ಶಾಕಿಂಗ್ ನ್ಯೂಸ್...ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವುದು ಪಕ್ಕಾ!!

|

ವಾಟ್ಸ್ಆಪ್‌ನಲ್ಲಿ ಹರಿದಾಡುವ ಸುಳ್ಳು ಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹತ್ತಿಕ್ಕಲು, ಅವುಗಳ ಮೂಲ ಪತ್ತೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕೆಂದು ವಾಟ್ಸ್ಆಪ್ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚಿಸಿದೆ. ಒಂದು ವೇಳೆ ಅದಕ್ಕೆ ಸರ್ಕಾರದ ಆದೇಶವನ್ನು ತಪ್ಪಿದಲ್ಲಿ ದೇಶದಲ್ಲಿ ವಾಟ್ಸಾಪ್ ಅನ್ನು ನಿಷೇಧಿಸಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ರವಾನಿಸಿದೆ.

ಬಳಕೆದಾರರಿಗೆ ಸಧ್ಯ ಒದಗಿಸಲಾಗಿರುವ ಗೌಪ್ಯತೆ ಸುರಕ್ಷತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಆದರೆ, ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸುವಂತೆ ಮತ್ತು ಸುರಕ್ಷಿತವಾಗಿರಲು ಮಾಹಿತಿ ನಿಡುವತ್ತ ನಾವು ಗಮನಹರಿಸುತ್ತೇವೆ ಎಂದು ಇತ್ತೀಚಿಗಷ್ಟೆ ಸರ್ಕಾರದ ಆದೇಶವನ್ನು ವಾಟ್ಸ್‌ಆಪ್ ತಿರಸ್ಕರಿಸಿತ್ತು. ಇದರಿಂದ ಕೇಂದ್ರ ಸರ್ಕಾರ ಆ ಸಂಸ್ಥೆ ಮೇಲೆ ಗರಂ ಆಗಿದೆ ಎನ್ನಲಾಗಿದೆ.

ಶಾಕಿಂಗ್ ನ್ಯೂಸ್...ಭಾರತದಲ್ಲಿ ವಾಟ್ಸ್ಆಪ್ ಬ್ಯಾನ್ ಆಗುವುದು ಪಕ್ಕಾ!!

ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ಸಹ ಮೀರಲಾಗದು ಎಂದಿದೆ. ಹಾಗಾದರೆ, ಏನಿದು ವಾಟ್ಸ್ಆಪ್ ಮತ್ತು ಕೇಂದ್ರ ಸರ್ಕಾರದ ಜಟಾಪಟಿ? ದೇಶದಲ್ಲಿ ವಾಟ್ಸ್ಆಪ್ ಬ್ಯಾನ್ ಆಗಲಿದೆಯಾ? ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಾಟ್ಸ್‌ಆಪ್‌ಗೆ ಸರ್ಕಾರ ಹೇಳಿದ್ದೇನು?

ವಾಟ್ಸ್‌ಆಪ್‌ಗೆ ಸರ್ಕಾರ ಹೇಳಿದ್ದೇನು?

ದೇಶದಲ್ಲಿ ವಾಟ್ಸ್‌ಆಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರಕಾರ ಮುಂದಾಗಿತ್ತು. ಅಂತಹ ಸುದ್ದಿಗಳ ಮೂಲ ಪತ್ತೆಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‌ಗೆ ಸೂಚನೆ ನೀಡಿ ಅದಕ್ಕಾಗಿ ಅಗತ್ಯ ತಾಂತ್ರಿಕ ಬದಲಾವಣೆ ಮಾಡಬೇಕು ಎಂದು ಹೇಳಿತ್ತು.

ನಿರಾಕರಿಸಿದ ವಾಟ್ಸ್ಆಪ್!

ನಿರಾಕರಿಸಿದ ವಾಟ್ಸ್ಆಪ್!

ಸರ್ಕಾರದ ಈ ಸೂಚನೆಗೆ ಪ್ರತಿಕ್ರಿಯಿಸಿದ ವಾಟ್ಸ್ಆಪ್, ಕೇಂದ್ರದ ಬೇಡಿಕೆಯನ್ನು ತಿರಸ್ಕರಿಸಿತ್ತು. ತನ್ನ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ, ಅವರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ, ಅದನ್ನು ಮೀರಲಾಗದು ಎಂದು ಹೇಳಿತ್ತು.

