ನಿಮ್ಮ ವಾಟ್ಸಾಪ್ ಮೆಸೇಜ್‌ಗಳನ್ನು ಸರ್ಕಾರ ಓದುತ್ತಿದೆಯೇ? ಈ ವಿಚಾರದ ಬಗ್ಗೆ ನಿಮಗೆ ಅರಿವಿರಲಿ
ವಾಟ್ಸಾಪ್ ಬಳಕೆದಾರರು ಈ ಸುದ್ದಿ ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಯಾಕಂದ್ರೆ ನಿಮ್ಮ ಖಾಸಗಿ ವಾಟ್ಸಾಪ್ ಚಾಟ್‌ಗಳನ್ನು ಸರ್ಕಾರ ಓದುತ್ತಿದೆ ಅನ್ನೋ ಸುದ್ದಿ ಹರಿದಾಡಿದೆ. ಅದು ಕೂಡ PIB ಫ್ಯಾಕ್ಟ್ ಚೆಕ್ ಎಂಬ ಅಧಿಕೃತ ಟ್ವಿಟರ್ ಅಕೌಂಟ್ ಮೂಲಕ ಈ ಸುದ್ದಿಯನ್ನು ಹರಡಲಾಗಿದೆ. ಆದರೆ ಈ ವಿಚಾರ ಸಂಪೂರ್ಣ ಸುಳ್ಳು ಎಂದು ಭಾರತ ಸರ್ಕಾರ ಹೇಳಿದೆ.
ಹೌದು, ನಿಮ್ಮ ಖಾಸಗಿ ವಾಟ್ಸಾಪ್ ಚಾಟ್‌ಗಳನ್ನು ಸರ್ಕಾರ ಓದುತ್ತಿದೆಯಾ? ಇದರ ಬಗ್ಗೆ ನಿಮಗೆ ಅನುಮಾನವಿದೆಯಾ? ಅಷ್ಟೇ ಅಲ್ಲ ಸರ್ಕಾರ ನಿಮ್ಮ ಸಂದೇಶವನ್ನು ಓದಿದ್ದರೆ ಮೂರು ಬ್ಲೂ ಟಿಕ್‌ಗಳು ಬಂದಿರಲಿವೆ ಅನ್ನೊ ವಿಚಾರ ವೈರಲ್ ಆಗಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಭಾರತ ಸರ್ಕಾರ ಹೇಳಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿನ ನಿಮ್ಮ ಖಾಸಗಿ ಚಾಟ್‌ಗಳನ್ನು ಸರ್ಕಾರ ಓದುತ್ತಿದೆಯಾ? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್‌ನಲ್ಲೊಂದು ಸಂದೇಶ ಭಾರಿ ವೈರಲ್ ಆಗುತ್ತಿದೆ. ಅದರಲ್ಲಿ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸರ್ಕಾರ ಓದುತ್ತಿದೆ ಅನ್ನೊದನ್ನ ಹೇಳಲಾಗಿದೆ. ನೀವು ವಾಟ್ಸಾಪ್ ಸಂದೇಶವನ್ನು ಕಳುಹಿಸಿದಾಗ ಸಿಂಗಲ್ ಟಿಕ್ ಬಂದರೆ ಸಂದೇಶವನ್ನು ಕಳುಹಿಸಲಾಗಿದೆ ಎಂದರ್ಥ. ಎರಡು ಬ್ಲೂ ಟಿಕ್‌ಗಳು ಬಂದರೆ ಸಂದೇಶವನ್ನು ಓದಲಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಸಂದೇಶದಲ್ಲಿ ಮೂರು ಬ್ಲೂ ಟಿಕ್‌ಗಳು ಬಂದರೆ ನಿಮ್ಮ ಸಂದಶವನ್ನು ಸರ್ಕಾರ ನೋಡಿದೆ ಎಂದರ್ಥ ಎನ್ನುವ ಸಂದೇಶ ಓಡಾಡುತ್ತಿದೆ.
