೆ ಎಚ್ಚರಿಕೆಯಿಂದಿರಿ.

ಆನ್ ಲೈನ್-ಪಾಸ್ ಪೋರ್ಟ್ ಇಂಡಿಯಾ.ಕಾಮ್
ಈ ವೆಬ್ ಸೈಟ್ ನಲ್ಲೂ ಕೂಡ ಯಾವುದೇ ಪಾಸ್ ಪೋರ್ಟ್ ಸಂಬಂಧಿತ ವಿಚಾರಣೆಯನ್ನು ಮಾಡಬೇಡಿ.

ಪಾಸ್ ಪೋರ್ಟ್ ಇಂಡಿಯಾ ಪೋರ್ಟಲ್.ಇನ್
ನಿಮ್ಮ ಯಾವುದೇ ಪಾಸ್ ಪೋರ್ಟ್ ಸಂಬಂಧಿ ಕೆಲಕ್ಕೆ ಈ ವೆಬ್ ಸೈಟ್ ಕೂಡ ತಕ್ಕ ವೇದಿಕೆಯಲ್ಲ ಎಂಬುದು ನೆನಪಿರಲಿ.

ಪಾಸ್ ಪೋರ್ಟ್-ಇಂಡಿಯಾ.ಇನ್
ಪಾಸ್ ಪೋರ್ಟ್ ಸಂಬಂಧಿಸಿದಂತೆ ನಿಮ್ಮ ವಯಕ್ತಿಕ ಡಾಟಾ ಕದಿಯಲು ಇರುವ ಮತ್ತೊಂದು ನಕಲಿ ವೆಬ್ ಸೈಟ್ ಇದು.

ಪಾಸ್ ಪೋರ್ಟ್-ಸೇವಾ.ಇನ್
ಇಲ್ಲೂ ಕೂಡ ನಿಮ್ಮ ಡಾಟಾ ಕದಿಯಲಿದ್ದಾರೆಯೇ ಹೊರತು ಪಾಸ್ ಪೋರ್ಟ್ ಸಂಬಂಧಿತ ಯಾವುದೇ ಕೆಲಸಕ್ಕಾಗಿ ನೀವು ಈ ವೆಬ್ ಸೈಟ್ ನ ಮೊರೆ ಹೋಗುವ ಅಗತ್ಯವಿಲ್ಲ. ಯಾವುದಕ್ಕೂ ಎಚ್ಚರ ವಹಿಸಿ.


Click it and Unblock the Notifications