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?

ವಾಟ್ಸ್‌ಆಪ್ ನಿರಾಕರಿಸಿದ್ದು ಏಕೆ?

ಜನರು ತಮ್ಮ ತಮ್ಮ ಸೂಕ್ಮ ಸಂಭಾಷಣೆಗಳನ್ನು ನಡೆಸಲು ವಾಟ್ಸ್ಆಪ್ ಅನ್ನು ಅವಲಂಬಿಸಿದ್ದಾರೆ. ಅದಲ್ಲದೆ, ಸಂದೇಶಗಳ ಮೂಲ ಪತ್ತೆ ಹಚ್ಚುವಿಕೆ ದುರ್ಬಳಕೆ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸಂದೇಶಗಳ ಮೂಲವನ್ನು ಪತ್ತೆಹಚ್ಚುವುದರಿಂದ ವಾಟ್ಸ್ಆಪ್ ಬಳಕೆದಾರರ ಖಾಸಾಗೀತನಕ್ಕೆ ಅಡ್ಡಿಪಡಿಸಿದಂತಾಗುತ್ತದೆ ಎಂದು ವಾಟ್ಸ್ಆಪ್ ತಿಳಿಸಿದೆ.

ಕೇಂದ್ರ ಸರ್ಕಾರ ಗರಂ?

ಕೇಂದ್ರ ಸರ್ಕಾರ ಗರಂ?

ದೇಶದಲ್ಲಿನ ನಡೆದಿರುವ ಹಲವು ಗಲಭೆ ಪ್ರಕರಣಗಳಲ್ಲಿ ವಾಟ್ಸ್‌ಆಪ್ ಮೂಲಕ ಹರಡಲಾದ ಸಂದೇಶವೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿದೆ. ಹೀಗಾಗಿ ಅದನ್ನು ಪತ್ತೆಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಲೇಬೇಕು. ಇಲ್ಲದಿದ್ದರೆ ವಾಟ್ಸ್ಆಪ್ ನಿಷೇಧಕ್ಕೆ ಚಿಂತಿಸಲಾಗುವುದು ಎಂದು ಸರ್ಕಾರ ಮತ್ತೊಮ್ಮೆ ಎಚ್ಚರಿಸಿದೆ ಎಂದು ಹೇಳಲಾಗಿದೆ.

ಬ್ಯಾನ್ ಆಗಲಿದೆಯಾ ವಾಟ್ಸ್ಆಪ್?

ಬ್ಯಾನ್ ಆಗಲಿದೆಯಾ ವಾಟ್ಸ್ಆಪ್?

ಸರ್ಕಾರ ಮತ್ತು ವಾಟ್ಸ್ಆಪ್ ಸಂಸ್ಥೆಗಳ ನಡುವೆ ನಡೆಯುತ್ತಿರುವ ಜಟಾಪಟಿಯ ಮುಂದಿನ ಹಂತವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ವಾಟ್ಸ್‌ಆಪ್ ಸಂಸ್ಥೆ ಹೇಳುತ್ತಿರುವ ವಾದ ಸರಿಯಾಗಿದ್ದರೂ ಸಹ, ಸರ್ಕಾರಕ್ಕೆ ಬೇರೆ ದಾರಿ ಕಾಣಿಸುತ್ತಿಲ್ಲ. ಒಂದು ವೇಳೆ ವಾಟ್ಸ್‌ಆಪ್ ಅನ್ನು ಬ್ಯಾನ್ ಮಾಡುವುದು ಸರ್ಕಾರದ ಮೂರ್ಖ ನಿರ್ಧಾರಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

ರಾಜಿಮಾಡಿಕೊಳ್ಳಬೇಕಿದೆ ವಾಟ್ಸ್‌ಆಪ್!

ರಾಜಿಮಾಡಿಕೊಳ್ಳಬೇಕಿದೆ ವಾಟ್ಸ್‌ಆಪ್!

ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹರಿಯದಂತೆ ತಡೆಯಲು ತಾಂತ್ರಿಕ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ದೇಶದ ಹಿತಕ್ಕಾಗಿ ವಾಟ್ಸ್‌ಆಪ್‌ನಲ್ಲಿ ಹರಿದಾಡುವ ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕಲು ತಾಂತ್ರಿಕ ಬದಲಾವಣೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ.

ವಾಟ್ಸ್ಆಪ್ ಮುಂದಿನ ನಡೆಯೇನು?

ವಾಟ್ಸ್ಆಪ್ ಮುಂದಿನ ನಡೆಯೇನು?

ಈ ಮೊದಲು ಕೇಂದ್ರ ಸರ್ಕಾರ ನೀಡಿರುವ ಸಲಹೆ ಮತ್ತು ಎಚ್ಚರಿಕೆಗಳನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಕ್ರಿಸ್ ಡೇನಿಯಲ್ ಒಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸುಳ್ಳುಸುದ್ದಿ ಮತ್ತು ಪ್ರಚೋದನಕಾರಿ ಸಂದೇಶಗಳು ಹತ್ತಿಕ್ಕುವಂತಹ ಸೂಚನೆಯನ್ನು ಅನುಸರಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ಸಂಸ್ಥೆ ಹೇಳಿರುವುದು ಕತೊಹಲವನ್ನು ಮೂಡಿಸಿದೆ.

ಭಾರತದಲ್ಲಿ ನಿಷೇಧ ಕಾಣಬಹುದಾದ ವಾಟ್ಸ್‌ಆಪ್ ಬ್ಯಾನ್‌ ಕಥೆ ಒಂದಲ್ಲಾ.. ಎರಡಲ್ಲಾ..!

ಭಾರತದಲ್ಲಿ ನಿಷೇಧ ಕಾಣಬಹುದಾದ ವಾಟ್ಸ್‌ಆಪ್ ಬ್ಯಾನ್‌ ಕಥೆ ಒಂದಲ್ಲಾ.. ಎರಡಲ್ಲಾ..!

ಹಲವು ಭದ್ರತಾ ಕಾರಣಗಳಿಂದ ಭಾರತದಲ್ಲಿ ವಾಟ್ಸ್‌ಆಪ್‌ ಬ್ಯಾನ್‌ ಆಗುತ್ತೆ ಎಂಬ ಸುದ್ದಿ ದೇಶದಲ್ಲಿ ಕಳೆದ ತಿಂಗಳಿನಿಂದಲೂ ಹರಿದಾಡುತ್ತಿದೆ. ವಾಟ್ಸ್‌ಆಪ್‌ನ ಫಾರ್‌ವರ್ಡ್‌ ಮೇಸೆಜ್‌ಗಳಿಂದ ದೇಶದಲ್ಲಿ ಅಭದ್ರತೆ ಸೃಷ್ಟಿಯಾಗುತ್ತಿದೆ. ಗಲಭೆಗಳು ಉದ್ಭವಿಸುತ್ತಿವೆ ಎಂದು ಕಾರಣ ಕೊಟ್ಟಿರುವ ಕೇಂದ್ರ ಸರ್ಕಾರ ವಾಟ್ಸ್‌ಆಪ್‌ಗೆ ಭದ್ರತೆಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರ ಭದ್ರತಾ ಕಾರಣಗಳಿಗಾಗಿ ಭಾರತೀಯ ಬಳಕೆದಾರರ ಮಾಹಿತಿ ಒದಗಿಸುವಂತೆ ವಾಟ್ಸ್‌ಆಪ್‌ನ್ನು ಕೇಳಿಕೊಂಡಿತ್ತು. ಆದರೆ, ಈ ಮನವಿಯನ್ನು ತಿರಸ್ಕರಿಸಿರುವ ವಾಟ್ಸ್‌ಆಪ್‌ ಮಾಹಿತಿ ನೀಡಲಾಗುವುದಿಲ್ಲ. ಭದ್ರತೆಗಾಗಿ ಫಾರ್‌ವರ್ಡ್‌ ಮಿತಿ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ವಾಟ್ಸ್‌ಆಪ್‌ನ ಈ ನಿರ್ಣಯದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ.

