Home
ಸುದ್ದಿಜಾಲ

ಭಾರತ ಸರ್ಕಾರದ ವಾಟ್ಸಾಪ್‌ ಮಾದರಿ Sandes ಆಪ್‌ಗೆ ಸೈನ್‌ ಇನ್‌ ಆಗುವುದು ಹೇಗೆ?

ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ಗೆ ಪರ್ಯಾಯವಾಗಿ ಭಾರತ ಸರ್ಕಾರ Sandes ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ವಾಟ್ಸಾಪ್ ಮತ್ತು ಇತರ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಭಾರತ ಸರ್ಕಾರದ ಪರ್ಯಾಯವಾದ Sandes ಅಪ್ಲಿಕೇಶನ್‌ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಪ್ರಾರಂಭಿಸಿದೆ. ಈ ಹೊಸ ಪ್ಲಾಟ್‌ಫಾರ್ಮ್ ಸರ್ಕಾರಿ ಅಧಿಕಾರಿಗಳಿಗೆ ವಾಟ್ಸಾಪ್ ತರಹದ ಸಂವಹನ ಅಪ್ಲಿಕೇಶನ್ ಒದಗಿಸಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಅಸ್ತಿತ್ವದಲ್ಲಿರುವ ಸರ್ಕಾರಿ ಇನ್ಸಟಂಟ್‌ ಮೆಸೇಜ್‌ ವ್ಯವಸ್ಥೆಗೆ (ಜಿಮ್ಸ್) ಅಪ್‌ಗ್ರೇಡ್ ಮಾಡಲಾಗಿದೆ.

ಭಾರತ

ಹೌದು, ಭಾರತ ಸರ್ಕಾರ ವಾಟ್ಸಾಪ್‌ಗೆ ಪರ್ಯಾಯವಾಗಿ Sandes ಅಪ್ಲಿಕೇಶನ್‌ ಅನ್ನು ಪರಿಚಯಸಿದೆ. ಈ Sandes ಅಪ್ಲಿಕೇಶನ್ ಅನ್ನು ಸರ್ಕಾರಿ ಅಧಿಕಾರಿಗಳು ಮತ್ತು ವೈಯಕ್ತಿಕ ಬಳಕೆದಾರರು ಬಳಸಬಹುದು. ಸೈನ್ ಅಪ್ ಮಾಡಲು ಇದಕ್ಕೆ ಮೊಬೈಲ್ ಸಂಖ್ಯೆ ಅಥವಾ ಸರ್ಕಾರಿ ಇಮೇಲ್ ಐಡಿ ಅಗತ್ಯವಿದೆ. ಸೈನ್ ಅಪ್ ಮಾಡಿದ ನಂತರ, ಬಳಕೆದಾರರು ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು ಮತ್ತು ಹೊಸ ಗುಂಪುಗಳನ್ನು ರಚಿಸಬಹುದು ಅಥವಾ ಚಿತ್ರಗಳು ಮತ್ತು ವೀಡಿಯೊಗಳಂತಹ ಮಲ್ಟಿಮೀಡಿಯಾ ವಿಷಯವನ್ನು ಕಳುಹಿಸಬಹುದು. ಹಾಗಾದ್ರೆ Sandes ಅಪ್ಲಿಕೇಶನ್‌ಗೆ ಸೈನ್‌ ಅಪ್‌ ಮಾಡುವುದು ಹೇಗೆ? ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್

ವಾಟ್ಸಾಪ್ ಮತ್ತು ಇತರ ಪ್ರಮುಖ ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಂತೆಯೇ, Sandes ಅಪ್ಲಿಕೇಶನ್‌ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಟ್ ಚಾಟ್‌ ಅನ್ನು ಹೊಂದಿದೆ. ಇದರಲ್ಲಿ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಅಥವಾ ಸಂಪರ್ಕಗಳ ನಡುವೆ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಅಪ್ಲಿಕೇಶನ್ ಅನ್ನು ಬಳಸಬಹುದು. ಇದು ಸಂಪರ್ಕ ಹಂಚಿಕೆ ಮತ್ತು ಗುಂಪು ಚಾಟ್‌ಗಳನ್ನು ಸಹ ಅನುಮತಿಸುತ್ತದೆ. ಇದಲ್ಲದೆ, ಬಳಕೆದಾರರು ಸಂದೇಶಗಳನ್ನು ಲೈವ್‌ ಮಾಡಬಹುದು. ಇದಲ್ಲದೆ ಸಂವಾದ್ ಎಂಬ ಎರಡನೇ ಆಪ್ ಸಹ ಕೆಲಸದಲ್ಲಿದೆ ಎಂದು ಸರ್ಕಾರದ ಮೂಲಗಳು ದೃಡಪಡಿಸಿವೆ. "ಈ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ಭಾರತ ಸರ್ಕಾರ ಅಭಿವೃದ್ಧಿಪಡಿಸುತ್ತಿದೆ.

