Home
ಸುದ್ದಿಜಾಲ

ಭಾರತ ಸರ್ಕಾರದಿಂದ ಹೊಸ ಆದೇಶ; ಟೆಕ್‌ ವಲಯವೇ ತಲ್ಲಣಿಸುವಂತೆ ಆಗಿದೆ ಯಾಕೆ?

ಭಾರತ ಸರ್ಕಾರ ತತ್‌ಕ್ಷಣಕ್ಕೆ ಅನ್ವಯವಾಗುವಂತೆ ಲ್ಯಾಪ್‌ಟಾಪ್‌ಗಳು ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳ ಆಮದು ನಿರ್ಬಂಧವನ್ನು ಪ್ರಕಟಿಸಿದೆ. ಅಂದರೆ ಹೊರದೇಶಗಳಿಂದ ಲ್ಯಾಪ್‌ಟಾಪ್‌ಗಳು ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಬ್ರೇಕ್‌ ಹಾಕಿದೆ. ಇದರಿಂದ ಭಾರತದ ಲ್ಯಾಪ್‌ಟಾಪ್‌ ವಲಯದಲ್ಲಿ ಭಾರಿ ಸಂಚಲನ ಉಂಟಾಗಿದೆ.

ಹೌದು, ಭಾರತ ಸರ್ಕಾರ ಲ್ಯಾಪ್‌ಟಾಪ್‌ಗಳು ಮತ್ತು ಪರ್ಸನಲ್‌ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಿದೆ. ಅಲ್ಲದೆ ಭಾರತದಲ್ಲಿ ಲ್ಯಾಪ್‌ಟಾಪ್‌ಗಳನ್ನು ಸೇಲ್ ಮಾಡುವುದಕ್ಕೆ ಪ್ಲಾನ್‌ ಮಾಡಿರುವ ಯಾವುದೇ ಕಂಪನಿಯು ನಿರ್ಬಂಧಿತ ಆಮದುಗಳಿಗಾಗಿ ಮಾನ್ಯ ಪರವಾನಗಿ ಪಡೆಯುವುದು ಇದೀಗ ಕಡ್ಡಾಯವಾಗಿದೆ. ಅಷ್ಟಕ್ಕೂ ಭಾರತದಲ್ಲಿ ಲ್ಯಾಪ್‌ಟಾಪ್‌ ಆಮದುಗಳಿಗೆ ನಿರ್ಬಂಧ ಹೇರಿದ್ದು ಯಾಕೆ? ಇದರಿಂದ ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿ ತಟ್ಟಲಿದೆಯಾ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತ ಸರ್ಕಾರದಿಂದ ಹೊಸ ಆದೇಶ; ಟೆಕ್‌ ವಲಯವೇ ತಲ್ಲಣಿಸುವಂತೆ ಆಗಿದೆ ಯಾಕೆ?

ಭಾರತ ಸರ್ಕಾರ ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಪ್ರಕಾರ ಭಾರತ ಸರ್ಕಾರವು ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಆಮದಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಅದರಂತೆ ಭಾರತದಲ್ಲಿ ಇನ್ಮುಂದೆ ಯಾವುದೇ ಪ್ರಮಾಣೀಕರಣವಿಲ್ಲದೆ ಲ್ಯಾಪ್‌ಟಾಪ್‌ಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ. ಆಮದುಗಳಿಗೆ ಈಗ ಮಾನ್ಯ ಪರವಾನಗಿ ಅಗತ್ಯವಿರುತ್ತದೆ ಎಂದು ಸರ್ಕಾರ ಹೇಳಿದೆ.

ಸರ್ಕಾರ ಹೇಳಿರುವಂತೆ HSN 8741 ಅಡಿಯಲ್ಲಿ ಬರುವ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸರ್ವರ್‌ಗಳ ಆಮದು 'ನಿರ್ಬಂಧಿತ'ವಾಗಿದೆ. ಸದ್ಯ ನಿರ್ಬಂಧಿತವಾಗಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಮಾನ್ಯವಾದ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ ಮಾಡಲಾಗಿದೆ. ಇದರಲ್ಲಿ HSN 8741 ಅನ್ನೋದು ಡೇಟಾ ಸಂಸ್ಕರಣಾ ಯಂತ್ರಗಳ ಆಮದು ಮತ್ತು ರಫ್ತಿಗೆ ಬಳಸುವ ಕೋಡ್ ಆಗಿದೆ. ಈ ಕೋಡ್‌ ಅಡಿಯಲ್ಲಿ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಮೊಬೈಲ್ ಫೋನ್‌ಗಳಂತಹ ಗ್ಯಾಜೆಟ್‌ಗಳು ಸೇರಿವೆ.

ಕೇಂದ್ರ ಸರ್ಕಾರ ಈ ಹೊಸ ಆದೇಶವು ದೊಡ್ಡ ಪ್ರಮಾಣದಲ್ಲಿ ಸರ್ವರ್‌ಗಳಿಗಾಗಿ ಟೂಲ್ಸ್‌ಗಳನ್ನು ಆಮದು ಮಾಡಿಕೊಳ್ಳುವವರಿಗೆ ದೊಡ್ಡ ಶಾಕ್‌ ನೀಡಿದಂತಾಗಿದೆ. ಆದರೆ ವಿದೇಶದಿಂದ ಇ-ಕಾಮರ್ಸ್ ಆಮದುಗಳಂತಹ ಪರ್ಸನಲ್‌-ಲೆವೆಲ್‌ ಆಮದುಗಳಿಗೆ ಈ ನಿರ್ಬಿಂಧದಿಂದ ವಿನಾಯಿತಿ ನೀಡಲಾಗಿದೆ. ಆದರೆ ಸಾಗರೋತ್ತರದಿಂದ ಭಾರತಕ್ಕೆ ಯಾವುದೇ ಗ್ಯಾಜೆಟ್ ಅನ್ನು ಸಾಗಿಸುವಾಗ ಪ್ರಯಾಣಿಕರು ಭಾರತೀಯ ಗಡಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅನ್ನೊದು ಇಲ್ಲಿ ಗಮನಿಸಬೇಕಾದ ವಿಚಾರವಾಗಿದೆ.