ಒಂದು ವೇಳೆ ಭಾರತದಲ್ಲಿ ವಾಟ್ಸ್‌ಆಪ್‌ನ್ನು ನಿಷೇಧಿಸಿದರೆ ವಾಟ್ಸ್‌ಆಪ್‌ಗೆ ಇದು ಮೊದಲಲ್ಲ. ವಿವಿಧ ರಾಷ್ಟ್ರಗಳಲ್ಲಿ ವಾಟ್ಸ್‌ಆಪ್‌ ಬ್ಯಾನ್‌ ಆಗಿದೆ. ಕೆಲವೊಂದು ದೇಶಗಳಲ್ಲಿ ವಾಟ್ಸ್‌ಆಪ್‌ ಪುನಃ ಕಾರ್ಯಾರಂಭ ಮಾಡಿದರೆ, ಕೆಲವು ದೇಶಗಳಲ್ಲಿ ನಿಷೇಧ ಅನುಭವಿಸುತ್ತಿದೆ. ಹಾಗಾದ್ರೇ ವಾಟ್ಸ್‌ಆಪ್‌ ಯಾವ ಯಾವ ದೇಶದಲ್ಲಿ ಬ್ಯಾನ್‌ ಆಯ್ತು..? ಯಾಕೆ ಬ್ಯಾನ್‌ ಆಯ್ತು..? ಎಂಬುದನ್ನು ಮುಂದೆ ನೋಡಿ. ನಿಮಗೆ ಗೊತ್ತಾಗುತ್ತೆ.

ಭಾರತದಲ್ಲೇಕೆ ತೂಗುಗುತ್ತಿ..?

ಭಾರತದಲ್ಲೇಕೆ ತೂಗುಗುತ್ತಿ..?

ವಾಟ್ಸ್‌ಆಪ್ ಮೂಲಕ ಹರಡಿದ ವದಂತಿಗಳಿಂದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿ 10 ರಾಜ್ಯಗಳಲ್ಲಿ ಕಳೆದ ಒಂದು ವರ್ಷದಲ್ಲಿ ಕನಿಷ್ಠ 31ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮಕ್ಕಳ ಕಳ್ಳರ ವದಂತಿಯಿಂದ ಬೀದರ್‌ನಲ್ಲಿ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಮೊಹಮ್ಮದ್ ಅಜಮ್‌ನನ್ನು ಕೊಲ್ಲಲಾಯಿತು. ದೇಶದಲ್ಲಿ ವಾಟ್ಸ್‌ಆಪ್‌ನ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ವಿಷಾದಿಸುತ್ತೇವೆ ಎಂದು ವಾಟ್ಸ್‌ಆಪ್ ಸ್ವತಃ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಚೀನಾದಲ್ಲಿ ಸಂಪೂರ್ಣ ಬ್ಯಾನ್..!

ಚೀನಾದಲ್ಲಿ ಸಂಪೂರ್ಣ ಬ್ಯಾನ್..!

ವಾಟ್ಸ್‌ಆಪ್‌ನ್ನು ಚೀನಾದಲ್ಲಿ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ನ್ಯೂಯಾರ್ಕ್‌ ಟೈಮ್ಸ್‌ ವರದಿ ಪ್ರಕಾರ 2017ರಿಂದ ಚೀನಾದಲ್ಲಿ ವಾಟ್ಸ್‌ಆಪ್‌ನ್ನು ಭದ್ರತಾ ಕಾರಣಗಳಿಂದ ಸಂಪೂರ್ಣವಾಗಿ ಬ್ಯಾನ್‌ ಮಾಡಲಾಗಿದೆ. ವಾಟ್ಸ್‌ಆಪ್‌ನ ಪೋಷಕ ಕಂಪನಿಯಾಗಿರುವ ಫೇಸ್‌ಬುಕ್‌ನ್ನು ಸಹ 2009ರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಚೀನಾದಲ್ಲಿ ಪ್ರಮುಖ ಇನ್‌ಸ್ಟಾಂಟ್‌ ಮೇಸೆಂಜರ್‌ ಆಗಿ ವೀಚಾಟ್‌ ಬಳಕೆಯಾಗುತ್ತಿದೆ.