ಅಷ್ಟೇ ಅಲ್ಲ ಈ ಸಂದೇಶ ಓಡಾಡುತ್ತಿರುವುದು PIB ಫ್ಯಾಕ್ಟ್ ಚೆಕ್ ಎನ್ನುವ ಟ್ವಿಟರ್ ಅಕೌಂಟ್ ಹೆಸರಿನಲ್ಲಿ ಅನ್ನೋದು ಶಾಕಿಂಗ್ ವಿಚಾರವಾಗಿದೆ. ಜೊತೆಗೆ ನಿಮ್ಮ ಸಂದೇಶ ಸೆಂಡ್ ಆದಾಗ ಎರಡು ನೀಲಿ ಮತ್ತು ಒಂದು ಕೆಂಪು ಟಿಕ್ ಇದ್ದರೆ ಸರ್ಕಾರ ನಿಮ್ಮ ಕ್ರಮ ಕೈಗೊಳ್ಳಲು ಸೂಚಿಸಿದೆ ಎಂದು ಹೇಳುವ ಸಂದೇಶ ಹರಿದಾಡಿದೆ. ಇದಲ್ಲದೆ, ಒಂದು ನೀಲಿ ಮತ್ತು ಎರಡು ಕೆಂಪು ಟಿಕ್‌ಗಳು ಬಂದರೆ ನಿಮ್ಮ ಡೇಟಾವನ್ನು ಸರ್ಕಾರವು ಪರಿಶೀಲಿಸುತ್ತಿದೆ ಎಂದರ್ಥ ಎಂದು ಹೇಳಲಾಗಿದೆ. ಆದರೆ ಈ ಸಂದೇಶ ಸುಳ್ಳು ಎಂದು ಸರ್ಕಾರ ಹೇಳಿದೆ.
ವಾಟ್ಸಾಪ್ ಸಂದೇಶಗಳನ್ನು ಸರ್ಕಾರ ಓದುತ್ತಿಲ್ಲ ಅನ್ನೊದನ್ನ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ, ವಾಟ್ಸಾಪ್ ಮತ್ತು ಸರ್ಕಾರದ ಮೇಲ್ವಿಚಾರಣೆಯಲ್ಲಿ ಕೆಂಪು ಟಿಕ್ ಅನ್ನು ತೋರಿಸುವ ಯಾವುದೇ ಚಿತ್ರವು ಸಂಪೂರ್ಣವಾಗಿ ನಕಲಿಯಾಗಿದೆ ಎಂದು ಹೇಳಲಾಗಿದೆ. ಜೊತೆಗೆ ವಾಟ್ಸಾಪ್ ಸೇರಿದಂತೆ ಯಾವುದೇ ಸೊಶೀಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಖಾಸಗಿ ಸಂದೇಶಗಳನ್ನು ಮೇಲ್ವಿಚಾರಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕೇವಲ ವೈಯಕ್ತಿಕ ಸಂದೇಶಗಳ ವಿಷಯವನ್ನು ಆಧರಿಸಿ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇನ್ನು ವಾಟ್ಸಾಪ್ ಕೂಡ ನಿಮ್ಮ ಸಂದೇಶಗಳನ್ನು ಯಾವುದೇ ಥರ್ಡ್ ಪಾರ್ಟಿ ನೋಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. ವಾಟ್ಸಾಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಹೊಂದಿದೆ. ಇದೇ ಕಾರಣಕ್ಕೆ ವಾಟ್ಸಾಪ್ ವೈಯುಕ್ತಿಕ ಚಾಟ್‌ಗಳು, ಗ್ರೂಪ್ ಚಾಟ್‌ಗಳು ಸೇರಿದಂತೆ ಯಾವುದೇ ಮಿಡಿಯಾವನ್ನು ಬೇರೆಯವರು ಅನ್ಯ ಮಾರ್ಗಗಳ ಮೂಲಕ ನೋಡುವುದಕ್ಕೆ ಸಾದ್ಯವಿಲ್ಲ. ಅಂದರೆ ವಾಟ್ಸಾಪ್ ಕೂಡ ನಿಮ್ಮ ಚಾರ್ಟ್‌ಗಳಲ್ಲಿ ಹಂಚಿಕೊಂಡ ವಿಷಯಗಳಿಗೆ ಪ್ರವೇಶಿಸಲು ಸಾದ್ಯವಿಲ್ಲ ಎಂದು ಹೇಳಿದ್ದು, ಬಳಕೆದಾರರಿಗೆ ಗೌಪ್ಯತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿದೆ.
ಆದರಿಂದ ವಾಟ್ಸಾಪ್ ಸಂದೇಶಗಳನ್ನು ಭಾರತ ಸರ್ಕಾರವು ಮೇಲ್ವಿಚಾರಣೆ ಮಾಡುತ್ತದೆ ಎಂದು ಹರಡಿರುವ ಸುದ್ದಿ ಸುಳ್ಳು ಎಂದು ಹೇಳಲಾಗಿದೆ. ವಾಟ್ಸಾಪ್ ಬಳಕೆದಾರರು ಇದರಿಂದ ಭಯಪಡಬೇಕಾದ ಅನಿರ್ವಾಯತೆಯಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.


Click it and Unblock the Notifications








