ಆಂಡ್ರಾಯ್ಡ್‌ ಅಪ್ಲಿಕೇಶನ್‌ ತಯಾರಿಸಿ, 1 ಲಕ್ಷ ಬಹುಮಾನಗಳಿಸಿ

By Ashwath
|

ಆಂಡ್ರಾಯ್ಡ್ ಸಾಫ್ಟ್‌ವೇರ್‌ ವಿನ್ಯಾಸ ಮಾಡುವುದರಲ್ಲಿನೀವು ಎಕ್ಸ್‌ಪರ್ಟ್ ಇದ್ದೀರಾ ? ನಿಮ್ಮ ಪ್ರತಿಭೆಗೆ ಎಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಬೇಜಾರಾಗಿದ್ದೀರಾ ? ಹಾಗಾದ್ರೆ ನಿಮ್ಮ ಕನಸು ನನಸು ಮಾಡಲು ಭಾರತ ಸರ್ಕಾರವೇ ನಿಮಗೆ ಆಹ್ವಾನ ನೀಡಿದೆ.

ಕೇಂದ್ರ ಸರ್ಕಾರ ಸಾರ್ವಜನಿಕ ಸೇವೆಗೆ ಸಂಬಂಧಿಸಿದಂತೆ ಆಂಡ್ರಾಯ್ಡ್‌ ಅಪ್ಲಿಕೇಶನ್‌ ಸಿದ್ದಪಡಿಸಿಲು ಮುಂದಾಗಿದೆ. ಹೀಗಾಗಿ ಈ ಸೇವೆಗಳ ಅಪ್ಲಿಕೇಶನ್‌ ರಚಿಸಲು ಆಂಡ್ರಾಯ್ಡ್‌ ಸಾಫ್ಟ್‌ವೇರ್‌ಗಳಿಗೆ ಆಹ್ವಾನ ನೀಡಿದ್ದು, ಉತ್ತಮವಾಗಿ ಅಪ್ಲಿಕೇಶನ್‌ ವಿನ್ಯಾಸ ಮಾಡಿದವರಿಗೆ ಒಂದು ಲಕ್ಷ ಬಹುಮಾನ ಘೋಷಿಸಿದೆ.

ಆಂಡ್ರಾಯ್ಡ್‌ ಅಪ್ಲಿಕೇಶನ್‌ ತಯಾರಿಸಿ, 1 ಲಕ್ಷ ಬಹುಮಾನಗಳಿಸಿ

ಮೊಬೈಲ್‌-ಗವರ್ನೆನ್ಸ್ ಅಡಿಯಲ್ಲಿ ಈ ಸ್ಪರ್ಧೆ ನಡೆಯುತ್ತಿದ್ದು, ಸರ್ಕಾರಿ ಸೇವೆ,ಶಿಕ್ಷಣ,ಸೋಶಿಯಲ್‌ ನೆಟ್‌ವರ್ಕಿಂಗ್‌,ಲೈಫ್‌ಸ್ಟೈಲ್‌, ಇ -ಆರೋಗ್ಯ ಕೆಟಗೆರಿಯಲ್ಲಿ ಸ್ಪರ್ಧಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಈಗಾಗ್ಲೇ ಈ ಸ್ಪರ್ಧೆ ಆರಂಭಗೊಂಡಿದ್ದು ಸ್ಪರ್ಧಾರ್ಥಿಗಳು ಮಾರ್ಚ್ 31ರ ಒಳಗೆ ಅಪ್ಲಿಕೇಶನ್‌ ಸಿದ್ದಪಡಿಸಿ ಕಳುಹಿಸಬೇಕು. ಈ ಸ್ಪರ್ಧೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು mgov.gov.in ಭೇಟಿ ನೀಡಬಹುದು.

ಲಿಂಕ್‌ : ಜಗತ್ತಿನ ಬದಲಾವಣೆಗೆ ಕಾರಣವಾದ ಹತ್ತು ಅನ್ವೇಷಣೆಗಳು

Most Read Articles
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X