ಇರಾನ್‌ನಲ್ಲೂ ಬ್ಯಾನ್‌ ಆಗಿತ್ತು..!

ಇರಾನ್‌ನಲ್ಲೂ ಬ್ಯಾನ್‌ ಆಗಿತ್ತು..!

2014ರ ಮೇ 09ರಂದು ಇರಾನ್‌ನಲ್ಲೂ ವಾಟ್ಸ್‌ಆಪ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇರಾನ್‌ ನಾಗರಿಕರಿಗೆ ವಾಟ್ಸ್‌ಆಪ್ ಬ್ಯಾನ್ ಮಾಡಿ ಇರಾನ್‌ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿಷೇಧಕ್ಕೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್‌ ಜುಕರ್ ಬರ್ಗ್‌ ಅಮೇರಿಕಾದ ಜಿಯೋನಿಸ್ಟ್‌ ಆಗಿರುವುದು ಕಾರಣವಾಗಿತ್ತು ಎಂದು ಇರಾನ್‌ನ ಇಂಟರ್‌ನೆಟ್‌ ಕ್ರೈಮ್‌ ಕಮಿಟಿಯ ಮುಖ್ಯಸ್ಥ ಅಬ್ಡಾಲ್ಸಮಾಡ್ ಖೋರ್‌ಮಬಡಿ ಹೇಳಿದ್ದಾರೆ. ಕಾಲ ಕ್ರಮೇಣ ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ವಾಟ್ಸ್‌ಆಪ್‌ ಫಿಲ್ಟರ್‌ನ್ನು ನಿಲ್ಲಿಸುವಂತೆ ಐಸಿಟಿ ಸಚಿವಾಲಯಕ್ಕೆ ಆದೇಶ ಹೊರಡಿಸಲಾಯಿತು.

ಟರ್ಕಿಯಲ್ಲೂ ನಿಷೇಧ ಶಿಕ್ಷೆ

ಟರ್ಕಿಯಲ್ಲೂ ನಿಷೇಧ ಶಿಕ್ಷೆ

ವಾಟ್ಸ್‌ಆಪ್‌ನ್ನು 2016ರಲ್ಲಿ ಟರ್ಕಿಯಲ್ಲಿ ತಾತ್ಕಾಲಿಕವಾಗಿ ನಿಷೇಧ ಮಾಡಲಾಯಿತು. ಈ ನಿಷೇಧಕ್ಕೆ ಟರ್ಕಿಯಲ್ಲಿ ನಡೆದ ರಷ್ಯಾದ ರಾಯಭಾರಿಯ ಹತ್ಯೆ ಕಾರಣವಾಗಿತ್ತು.