Sandes ಅಪ್ಲಿಕೇಶನ್‌ಗೆ ಸೈನ್ ಅಪ್ ಮಾಡುವುದು ಹೇಗೆ?

Sandes ಅಪ್ಲಿಕೇಶನ್‌ಗೆ ಸೈನ್ ಅಪ್ ಮಾಡುವುದು ಹೇಗೆ?

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಆರಂಭದಲ್ಲಿ Sandes ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಇದು ಸರ್ಕಾರದ ಜಿಮ್ಸ್ ಪೋರ್ಟಲ್ ಮೂಲಕ ಆಂಡ್ರಾಯ್ಡ್ 5.0 ಮತ್ತು ಅದಕ್ಕಿಂತ ಹೆಚ್ಚಿನದರಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗಾಗಿ ಎಪಿಕೆ ಫೈಲ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಐಒಎಸ್ ಬಳಕೆದಾರರಿಗಾಗಿ, ಅಪ್ಲಿಕೇಶನ್ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಲು ಲಭ್ಯವಿದೆ ಮತ್ತು ಐಫೋನ್, ಐಪ್ಯಾಡ್ ಮತ್ತು ಐಒಎಸ್ 12.0 ನಲ್ಲಿ ಚಾಲನೆಯಲ್ಲಿರುವ ಐಪಾಡ್ ಟಚ್‌ಗೆ ಹೊಂದಿಕೊಳ್ಳುತ್ತದೆ.

ಡೌನ್‌ಲೋಡ್

ಇನ್ನು ಒಮ್ಮೆ ಡೌನ್‌ಲೋಡ್ ಮಾಡಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬಳಸಿ ಸ್ಯಾಂಡೆಸ್ ಅಪ್ಲಿಕೇಶನ್‌ನಲ್ಲಿ ಸೈನ್ ಅಪ್ ಮಾಡಬಹುದು. ದೃಡೀಕರಣಕ್ಕಾಗಿ ಅಪ್ಲಿಕೇಶನ್ ನಿಮಗೆ ಆರು-ಅಂಕಿಯ ಒಟಿಪಿಯನ್ನು ಕಳುಹಿಸುತ್ತದೆ. ಇಮೇಲ್ ಐಡಿಗಳನ್ನು ಸರ್ಕಾರಿ ಐಡಿಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ನೀವು ಜಿಮೇಲ್, ಹಾಟ್ಮೇಲ್ ಅಥವಾ ಇತರ ಇಮೇಲ್ ಖಾತೆಯೊಂದಿಗೆ ಸೈನ್ ಅಪ್ ಮಾಡಲು ಪ್ರಯತ್ನಿಸಿದರೆ, ಆ ಡೊಮೇನ್‌ನಿಂದ ಇಮೇಲ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂಬ ಸೂಚನೆಯನ್ನು ನೀವು ನೋಡುತ್ತೀರಿ.

ಸರ್ಕಾರ

ಇದಲ್ಲದೆ ಸರ್ಕಾರಕ್ಕೆ ಸಂಬಂಧಿಸಿದ @ mygov.in ಖಾತೆಗಳಂತಹ ಖಾತೆಗಳನ್ನು ಸಹ ಸ್ವೀಕರಿಸಲಾಗುವುದಿಲ್ಲ. ಈ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲು ಅಧಿಕೃತ @ gov.in ಇಮೇಲ್‌ಗಳನ್ನು ಮಾತ್ರ ಬಳಸಬಹುದು. ಇಲ್ಲದಿದ್ದರೆ, ನಿಮ್ಮ ಫೋನ್ ಸಂಖ್ಯೆಯನ್ನು ನೀವು ಬಳಸಬೇಕಾಗುತ್ತದೆ. Sandes ಅಪ್ಲಿಕೇಶನ್‌ನಲ್ಲಿ ಸೈನ್ ಅಪ್ ಮಾಡಿದ ನಂತರ ನಿಮ್ಮ ಪ್ರೊಫೈಲ್ ಅನ್ನು ಸಹ ನೀವು ಸಂಪಾದಿಸಬಹುದು ಅಥವಾ ನಿಮ್ಮ ಸ್ಥಿತಿಯನ್ನು ಆಯ್ಕೆ ಮಾಡಬಹುದು. ನಿಮ್ಮ ಪ್ರೊಫೈಲ್ ಅನ್ನು ನೀವು ವಾಟ್ಸಾಪ್‌ನಲ್ಲಿ ಆಪ್ಡೇಟ್‌ ಮಾಡಿದಂತೆಯೇ ಇದರಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ.

Best Mobiles in India

English summary
Indian government launch sandes app alternative to WhatsApp:How to sign up for Sandes app.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+