ಭಾರತ ಸರ್ಕಾರ ಇದೀಗ ತೆಗೆದುಕೊಂಡಿರುವ ಕ್ರಮವು ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ಸಾದ್ಯತೆಯಿದೆ. ಇದರಿಂದ ಭಾರತದ ಲ್ಯಾಪ್‌ಟಾಪ್‌ ತಯಾರಕರಿಗೆ ಉತ್ತೇಜನ ನೀಡಲಿದೆ. ಆದರೆ ವಿದೇಶದಿಂದ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಬದಲು ಸ್ಥಳೀಯ ಪರ್ಯಾಯಗಳನ್ನು ಹುಡುಕಬೇಕಾಗಿದೆ. ಸದ್ಯ ಈ ನಿರ್ಬಂಧಗಳಿಗೆ ನಿಖರವಾದ ಕಾರಣ ಏನು ಅನ್ನೊದನ್ನ ಸರ್ಕಾರ ಇನ್ನು ಕೂಡ ವಿವರಿಸುವುದಕ್ಕೆ ಹೋಗಿಲ್ಲ.

ಆದರೆ ಭಾರತ ಸರ್ಕಾರದ ಏಕಾಏಕಿ ನಿರ್ಧಾರವು ಭಾರತದಲ್ಲಿ ಮ್ಯಾಕ್‌ಬುಕ್‌ಗಳು ಮತ್ತು ಮ್ಯಾಕ್ ಮಿನಿ ಗ್ಯಾಜೆಟ್‌ಗಳ ಬೆಲೆ ಏರಿಕೆ ಆಗುವಂತೆ ಮಾಡಿದರೂ ಅಚ್ಚರಿಯಿಲ್ಲ. ಏಕೆಂದರೆ ಭಾರತದಲ್ಲಿ ಈ ಪ್ರಾಡಕ್ಟ್‌ಗಳು ತಯಾರಾಗುವುದಿಲ್ಲ, ಇದರಿಂದ ಆಪಲ್‌ನಂತಹ ಕಂಪನಿಗಳು ಈ ಗ್ಯಾಜೆಟ್‌ಗಳನ್ನು ಆಮದು ಮಾಡಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಬೇಕಾಗುತ್ತದೆ. ಇದರಿಂದ ಪ್ರಸ್ತುತ ಭಾರತದಲ್ಲಿರುವ ಸ್ಟಾಕ್‌ಗಳಿಗೆ ಬೇಲೆ ಏರಿಕೆಯಾಗುವ ಸಾದ್ಯತೆಯಿದೆ. ಜೊತೆಗೆ ಇದೇ ನಿಯಮಗಳು Lenovo, HP, Asus, Acer, Samsung ಮತ್ತು ಇತರ ಕಂಪನಿಗಳಿಗೂ ಕೂಡ ಅನ್ವಯಿಸಲಿದೆ.

ಇನ್ನು ನೀವು ಗಮನಿಸಬೇಕಾದ ಮಹತ್ವದ ವಿಚಾರವೆಂದರೆ ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಲ್ಯಾಪ್‌ಟಾಪ್‌ಗಳು ಚೀನಾದಲ್ಲಿ ತಯಾರಾಗುತ್ತಿವೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ. ಸದ್ಯ ಯಾವುದೇ ಕಂಪನಿಗಳು ಲ್ಯಾಪ್‌ಟಾಪ್‌ಗಳನ್ನು ಭಾರತಕ್ಕೆ ತರಲು ವಿಶೇಷ ಪರವಾನಗಿಗಳಿಗೆ ಅರ್ಜಿ ಸಲ್ಲಿಸುವವರೆಗೆ ಮತ್ತು ಪಡೆಯುವವರೆಗೆ ಭಾರತದಲ್ಲಿ ಲ್ಯಾಪ್‌ಟಾಪ್‌ಗಳ ಬೆಲೆ ಹೆಚ್ಚಳಕೆ ಕಾರಣವಾಗಬಹುದು ಎನ್ನಲಾಗಿದೆ.

ಇದಿಷ್ಟೇ ಅಲ್ಲ ವಿದೇಶದಿಂದ ಲ್ಯಾಪ್‌ಟಾಪ್‌ ಆಮದು ಮಾಡಿಕೊಳ್ಳುವುದನ್ನು ನಿರ್ಬಂಧ ಮಾಡಿರುವ ಕ್ರಮದಿಂದ ಜಿಯೋ ಕಂಪೆನಿಗೆ ಲಾಭವಾಗುವ ಸಾಧ್ಯತೆಯಿದೆ. ಏಕೆಂದರೆ ಜಿಯೋ ಸ್ಥಳೀಯ ಕಂಪೆನಿ ಆಗಿದ್ದು, ಕೇವಲ ಎರಡು ದಿನಗಳ ಹಿಂದೆ JioBook ಅನ್ನು ಪ್ರಾರಂಭಿಸಿದೆ. ಇದು ಸ್ಥಳೀಯ ಕಂಪನಿ ಆಗಿರುವುದರಿಂದ ಆಮದು ವಿನಾಯಿತಿ ಪರವಾನಗಿಯನ್ನು ಪಡೆಯಲು ಸುಲಭವಾಗಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
Indian Government Restricts Import of Some Laptops and Computers: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+