ಬ್ರೆಜಿಲ್‌ನಲ್ಲಿ 72 ಗಂಟೆ ವಾಟ್ಸ್‌ಆಪ್‌ ಇದ್ದಿಲ್ಲ

ಬ್ರೆಜಿಲ್‌ನಲ್ಲಿ 72 ಗಂಟೆ ವಾಟ್ಸ್‌ಆಪ್‌ ಇದ್ದಿಲ್ಲ

2016ರ ಮಾರ್ಚ್‌ 1ರಂದು ಫೇಸ್‌ಬುಕ್‌ನ ಲ್ಯಾಟಿನ್‌ ಅಮೇರಿಕಾದ ಉಪಾಧ್ಯಕ್ಷ ಡಿಯಾಗೋ ಜೋಡನ್‌ರನ್ನು ತನಿಖೆಗೆ ಸಹಕರಿಸಿಲ್ಲವೆಂದು ಬಂಧಿಸಲಾಗಿತ್ತು. ತನಿಖೆಯಲ್ಲಿ ವಾಟ್ಸ್‌ಆಪ್‌ ಸಂಭಾಷಣೆಯನ್ನು ಬ್ರೆಜಿಲ್ ನೀಡುವಂತೆ ಮನವಿ ಮಾಡಿತ್ತು. ಆದರೆ, ವಾಟ್ಸ್‌ಆಪ್‌ ಸಂಭಾಷಣೆ ನೀಡಲು ನಿರಾಕರಿಸಿತ್ತು. ನಂತರ ಮಾರ್ಚ್‌ 2 ರಂದು ನ್ಯಾಯಾಲಯದ ಮೊರೆ ಹೋಗಿ ಡಿಯಾಗೋ ಜೋಡನ್‌ ಬಿಡುಗಡೆಯಾದರು. ಈ ಕಾರಣಕ್ಕಾಗಿ ಬ್ರೆಜಿಲ್ ಮೊಬೈಲ್ ಪ್ರಾವಿಡಾರ್‌ಗಳಿಗೆ 72 ಗಂಟೆಗಳ ಕಾಲ ವಾಟ್ಸ್‌ಆಪ್‌ ನಿಷೇಧಿಸುವಂತೆ ಮೇ 2, 2016ರಂದು ಆದೇಶ ನೀಡಿತು. ನಂತರ ವಾಟ್ಸ್‌ಆಪ್ ನ್ಯಾಯಾಲಯದ ಮೊರೆ ಹೋಗಿ 24 ಗಂಟೆಗಳ ನಂತರ ಬ್ರೆಜಿಲ್‌ನಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಿತು.

ಸಿಂಹಳಿಯರ ನಾಡಲ್ಲೂ ಎಡವಿದ ವಾಟ್ಸ್‌ಆಪ್‌

ಸಿಂಹಳಿಯರ ನಾಡಲ್ಲೂ ಎಡವಿದ ವಾಟ್ಸ್‌ಆಪ್‌

ಶ್ರೀಲಂಕಾದಲ್ಲೂ ವಾಟ್ಸ್‌ಆಪ್‌ ಬ್ಯಾನ್ ಆಗಿತ್ತು. ವಾಟ್ಸ್‌ಆಪ್ ಜತೆಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಲಾಗಿತ್ತು. ಮಾರ್ಚ್‌ 7 ಮತ್ತು 8, 2018ರಲ್ಲಿ ಶ್ರೀಲಂಕಾದ ಕೆಲವು ಭಾಗಗಳಲ್ಲಿ ಗಲಭೆ ಹೆಚ್ಚಾಗಿದ್ದ ಕಾರಣ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್‌ ಮಾಡಲಾಗಿತ್ತು. ನಂತರ ಮಾರ್ಚ್‌ 14, 2018ರಂದು ಸಾಮಾಜಿಕ ಜಾಲತಾಣಗಳ ನಿಷೇಧವನ್ನು ವಾಪಸ್‌ ಪಡೆಯಲಾಯಿತು.

ಉಗಾಂಡಾದಲ್ಲಿರುವ ನೀತಿಯೇ ಬೇರೆ

ಉಗಾಂಡಾದಲ್ಲಿರುವ ನೀತಿಯೇ ಬೇರೆ

ಉಗಾಂಡಾ ಸರ್ಕಾರ ವಾಟ್ಸ್‌ಆಪ್‌ ಮತ್ತು ಫೇಸ್‌ಬುಕ್‌ನ್ನು ನಿಷೇಧ ಮಾಡಿದ್ದು, ವಾಟ್ಸ್‌ಆಪ್‌ ಅಥವಾ ಫೇಸ್‌ಬುಕ್ ಬಳಕೆಗೆ ಉಗಾಂಡಾ ಸರ್ಕಾರ ಹೊಸ ನೀತಿಯನ್ನು ತಂದಿದ್ದು, ಗಾಸಿಫ್‌ಗಳ ನಿಯಂತ್ರಣಕ್ಕೆ ದೈನಂದಿನ ಸಾಮಾಜಿಕ ಜಾಲತಾಣಗಳ ತೆರಿಗೆ ನೀತಿಯನ್ನು ಜಾರಿಗೆ ತಂದಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಬೇಕೆಂದರೆ 200 ಶಿಲ್ಲಾಂಗ್‌ಗಳನ್ನು ಪಾವತಿಸಬೇಕಾಗಿದೆ.

Most Read Articles
Best Mobiles in India

English summary
Indian Government Will Ban WhatsApp In Country, If The App Doesn't Find A Way To Trace Hoaxes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more